ಬಿಯರ್‌ ಮತ್ತು ವಿಸ್ಕಿ- ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ?

Published : Apr 07, 2025, 08:17 PM ISTUpdated : Apr 08, 2025, 10:29 AM IST
ಬಿಯರ್‌ ಮತ್ತು ವಿಸ್ಕಿ- ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕರ?

ಸಾರಾಂಶ

ಬಿಯರ್ ಮತ್ತು ವಿಸ್ಕಿ ಎರಡೂ ಆಲ್ಕೊಹಾಲ್‌ಯುಕ್ತ ಪಾನೀಯಗಳು. ಆದರೆ ಆರೋಗ್ಯದ ವಿಷಯಕ್ಕೆ ಬಂದಾಗ ಯಾವುದು ಉತ್ತಮ? ಕ್ಯಾಲೋರಿಗಳು, ಆಲ್ಕೋಹಾಲ್ ಅಂಶ, ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಯ ಆಧಾರದ ಮೇಲೆ ತಜ್ಞರು ವಿಶ್ಲೇಷಿಸಿದ್ದಾರೆ.

ಇಂದು ಬಹಳಷ್ಟು ಮಂದಿ ಸ್ವಲ್ಪವಾದರೂ ಮದ್ಯ ಅಥವಾ ಆಲ್ಕೋಹಾಲ್‌ ಸೇವಿಸುತ್ತಾರೆ. ಮದ್ಯದ ವಿಷಯಕ್ಕೆ ಬಂದಾಗ ಬಿಯರ್, ಜಿನ್, ವೋಡ್ಕಾ, ವಿಸ್ಕಿ ಮತ್ತು ರಮ್‌ವರೆಗೆ ನಮಗೆ ಎಲ್ಲವೂ ಗೊತ್ತು. ಹಿತಮಿತವಾದ ಮದ್ಯ ಸೇವನೆ ಮಾನವ ದೇಹಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಹೊಸಬರಿಗೆ ಈ ಗೊಂದಲವಿರುತ್ತೆ- ಬಿಯರ್ ಮತ್ತು ವಿಸ್ಕಿಯ ನಡುವೆ ಯಾವುದು ಹೆಚ್ಚು ಆರೋಗ್ಯಕರ? ತಜ್ಞರ ಪ್ರಕಾರ, ಆಲ್ಕೊಹಾಲ್‌ಯುಕ್ತ ಪಾನೀಯಗಳ ವಿಷಯಕ್ಕೆ ಬಂದಾಗ, ಬಿಯರ್ ಮತ್ತು ವಿಸ್ಕಿ ಎರಡು ಜನಪ್ರಿಯ ಆಯ್ಕೆಗಳು. ಇದರಲ್ಲಿ ಮಾನವನ ಆರೋಗ್ಯಕ್ಕೆ ಯಾವ ಪಾನೀಯ ಉತ್ತಮವಾಗಿದೆ ಎಂಬುದನ್ನು ನಿರ್ಧರಿಸಲು ಕ್ಯಾಲೋರಿಗಳು, ಆಲ್ಕೋಹಾಲ್ ಅಂಶ, ಪೌಷ್ಟಿಕಾಂಶದ ಮೌಲ್ಯ ಮತ್ತು ದೀರ್ಘಕಾಲೀನ ಪರಿಣಾಮಗಳಂತಹ ಅಂಶಗಳನ್ನು ನೋಡೋಣ. 

ಆಲ್ಕೋಹಾಲ್ ಅಂಶ

ಬಿಯರ್: ಸಾಮಾನ್ಯವಾಗಿ ಬಿಯರ್ ಪ್ರತಿ ಸೇವನೆಗೆ 4-6% ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಹೀಗೆ ಕಡಿಮೆ ಇರುವುದರಿಂದಾಗಿ ಜನರು ಅದನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸುತ್ತಾರೆ.
ವಿಸ್ಕಿ: ಮತ್ತೊಂದೆಡೆ, ವಿಸ್ಕಿ 40% ಆಲ್ಕೋಹಾಲ್ ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿರುತ್ತದೆ. ಅಂದರೆ ಸಣ್ಣ ಪ್ರಮಾಣದಲ್ಲಿ ಸಹ ಬಲವಾದ ಪರಿಣಾಮವನ್ನು ಬೀರುತ್ತದೆ.
ಗಮನಿಸಿ: ತಜ್ಞರ ಪ್ರಕಾರ, ಎರಡೂ ಪಾನೀಯಗಳೂ ಮಿತವಾಗಿರುವುದು ಮುಖ್ಯ. ವಿಸ್ಕಿ ಬಲಶಾಲಿಯಾಗಿರುವುದರಿಂದ ಕಡಿಮೆ ಸೇವಿಸುವುದು ಮತ್ತು ಪರಿಣಾಮಗಳನ್ನು ಅನುಭವಿಸುವುದು ಸುಲಭ. ಆದರೆ ಬಿಯರ್ ಅನ್ನು ಹೆಚ್ಚಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಇದು ಒಟ್ಟಾರೆ ಆಲ್ಕೋಹಾಲ್ ಸೇವನೆಯನ್ನು ಹೆಚ್ಚಿಸುತ್ತದೆ.

ಕ್ಯಾಲೋರಿಗಳು ಮತ್ತು ತೂಕ ನಿರ್ವಹಣೆ

ಬಿಯರ್: ತಜ್ಞರ ಪ್ರಕಾರ, ಬಿಯರ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಕ್ಯಾಲೋರಿಗಳು ಅಧಿಕ. ಪ್ರಮಾಣಿತ ಪಿಂಟ್ ಸುಮಾರು 150-200 ಕ್ಯಾಲೋರಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.
ವಿಸ್ಕಿ: ಇದಕ್ಕೆ ವಿರುದ್ಧವಾಗಿ, ವಿಸ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಕಡಿಮೆ ಇರುತ್ತದೆ. ಪ್ರತಿ ಶಾಟ್‌ಗೆ ಸುಮಾರು 70 ಕ್ಯಾಲೋರಿಗಳು (30 ಮಿಲಿ).
ಗಮನಿಸಿ: ತೂಕ ನಿರ್ವಹಣೆಯ ವಿಷಯಕ್ಕೆ ಬಂದಾಗ, ವಿಸ್ಕಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ ಮತ್ತು ಕಾರ್ಬೋಹೈಡ್ರೇಟ್‌ಗಳಿಲ್ಲ. ಆದರೆ ಬಿಯರ್ ತೂಕ ಹೆಚ್ಚಿಸಲು ಕೊಡುಗೆ ನೀಡುತ್ತದೆ. ವಿಶೇಷವಾಗಿ ಸದಾ ಸೇವಿಸಿದಾಗ.

ಹೃದಯ ಆರೋಗ್ಯ 

ಬಿಯರ್: ಅಧ್ಯಯನಗಳ ಪ್ರಕಾರ, ಬಿಯರ್ ಪಾಲಿಫಿನಾಲ್‌ಗಳು ಮತ್ತು ಬಿ ವಿಟಮಿನ್‌ಗಳಿಂದ ಸಮೃದ್ಧ. ಇದು ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ವಿಸ್ಕಿ: ಇದು ಎಲಾಜಿಕ್ ಆಮ್ಲವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಪ್ರಬಲ ಉತ್ಕರ್ಷಣ ನಿರೋಧಕ.
ಗಮನಿಸಿ: ತಜ್ಞರ ಪ್ರಕಾರ, ಎರಡೂ ಪಾನೀಯಗಳು ಕೆಲವು ಹೃದಯ ಪ್ರಯೋಜನಗಳನ್ನು ಹೊಂದಿವೆ, ಆದರೆ ವಿಸ್ಕಿಯ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವು ಬಿಯರ್‌ಗಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಯಕೃತ್ತಿನ ಆರೋಗ್ಯ ಮತ್ತು ದೀರ್ಘಕಾಲೀನ ಪರಿಣಾಮ

ಬಿಯರ್: ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಸೇವಿಸಿದಾಗ, ಕಾಲಾನಂತರದಲ್ಲಿ ಹೆಚ್ಚಿನ ಆಲ್ಕೋಹಾಲ್ ಸೇವನೆಗೆ ಕಾರಣವಾಗುತ್ತದೆ. ಇದು ಯಕೃತ್ತಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ.
ವಿಸ್ಕಿ: ಮತ್ತೊಂದೆಡೆ, ವಿಕ್ಸಿ ಬಲವಾಗಿರುತ್ತದೆ ಆದರೆ ಹೆಚ್ಚಾಗಿ ಮಿತವಾಗಿ ಸೇವಿಸುವುದರಿಂದ ಒಟ್ಟು ಆಲ್ಕೋಹಾಲ್ ಪ್ರಮಾಣ ಕಡಿಮೆಯಾಗುತ್ತದೆ.
ಗಮನಿಸಿ: ಎರಡನ್ನೂ ಅತಿಯಾಗಿ ಸೇವಿಸುವುದರಿಂದ ಯಕೃತ್ತಿಗೆ ಹಾನಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಬಿಯರ್ ಸದಾ ಸೇವಿಸುವುದಕ್ಕೆ ಹೋಲಿಸಿದರೆ ಮಿತವಾಗಿ ವಿಸ್ಕಿ ಕುಡಿಯುವುದು ಕಡಿಮೆ ಹಾನಿಕಾರಕ.

ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ

ಬಿಯರ್: ಇದು ಪ್ರೋಬಯಾಟಿಕ್‌ಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ. ಆದಾಗ್ಯೂ ಇದು ಬ್ಲೋಟಿಂಗ್‌ಗೆ ಕಾರಣವಾಗಬಹುದು.
ವಿಸ್ಕಿ: ಇದು ಕಾರ್ಬೋಹೈಡ್ರೇಟ್‌ ಮತ್ತು ಗ್ಲುಟೆನ್ ಅನ್ನು ಹೊಂದಿರುವುದಿಲ್ಲ. ಇದು ಕೆಲವು ಜನರಿಗೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಗಮನಿಸಿ: ಆರೋಗ್ಯ ತಜ್ಞರ ಪ್ರಕಾರ, ಬಿಯರ್ ಕರುಳಿನ ಬ್ಯಾಕ್ಟೀರಿಯಾಕ್ಕೆ ಪ್ರಯೋಜನವನ್ನು ನೀಡಬಹುದು. ಆದರೆ ಇದು ಬ್ಲೋಟಿಂಗ್‌ ಮತ್ತು ಆಮ್ಲೀಯತೆಯನ್ನು ಸಹ ಉಂಟುಮಾಡಬಹುದು. ಆದರೆ ವಿಸ್ಕಿ ಜೀರ್ಣಿಸಿಕೊಳ್ಳಲು ಸುಲಭ.

ಎಳನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು, ಅತಿಯಾದ್ರೆ ಏನಾಗುತ್ತೆ ಗೊತ್ತಾ? ಹುಷಾರ್ ಕಣ್ರಪ್ಪ!

ಹಾಗಾದರೆ ಯಾವುದು ಆರೋಗ್ಯಕರ?

ತಜ್ಞರ ಪ್ರಕಾರ, ನೀವು ನಿಮ್ಮ ತೂಕವನ್ನು ಗಮನಿಸುತ್ತಿದ್ದರೆ, ಕಡಿಮೆ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿಂದಾಗಿ ವಿಸ್ಕಿ ಉತ್ತಮ ಆಯ್ಕೆ. ಹೃದಯದ ಆರೋಗ್ಯದ ವಿಷಯಕ್ಕೆ ಬಂದಾಗ, ಎರಡೂ ಪಾನೀಯಗಳು ಕೆಲವು ಪ್ರಯೋಜನಗಳನ್ನು ನೀಡುತ್ತವೆ. ಆದರೆ ವಿಸ್ಕಿಯ ಉತ್ಕರ್ಷಣ ನಿರೋಧಕಗಳು ಹೆಚ್ಚುವರಿ ರಕ್ಷಣೆಯನ್ನು ಒದಗಿಸಬಹುದು. ಜೀರ್ಣಕ್ರಿಯೆಯ ವಿಷಯದಲ್ಲಿ ವಿಸ್ಕಿ ಹಗುರ. ಆದರೆ ಬಿಯರ್ ಕರುಳಿನ ಬ್ಯಾಕ್ಟೀರಿಯಾವನ್ನು ಬೆಂಬಲಿಸಬಹುದು. ಯಕೃತ್ತಿನ ಆರೋಗ್ಯಕ್ಕೆ ಎರಡೂ ಮಿತವಾಗಿರುವುದು ಮುಖ್ಯ. ಅತಿಯಾಗಿ ಸೇವಿಸಿದರೆ ಎರಡೂ ಹಾನಿಕಾರಕ. ಬಿಯರ್ ಮತ್ತು ವಿಸ್ಕಿ ಎರಡೂ ಸಾಧಕ-ಬಾಧಕಗಳನ್ನು ಹೊಂದಿವೆ.

ವಿದೇಶದಲ್ಲಿ ಬ್ಯಾನ್ ಆದರೂ ಭಾರತದಲ್ಲಿ ಫುಲ್ ಫೇಮಸ್ ಆಗಿರುವ ವಸ್ತುಗಳು!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?