ಆಯುಷ್ಮಾನ್ ಖುರಾನಾ ಪತ್ನಿಗೆ ಮತ್ತೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್

Published : Apr 07, 2025, 02:32 PM ISTUpdated : Apr 07, 2025, 02:45 PM IST
 ಆಯುಷ್ಮಾನ್ ಖುರಾನಾ ಪತ್ನಿಗೆ ಮತ್ತೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್

ಸಾರಾಂಶ

ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಅವರಿಗೆ ಸ್ತನ ಕ್ಯಾನ್ಸರ್ ಮರುಕಳಿಸಿದೆ. 2018ರಲ್ಲಿ ಮೊದಲ ಬಾರಿ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಚಿಕಿತ್ಸೆಯ ನಂತರ ಗುಣಮುಖರಾಗಿದ್ದರು. ಇದೀಗ ಮತ್ತೊಮ್ಮೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ.  

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ (Bollywood actor Ayushmann Khurana) ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್(tahira kashyap) ಗೆ ಮತ್ತೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. ತಾಹಿರಾ ಕಶ್ಯಪ್ ಈ ವಿಷ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ತಾಹಿರಾ ಕಶ್ಯಪ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ತಮಗೆ ಕ್ಯಾನ್ಸರ್ ಮರುಕಳಿಸಿರುವ ವಿಷ್ಯ ಹೇಳಿದ್ದಾರೆ. ಜೀವನವು ನಿಂಬೆಹಣ್ಣುಗಳನ್ನು ನೀಡಿದಾಗ, ನಿಂಬೆ ಪಾನಕವನ್ನು ತಯಾರಿಸಿ ಎಂದು ತಾಹಿರಾ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಜೀವನವು ತುಂಬಾ ಉದಾರವಾದಾಗ ಮತ್ತು ನೀವು ಮತ್ತೆ ನಿಂಬೆಹಣ್ಣನ್ನು ಪಡೆದಾಗ, ನೀವು ಅದನ್ನು ಶಾಂತವಾಗಿ ನಿಮ್ಮ ಪಾನೀಯಕ್ಕೆ ಸೇರಿಸಬಹುದು ಮತ್ತು ಸಕಾರಾತ್ಮಕತೆಯಿಂದ ಕುಡಿಯಬಹುದು. ನನ್ನ ಎರಡನೇ ಸುತ್ತು ಪ್ರಾರಂಭವಾಗಿದೆ. ನಿಯಮಿತ ತಪಾಸಣೆ ,ಮ್ಯಾಮೊಗ್ರಾಮ್ಗಳು ಅದನ್ನು ಹೇಳಲು ಹಿಂಜರಿಯುವುದಿಲ್ಲ. ಸ್ತನ ಕ್ಯಾನ್ಸರ್ ಗೆ ಇನ್ನೊಂದು ಬಾರಿ  ಹೋಗೋಣ.  ಏಳು ವರ್ಷಗಳ ಕಿರಿಕಿರಿ, ನೋವು ಮತ್ತು ನಿಯಮಿತ ಶಕ್ತಿ ನಂತ್ರ ನನ್ನ ಎರಡನೇ ಸುತ್ತು ಪ್ರಾರಂಭವಾಗಿದೆ ಎಂದು ಬರೆದಿದ್ದಾರೆ.

ಬಾಣಂತನದ ನಂತರ ಉದುರಲು ಶುರುವಾಗುವ ಕೂದಲಿನ ಆರೈಕೆಗೆ ಸೂಪರ್‌ ಟಿಪ್ಸ್‌

ತಾಹಿರಾ ಪೋಸ್ಟ್  ನೋಡಿದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ತಾಹಿರಾಗೆ ಶಕ್ತಿ ನೀಡುವ ಕೆಲಸ ಮಾಡ್ತಿದ್ದಾರೆ.   ನೀವು ಮತ್ತೆ ಗೆಲ್ಲುತ್ತೀರಿ ಎಂದು ಬಳಕೆದಾರರು ತಾಹಿರಾಗೆ ಧೈರ್ಯ ತುಂಬಿದ್ದಾರೆ. ಚಿಂತಿಸಬೇಡಿ, ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.  ದೇವರು ನಿಮ್ಮನ್ನು ಬೇಗ ಗುಣಪಡಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.  

2018ರಲ್ಲಿ ಕಾಣಿಸಿಕೊಂಡಿದ್ದ ಕ್ಯಾನ್ಸರ್ : ತಾಹಿರಾಗೆ ಸ್ತನ ಕ್ಯಾನ್ಸರ್ ಮತ್ತೆ ಮುಕಳಿಸಿದೆ.  2018ರಲ್ಲಿ ತಾಹಿರಾಗೆ ಮೊದಲ ಬಾರಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ದೀರ್ಘ ಹೋರಾಟದ ನಂತ್ರ ಅವರು ಕ್ಯಾನ್ಸರ್ ಗೆದ್ದು ಬಂದಿದ್ದರು. ಈಗ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿದೆ.

ಮರುಕಳಿಸುತ್ತಾ ಸ್ತನ ಕ್ಯಾನ್ಸರ್ ? : ಒಮ್ಮೆ ಗುಣಮುಖವಾದ ಸ್ತನ ಕ್ಯಾನ್ಸರ್ ಮತ್ತೆ ಬರೋದಿಲ್ಲ ಎನ್ನಲು ಸಾಧ್ಯವಿಲ್ಲ. ಚಿಕಿತ್ಸೆಯ ನಂತರ ತಿಂಗಳುಗಳು ಅಥವಾ ವರ್ಷಗಳ ನಂತರವೂ ಸ್ತನ ಕ್ಯಾನ್ಸರ್ ಮತ್ತೆ ಬರಬಹುದು. ಇದನ್ನು ಮರುಕಳಿಸುವ ಸ್ತನ ಕ್ಯಾನ್ಸರ್ ಅಥವಾ ಸ್ತನ ಕ್ಯಾನ್ಸರ್ ಮರುಕಳಿಸುವಿಕೆ ಎಂದು ಕರೆಯಲಾಗುತ್ತದೆ.  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೆಲವು ಕ್ಯಾನ್ಸರ್ ಕೋಶಗಳು ಬದುಕುಳಿಯಬಹುದು ಅಥವಾ ವಿಕಿರಣ ಮತ್ತು ಕೀಮೋಥೆರಪಿಯಿಂದ ಬದುಕುಳಿಯಬಹುದು. ಪರೀಕ್ಷೆಗಳು ಅವುಗಳನ್ನು ಪತ್ತೆಹಚ್ಚುವಷ್ಟು ಸೂಕ್ಷ್ಮವಾಗಿರುವುದಿಲ್ಲ. ಚಿಕಿತ್ಸೆಯ ನಂತರ ಉಳಿದಿರುವ ಒಂದೇ ಒಂದು ಕ್ಯಾನ್ಸರ್ ಕೋಶ ಕೂಡ ಮತ್ತೆ ಗಡ್ಡೆಯಾಗುತ್ತದೆ.

ಪುರುಷರೇ ಅತೀ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ? ಈಗ್ಲೇ ಬಿಟ್ಟುಬಿಡಿ!

ಮರುಕಳಿಸುವ ಅಪಾಯ  ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿರುತ್ತದೆ.  ಮೂಲ ಕ್ಯಾನ್ಸರ್ ದೊಡ್ಡದಾಗಿದ್ದರೆ ಅಥವಾ ಹೆಚ್ಚಿನ ಹಂತದಲ್ಲಿದ್ದರೆ, ಮರುಕಳಿಸುವ ಅಪಾಯ ಹೆಚ್ಚಿರಬಹುದು. ಕೆಲವು ಸಂದರ್ಭಗಳಲ್ಲಿ, ಈ ಹಿಂದೆ ಸ್ತನ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದ ವ್ಯಕ್ತಿಗೆ ಹೊಸ ಸ್ತನ ಕ್ಯಾನ್ಸರ್ ಉಂಟಾಗುತ್ತದೆ, ಅದು ಮೊದಲನೆಯದಕ್ಕೆ ಸಂಬಂಧಿಸುವುದಿಲ್ಲ. ಇದನ್ನು ಎರಡನೇ ಪ್ರಾಥಮಿಕ ಸ್ತನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ ಮತ್ತು ಇದು ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯಿಂದ ಭಿನ್ನವಾಗಿದೆ.

ಯಾರಿಗೆ ಹೆಚ್ಚು ಸಾಧ್ಯತೆ? : ಕಿರಿಯ ಮಹಿಳೆಯರು, ವಿಶೇಷವಾಗಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೊದಲು ರೋಗನಿರ್ಣಯ ಮಾಡಿದರೆ, ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಇದಲ್ಲದೆ, ಋತುಬಂಧಕ್ಕೆ ಮೊದಲು ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದ ಮಹಿಳೆಯರಿಗೆ ಮರುಕಳಿಸುವ ಅಪಾಯ ಹೆಚ್ಚು. ದೊಡ್ಡ ಸ್ತನ ಗೆಡ್ಡೆಗಳನ್ನು ಹೊಂದಿರುವ ಮಹಿಳೆಯರು ಮರುಕಳಿಸುವ ಅಪಾಯವನ್ನು ಹೊಂದಿರುತ್ತಾರೆ. ಅಧಿಕ ತೂಕ, ಋತುಬಂಧದ ನಂತರ ಸ್ತನ ಕ್ಯಾನ್ಸರ್ನ  ಅಪಾಯ ಹೆಚ್ಚಿಸುತ್ತದೆ. ಧೂಮಪಾನ  ಮರುಕಳಿಸುವ ಅಪಾಯವನ್ನು ಹೆಚ್ಚಿಸುತ್ತದೆ.   

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೀವು ಸಣ್ಣ ಸಣ್ಣ ವಿಷಯಕ್ಕೂ ಬೇಜಾರು ಮಾಡ್ಕೋತೀರಾ?: ಇಲ್ಲಿವೆ 5 ಮನೋವೈಜ್ಞಾನಿಕ ಕಾರಣಗಳು
Storage Tips: ತಪ್ಪಾಗಿ ಸಹ ಈ 5 ಹಣ್ಣನ್ನು ಫ್ರಿಜ್‌ನಲ್ಲಿ ಇಡಬಾರದು..