Health And Nail Shape: ಏನು, ಉಗುರಿನ ಆಕಾರ ನೋಡಿ ಆರೋಗ್ಯ ತಿಳೀಬಹುದಾ?!

By Suvarna News  |  First Published Feb 13, 2022, 4:06 PM IST

ಕೈಬೆರಳಿನ ಉಗುರುಗಳನ್ನು ಉದ್ದವಾಗಿ ಬಿಡುವುದು ಯುವಕರ ನೆಚ್ಚಿನ ಟ್ರೆಂಡ್. ಉಗುರನ್ನು ಉದ್ದ ಬಿಟ್ಟು ವಿಧವಿಧವಾದ ಆಕಾರ ನೀಡುತ್ತೇವೆ, ಜೊತೆಗೆ ಬಣ್ಣ ಬಣ್ಣದ ನೇಲ್ ಪಾಲಿಶ್ ಗಳನ್ನು ಹಚ್ಚುತ್ತೇವೆ. ಆದರೆ, ನಿಮ್ಮ ಉಗುರಿನ ಆಕಾರ ನಿಮ್ಮ ಆರೋಗ್ಯದ ಸಂಕೇತವಾಗಿದೆ ಎಂಬ ವಿಷಯ ನಿಮಗೆ ಗೊತ್ತಿದೆಯೇ?


ಕೈ ಬೆರಳಿನ ಉಗುರುಗಳನ್ನು (Nalis) ವಿಧವಿಧವಾಗಿ ಅಲಂಕರಿಸುವುದು ನಿಮ್ಮ ನೆಚ್ಚಿನ ಕೆಲಸವಾಗಿರಬಹುದು. ಹೆಣ್ಣು ಮಕ್ಕಳಂತೂ ಯಾವ ಯಾವ ರೀತಿಯ ಬಟ್ಟೆಗಳಿಗೆ ಯಾವ ರೀತಿಯ ನೇಲ್ ಪಾಲಿಶ್ (Nail polish) ಹಚ್ಚಬೇಕು ಹಾಗೂ ಉಗುರಿನ ಆಕಾರ (Shape) ಯಾವ ರೀತಿ ನೀಡಬೇಕು ಎಂಬ ನಿರ್ಧಾರವನ್ನು ಮುಂಚಿತವಾಗಿಯೇ ಮಾಡಿರುತ್ತಾರೆ. ಇನ್ನು ಗಂಡು ಮಕ್ಕಳು ಕೂಡ ಯಾವುದಾದರೂ ಒಂದು ಬೆರಳಿನ ಉಗುರನ್ನು ಉದ್ದ ಬಿಟ್ಟು ಅದಕ್ಕೆ ಆಕಾರ ನೀಡುತ್ತಿರುತ್ತಾರೆ.

ಆದರೆ ಇದೆಲ್ಲದರ ಹೊರತಾಗಿ ಉಗುರು ಯಾವ ಆಕಾರದಲ್ಲಿ ಬೆಳೆಯುತ್ತಿದೆಯೋ ಆ ಆಕಾರ ನಿಮ್ಮ ಆರೋಗ್ಯದ ಸೂಚಕವಾಗಿದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ಹಾಗಾದರೆ ಯಾವ ಆಕಾರಗಳು ಯಾವ ರೀತಿಯ ಆರೋಗ್ಯವನ್ನು (Health) ಸೂಚಿಸುತ್ತವೆ ಎಂದು ತಿಳಿಯೋಣ..

Tap to resize

Latest Videos

undefined

ಕಾನ್ಕೇವ್ ಉಗುರುಗಳು (Concave Nail)

ಹೆಚ್ಚು ವಯಸ್ಸಾಗುತ್ತ (Aged) ಹೋದಂತೆ ಸಾಮಾನ್ಯವಾಗಿ ಉಗುರುಗಳು ಚಮಚದ ಆಕಾರದಲ್ಲಿ (Spoon Shape) ಬೆಳವಣಿಗೆಯಾಗುತ್ತದೆ. ಆದರೆ ಈ ರೀತಿಯ ಆಕಾರ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ ಎಂದರೆ ಅದು ದೇಹದಲ್ಲಿ ಕಬ್ಬಿಣಾಂಶದ (Iron) ಕೊರತೆಯಿಂದ ಆಗಿರಬಹುದು. ಇದರಿಂದಾಗಿ ರಕ್ತಹೀನತೆ ಅಥವಾ ಹಿಮೋಕ್ರೋಮಾಟಸಿಸ್ (Hemochromatosis) ಲಕ್ಷಣವಾಗಿರಬಹುದು. ಈ ರೀತಿ ಉಗುರಿನ ಬೆಳವಣಿಗೆ ಕಾಣಿಸಿಕೊಂಡಾಗ ವೈದ್ಯರಲ್ಲಿಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

Run ಮಾಡುವುದಕ್ಕೂ, ಬುದ್ಧಿವಂತರಾಗೋದಕ್ಕೂ ಏನಾದರೂ ಲಿಂಕ್ ಇದೆಯಾ?

ಬಟ್ಟೆಗೆ ಅಂಟಿಕೊಳ್ಳುವ ಉಗುರುಗಳು

ಉದ್ದ ಉಗುರನ್ನು ಬಿಟ್ಟಿರುವ ಜನರು ಸಾಮಾನ್ಯವಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಯಾವುದೇ ಕೆಲಸ ಮಾಡಲು ಹೋದಾಗ ನಿಮ್ಮ ಉಗುರುಗಳು ಬಟ್ಟೆಗೆ ಬಹು ಬೇಗ ಸಿಕ್ಕಿಹಾಕಿಕೊಂಡು ಬಿಡುತ್ತದೆ ಇದರಿಂದಾಗಿ ಬಹಳ ಕಿರಿಕಿರಿ (Irritation) ಎದುರಿಸಬೇಕಾಗುತ್ತದೆ. ಇದು ಯಾವುದೇ ರೀತಿಯ ನೋವನ್ನುಂಟು ಮಾಡುವುದಿಲ್ಲ. ಆದರೆ ನಿಮ್ಮ ಆರೋಗ್ಯದಲ್ಲಿ ಯಾವುದೋ ಏರುಪೇರು ಉಂಟಾದಾಗ ಈ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಯನ್ನು ಗುರುತಿಸಲು ನೀವು ಹಲವು ರೀತಿಯ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅಗತ್ಯವಿದೆ. ಹೀಗೆ ದೈಹಿಕ (Physical) ಪರೀಕ್ಷೆಗೆ ಒಳಪಟ್ಟು ಸಮಸ್ಯೆಯನ್ನು ಗುರುತಿಸಿ ಆದಷ್ಟು ಬೇಗ ಪರಿಹರಿಸಿಕೊಳ್ಳಿ.

ರಿಡ್ಜಡ್ ಉಗುರುಗಳು (Ridged nail)

ಉಗುರುಗಳು ಬೆಳವಣಿಗೆಯಾಗುತ್ತಾ ಉಗುರಿನ ನಡುವೆ ಉದ್ದನೆಯ ಪಟ್ಟೆಯಂತೆ (Ridges) ಕಾಣಿಸಿಕೊಳ್ಳುತ್ತದೆ. ಇದು ಉಗುರಿನ ಹೊರಪದರಕ್ಕೆ ಉಂಟುಮಾಡಿದ ತೊಂದರೆಯನ್ನು ಸೂಚಿಸುತ್ತದೆ. ಇದರಿಂದಾಗಿ ಉಗುರಿನ ಬೆಳವಣಿಗೆ ಕುಂಠಿತವಾಗಬಹುದು. ಉಗುರಿನ ‍ ಹೊರಪದರವನ್ನು ನೀವು ಹಾನಿಗೆ ಒಳಪಡಿಸಿದರೆ ಆಗ ಈ ಸಮಸ್ಯೆ ಎದುರಾಗುತ್ತದೆ. ಇದನ್ನು ಹಾಬಿಟಿಕ್ ಉಗುರು ಆಘಾತ ಎಂದು ಕರೆಯಲಾಗುತ್ತದೆ. ಮಾನಸಿಕ ಆರೋಗ್ಯದಲ್ಲಿ (Mental health) ಏರುಪೇರುಗಳು ಉಂಟಾದಾಗ ಈ ರೀತಿಯ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇಂತಹ ರಿಡ್ಜಡ್ ಉಗುರುಗಳು ಕಾಣಿಸಿಕೊಂಡಾಗ ದೇಹಕ್ಕೆ ಸಂಬಂಧಿಸಿದ ವೈದ್ಯರನ್ನು ಭೇಟಿ ಮಾಡುವ ಮೊದಲು ಮಾನಸಿಕ ತಜ್ಞರನ್ನು ಸಂಪರ್ಕಿಸಿ.

Cancer Symptoms: ಉಗುರಲ್ಲೇ ಗೊತ್ತಾಗುತ್ತೆ ಮಾರಾಣಾಂತಿಕ ರೋಗದ ಕುರುಹು!

ನಿಮ್ಮ ಉಗುರಿನ ಬೆಳವಣಿಗೆ ಯಾವ ಆಕಾರದಲ್ಲಿ ಆಗುತ್ತಿದೆ ಎಂಬುದರ ಬಗ್ಗೆ ಹೆಚ್ಚು ಗಮನ ನೀಡಿ. ದೇಹದಲ್ಲಿರುವ ಪ್ರತಿಯೊಂದು ಅಂಗವೂ ದೇಹದ ಒಳಗೆ ಆಗುತ್ತಿರುವ ಸಮಸ್ಯೆಯನ್ನು ಸೂಚಿಸುತ್ತದೆ. ಯಾವುದೇ ಸಮಸ್ಯೆಯ ಮೂಲ ಹುಡುಕಬೇಕು ಅಂದರೆ ದೇಹದ ಹೊರಗಿನ ಅಂಗಗಳು ತೋರಿಸುವ ಲಕ್ಷಣಗಳ (Symptoms) ಬಗ್ಗೆ ನಮಗೆ ಅರಿವಿರಬೇಕು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ನೀಡಿ. ನಿಮ್ಮ ಉಗುರಿನಲ್ಲಿ ಈ ಮೇಲೆ ಹೇಳಿರುವ ಯಾವುದೇ ರೀತಿಯ ಬದಲಾವಣೆಗಳು (Changes) ಕಾಣಿಸಿಕೊಂಡಾಗ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಸಣ್ಣ ಮಟ್ಟದಲ್ಲಿರುವಾಗಲೇ ಪರಿಹರಿಸಿಕೊಳ್ಳುವುದು ಉತ್ತಮ‌ ಇಲ್ಲವಾದರೆ ಮುಂದೆ ಹೆಚ್ಚಿನ ಪರಿಣಾಮ ಎದುರಿಸಬೇಕಾದೀತು..

 

click me!