Health Tips : ಈ ಕಾಯಿಲೆಗೆ ಕಾರಣವಾಗ್ತಿದೆ ರಕ್ತ ಸಂಬಂಧಿಗಳ ಮಧ್ಯೆ ನಡೆಯುವ ವಿವಾಹ

Suvarna News   | Asianet News
Published : Feb 12, 2022, 06:14 PM IST
Health Tips : ಈ ಕಾಯಿಲೆಗೆ ಕಾರಣವಾಗ್ತಿದೆ ರಕ್ತ ಸಂಬಂಧಿಗಳ ಮಧ್ಯೆ ನಡೆಯುವ ವಿವಾಹ

ಸಾರಾಂಶ

ಅನೇಕ ಕಾರಣದಿಂದಾಗಿ ಇತ್ತೀಚಿಗೆ ಸಂತಾನೋತ್ಪತ್ತಿಯ ಸಮಸ್ಯೆ ಕಾಡ್ತಿದೆ. ಹುಟ್ಟಿದ ಮಕ್ಕಳ ಆರೋಗ್ಯದಲ್ಲೂ ಅನೇಕ ಏರುಪೇರಾಗ್ತಿದೆ. ವಿಕಲಾಂಗತೆ ಹೆಚ್ಚಾಗ್ತಿದೆ. ಈ ಮಧ್ಯೆ ಪಾಕಿಸ್ತಾನದ ಪದ್ಧತಿಯೊಂದು ಹುಟ್ಟುವ ಮಕ್ಕಳ ಆರೋಗ್ಯ ಹಾಳು ಮಾಡ್ತಿದೆ.   

ರಕ್ತ (Blood) ಸಂಬಂಧಿಯನ್ನು ಮದುವೆ (Marriage)ಯಾಗಬಾರದು ಎಂಬ ಪದ್ಧತಿ ಭಾರತ (India)ದಲ್ಲಿದೆ. ಹಿಂದೂ (Hindu) ಧರ್ಮದಲ್ಲಿ ರಕ್ತ ಸಂಬಂಧಿ ಮದುವೆಯನ್ನು ಒಪ್ಪುವುದಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಅಲ್ಲೊಂದು ಇಲ್ಲೊಂದು ಇಂಥ ಮದುವೆಯನ್ನು ನಾವು ನೋಡ್ತಿದ್ದೇವೆ. ಆದ್ರೆ ನೆರೆಯ ದೇಶ ಪಾಕಿಸ್ತಾನದಲ್ಲಿ ರಕ್ತ ಸಂಬಂಧಿಗಳ ಮದುವೆ ಪದ್ಧತಿ ಜಾರಿಯಲ್ಲಿದೆ. ಅಲ್ಲಿ ಒಡಹುಟ್ಟಿದ ಸಹೋದರ, ಸಹೋದರಿ ಹೊರತುಪಡಿಸಿ ಉಳಿದ ಕುಟುಂಬಸ್ಥರನ್ನು ವಿವಾಹವಾಗಲು ಅನುಮತಿಯಿದೆ. ಇದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ.

ಪಾಕಿಸ್ತಾನದಲ್ಲಿ ಸೋದರಸಂಬಂಧಿ ವಿವಾಹ ಪದ್ಧತಿಯನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡಿರುವ ಅನೇಕ ನಗರಗಳಿವೆ. ಸೋದರ ಸಂಬಂಧಿ ವಿವಾಹದಿಂದ ಅನೇಕ ಸಮಸ್ಯೆಯ ಶುರುವಾಗಿದೆ.  ಈ ಕಾರಣಕ್ಕೆ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಸೋದರ ಸಂಬಂಧಿಗಳನ್ನು ಮದುವೆಯಾಗುವ ಜೋಡಿಗೆ ಜನಿಸುವ ಮಕ್ಕಳಲ್ಲಿ ಆನುವಂಶಿಕ ಸಮಸ್ಯೆ ಹೆಚ್ಚಾಗ್ತಿದೆ. ಸೋದರ ಸಂಬಂಧಿ ಜೋಡಿಗೆ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಕಾಣಿಸಿಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿ ಜಾರಿಯಲ್ಲಿರುವ ಈ ಪದ್ಧತಿ ಮತ್ತು ಅದ್ರಿಂದಾಗುತ್ತಿರುವ ಸಮಸ್ಯೆ ಬಗ್ಗೆ ಇಂದು ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ.     

ಸೋದರ ಸಂಬಂಧಿ ವಿವಾಹ : ಪಾಕಿಸ್ತಾನದ ಮುಸ್ಲೀಂ ಕುಟುಂಬದಲ್ಲಿ ಸೋದರ ಸಂಬಂಧಿ ಮದುವೆ ಅನಿವಾರ್ಯ ಎನ್ನಬಹುದು. ಸ್ವಂತ ಅಣ್ಣ-ತಂಗಿಯನ್ನು ಬಿಟ್ಟು ಕುಟುಂಬದ ಬೇರೆ ಸದಸ್ಯರನ್ನು ಇಲ್ಲಿ ಮದುವೆಯಾಗಬಹುದು. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಚಿಕ್ಕಪ್ಪನ ಮಗಳು,ದೊಡ್ಡಪ್ಪನ ಮಗಳು ಸೇರಿದಂತೆ ಸಹೋದರ ಸಂಬಂಧಿಯನ್ನು ಇಲ್ಲಿ ಮದುವೆಯಾಗಬಹುದು. 

ಸೋದರ ಸಂಬಂಧಿ ವಿವಾಹದಿಂದ ಹೆಚ್ಚಾಗ್ತಿದೆ ಆನುವಂಶಿಕ ಅಸ್ವಸ್ಥತೆ: ಸಹೋದರ ಸಂಬಂಧಿ ವಿವಾಹದಿಂದ ಆನುವಂಶಿಕ ಸಮಸ್ಯೆ ಹೆಚ್ಚಾಗ್ತಿದೆ. ಇದಕ್ಕೆ ಗಫೂರ್ ಹುಸೇನ್ ಶಾ ಕುಟುಂಬವೇ ಉತ್ತಮ ನಿದರ್ಶನ. ಷಾಗೆ ಈಗ 56 ವರ್ಷ.  ಅವರು ಶಿಕ್ಷಕರು. ಹುನೇನ್ ಎಂಟು ಮಕ್ಕಳ ತಂದೆ. ಪಾಕಿಸ್ತಾನದ ಬುಡಕಟ್ಟು ಪದ್ಧತಿಗಳ ಪ್ರಕಾರ ಷಾ ತನ್ನ ಮಕ್ಕಳನ್ನು ಕುಟುಂಬದಲ್ಲಿಯೇ ಮದುವೆ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಅಂತರ್ ಕುಟುಂಬದ ವಿವಾಹಗಳಿಂದ ಮಕ್ಕಳಲ್ಲಿ ಆನುವಂಶಿಕ ಕಾಯಿಲೆ ಅಪಾಯಗಳಿವೆ ಎಂಬುದು ಷಾಗೆ ತಿಳಿದಿದೆ. ಷಾ 1987 ರಲ್ಲಿ ತಮ್ಮ ಸೋದರಸಂಬಂಧಿಯನ್ನು ವಿವಾಹವಾಗಿದ್ದರು. ಷಾಗೆ ಜನಿಸಿದ ಮೂರು ಮಕ್ಕಳು ಅಂಗವೈಕಲ್ಯದಿಂದ ಬಳಲುತ್ತಿದ್ದಾರಂತೆ.  

Health Tips: ಮಕ್ಕಳಲ್ಲಿ ಹೆಚ್ಚಾಗಿದೆ ಅಪಾಯಕಾರಿ ಎನರ್ಜಿ ಡ್ರಿಂಕ್ಸ್ ಸೇವನೆ

ತನ್ನ ಮಗನ ಮೆದುಳು ಸಾಮಾನ್ಯ ಗಾತ್ರಕ್ಕೆ ಬೆಳೆದಿಲ್ಲ ಎಂದು ಷಾ ಡಿಡಬ್ಲ್ಯೂಗೆ ತಿಳಿಸಿದ್ದಾರೆ. ಅವರ ಒಬ್ಬ ಹೆಣ್ಣು ಮಗಳಿಗೆ ವಾಕ್ ದೋಷ ಮತ್ತು ಇನ್ನೊಬ್ಬಳು ಶ್ರವಣ ದೋಷವನ್ನು ಹೊಂದಿದ್ದಾಳೆ. ಪತ್ನಿಗೆ ಶಿಕ್ಷಣವಿಲ್ಲ. ವಿಕಲಾಂಗ ಮಕ್ಕಳಿಗೂ ಸರಿಯಾದ ಶಿಕ್ಷಣ ಸಿಕ್ಕಿಲ್ಲ. ನನ್ನ ಸಾವಿನ ನಂತ್ರ ಅವರ ಭವಿಷ್ಯವೇನು ಎಂಬ ಚಿಂತೆ ನನಗೆ ಕಾಡ್ತಿದೆ ಎಂದು ಷಾ ಹೇಳಿದ್ದಾರೆ.  

ಸಮಾಜದ ಒತ್ತಡ : ಸೋದರ ಸಂಬಂಧಿ ವಿವಾಹದಿಂದ ಆನುವಂಶಿಕ ಸಮಸ್ಯೆ ಹೆಚ್ಚಾಗ್ತಿದೆ ಎಂಬ ಸಂಗತಿ ಅಲ್ಲಿನ ಪ್ರತಿಯೊಬ್ಬರಿಗೂ ತಿಳಿದಿದೆ. ಆದ್ರೆ ಸೋದರ ಸಂಬಂಧಿ ವಿವಾಹ ಪದ್ಧತಿಯನ್ನು ಅನುಸರಿಸಲು ಅಗಾಧವಾದ ಸಾಮಾಜಿಕ ಒತ್ತಡವಿದೆಯಂತೆ. ಕುಟುಂಬದೊಳಗೆ ತಮ್ಮ ಮಕ್ಕಳನ್ನು ಮದುವೆ ಮಾಡಲು ನಿರಾಕರಿಸುವ ಜನರನ್ನು ಬಹಿಷ್ಕರಿಸಲಾಗುತ್ತದೆಯಂತೆ. ಷಾ ಕುಟುಂಬದಲ್ಲಿ ರಕ್ತದ ಅಸ್ವಸ್ಥತೆಗಳು, ಕಲಿಕೆಯಲ್ಲಿ ಅಸಮರ್ಥತೆ, ಕುರುಡುತನ ಮತ್ತು ಕಿವುಡುತನದ ಸಮಸ್ಯೆಯಿದೆ. ಅದು ಆನುವಂಶಿಕವಾಗಿ ಮಕ್ಕಳಿಗೆ ಬರ್ತಿದೆ.  

HEALTH TIPS : ನೀರಲ್ಲಿ ಮಲ ತೇಲೋದೂ ಕ್ಯಾನ್ಸರ್ ಲಕ್ಷಣವೇ?

ಪಾಕಿಸ್ತಾನದಲ್ಲಿ ಹೆಚ್ಚು ರಕ್ತದ ಕಾಯಿಲೆ : ಪಾಕಿಸ್ತಾನದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಆನುವಂಶಿಕ ಅಸ್ವಸ್ಥತೆಗಳಲ್ಲಿ ಒಂದು ಆನುವಂಶಿಕ ರಕ್ತದ ಕಾಯಿಲೆ, ಥಲಸ್ಸೆಮಿಯಾ. ಇದು ಕೆಂಪು ರಕ್ತ ಕಣಗಳು ಆಮ್ಲಜನಕವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಆನುವಂಶಿಕ ಕಾಯಿಲೆಗಳಿಗೆ ಜೆನೆಟಿಕ್ ಪರೀಕ್ಷೆ ಮತ್ತು ಪ್ರಸವಪೂರ್ವ ಸ್ಕ್ರೀನಿಂಗ್ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಲಭ್ಯವಿಲ್ಲ. ಪಾಕಿಸ್ತಾನದಲ್ಲಿ 2017ರಲ್ಲಿ ನಡೆದ ಸಮೀಕ್ಷೆ ಪ್ರಕಾರ 130ಕ್ಕೂ ಹೆಚ್ಚು ಆನುವಂಶಿಕ ರೋಗ ಪತ್ತೆಯಾಗಿದೆ. ಅದ್ರಲ್ಲಿ 1000ಕ್ಕೂ ಹೆಚ್ಚು ರೂಪಾಂತರಗಳು ವರದಿಯಾಗಿವೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ