ಕೊರೋನಾ ಡಿಪ್ರೆಶನ್‌ ನಿಮಗೂ ಬರಬಹುದು ಹುಷಾರು!

By Suvarna NewsFirst Published Mar 22, 2020, 2:49 PM IST
Highlights

ಎಲ್ಲೆಲ್ಲೂ ಕೊರೋನಾ ಭಯದಿಂದ ಈಗ ಮನೆಯಲ್ಲಿ ಕೂರುವುದು ದಿನಗಟ್ಟಲೆ ಕಡ್ಡಾಯವಾಗಿದೆ. ಆದರೆ ಇಂಥ ಭಯಾನಕ ಏಕಾಂತದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ ಗಾಬರಿಗೊಳಿಸುವಂಥದ್ದು. ಇದನ್ನೇ ತಜ್ಞರು ಕೊರೋನಾ ಡಿಪ್ರೆಶನ್‌ ಅಂತ ಕರೆಯುತ್ತಿದ್ದಾರೆ.

ಭಾನುವಾರದ ಜನತಾ ಕರ್ಪ್ಯೂ ಅಂತ ಮನೆಯೊಳಗೇ ಜನ ಕುಳಿತಿದ್ದಾರೆ. ಹೊರಗೆ ಓಡಾಡುವಂತಿಲ್ಲ. ಓಡಾಡಿದರೂ ಯಾವ ಅಂಗಡಿಗಳೂ ತೆರೆದಿಲ್ಲ, ಯಾವ ಪುಣ್ಯಕ್ಷೇತ್ರಗಳೂ ಇಲ್ಲ. ಎಲ್ಲ ಬಂದ್‌. ಎಲ್ಲಿಗೂ ಹೋಗುವಂತಿಲ್ಲ. ಇದು ಒಂದು ದಿನದ ಕತೆ. ಇದೇ ಪರಿಸ್ಥಿತಿ ಮೂರು ನಾಲ್ಕು ದಿನ, ಅಥವಾ ಒಂದು ವಾರ, ಅಥವಾ ಒಂದು ತಿಂಗಳು ಮುಂದುವರಿಯಿತು ಅಂತಿಟ್ಟುಕೊಳ್ಳಿ. ಏನಾಗಬಹುದು? ಮನೆಯಲ್ಲಿ ತುತ್ತು ಕೂಳಿಗೆ ತತ್ವಾರ ಎದುರಾಗಬಹುದು. ಅದಕ್ಕೆ ಹೇಗೋ ವ್ಯವಸ್ಥೆ ಮಾಡಿಕೊಳ್ಳಬಹುದು ಅಥವಾ ಸರಕಾರವೇ ಏನಾದರೊಂದು ವ್ಯವಸ್ಥೆ ದಿನಸಿ ಮನೆ ಬಾಗಿಲಿಗೆ ತಲುಪಿಸಲು ಮಾಡಬಹುದು ಅನ್ನೋಣ. ಎಲ್ಲೆಲ್ಲೂ ಕೊರೋನಾ ಭಯದಿಂದ ಈಗ ಮನೆಯಲ್ಲಿ ಕೂರುವುದು ದಿನಗಟ್ಟಲೆ ಕಡ್ಡಾಯವಾಗಿದೆ. ಆದರೆ ಇಂಥ ಭಯಾನಕ ಏಕಾಂತದಿಂದ ಮನಸ್ಸಿನ ಮೇಲೆ ಆಗುವ ಪರಿಣಾಮ ಗಾಬರಿಗೊಳಿಸುವಂಥದ್ದು. ಇದನ್ನೇ ತಜ್ಞರು ಕೊರೋನಾ ಡಿಪ್ರೆಶನ್‌ ಅಂತ ಕರೆಯುತ್ತಿದ್ದಾರೆ.

ಕೊರೋನಾದಿಂದಿ ಸತ್ತವರನ್ನು ರಸ್ತೆ ಬದಿ ಸಮಾದಿ ಮಾಡುತ್ತಿರುವುದು ಹೀಗೆ..

ಈ ಡಿಪ್ರೆಶನ್‌ ಅಥವಾ ಖಿನ್ನತೆಯ ಲಕ್ಷಣಗಳು ಹೀಗಿವೆ: ಪದೇ ಪದೆ ಕೊಕೊರೋನಾನಾ ಕಾಯಿಲೆಯ ಸ್ಟೇಟಸ್‌ ಏನಿದೆ ಎಂದು ಚೆಕ್‌ ಮಾಡುವುದು. ಮೊಬೈಲ್‌, ಟಿವಿ, ಎಲ್ಲ ಕಡೆಯೂ ಕೊರೋನಾ ಕಾಯಿಲೆಯ ಸುದ್ದಿಗಾಗಿ ಹುಡುಕಾಡುವುದು. ಮನೆಬಾಗಿಲಿಗೆ ಯಾರು ಬಂದರೂ ಅವನಿಗೆ ಕೊರೋನಾ ಇರಬಹುದಾ ಎಂದು ಶಂಕಿಸುವುದು. ಹಾಲಿನವರು ಹಾಲಿನ ಪ್ಯಾಕೆಟ್ ಹಾಕಿ ಹೋದರೂ, ಅದನ್ನು ಮುಟ್ಟಿದರೆ ನಾಲ್ಕು ಸಲ ಕೈ ತೊಳೆದುಕೊಳ್ಳುವುದು, ಸಾರ್ವಜನಿಕ ಪ್ರದೇಶಕ್ಕೆ ಹೋಗಲು ಅವಾಯ್ಡ್ ಮಾಡುವುದು, ಹೋದರೂ ಯಾರನ್ನೂ ಮುಟ್ಟಿಸಿಕೊಳ್ಳದೆ, ಎಲ್ಲರಿಂದಲೂ ಮೂರಡಿ ದೂರ ನಿಂತು ಬರುವುದು, ಯಾರೊಂದಿಗೆ ಮಾತಾಡಬೇಕಾಗುತ್ತದೋ ಎಂಬ ಭಯದಿಂದಲೇ ಹೊರಗೆ ಹೋಗದೆ ಇರುವುದು, ತನಗೊಂದು ಸಣ್ಣ ಕೆಮ್ಮು ಬಂದರೂ ಕೊರೋನಾ ಬಂದಿರಬಹುದಾ ಎಂದು ಹೆದರುವುದು, ಡಾಕ್ಟರಲ್ಲಿಗೆ ಓಡುವುದು, ಟೆಸ್ಟ್ ರಿಸಲ್ಟ್ ಬರುವಲ್ಲಿಯವರೆಗೆ ವಿಲವಿಲ ಒದ್ದಾಡುವುದು, ದಿನಕ್ಕೆ ನೂರಾರು ಬಾರಿ ಕೈ ತೊಳೆಯುವುದು, ಪಕ್ಕದ ಮನೆಯವನಿಗೆ ಕೊರೋನಾ ಬಂದರೆ ಸಾಕು ತಾನೇ ಸತ್ತು ಹೋದೆ ಎಂಬಂತೆ ಗಾಬರಿ ಆಗುವುದು- ಹೀಗೆ ಇದರ ಲಕ್ಷಣಗಳು ಚಾಚಿಕೊಳ್ಳುತ್ತವೆ.
 

ಇದರಲ್ಲಿ ಹಲವು ಎಚ್ಚರಿಕೆಗಳು ನಮಗೆ ಅಗತ್ಯ ಅನ್ನೋಣ. ಹೊರಗಿನವರನ್ನು ಮುಟ್ಟಿಸಿಕೊಳ್ಳಧ ಸೋಶಿಯಲ್‌ ಡಿಸ್ಟೆನ್ಸಿಂಗ್‌ ಈ ಸಮಯದಲ್ಲಿ ಅಗತ್ಯ. ಕೈ ಆಗಾಗ ತೊಳೆದುಕೊಳ್ಳುವುದೂ ಮುಖ್ಯ. ಆದರೆ ಇದನ್ನೇ ಸದಾ ಕಾಲ ಚಿಂತಿಸುತ್ತಾ ಗಾಬರಿಯಾಗುತ್ತಾ, ಅನವಶ್ಯಕವಾಗಿ ಮದ್ದು ಸೇವಿಸುತ್ತಾ ಇರುವುದು ಮಾತ್ರ ಮಾನಸಿಕವಾಗಿ ಹಾನಿಕರ.
 

ಹಾಗಿದ್ದರೆ ಇದನ್ನು ಮೀರುವುದು, ಅದರಿಂದ ಹೊರಬರುವುದು ಹೇಗೆ?

ಮುಖ್ಯವಾಗಿ, ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಆಗಾಗ ಕೈ ತೊಳೆದುಕೊಳ್ಳಬೇಕು. ಯಾವಾಗ ಕೈ ತೊಳೆದುಕೊಳ್ಳಬೇಕು ಎಂಬುದು ಗೊತ್ತಿರಬೇಕು. ಸ್ಯಾನಿಟೈಸರ್‌ ಬಳಸಬೇಕು. ತನಗೆ ರೋಗ ಬರಲಾರದು ಎಂದೇ ಭಾವಿಸಬೇಕು. ಬರಬಹುದು ಎಂದು ಭಾವಿಸಿ ಗಾಬರಿ ಬೀಳಬಾರದು.
 

ತನಗೆ ಕೊರೋನಾ ಬಂದರೆ ತನ್ನ ಕುಟುಂಬದಲ್ಲಿ ಎಲ್ಲರೂ ಕಾಯಿಲೆ ಬೀಳುತ್ತಾರೆ ಎಂದು ಹೆದರಬಾರದು. ಕೊರೊನಾ ಎಲ್ಲರನ್ನೂ ಬಾಧಿಸುವುದಿಲ್ಲ. ಕೆಲವರಿಗೆ ಬಂದರೂ ಬಹಳ ಬೇಗನೆ, ಸಣ್ಣ ಲಕ್ಷಣಗಳನ್ನು ತೋರಿಸಿ ಹೊರಟುಹೋಗುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಅಗತ್ಯ. ಅದಕ್ಕೇ ಆರೋಗ್ಯಕರ ಆಹಾರ ಸೇವಿಸಬೇಕು. ಬೇಕರಿ ಫುಡ್, ಕರಿದ ತಿಂಡಿ ಸೇವಿಸಬೇಡಿ.

 

ಕೊರೋನಾ ರಜೆಯಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇಲ್ಲಿವೆ ಐಡಿಯಾಗಳು...

 

ಮನಸ್ಸಿಗೆ ಉಲ್ಲಾಸಕರವಾದ ಕೆಲಸಗಳನ್ನು ಮಾಡುತ್ತಿರಬೇಕು. ಆಗಾಗ ಸಂಗೀತ ಕೇಳಿ. ಕುಟುಂಬ ಸದಸ್ಯರೊಡನೆ ಆಡವಾಡಿ. ಇನ್‌ಡೋರ್‌ ಗೇಮ್‌ಗಳನ್ನು ಆಡಿ. ಗಾರ್ಡನ್‌ ಕೆಲಸಗಳಲ್ಲಿ ತೊಡಗಿಕೊಳ್ಳಿ. ಹಸಿರಿನೊಂದಿಗೆ ದಿನ ಕಳೆಯಿರಿ.

ಕೊರೊನಾದ ಬಗ್ಗೆ ಸುದ್ದಿಗಳನ್ನು ನೋಡಿ. ಅವಶ್ಯಕವಾದ ಮಾಹಿತಿಗಳನ್ನಷ್ಟೇ ಕೇಳಿ, ನೋಡಿ. ಅದಕ್ಕಿಂತ ಹೆಚ್ಚು ಮಾಹಿತಿ ತುಂಬಿಕೊಳ್ಳುವುದು, ಗಾಬರಿಯಾಗುವುದು ಬೇಡ. ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಾಪ್‌ಗಳಲ್ಲಿ ಹೆಚ್ಚು ಹೊತ್ತು ಕಳೆಯಬೇಡಿ. ಆದರೆ ಬಂಧುಗಳೊಡನೆ, ಮಿತ್ರರೊಡನೆ ಸಂಪರ್ಕದಲ್ಲಿರಿ. ನಿಮ್ಮ ಮನಸ್ಸಿನ ತಾಕಲಾಟಗಳನ್ನು ಹಂಚಿಕೊಳ್ಳಿ.

 

ಜನತಾ ಪವರ್: ಯಾವ ಬಂದ್‌ಗೂ ಕೇರ್ ಮಾಡದ ಬೆಂಗ್ಳೂರು ಇವತ್ತು ಟೋಟಲ್ ಸೈಲೆಂಟ್ 

 

ನಿಮ್ಮ ಹವ್ಯಾಸಗಳಿಗೆ ಒಂದು ಹೊರದಾರಿ ಕಂಡುಕೊಳ್ಳಿ. ಓದು, ಡ್ರಾಯಿಂಗ್‌, ಪೇಂಟಿಂಗ್‌, ಅಡುಗೆ, ಕಸೂತಿ, ಮುಂತಾದ ಜೀವನಪ್ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

ಮನೆಯಲ್ಲಿ ಅನಗತ್ಯ ದಿನಸಿ ಸಾಮಗ್ರಿಗಳನ್ನು ರಾಶಿ ಹಾಕಿಟ್ಟುಕೊಳ್ಳುವುದು ಅಗತ್ಯವಿಲ್ಲ. ಕೊರೊನಾ ನಿರ್ಬಂಧ ತಾತ್ಕಾಲಿಕ. ಒಂದಲ್ಲ ಒಂದು ದಿನ ಎಲ್ಲ ಅಂಗಡಿಗಳು ಬಾಗಿಲು ತೆರೆಯಲೇಬೇಕು.

"

click me!