ರಸ್ತೆ ಬದಿ ಗುಂಡಿಯಲ್ಲಿ ಕೊರೋನಾಗೆ ಬಲಿಯಾದವರ ಸಮಾಧಿ: ಶಾಕಿಂಗ್ ದೃಶ್ಯ ರಿವೀಲ್

First Published 22, Mar 2020, 2:18 PM IST

ಕೊರೋನಾ ವೈರಸ್ ನಿಂದಾಗಿ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಲಕ್ಷಾಂತರ ಮಂದಿಗೆ ಈ ಸೋಂಕು ತಗುಲಿದೆ. ಜನರಿಗೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರ ಸೂಚಿಸಿದರೂ, ಅನೇಕರು ಇದನ್ನು ಮಾಮೂಲಿಯಾಗಿ ತೆಗೆದುಕೊಂಡಿದ್ದಾರೆ. ಈ ಬೇಜವಾಬ್ದಾರಿತನದಿಂದಾಗಿ ಮಲೇಷ್ಯಾದಲ್ಲಿ ಮೂವ್ಮೆಂಟ್ ಕಂಟ್ರೋಲ್ ಆರ್ಡರ್ ನೀಡಲಾಗಿದೆ. ಹೀಗಿದ್ದರೂ ಜನರು ಮನೆ ಹೊರಗೆ ಬಂದು ಪಾರ್ಟಿ, ಮೋಜು ಮಸ್ತಿ ಮಾಡುತ್ತಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವವರ ಮೃತದೇಹ ಸಮಾಧಿ ಮಾಡುವ ಫೋಟೋಗಳು ವೈರಲ್ ಆಗಿವೆ.

ಮಲೇಷ್ಯಾದಲ್ಲಿ ಮಾರ್ಚ್ 18 ರಿಂದ ಜನರನ್ನು ದಿಗ್ಬಂಧನ ಮಾಡಲಾಗಿದೆ. ಹೀಗಿರುವಾಗ ಇಲ್ಲಿನ ಜನರು ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದಾರೆ.

ಸದ್ಯ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದು ಶೇರ್ ಮಾಡಲಾಗಿದ್ದು, ಇದರಲ್ಲಿ ಕೊರೋನಾಗೆ ಬಲಿಯಾದವರ ಮೃತದೇಹವನ್ನು ಸಮಾಧಿ ಮಾಡುತ್ತಿರುವ ದೃಶ್ಯಗಳಿವೆ.

ರಸ್ತೆ ಬದಿಯಲ್ಲಿ ಅಂಬುಲೆನ್ಸ್ ನಲ್ಲಿ ತರಲಾದ ಮೃತದೇಹಗಳನ್ನು ಇಳಿಸಿ, ಅಲ್ಲೇ ಗುಂಡಿಗಳಲ್ಲಿ ಹೂಳಲಾಗುತ್ತಿವೆ.

ಸೂಟ್ ಹಾಗೂ ಮಾಸ್ಕ್ ಧರಿಸಿರುವ ಆಸ್ಪತ್ರೆ ಸಿಬ್ಬಂದಿ ಈ ಮೃತದೇಹವನ್ನು ಹೂತು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.

ಎಲ್ಲಕ್ಕಿಂತ ಹೆಚ್ಚು ದುಃಖವುಂಟು ಮಾಡುವ ವಿಚಾರವೆಂದರೆ ಮೃತಪಟ್ಟ ಬಳಿಕ ಕುಟುಂಬ ಸದಸ್ಯರಿಗೆ ಮೃತದೇಹವನ್ನು ಕೊನೆಯ ಬಾರಿ ನೋಡುವ ಅವಕಾಶವೂ ಸಿಗುತ್ತಿಲ್ಲ. ವೈರಸ್ ಹರಡುಉವ ಸಾಧ್ಯತೆಗಳಿರುವ ಕಾರಣ ಹೀಗೆ ಮಾಡಲಾಗುತ್ತಿದೆ.

ಈ ಭೀಕರ ವೈರಸ್ ಅತಿ ಕಡಿಮೆ ಅವಧಿಯಲಲ್ಲಿ ವಿಶ್ವದೆಲ್ಲೆಡೆ ಹಬ್ಬಿಕೊಂಡಿದೆ.

ಚೀನಾದ ವುಹಾನ್ ನಗರದಿಂದ ಹಬ್ಬಿದ ಈ ಮಹಾಮಾರಿ ಭಾರತ, ಮಲೇಷ್ಯಾ ಸೇರಿದಂತೆ 190ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ.

ಮಲೇಷ್ಯಾದಲ್ಲಿ ಈವರೆಗೆ ಸುಮಾರು ೨ ಸಾವಿರ ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಅಲ್ಲದೇ ಎಂಟು ಮಂದಿ ಕೊರೋನಾ ವೈರಸ್ ಪೀಡಿತರು ಮೃತಪಟ್ಟಿದ್ದಾರೆ.

ಎಲ್ಲಕ್ಕಿಂತ ಅಚ್ಚರಿ ಮೂಡಿಸುವ ವಿಚಾರವೆಂದರೆ ಇಲ್ಲಿ ಕೊರೋನಾ ವೈರಸ್ ಹರಡಲು ಮಸೀದಿಗಳೇ ಕಾರಣ ಎಂದು ದೂರಲಾಗುತ್ತಿದೆ.

ವೈರಸ್ ಹರಡುತ್ತಿದ್ದರೂ ಜನರು ಮಸೀದಿಯಲ್ಲಿ ನಮಾಜ್ ಪಠಿಸಲು ಹೋಗಿದ್ದರೆಂಬುವುದೇ ಹೀಗೆ ದೂರಲು ಕಾರಣ.

loader