ಅಷ್ಟಕ್ಕೂ ಮೋದಿ ಏಕೆ #JanataCurfewಗೆ ಕರೆ ನೀಡಿದ್ದು?

By Suvarna NewsFirst Published Mar 21, 2020, 1:48 PM IST
Highlights

ಕೆಲವರು ಇದೊಂದು ತಮಾಷೆ ಎಂದು ಪರಿಗಣಿಸಿದರೆ, ಇನ್ನು ಹಲವರು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಒಟ್ಟಾರೆ ಊಹಾಪೋಹಗಳೇ ಹೆಚ್ಚು. ನಿಜ ಯಾರಿಗೂ ಗೊತ್ತಿಲ್ಲ. ಪ್ರಧಾನಿ ಯಾಕೆ ಈ ಕರ್ಫ್ಯೂ ಹಾಕಿದ್ದಾರೆ ನಿಮಗೆ ಗೊತ್ತಾ?

ಭಾನುವಾರ ಜನತಾ ಕರ್ಫ್ಯೂ ಅಂತೆ. ಯಾರೂ ಮನೆಯಿಂಧ ಅನಗತ್ಯವಾಗಿ ಹೊರಗೆ ಬರಬಾರದಂತೆ. ಹಾಗೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಹೆಚ್ಚಿನವರು ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದಿದ್ದರೂ, ಪ್ರಧಾನಿ ಹೇಳಿದ್ದಾರಲ್ವಾ ಹಾಗಾಗಿ ಆಚರಿಸೋಣ ಎಂದು ಸುಮ್ಮನಾಗಿದ್ದಾರೆ. ಇನ್ನು ಹಲವರು, ಇದನ್ನು ಗೇಲಿ ಮಾಡಿದ್ದಾರೆ. ಭಾನುವಾರ ಒಂದು ದಿನ ನಾವು ಮನೇಲೇ ಇದ್ರೆ ಕೊರೊನಾ ವಾಪಸ್‌ ಹೊರಟು ಹೋಗುತ್ತಾ? ಅದಕ್ಕೆ ನಮ್ಮನ್ನು ಹುಡುಕಿಕೊಂಡು ಬರೋಕೆ ಆಗಲ್ವಾ ಎಂದೆಲ್ಲ ವ್ಯಂಗ್ಯ ಮಾಡುತ್ತಿದ್ದಾರೆ. ಇನ್ನು ಹಲವರು, ಆ ದಿನ ಬೆಳಗ್ಗೆಯಿಂಧ ರಾತ್ರಿಯವರೆಗೆ ಇಡೀ ದೇಶದಲ್ಲಿ, ವಿಮಾನದಿಂದ ಔಷಧ ಸಿಂಪಡಿಸ್ತಾರಂತೆ. ಹಾಗಾಗಿ ಕರ್ಫ್ಯೂ. ಯಾರೂ ಮನೆಯಿಂಧ ಹೊರಗೆ ಬರಬಾರದು ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಕೆಲವರು ಇದೊಂದು ತಮಾಷೆ ಎಂದು ಪರಿಗಣಿಸಿದರೆ, ಇನ್ನು ಹಲವರು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಒಟ್ಟಾರೆ ಊಹಾಪೋಹಗಳೇ ಹೆಚ್ಚು. ನಿಜ ಯಾರಿಗೂ ಗೊತ್ತಿಲ್ಲ.
ಪ್ರಧಾನಿ ಯಾಕೆ ಈ ಕರ್ಫ್ಯೂ ಹಾಕಿದ್ದಾರೆ ನಿಮಗೆ ಗೊತ್ತಾ?

ಇದರ ಹಿಂದಿನ ಪರಿಕಲ್ಪನೆ ಸರಳವಾಗಿದೆ. ಇದನ್ನು ಯಾವುದೇ ಡಾಕ್ಟರನ್ನು ಅಥವಾ ವಿಜ್ಞಾನಿಗಳನ್ನು ಕೇಳಿ ನೋಡಿ- ಹೇಳ್ತಾರೆ. ಏನಂದರೆ, ಕೊರೊನಾ ವೈರಸ್ಸು ಯಾವುದೇ ಒಂದು ಮೇಲುಮೈಯ ಮೇಲೆ ಇಪ್ಪತ್ತನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಬದುಕಿರೋದಿಲ್ಲ. ಕಬ್ಬಿಣ ಮುಂತಾದ ತಣ್ಣನೆಯ ಲೋಹದ ಮೇಲೆ ನಲುವತ್ತೆಂಟು ಗಂಟೆ ಬದುಕಿ ಇರಬಲ್ಲದು. ಆದರೆ ಲೋಹವಲ್ಲದ, ಇತರ ಮೇಲ್ಮೈಗಳ ಮೇಲೆ ಅದು ಒಂದು ದಿನಕ್ಕಿಂತ ಹೆಚ್ಚು ಕಾಲ ಬದುಕಿ ಉಳಿಯೋದಿಲ್ಲ. ಈ ಒಂದು ದಿನ ಕಾಲ, ಕೊರೊನಾ ವೈರಸ್ಸಿನ ಹರಡುವಿಕೆಯನ್ನು ತಡೆದರೆ ಭಾರತ ಅಷ್ಟರ ಮಟ್ಟಿಗೆ ಸೇಫು. ಹೀಗೆ ಆ ವೈರಸ್‌ ಹರಡದೇ ಇರಬೇಕಾದರೆ, ಎಲ್ಲ ಕಡೆಯೂ ಜನರ ಓಡಾಟ ಪ್ರತಿಬಂಧಿಸಬೇಕು. ಕರ್ಫ್ಯೂ ವಿಧಿಸಿದ್ದರಿಂದ, ಅಂಗಡಿ ಮಾಲ್‌ಗಳೂ ಬಂದ್‌ ಆಗಿ ಕೇವಲ ಅವಶ್ಯಕ ಸೇವೆಗಳಷ್ಟೆ ಉಳಿಯುವುದರಿಂದ, ಜನರ ಓಡಾಟ ಕಡಿಮೆಯಾಗುತ್ತದೆ. ವೈರಸ್‌ ಹರಡುವಿಕೆ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ.

24 ಗಂಟೆಯಲ್ಲಿ 627 ಸಾವು, ಪುಟ್ಟ ಇಟಲಿಯಲ್ಲೀಗ ಶವಗಳ ರಾಶಿ! 

ಭಾನುವಾರವೇ ಏಕೆ?

ಇದೋ ಒಂದು ಒಳ್ಳೆಯ ಪ್ರಶ್ನೆಯೇ. ಕೊರೊನಾ ವೈರಸ್‌ ಭಾರತವನ್ನು ಪ್ರವೇಶಿಸಿ ಮೂರು ವಾರಗಳು ಕಳೆದಿವೆ. ಈಗ ಭಾರತ ಎರಡನೇ ಹಂತವನ್ನು ಪ್ರವೇಶಸುತ್ತಿದೆ. ನಿನ್ನೆ ಒಂದೇ ದಿನ ಇದ್ದಕ್ಕಿದ್ದಂತೆ ನಲುವತ್ತು ಕೇಸುಗಳು ಹೊಸದಾಗಿ ಭಾರತದಲ್ಲಿ ಕಂಡು ಬಂದಿವೆ. ಅಂದರೆ ಇದು ದಿನದಿಂದ ದಿನಕ್ಕೆ ತನ್ನ ಸೋಂಕನ್ನು ವೃದ್ಧಿ ಮಾಡಿಕೊಳ್ಳುತ್ತದೆ. ಒಂದರಿಂದ ಹತ್ತು, ಹತ್ತರಿಂಧ ನೂರು- ಹೀಗೆ ಹರಡುತ್ತದೆ. ಇನ್ನು ಮುಂದೆ ಅದು ವೃದ್ಧರಿಗೂ ಮಕ್ಕಳಿಗೂ ಹರಡಿದರೆ ಭಾರಿ ಡೇಂಜರ್ರು. ಮೂರನೇ ಹಂತದಲ್ಲಿ ಅದು ಹೀಗೆ ಹಿಡಿತ ತಪ್ಪಿ ಹರಡುವ ಸಾಧ್ಯತೆ ಹೆಚ್ಚು. ಇದಕ್ಕೆ ಭಾನುವಾರವೇ ಮುಹೂರ್ತ ಆಗಿರುವ ಸಾಧ್ಯತೆ ಇದೆ. ಭಾರತದಲ್ಲಿ ಎಷ್ಟೇ ಕೊರೊನಾ ಬಂದ್‌ ಅತ ಹೇಳಿದರೂ ವೀಕೆಂಡ್‌ ಮೂಡಿನಲ್ಲಿ ಸಂಜೆ ಜನ ಬೀದಿಗೆ ಬಂದುಬಿಡುವ ಸಾಧ್ಯತೆ ಹೆಚ್ಚು. ಬೀದಿ ಫುಡ್‌ಗಳ ಮಾರಾಟವೂ ಅಂದೇ ಅಧಿಕ. ಹೀಗಾಗಿ ಅವುಗಳನ್ನು ತಡೆಯುವುದಕ್ಕಾಗಿ ಭಾನುವಾರದ ಆಯ್ಕೆ.

ಒಂದೇ ದಿನ ಸಾಕೇ?
ಎರಡು ದಿನ ಮಾಡುತ್ತಿದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿ ಆಗಿರುತ್ತಿತ್ತು. ಆದರೆ ದಿನಗೂಲಿಯವರು, ಅಂದಂದಿನ ದುಡಿಮೆಯಿಂದಲೇ ಅಂದಂದಿನ ಅನ್ನ ಹುಟ್ಟಿಸಿಕೊಳ್ಳಬೇಕಾದವರನ್ನೆಲ್ಲ ಪರಿಗಣಿಸಿ ಈ ನಿರ್ಧಾರವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. 

ಕೊರೋನಾ ನಿಯಂತ್ರಣದಲ್ಲಿದೆ ಎಂದ ಚೀನಾದ ಅಸಲಿಯತ್ತು ಬಯಲು!

ಇಟೆಲಿ, ಇರಾನ್‌ ಮುಂತಾದ ದೇಶಗಳು ಈ ಸಂಪೂರ್ಣ ಲಾಕ್‌ಡೌನ್‌ ಅನುಸರಿಸದೆ, ಗೇಲಿ ಮಾಡಿದ ಪರಿಣಾಮವನ್ನು ಈಗ ಅನುಭವಿಸುತ್ತಿವೆ. ಅಲ್ಲಿ ಸಾವಿನ ನಂಬರ್‌ ಮಿತಿ ಮೀರಿವೆ, ಇಲ್ಲಿ ಹಾಗಾಗದಿರಲಿ. ಸ್ವಯಂಪ್ರೇರಿತ ಕರ್ಫ್ಯೂ ಆಚರಿಸೋಣ.

click me!