Gut Friendly Foods: ಔ‍ಷಧಿ ಇಲ್ಲದೆ ಕರುಳಿನ ಆರೋಗ್ಯ ಚೆನ್ನಾಗಿಡಲು ಈ ಆಹಾರ ಸೇವಿಸಿ

Published : Jun 01, 2025, 12:45 PM IST
gut health

ಸಾರಾಂಶ

ಕರುಳಿನ ಉರಿಯೂತವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ನಿರ್ಲಕ್ಷಿಸಿದರೆ ಗಂಭೀರ ತೊಂದರೆಗೆ ಸಿಲುಕಿಸಬಹುದು. ಕಳಪೆ ಆಹಾರವು ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಸರಿಯಾದ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಸಕಾಲಿಕ ಚಿಕಿತ್ಸೆಯಿಂದ ಈ ರೋಗವನ್ನು ನಿಯಂತ್ರಿಸಬಹುದು.

ನಿಮಗೆ ಆಗಾಗ್ಗೆ ಹೊಟ್ಟೆ ಸಮಸ್ಯೆಗಳು ಉಂಟಾಗುತ್ತಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ಕರುಳಿನ ಉರಿಯೂತ(Intestinal inflammation)ವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ನಿರ್ಲಕ್ಷಿಸಿದರೆ ಅದು ನಿಮ್ಮನ್ನು ಗಂಭೀರ ತೊಂದರೆಗೆ ಸಿಲುಕಿಸಬಹುದು. ಕಳಪೆ ಆಹಾರವು ನಿಮ್ಮ ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಏನಿದು ಕರುಳಿನ ಉರಿಯೂತ ಎಂದರೆ ಸಣ್ಣ ಅಥವಾ ದೊಡ್ಡ ಕರುಳಿನ ಒಳಪದರದಲ್ಲಿ ಕಿರಿಕಿರಿ ಅಥವಾ ಊತ. ಕರುಳಿನಲ್ಲಿ ಉರಿಯೂತಕ್ಕೆ ಹಲವು ಕಾರಣಗಳಿವೆ. ಕರುಳಿನಲ್ಲಿ ಊತ ಉಂಟಾದಾಗ, ಹೊಟ್ಟೆಯಲ್ಲಿ ಗ್ಯಾಸ್ ವೇಗವಾಗಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಸರಿಯಾದ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಸಕಾಲಿಕ ಚಿಕಿತ್ಸೆಯಿಂದ ಈ ರೋಗವನ್ನು ನಿಯಂತ್ರಿಸಬಹುದು.

ಈ ಕುರಿತು ಮಾತನಾಡಿರುವ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಎಂಡೋಸ್ಕೋಪಿಸ್ಟ್, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕರುಳಿನ ಉರಿಯೂತವನ್ನು ನಿಯಂತ್ರಿಸಲು ಬಯಸಿದರೆ, ನೀವು ಜಂಕ್ ಪುಡ್‌ಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಜಂಕ್ ಫುಡ್‌ಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿನ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ ಹಾಗೂ ಒಳ್ಳೆಯ ಬ್ಯಾಕ್ಟಿರಿಯಾಗಳು ಸಾಯುತ್ತವೆ. ಕರುಳಿನ ಉರಿಯೂತವನ್ನು ನಿಯಂತ್ರಿಸಲು ಮತ್ತು ಕರುಳಿನಲ್ಲಿ ಉತ್ತಮ ಬ್ಯಾಕ್ಟಿರಿಯಾವನ್ನು ಹೆಚ್ಚಿಸಲು, ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕರುಳಿನ ಉರಿಯೂತವನ್ನು ನಿಯಂತ್ರಿಸಲು ಮತ್ತು ಔಷಧಿ ಇಲ್ಲದೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಆ ಆಹಾರಗಳು ಯಾವುವು ಎಂಬುದನ್ನು ತಜ್ಞರು ತಿಳಿಸಿದ್ದಾರೆ ನೋಡಿ..

ಕರುಳಿನಲ್ಲಿ ಉರಿಯೂತದ ಲಕ್ಷಣಗಳು
ಕರುಳಿನಲ್ಲಿ ಉರಿಯೂತವು ಹೊಟ್ಟೆ ನೋವು ಮತ್ತು ಊತಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹೊಟ್ಟೆ ನೋವು ಗ್ಯಾಸ್ ರಚನೆಯಿಂದಾಗಿರಬಹುದು. ಹೊಟ್ಟೆಯಲ್ಲಿ ನಿರಂತರವಾಗಿ ಗ್ಯಾಸ್ ರಚನೆಯಾಗುವುದರಿಂದ ಅತಿಸಾರ ಮತ್ತು ಮಲಬದ್ಧತೆ ಎರಡೂ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆಯಲ್ಲಿ ಗ್ಯಾಸ್ ರಚನೆ, ದೌರ್ಬಲ್ಯ ಮತ್ತು ಆಯಾಸವು ಕರುಳಿನಲ್ಲಿ ಊರಿಯೂತದ ಲಕ್ಷಣಗಳಾಗಿವೆ. ಕೆಲವೊಮ್ಮೆ ಕರುಳಿನಲ್ಲಿನ ಉರಿಯೂತದ ಕಾರಣದಿಂದಾಗಿ ಮಲದ ಜೊತೆಗೆ ರಕ್ತವೂ ಕಾಣಿಸಿಕೊಳ್ಳಬಹುದು.

ಮೊಸರು ಮತ್ತು ಮಜ್ಜಿಗೆ ತೆಗೆದುಕೊಳ್ಳಿ
ನಮ್ಮ ದೇಹದಲ್ಲಿ ಕರುಳಿನಲ್ಲಿ ಊರಿಯೂತದ ಲಕ್ಷಣಗಳು ಕಂಡುಬಂದರೆ ಮೊಸರು ಮತ್ತು ಮಜ್ಜಿಗೆಯನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪ್ರೋಬಯಾಟಿಕ್‌ಗಳಿಂದ ಸಮೃದ್ಧವಾಗಿರುವ ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸುವುದರಿಂದ ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಷೀರಿಯಾಗಳು ನಾಶವಾಗುತ್ತವೆ ಮತ್ತು ಒಳ್ಳೆಯ ಬ್ಯಾಕ್ಸಿರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಮೊಸರು ಮತ್ತು ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ. ಈ ಆಹಾರವು ಹೊಟ್ಟೆಯ ಅಗ್ನಿಯನ್ನು ಶಾಂತಗೊಳಿಸುತ್ತದೆ ಮತ್ತು ತಂಪಾಗಿಸುತ್ತದೆ. ಇವುಗಳನ್ನು ಸೇವಿಸುವುದರಿಂದ, ಕರುಳಿನಲ್ಲಿ ಸಂಗ್ರಹವಾಗಿರುವ ಎಲ್ಲಾ ಮಲವು ಸುಲಭವಾಗಿ ಹೊರಬರುತ್ತದೆ ಮತ್ತು ಕರುಳಿನ ಆರೋಗ್ಯವು ಸುಧಾರಿಸುತ್ತದೆ.

ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನಿ
ನೀವು ಕರುಳಿನ ಆರೋಗ್ಯವನ್ನು ಸುಧಾರಿಸಲು ಬಯಸಿದರೆ, ನಿಮ್ಮ ಆಹಾರದಲ್ಲಿ ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇರಿಸಿ. ಕೆಲವು ಜನರು ಬೆಳ್ಳುಳ್ಳಿಯನ್ನು ತಪ್ಪಿಸಿದರೂ, ಕರುಳಿನ ಆರೋಗ್ಯವನ್ನು ಸುಧಾರಿಸಲು ಅವರು ಅದನ್ನು ತಿನ್ನಲೇಬೇಕು. ಪ್ರತಿದಿನ ಎರಡರಿಂದ ಮೂರು ಎಸಳು ಬೆಳ್ಳುಳ್ಳಿ ಸೇವಿಸುವುದರಿಂದ ನಿಮ್ಮ ಕರುಳಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬೆಳ್ಳುಳ್ಳಿ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಈರುಳ್ಳಿ, ನೈಸರ್ಗಿಕ ಪ್ರೋಬಯಾಟಿಕ್‌ ಆಗಿದ್ದರೆ, ಬೆಳ್ಳುಳ್ಳಿ, ಒಳ್ಳೆಯ ಬ್ಯಾಕ್ಕೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ
ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ನೀವು ಬಯಸಿದರೆ, ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಫೈಬ‌ರ್ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಕರುಳುಗಳು ಆರೋಗ್ಯಕರವಾಗಿರುತ್ತವೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆಹಾರವನ್ನು ಕರುಳಿನ ಮೂಲಕ ನಿಧಾನವಾಗಿ ಸಾಗಿಸುತ್ತದೆ, ಇದರಿಂದಾಗಿ ಪೋಷಕಾಂಶಗಳು ಸರಿಯಾಗಿ ಹೀರಲ್ಪಡುತ್ತವೆ. ಫೈಬರ್ ಒಳ್ಳೆಯ ಬ್ಯಾಕ್ಟಿರಿಯಾಗಳಿಗೆ ಆಹಾರವಾಗಿದ್ದು, ಇದು ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಆರೋಗ್ಯಕರವಾಗಿರಿಸುತ್ತದೆ.

ಧಾನ್ಯಗಳನ್ನು ಸೇವಿಸಿ
ನೀವು ಕರುಳಿನ ಆರೋಗ್ಯವನ್ನು ಚೆನ್ನಾಗಿಡಲು ಬಯಸಿದರೆ, ನಿಮ್ಮ ಆಹಾರದಲ್ಲಿ ಧಾನ್ಯಗಳನ್ನು ಸೇರಿಸಿ. ಧಾನ್ಯಗಳು ಅನೇಕ ಜೀವಸತ್ವಗಳು, ಖನಿಜಗಳು, ಫೈಬರ್, ಪಿಷ್ಠ ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದು ದೇಹವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಧಾನ್ಯಗಳು ಆಹಾರದ ನಾರಿನಂಶದಿಂದ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆಯಿಂದ ಪರಿಹಾರ ಸಿಗುತ್ತದೆ, ಮಲ ಮೃದುವಾಗುತ್ತದೆ ಮತ್ತು ಕರುಳನ್ನು ಆರೋಗ್ಯವಾಗಿಡುತ್ತದೆ. ಧಾನ್ಯಗಳಲ್ಲಿ ಇರುವ ಕರಗುವ ಫೈಬರ್ ಒಳ್ಳೆಯ ಬ್ಯಾಕ್ಕೀರಿಯಾಗಳಿಗೆ ಆಹಾರವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ
ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?