ಛೀ! ಈ ವಾಸನೆ ತಗೊಂಡ್ರೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ಕೊಡ್ತಾರಂತೆ...

By Vinutha Perla  |  First Published Feb 28, 2023, 12:24 PM IST

ಮಲ ಅಂದ್ರೆ ಸಾಕು ಎಲ್ರೂ ಮಾರುದ್ದ ಓಡ್ತಾರೆ. ಹೀಗಿರುವಾಗ ಮಲಕ್ಕೆ ಸಂಬಂಧಿಸಿದ ಕೆಲ್ಸಾನೇ ಒಂದಿದೆ ಅಂದ್ರೆ ನೀವ್ ನಂಬ್ತೀರಾ. ಹೌದು ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಈ ಯುಕೆ ಕಂಪನಿ ಮಲದ ವಾಸನೆ ನೋಡೋಕೆ ವ್ಯಕ್ತಿಯೊಬ್ಬನನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈತನ ಸಂಬಳ ಭರ್ತಿ 1.5 ಲಕ್ಷ ರೂ. 


ಮನುಷ್ಯ ಜೀವನ ನಡೆಸಲು ಏನಾದರೊಂದು ಕೆಲ್ಸ ಇರ್ಲೇಬೇಕು. ಅದು ಸಣ್ಣ ಕೆಲಸವಾದರೂ ಸರಿ, ದೊಡ್ಡ ಕೆಲಸವಾದರೂ ಸರಿ. ನಿಗದಿತವಾಗಿ ಇಂತಿಷ್ಟು ಆದಾಯ ಬರುತ್ತಿದ್ದರೆ ಬದುಕು ನಿರ್ವಹಿಸಲು ಸುಲಭವಾಗುತ್ತದೆ. ಹೀಗಾಗಿ ನಿರುದ್ಯೋಗಿಗಳು ದಿನಪತ್ರಿಕೆಗಳ ಜಾಬ್‌ ಕಾಲಂನ್ನು ನಿಯಮಿತವಾಗಿ ನೋಡುತ್ತಲೇ ಇರುತ್ತಾರೆ. ಆದರೆ ಇಲ್ಲೂ ಕೆಲವೊಮ್ಮೆ ಚಿತ್ರ-ವಿಚಿತ್ರ ಜಾಹೀರಾತುಗಳು ಎಲ್ಲರ ಗಮನ ಸೆಳೆಯುತ್ತವೆ. ಹಾಗೆಯೇ ಇಲ್ಲೊಂದು ವಿಲಕ್ಷಣ ಮತ್ತು ಅಸಾಮಾನ್ಯವೆಂದು ತೋರುವ ಉದ್ಯೋಗ ಜಾಹೀರಾತು ಎಲ್ಲೆಡೆ ವೈರಲ್ ಆಗ್ತಿದೆ. ಇದು ನಿಜವಾಗಿಯೂ ಅಭ್ಯರ್ಥಿಯ ಹುಡುಕಾಟವೋ ಅಥವಾ ಕೇವಲ ಗಿಮಿಕ್ಕೋ ಎಂಬುದು ಅರ್ಥವಾಗುತ್ತಿಲ್ಲ. 

ಯುಕೆ ಮೂಲದ ಕಂಪೆನಿಯೊಂದು ಜನರ ಮಲದ ವಾಸನೆ (Poop smell)ಯನ್ನು ಕಂಡುಹಿಡಿಯುವ ಉದ್ಯೋಗಕ್ಕೆ ಆಫರ್​ ಮಾಡಿದೆ. ಮಲದ ವಾಸನೆಯಿಂದಲೇ ಹಲವಾರು ರೋಗ (Disease)ಗಳನ್ನು ಕಂಡುಹಿಡಿಯಲು ಸಾಧ್ಯ. ಆದ್ದರಿಂದ ಇದನ್ನು ಪರೀಕ್ಷಿಸಲು ಉದ್ಯೋಗಿಗಳಿಗೆ ಆಹ್ವಾನ ಮಾಡಲಾಗಿದೆ. ಕರುಳಿನ ಆರೋಗ್ಯ ಸಲಹಾ ಸೇವೆಗಳನ್ನು ಒದಗಿಸುವ ಫೀಲ್ ಕಂಪ್ಲೀಟ್ ಎಂಬ ಇಂಗ್ಲೆಂಡ್​ ಮೂಲದ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ (Employee) ಆಫರ್​ ಮಾಡಿದೆ. ಇದಕ್ಕೆ ಆಯ್ಕೆಯಾಗುವ ವ್ಯಕ್ತಿಗೆ ಸುಮಾರು ಒಂದೂವರೆ ಲಕ್ಷ ರೂ. ಆಫರ್‌ ನೀಡಿದೆ. ಈ ಬಗ್ಗೆ ಆಸಕ್ತಿ (Interest) ಇರುವವರು ಅರ್ಜಿ ಸಲ್ಲಿಸಿ ಎಂದು ಹೇಳಿದೆ.

Tap to resize

Latest Videos

ಅಲಾರಂ ಹೊಡೆದಾಗಲ್ಲೆಲ್ಲಾ ಏಳ್ಬೇಕು, ತಿಂಗಳಿಗೆ ಭರ್ತಿ 26 ಲಕ್ಷ ಸಂಬಳ !

ಮಲದ ವಾಸನೆಯಿಂದ ಕರುಳಿನ ಆರೋಗ್ಯದ ಬಗ್ಗೆ ತಿಳಿಯಲು ಸಾಧ್ಯ
ಸರಿಯಾದ ರೀತಿಯಲ್ಲಿ ಮಲದ ವಾಸನೆ ನೋಡುವವರಿಗೆ ಈ ಉದ್ಯೋಗಕ್ಕೆ ಆಯ್ಕೆ ಆಗಲಿದ್ದಾರೆ. ತರಬೇತಿಯ ಕೊನೆಯಲ್ಲಿ, ಒಬ್ಬ ಅಭ್ಯರ್ಥಿಯು ಅಂತಿಮವಾಗಿ ಸ್ಥಾನವನ್ನು ಪಡೆಯುತ್ತಾನೆ. ಕರುಳಿನ ಆರೋಗ್ಯ, ಪೋಷಣೆಯ ಎಲ್ಲಾ ಅಂಶಗಳನ್ನು ಒಳಗೊಳ್ಳುತ್ತದೆ. ಹೀಗಾಗಿ ಮಲವನ್ನು ಪರಿಶೀಲಿಸಲು ಸರಿಯಾಗಿ ತಿಳಿದಿರಬೇಕು. ಈ ಕೆಲಸಕ್ಕೆ ತಕ್ಕುದಾದ ಉತ್ತಮ ಮೂಗನ್ನು ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಕಂಪೆನಿ ಸಿಇಒ ಆರನ್ ಪ್ರಾವಿಡೆನ್ಸ್, ಪೂ ತಜ್ಞರಾಗಿರುವುದು ಎಲ್ಲರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲದಿರಬಹುದು, ಆದರೆ ವಿಶ್ವದ ಮೊದಲ ಪೂಮ್‌ಮೆಲಿಯರ್' ಅನ್ನು ಕಂಡುಹಿಡಿಯುವುದು ಮತ್ತು ತರಬೇತಿ ನೀಡುವುದು ನಮಗೆ ಒಂದು ಗಮನಾರ್ಹ ಅಂಶವಾಗಿದೆ' ಎಂದು ಹೇಳಿದ್ದಾರೆ.

'ಯಾರೊಬ್ಬರ ಪೂ ವಾಸನೆ ಉತ್ತಮವಾಗಿದ್ದರೂ ಇದು ಕಳಪೆ ಕರುಳಿನ ಆರೋಗ್ಯದ (Health) ಸಂಕೇತಗಳಾಗಿವೆ' ಎಂದು ತಿಳಿಸಲಾಗಿದೆ. ಫೀಲ್ ಕಂಪ್ಲೀಟ್ ಅವರ ವೆಬ್‌ಸೈಟ್‌ನ ಪ್ರಕಾರ, ನಿರೀಕ್ಷಿತ ಪೋಮೋಮೆಲಿಯರ್‌ಗಳು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಮಾರ್ಚ್ 2023 ರಿಂದ ಪ್ರಾರಂಭವಾಗುವ ತರಬೇತಿಯಲ್ಲಿ ಆರು ತಿಂಗಳುಗಳ ಕಾಲ ಭಾಗವಹಿಸಬೇಕು ಮತ್ತು ವಾಸನೆಯ ತೀವ್ರ ಪ್ರಜ್ಞೆಯನ್ನು ಹೊಂದಿರಬೇಕು ಎಂದು ತಿಳಿದುಬಂದಿದೆ.

ದಿನಿವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !

ಚೀಸ್ ತಿಂದು ಮಲಗೋ ಕೆಲಸಕ್ಕೆ ಸಿಗ್ತಿದೆ 81 ಸಾವಿರ ರೂ ವೇತನ!
ನೀವು ಚೀಸ್ ತಿಂದು ರಾತ್ರಿ (Night) ಆರಾಮವಾಗಿ ಮಲಗಿದ್ರೆ ಸಾಕು. ನಿಮ್ಮ ಕೈಗೆ ಸಂಬಳ ಬರುತ್ತದೆ. ರಾತ್ರಿ ಚೀಸ್ ತಿಂದು ಮಲಗಿದ್ರೆ ದುಃಸ್ವಪ್ನ ಕಾಡುತ್ತೆ  ಎಂಬುದು ಯುರೋಪಿಯನ್ ಸಿದ್ಧಾಂತವಾಗಿದೆ. ಮ್ಯಾಟ್ರೆಸ್ ರಿವ್ಯೂ ಕಂಪನಿಯು ಈ ಯುರೋಪಿಯನ್ ಸಿದ್ಧಾಂತವನ್ನು ಪರೀಕ್ಷಿಸಲು ಹೊರಟಿದೆ. ಇದಕ್ಕಾಗಿ ಕೆಲವರಿಗೆ ಕೆಲಸ ಮಾಡುವ ಅವಕಾಶ ನೀಡ್ತಿದೆ. ಜನರ ನಿದ್ರೆಯ ಮಾದರಿಗಳನ್ನು ಅಧ್ಯಯನ ಮಾಡುವುದು ಈ ಕಂಪನಿ ಉದ್ದೇಶವಾಗಿದೆ.  

ಇದಕ್ಕೆ ಸ್ಲೀಪ್ ಜಂಕಿ ಅಧ್ಯಯನಕ್ಕಾಗಿ ಐದು ಜನರು ಹುಡುಕಾಟ ನಡೆಸುತ್ತಿದೆ. ಮೂರು ತಿಂಗಳ ಕಾಲ ಈ ಅಧ್ಯಯನ ನಡೆಯಲಿದೆ. ಮಲಗುವ ಮೊದಲು ಪ್ರತಿದಿನ ಚೀಸ್ ತಿನ್ನಬೇಕಾಗುತ್ತದೆ. ಪ್ರಯೋಗದಲ್ಲಿ ಭಾಗವಹಿಸುವ ಐದು ಜನರು ಚೀಸ್ ತಿಂದ ನಂತರ ಅವರ ನಿದ್ರೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಉದಾಹರಣೆಗೆ ನಿದ್ರೆಯ ಗುಣಮಟ್ಟ ಹೇಗಿತ್ತು, ಕನಸು ಹೇಗಿತ್ತು, ಇಡೀ ದಿನದ ಶಕ್ತಿಯ ಮಟ್ಟ ಹೇಗಿತ್ತು ಮತ್ತು ಚೀಸ್ ತಿನ್ನುವುದರಿಂದ ದುಃಸ್ವಪ್ನಗಳು ಕಾಡಿದವೇ ಎಂಬುದನ್ನು ತಿಳಿಸಬೇಕಾಗುತ್ತದೆ. 

click me!