ನಿದ್ರೆ ಬರ್ತಿಲ್ಲ ಅಂತಾ ಹಾಸಿಗೆ ಮೇಲೆ ಒದ್ದಾಡ್ಬೇಡಿ. ನಿದ್ರೆಯಿಲ್ಲದೆ ಆರೋಗ್ಯವಿಲ್ಲ. ಹಾಗಾಗಿ ಸುಖ ನಿದ್ರೆಬೇಕೆಂದ್ರೆ ಹತ್ತಿ ಬೆಡ್ ನಿಂದು ಮ್ಯಾಟ್ರಸ್ ಗೆ ಬೆಡ್ ಗೆ ಬದಲಾಗುವ ಬದಲು ಕೆಲ ಟಿಪ್ಸ್ ಫಾಲೋ ಮಾಡಿ.
ನಿದ್ರೆ ನಮ್ಮ ಇಡೀ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೆ ವಿಶ್ರಾಂತಿ ನೀಡುವಂತಹದ್ದು. ಆರೋಗ್ಯವಂತ ವ್ಯಕ್ತಿಯ ಗುಟ್ಟು ನಿದ್ರೆಯಲ್ಲಿರುತ್ತದೆ. ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀವು ನಿದ್ರೆ ಮಾಡಿದ್ರೆ ಅನಾರೋಗ್ಯ ಸುಳಿಯೋದಿಲ್ಲ ಎನ್ನುತ್ತಾರೆ ವೈದ್ಯರು. ನಿದ್ರೆ ಎನ್ನುವ ವಿಷ್ಯಕ್ಕೆ ಬಂದಾಗ ಅನೇಕರು ಹೇಳೋದು ಸಮಯದ ಅಭಾವ. ಈಗಿನ ಜಂಜಾಟದ ಜೀವನ ಶೈಲಿಯಲ್ಲಿ ನಿದ್ರೆ ಮಾಡಲು ಕೆಲವರಿಗೆ ಸಮಯವಿರೋದಿಲ್ಲ. ಮತ್ತೆ ಕೆಲವರು ಕೆಲಸದ ಮಧ್ಯೆ ಸಮಯ ಹೊಂದಿಸಿಕೊಂಡು ನಿದ್ರೆ ಮಾಡಲು ಬಯಸ್ತಾರೆ. ಆದ್ರೆ ಹಾಸಿಗೆ ಮೇಲೆ ಹೊರಳಾಡೋದು ಬಿಟ್ರೆ ನಿದ್ರೆ ಬರೋದಿಲ್ಲ. ಈ ನಿದ್ರಾಹೀನತೆ ಮರು ದಿನದ ಪ್ರೆಶ್ನೆಸ್ ಹಾಳು ಮಾಡುತ್ತದೆ. ಅದ್ರ ಜೊತೆಗೆ ಅನೇಕ ಅನಾರೋಗ್ಯ ನಮ್ಮನ್ನು ಮುತ್ತಿಕೊಳ್ಳುತ್ತದೆ.
ದಿನದಲ್ಲಿ 7 -8 ಗಂಟೆ ನಿದ್ರೆ (Sleep) ಮಾಡ್ಬೇಕು ಎಂದು ತಜ್ಞರು (Experts ) ಹೇಳೋದನ್ನು ನಾವು ಕೇಳಿರ್ತೇವೆ. ಆದ್ರೆ ವಯಸ್ಸಾದಂತೆ ನಿದ್ರೆ ಬರೋದಿಲ್ಲ ಎನ್ನುವವರಿದ್ದಾರೆ. ರಾತ್ರಿ (Night) ಪೂರ್ತಿ ನಿದ್ರೆ ಬರಲಿಲ್ಲ, ಪ್ರತಿ ದಿನ ಇದೇ ಗೋಳು, ನಿದ್ರೆ ಬಂದ್ರೆ ಎಲ್ಲ ಸರಿಯಾಗ್ತಿತ್ತು ಎಂದು ಕೆಲವರು ಅಲವತ್ತುಕೊಳ್ತಾರೆ. ನೀವೂ ಈ ನಿದ್ರೆ ಸಮಸ್ಯೆಯಿಂದ ಬಳಲ್ತಿದ್ದರೆ, ಹಾಸಿಗೆ ಮೇಲೆ ಮಲಗಿ ಎಷ್ಟ ಹೊತ್ತಾದ್ರೂ ನಿದ್ರೆ ಬರ್ತಿಲ್ಲವೆಂದ್ರೆ ಈ ಮಿಲಿಟರಿ ವಿಧಾನವನ್ನು ನೀವು ಅನುಸರಿಸಿ. ಅರೆ ಕ್ಷಣದಲ್ಲಿ ನಿದ್ರೆ ಬಂದಿಲ್ಲವೆಂದ್ರೆ ನೋಡಿ.
undefined
ಜೇಡ ಕಚ್ಚಿದ್ರೆ ಭಯ ಬಿಡಿ, ಈ ಮನೆಮದ್ದು ಟ್ರೈ ಮಾಡಿ
ಏನಿದು ಮಿಲಿಟರಿ ವಿಧಾನ ? :
ಮುಖ ತೊಳೆಯೋದು ಮರೆಯಬೇಡಿ : ನಿದ್ರೆಗೂ ಮುಖಕ್ಕೂ ಏನು ಸಂಬಂಧ ಅಂತ ಕೇಳ್ಬೇಡಿ. ಮುಖ ಫ್ರೆಶ್ ಆದ್ರೆ ನಿದ್ರೆ ಬೇಗ ಬರುತ್ತದೆ. ಹಾಗಾಗಿ ನೀವು ರಾತ್ರಿ ಮಲಗುವ ಮುನ್ನ ಮುಖವನ್ನು ತೊಳೆದುಕೊಳ್ಳಿ. ಶುದ್ಧ ಹಾಗೂ ತಣ್ಣನೆಯ ನೀರಿನಲ್ಲಿ ಮುಖ ಸ್ವಚ್ಛಗೊಳಿಸಿ ನಂತ್ರ ಬೆಡ್ ಗೆ ಹೋಗಿ. ಹಾಸಿಗೆಗೆ ತಲೆಯೊಡ್ಡಿದ ಕೆಲವೇ ಕ್ಷಣದಲ್ಲಿ ನಿದ್ರೆ ಆವರಿಸಿಕೊಳ್ಳುತ್ತೆ. ನೀವು ಮುಖದ ಜೊತೆ ಕಾಲುಗಳನ್ನು ಕೂಡ ಕ್ಲೀನ್ ಮಾಡಬಹುದು. ತಣ್ಣನೆಯ ನೀರಿನಲ್ಲಿ ಕಾಲನ್ನು ಸ್ವಚ್ಛಗೊಳಿಸಿದ್ರೆ ಮೂಡ್ ಫ್ರೆಶ್ ಆಗುತ್ತದೆ.
ಫೋನ್ ಸಹವಾಸ ಬೇಡ : ಈಗಿನ ದಿನಗಳಲ್ಲಿ ಟಾಯ್ಲೆಟ್ ಗೆ ಹೋಗೋಕು ಫೋನ್ ಬೇಕು. ಇನ್ನು ಮಲಗುವಾಗ ಬೇಡ್ವಾ? ಫೋನ್ ನೋಡ್ತಾ ನೋಡ್ತಾ ನಿದ್ರೆ ಮಾಡೋಕೆ ಪ್ರಯತ್ನಿಸೋರಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ಇಂದೇ ಈ ಹವ್ಯಾಸ ಬಿಡಿ. ನಿದ್ರೆ ಮಾಡಲು ಅರ್ಧಗಂಟೆ ಮೊದಲು ಮೊಬೈಲ್ ದೂರವಿಡಿ. ಮನಸ್ಸು ಶಾಂತವಾಗಲು ಬಿಡಿ. ನಂತ್ರ ನಿದ್ರೆಗೆ ಪ್ರಯತ್ನಿಸಿ.
ಕಾಲುಗಳಿಗೆ ವಿಶ್ರಾಂತಿ ಮುಖ್ಯ : ನಿದ್ರೆ ಮಾಡುವಾಗ ಎರಡೂ ಕಾಲುಗಳನ್ನು ಚಾಚಿ ಮಲಗಬೇಕು. ಕಾಲುಗಳನ್ನು ಸಂಪೂರ್ಣವಾಗಿ ಸಡಿಲಗೊಳಿಸಿ, ಪಾದಗಳಿಗೆ ವಿಶ್ರಾಂತಿ ನೀಡಬೇಕು. ನೀವು ಬಯಸಿದ್ರೆ ಪಾದಗಳಿಗೆ ಸ್ವಲ್ಪ ಎಣ್ಣೆ ಹಾಕಿ ಮಸಾಜ್ ಮಾಡಿಯೂ ಮಲಗಬಹುದು.
ತಲೆಯಲ್ಲಿರುವ ಆಲೋಚನೆ ತೆಗೆದುಹಾಕಿ : ನಿದ್ರೆ ಮಾಡುವ ವೇಳೆ ಮನಸ್ಸು ರಿಲ್ಯಾಕ್ಸ್ ಆಗಿರಬೇಕು. ಯಾವುದೇ ಆಲೋಚನೆ ಮನಸ್ಸಿನಲ್ಲಿ ಸುಳಿಯಬಾರದು. ನಿದ್ರೆ ಬಂದಿಲ್ಲ ಎಂದಾಗ ಜನರು ಆಲೋಚನೆ ಶುರು ಮಾಡ್ತಾರೆ. ಈ ಆಲೋಚನೆ ಒಂದಕ್ಕೊಂದು ಕೊಂಡಿಯಾಗಿ ಇಡೀ ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. ಹಾಗಾಗಿ ಹಾಸಿಗೆಗೆ ಹೋದ್ಮೇಲೆ ಮನಸ್ಸನ್ನು ಹರಿಯಲು ಬಿಡಬೇಡಿ.
ನಾಭಿ ಮೇಲೆ ಅರಿಶಿನ ಹಚ್ಚೋದ್ರಿಂದ ಏನು ಪ್ರಯೋಜನ ತಿಳಿಯಿರಿ
ಕೆಲವೇ ದಿನಗಳಲ್ಲಿ ಫಲಿತಾಂಶ : ಇದು ತುಂಬಾ ಸರಳ ವಿಧಾನ. ಹಾಗೆಯೇ ಬಹಳಷ್ಟು ನಿಮಗೆ ತಿಳಿದಿದೆ. ಆದ್ರೆ ನೀವು ಪಾಲನೆ ಮಾಡ್ತಿಲ್ಲ ಎಂದಾದ್ರೆ ಇಂದಿನಿಂದಲೇ ಇವುಗಳನ್ನು ರೂಢಿಸಿಕೊಳ್ಳಿ. ನಾಲ್ಕೈದು ದಿನ ಕಷ್ಟವಾದ್ರೂ ನಂತ್ರ ಅಭ್ಯಾಸವಾಗುತ್ತದೆ. ಗಾಢ ನಿದ್ರೆ ನಿಮ್ಮದಾಗುತ್ತದೆ.