Omicron BF.7: ನಾಮಕಾವಸ್ತೆಗೆ ಮಾಸ್ಕ್‌ ಹಾಕ್ಕೊಂಡ್ರೆ ಆಗಲ್ಲ, ಖರೀದಿಸುವಾಗ ಈ ವಿಚಾರ ನೆನಪಲ್ಲಿಡಿ

By Vinutha PerlaFirst Published Dec 24, 2022, 4:23 PM IST
Highlights

ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಉಲ್ಬಣದೊಂದಿಗೆ ಜಗತ್ತಿನಾದ್ಯಂತ ಮತ್ತೆ ಆತಂಕ ಆವರಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಸೋಂಕಿನಿಂದ ರಕ್ಷಣೆ ಪಡೆಯಲು ನೆರವಾಗಲಿದೆ. ಆದರೆ ಮಾಸ್ಕ್ ಧರಿಸಿದರಷ್ಟೇ ಸಾಲದು. ಮಾಸ್ಕ್ ಧರಿಸುವಾಗ ಕೆಲವೊಂದು ವಿಚಾರಗಳನ್ನು ಮುಖ್ಯವಾಗಿ ಗಮನಿಸಿಕೊಳ್ಳಬೇಕು. ಆ ಬಗ್ಗೆ ತಿಳಿಯೋಣ.

ಪ್ರಪಂಚದಾದ್ಯಂತ ಓಮಿಕ್ರಾನ್‌  BF.7 ಆತಂಕಕ್ಕೆ ಕಾರಣವಾಗಿದೆ. ಸೋಂಕು (Virus) ಅತಿ ಶೀಘ್ರವಾಗಿ ಹರಡುತ್ತೆ ಅನ್ನೋ ಕಾರಣದಿಂದ ಜನರು ಭಯಭೀತರಾಗಿದ್ದಾರೆ. ಕೋವಿಡ್‌ನ ಹೊಸ ಸಬ್‌ವೇರಿಯಂಟ್ ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಸಾವು-ನೋವಿಗೆ ಕಾರಣವಾಗ್ತಿದೆ. ಹೀಗಾಗಿ ಉಳಿದ ರಾಷ್ಟ್ರಗಳು ಸಹ ಮುನ್ನೆಚ್ಚರಿಕೆಯನ್ನು ವಹಿಸುತ್ತಿವೆ. ಸಾರ್ವಜನಿಕರಿಗಾಗಿ (Public) ಕೊರೋನಾ ಮಾರ್ಗಸೂಚಿಗಳನ್ನ (Guidelines) ಸಿದ್ಧಪಡಿಸುತ್ತಿವೆ. ಅದರಲ್ಲಿ ಮುಖ್ಯವಾದುದು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದು. 

ಮಾಸ್ಕ್ ವೈರಸ್‌ ಹರಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಸ್ಕ್ ಧರಿಸುವುದರಿಂದ ಸೋಂಕು ಸುಲಭವಾಗಿ ನಮ್ಮ ದೇಹವನ್ನು ತಲುಪುವುದಿಲ್ಲ.ಇದು ನಮ್ಮ ಆರೋಗ್ಯ (Health) ಸುಸ್ಥಿರವಾಗಿಡಲು ಕಾರಣವಾಗುತ್ತದೆ. ಆದರೆ ಮಾಸ್ಕ್ ಧರಿಸುವ ರೀತಿ ಸರಿಯಾಗಿರಬೇಕು. ಜೊತೆಗೆ ನಾವು ಕೊರೋನಾದಿಂದ ರಕ್ಷಣೆ (Protecion) ಪಡೆಯಲು ಸರಿಯಾದ ಮಾಸ್ಕ್‌ನ್ನೇ ಆಯ್ದುಕೊಳ್ಳಬೇಕು. ಹಾಗಿದ್ರೆ ಮಾಸ್ಕ್‌ ಆಯ್ಕೆ ಮಾಡುವಾಗ ಯಾವುದೆಲ್ಲಾ ವಿಚಾರವನ್ನು ಗಮನಿಸಿಕೊಳ್ಳಬೇಕು ತಿಳಿಯೋಣ.

Covid Fear Returns : ರಾಜ್ಯದಲ್ಲಿ ಕೊರೋನಾ ಆತಂಕ: ಮುಂದಿನ 15 ದಿನ ಹುಷಾರ್

ಮಾಸ್ಕ್ ಖರೀದಿಸುವಾಗ ಈ ವಿಚಾರಗಳನ್ನು ಗಮನಿಸಿ

ನೇಯ್ದ ಬಟ್ಟೆಗಳು ಉತ್ತಮ ರಕ್ಷಣೆ ನೀಡುತ್ತವೆ: ದಟ್ಟವಾದ ಮತ್ತು ಬಿಗಿಯಾಗಿ ನೇಯ್ದ ಬಟ್ಟೆಗಳು ರಕ್ಷಣೆಯ ಉತ್ತಮ ಅವಕಾಶವನ್ನು ನೀಡುತ್ತವೆ. ಸಾಮಾನ್ಯ ಥ್ರೆಡ್‌ನಲ್ಲಿ ಮಾಸ್ಕ್‌ನ್ನು ಬಿಗಿಯಾಗಿ ನೇಯ್ದಿರಲಾಗುತ್ತದೆ. ಹೀಗಾಗಿ ಮುಖವಾಡಗಳನ್ನು ಖರೀದಿಸುವಾಗ ಅಥವಾ ತಯಾರಿಸುವಾಗ ಕ್ಯಾನ್ವಾಸ್ ಅಥವಾ ಹೆಚ್ಚಿನ ಥ್ರೆಡ್ ಕೌಂಟ್ ಶೀಟ್‌ಗಳಂತೆ ಬಿಗಿಯಾಗಿ ನೇಯ್ದ ಬಟ್ಟೆಯನ್ನು ನೋಡಿ. ಇದು ಹೆಚ್ಚು ವೈರಸ್‌ನಿಂದ ರಕ್ಷಣೆ ಪಡೆಯಲು ಹೆಚ್ಚು ಪರಿಣಾಮಕಾರಿಯಾಗಿದೆ.

ಬಹು ಪದರದ ಮಾಸ್ಕ್‌ ಹೆಚ್ಚು ಪರಿಣಾಮಕಾರಿಯಾಗಿದೆ: ಒಂದೇ ಪದರದ ಮಾಸ್ಕ್‌ಗಿಂತ ಬಹುಪದರದ ಮಾಸ್ಕ್‌ ಹೆಚ್ಚು ಪರಿಣಾಮಕಾರಿಯಾಗಿದೆ. ಫ್ಯಾಬ್ರಿಕ್‌ನ ಬಹು ಪದರಗಳು ವೈರಸ್ ಕಣಗಳ ಶೋಧನೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನಗಳು ಕಂಡುಹಿಡಿದವು. ಮಾಸ್ಕ್ ಖರೀದಿಸುವ ಮೊದಲು ಅದರ ಲೇಯರ್‌ಗಳನ್ನು  ತಿಳಿಯಿರಿ.  ಧೂಳು, ಮಾಲಿನ್ಯ ಮತ್ತು ವೈರಸ್‌ಗಳ ವಿರುದ್ಧ ಐಎಸ್ಐ-ಮಾರ್ಕ್ಡ್ ಎಫ್ಎಫ್ಪಿ 2 ಸೂಕ್ತವಾಗಿದೆ, ಏಕೆಂದರೆ ಎಫ್ಎಫ್ಪಿ 2 ಮಾಸ್ಕ್‌ಗಳು ಕಣಗಳನ್ನು ಕನಿಷ್ಠ 95 ಪ್ರತಿಶತದಷ್ಟು ಪರಿಣಾಮಕಾರಿತ್ವದೊಂದಿಗೆ ಫಿಲ್ಟರ್ ಮಾಡುತ್ತವೆ.

N95 ಮಾಸ್ಕ್ ಅತ್ಯಂತ ಪರಿಣಾಮಕಾರಿ: ಕೊರೋನಾ ಸೋಂಕು ಹರಡುವುದನ್ನು ತಡೆಯಲು N95 ಮಾಸ್ಕ್ ಅತ್ಯಂತ ಪರಿಣಾಮಕಾರಿ ಮಾಸ್ಕ್ ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನವರು ಸರ್ಜಿಕಲ್ ಮಾಸ್ಕ್ ಧರಿಸುತ್ತಿದ್ದಾರೆ. N95 ಮಾಸ್ಕ್‌ನ್ನು ತಯಾರಿಸಲು ಪಾಲಿಪ್ರೊಪಿಲೀನ್ ಎಂಬ ಫೈಬರ್ ಅನ್ನು ಬಳಸಲಾಗುತ್ತದೆ. ಇದು ಕೊರೋನಾದಂತಹಾ ಸೂಕ್ಷ್ಮ ವೈರಸ್‌ (Virus)ನ್ನು ತಡೆಯುವ ಶಕ್ತಿ ಹೊಂದಿದೆ. ಮುಖ, ಬಾಯಿಯನ್ನು ಸಂಪರ್ಕ ಮಾಡುವುದನ್ನು ತಡೆಯುತ್ತದೆ. ಇವುಗಳ ಶೇ.99.2ರ ವರೆಗೆ ಬ್ಯಾಕ್ಟಿರೀಯಾದಿಂದ ರಕ್ಷಣೆ (Protection) ನೀಡುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. N95 ಮಾಸ್ಕ್‌ನ್ನು ಮೃದುವಾದ ದಾರದಿಂದ ಮಾಡುವುದರಿಂದ ಇದನ್ನು ದೀರ್ಘಕಾಲದ ವರೆಗೆ ಧರಿಸಿದ್ದರೂ ಯಾವುದೇ ರೀತಿಯ ತೊಂದರೆಯಿಲ್ಲ. 

ಆದಷ್ಟು ಬೇಗ ಬೂಸ್ಟರ್‌ ಲಸಿಕೆ ಹಾಕಿಸಿಕೊಳ್ಳಿ: ಸಾರ್ವಜನಿಕರಿಗೆ ಐಎಂಎ ವೈದ್ಯರ ಎಚ್ಚರಿಕೆ

ಸರ್ಟಿಫೈಡ್ ಮಾಸ್ಕ್‌ಗಳ ಬಳಕೆ: ಭಾರತ ಸರ್ಕಾರವು ಫೇಸ್‌ಮಾಸ್ಕ್‌ಗಳ ಪ್ರಮಾಣೀಕರಣದ ಬಗ್ಗೆ ಬಹಳ ಕೇಂದ್ರೀಕೃತ ವಿಧಾನವನ್ನು ತೆಗೆದುಕೊಂಡಿದೆ. ಭಾರತ ಸರ್ಕಾರವು ಪರೀಕ್ಷಾ ಹಂತಗಳಲ್ಲಿ ಮಾತ್ರವಲ್ಲದೆ ಉತ್ಪಾದನಾ ಹಂತಗಳಲ್ಲಿಯೂ ಫೇಸ್ ಮಾಸ್ಕ್ ಕೆಲವೊಂದು ನಿಯಮಗಳನ್ನು ಅಳವಡಿಸಿಕೊಂಡಿದೆ. ಒಂದು ಕಂಪನಿಯ ಮಾಸ್ಕ್‌ ಉತ್ಪಾದನೆ ಮತ್ತು ಪರೀಕ್ಷಾ ಸೌಲಭ್ಯಗಳು BIS ಮಾನದಂಡಗಳು, ISO 13485:2016 ಕ್ಕೆ ಅನುಗುಣವಾಗಿರಬೇಕು. ಬಳಕೆದಾರರು ಯಾವಾಗಲೂ ಐಎಸ್ಐ-ಪ್ರಮಾಣೀಕೃತ ಫೇಸ್‌ಮಾಸ್ಕ್‌ಗಳನ್ನು ಬಳಸುವುದು ಒಳ್ಳೆಯದು.

ಮುಖಕ್ಕೆ ಫಿಟ್ ಆಗಿರಲಿ: ಮಾಸ್ಕ್‌ ಫಿಟ್ ಆಗಿದ್ದರಷ್ಟೇ ಅದನ್ನು ಧರಿಸುವುದರಿಂದ ಪ್ರಯೋಜನ ಸಿಗಲು ಸಾಧ್ಯ. ಮಾಸ್ಕ್‌ ಮೂಗನ್ನು ಸರಿಯಾದ ರೀತಿಯಲ್ಲಿ ಮುಚ್ಚಿರಬೇಕು. ನಿಮ್ಮ ಮೂಗು ಮತ್ತು ಕೆನ್ನೆಗಳ ಸೇತುವೆಗೆ ಅಡ್ಡಲಾಗಿ ಸೂಕ್ತವಾಗಿ ಹೊಂದಿಕೊಳ್ಳಬೇಕು. ನಿಮ್ಮ ಧರಿಸಿದ ಮಾಸ್ಕ್ ಅನ್ನು ಪದೇ ಪದೇ ಸರಿಮಾಡಿಕೊಳ್ಳುವಂತಿರಬಾರದು. ಇದರಿಂದ ವೈರಸ್ ಸುಲಭವಾಗಿ ಹರಡಬಹುದು.

click me!