ಔಷಧಿ ತೆಗೆದುಕೊಳ್ಳಬೇಕೆಂದ್ರೆ ಮೂಗಿ ಮುರಿಯೋರೆ ಜಾಸ್ತಿ. ಕಹಿ ಔಷಧಿಯಂತೂ ಗಂಟಲು ಇಳಿಯೋದಿಲ್ಲ. ಅದ್ರ ರುಚಿ ಗೊತ್ತಾಗ್ಬಾರದು ಅಂತಾ ಕೆಲವರು ತಮ್ಮಿಷ್ಟದ ಆಹಾರದ ಜೊತೆ ಬೆರೆಸಿ ಸೇವನೆ ಮಾಡ್ತಾರೆ. ಆದ್ರೆ ಇದು ನಮ್ಮ ಆರೋಗ್ಯ ಮತ್ತಷ್ಟು ಹಾಳು ಮಾಡುತ್ತೆ.
ಔಷಧಿಯನ್ನು ಯಾವಾಗ ತೆಗೆದುಕೊಳ್ಳಬೇಕೆಂದು ವೈದ್ಯರು ಶಿಫಾರಸ್ಸು ಮಾಡ್ತಾರೆ. ವೈದ್ಯರು ಹೇಳಿದಂತೆ ಮಾತ್ರೆ, ಔಷಧಿ ಸೇವನೆ ಮಾಡ್ಬೇಕು. ಆದ್ರೆ ಅನೇಕರು ಔಷಧಿಯನ್ನು ತಮ್ಮಿಷ್ಟದಂತೆ ತೆಗೆದುಕೊಳ್ತಾರೆ. ಇನ್ನು ಕೆಲವರು ಔಷಧಿ ಕಹಿ ಎನ್ನುವ ಕಾರಣಕ್ಕೆ ಬೇರೆ ಬೇರೆ ವಿಧದಲ್ಲಿ ಅದನ್ನು ಸೇವನೆ ಮಾಡ್ತಾರೆ. ಆಹಾರದ ಜೊತೆ, ಹಾಲಿನ ಜೊತೆ ಅಥವಾ ಬೇರೆ ಯಾವುದೇ ಆಹಾರದ ಜೊತೆ ತೆಗೆದು ಕೊಳ್ಳುವವರಿದ್ದಾರೆ. ಆದ್ರೆ ಔಷಧದ ಜೊತೆಗೆ ಕೆಲವು ವಸ್ತುಗಳನ್ನು ಸೇವಿಸುವುದ್ರಿಂದ ಔಷಧಿ ಹೊಟ್ಟೆ ಸೇರುತ್ತದೆ ನಿಜ. ಆದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಯಾವುದೇ ಔಷಧಿಯನ್ನು ತೆಗೆದು ಕೊಳ್ಳುವಾಗ, ಅದಕ್ಕೆ ಸಂಬಂಧಿಸಿದ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಕೆಲವು ಆಹಾರ ಪದಾರ್ಥಗಳು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಔಷಧಿಗಳನ್ನು ತೆಗೆದುಕೊಳ್ಳುವಾಗ ಯಾವ ಆಹಾರ ಸೇವನೆ ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೆವೆ.
ಔಷಧಿ (Medicine) ಜೊತೆ ಇದನ್ನು ತೆಗೆದುಕೊಳ್ಳಬೇಡಿ :
ಎನರ್ಜಿ ಡ್ರಿಂಕ್ (Energy Drink): ಔಷಧಿಯನ್ನು ನೀರಿನ ಜೊತೆ ತೆಗೆದುಕೊಳ್ಳುವುದು ಸೂಕ್ತ ವಿಧಾನ. ನೀರಿಲ್ಲವೆಂದ್ರೆ ಕೆಲವರು ಎನರ್ಜಿ ಡ್ರಿಂಕ್ ನೊಂದಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಅನಿವಾರ್ಯ ಪರಿಸ್ಥಿತಿಯಲ್ಲೂ ಎನರ್ಜಿ ಡ್ರಿಂಕ್ ಜೊತೆ ಯಾವುದೇ ಔಷಧಿ ಸೇವನೆ ಮಾಡಬಾರದು. ಔಷಧ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಇದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಆಲ್ಕೋಹಾಲ್ (Alchohol): ಔಷಧಿಯೊಂದಿಗೆ ಆಲ್ಕೋಹಾಲ್ ಸೇವಿಸುವುದರಿಂದ ನಮ್ಮ ಔಷಧಿಯ ಪರಿಣಾಮ ಕಡಿಮೆಯಾಗುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕ ಬಾರಿ ಆಲ್ಕೋಹಾಲ್ ಮತ್ತು ಔಷಧಿಯನ್ನು ಒಟ್ಟಿಗೆ ಸೇವಿಸುವುದರಿಂದ ಯಕೃತ್ತಿಗೆ ಗಮನಾರ್ಹ ಹಾನಿ ಉಂಟಾಗುತ್ತದೆ. ಅಲ್ಲದೆ ಇತರ ಯಕೃತ್ತಿನ ಅಸ್ವಸ್ಥತೆಗಳಿಗೂ ಇದು ಕಾರಣವಾಗುತ್ತದೆ.
ಸಿಗರೇಟ್ : ಧೂಮಪಾನವು ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳನ್ನು ಹಾನಿಗೊಳಿಸುತ್ತದೆ. ಧೂಮಪಾನವು ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಮಾತ್ರೆ ಸೇವನೆ ಮಾಡಿದ ನಂತ್ರ ಅಥವಾ ಔಷಧಿ ಜೊತೆ ಧೂಮಪಾನ ಮಾಡುವುದ್ರಿಂದ ಔಷಧಿ ನಮ್ಮ ದೇಹವನ್ನು ಹೀರಿಕೊಳ್ಳುವುದಿಲ್ಲ. ಆಗ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ಸ್ಟ್ರೆಚ್ ಮಾರ್ಕ್ ಹೋಗಲು ಹೀಗ್ ಮಾಡಿ
ಹಾಲಿನ ಉತ್ಪನ್ನಗಳು (Milk Products) : ಹಾಲಿನ ಜೊತೆ ಅಪ್ಪಿತಪ್ಪಿಯೂ ಔಷಧಿ ಸೇವನೆ ಮಾಡಬಾರದು. ಹಾಲಿನ ಜೊತೆ ಔಷಧಿ ಸೇವನೆ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಡೈರಿ ಉತ್ಪನ್ನಗಳ ಕೆಲವು ಪ್ರತಿಜೀವಕಗಳು ನಿಮ್ಮ ದೇಹದಲ್ಲಿ ಸರಿಯಾಗಿ ಕೆಲಸ ಮಾಡಲು ಅನುಮತಿ ನೀಡುವುದಿಲ್ಲ. ಹಾಲಿನಲ್ಲಿ ಕಂಡುಬರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್‌ನಂತಹ ಖನಿಜಗಳು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಆಂಟಿಬಯೋಟಿಕ್ ಸೇವನೆ ಮಾಡ್ತಿದ್ದರೆ ಅದ್ರ ಜೊತೆ ಹಾಲು ಕುಡಿಯಬೇಡಿ.
ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರ : ರಕ್ತದೊತ್ತಡವನ್ನು ಕಡಿಮೆ ಮಾಡಲು ತೆಗೆದುಕೊಳ್ಳುವ ಔಷಧಿಗಳು ದೇಹವು ಅಗತ್ಯಕ್ಕಿಂತ ಹೆಚ್ಚು ಪೊಟ್ಯಾಸಿಯಮ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಯಾವುದೇ ಅಂಶ ಅಧಿಕಾವಾದ್ರೆ ಹಾನಿ ತಪ್ಪಿದ್ದಲ್ಲ. ಹೆಚ್ಚಿನ ಪೊಟ್ಯಾಸಿಯಮ್ ಹೃದಯ ಮತ್ತು ರಕ್ತದ ಹರಿವಿನಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಪೊಟ್ಯಾಸಿಯಮ ಭರಿತ ಆಲೂಗಡ್ಡೆ, ಅಣಬೆಗಳು, ಸಿಹಿ ಆಲೂಗಡ್ಡೆಗಳನ್ನು ಸೇವನೆ ಮಾಡಬಾರದು.
ಜೇಷ್ಠಮದ್ದು: ಇದನ್ನು ಕೆಲವರು ಜೀರ್ಣಕ್ರಿಯೆಗೆ ಬಳಕೆ ಮಾಡ್ತಾರೆ. ಇದರಲ್ಲಿ ಕಂಡುಬರುವ ಗ್ಲೈಸಿರೈಜಿನ್, ಸೈಕ್ಲೋಸ್ಪೊರಿನ್ ಸೇರಿದಂತೆ ಕೆಲವು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಅಲ್ಲಿ ನೋವು, ಇಲ್ಲಿ ನೋವು ಅಂತ ಸುಮ್ ಸುಮ್ಮನೆ ಮಾತ್ರೆ ತಿನ್ಬೇಡಿ
ಹಸಿರು ಎಲೆ : ಹಸಿರು ಎಲೆಗಳು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಕೆಲವು ಔಷಧಿಗಳ ಹೀರಿಕೊಳ್ಳುವಿಕೆ ಮತ್ತು ಪರಿಣಾಮದ ಮೇಲೆ ಇದು ಪ್ರಭಾವ ಬೀರುತ್ತವೆ. ಎಲೆಕೋಸು, ಕೋಸುಗಡ್ಡೆ ಮುಂತಾದ ತರಕಾರಿಗಳು ವಿಟಮಿನ್ ಕೆ ಯ ಉತ್ತಮ ಮೂಲವಾಗಿದೆ. ವಿಟಮಿನ್ ಕೆ ಯ ಹೆಚ್ಚಿನ ಸೇವನೆಯು ವಾರ್ಫರಿನ್‌ನಂತಹ ಔಷಧಿಗಳ ಮೇಲೆ ಪರಿಣಾಮ ಬೀರುತ್ತದೆ. ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಅಥವಾ ಇತರ ರಕ್ತ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡಲು ವಾರ್ಫರಿನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.