ಏಕಾಏಕಿ ಮೂಡ್ ಹಾಳಾಗೋದೇ ಹೆಚ್ಚು. ಕಾರಣವಿಲ್ಲದೆ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಸದಾ ಒಂದೇ ರೀತಿಯಲ್ಲಿ ಮನಸ್ಸಿನ ನಿಯಂತ್ರಣ ಸಾಧ್ಯವಾಗೋದಿಲ್ಲ. ಆಗಾಗ ಮೂಡ್ ಸ್ವಿಂಗ್ ಆಗುತ್ತೆ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ.
ಯೋಗ ಕೇವಲ ದೇಹಕ್ಕೆ ಮಾತ್ರ ವ್ಯಾಯಾಮ ನೀಡುವಂತಹದ್ದಲ್ಲ. ಯೋಗದಿಂದ ದೇಹದ ಜೊತೆ ಮನಸ್ಸಿನ ಆರೋಗ್ಯ ಸುಧಾರಿಸುತ್ತದೆ. ಶರೀರ, ಮನಸ್ಸು ಮತ್ತು ಬುದ್ಧಿಯನ್ನು ಸೇರಿಸುವುದಕ್ಕೆ ಯೋಗ ಎನ್ನಲಾಗುತ್ತದೆ. ಮನಸ್ಸಿನ ಆರೋಗ್ಯವನ್ನು ಉತ್ತಮವಾಗಿಡಲು ಪ್ರತಿ ದಿನ ಯೋಗ ಮಾಡಬೇಕು. ಅನೇಕ ಬಾರಿ ಒತ್ತಡದ ಜೀವನ ಮನಸ್ಸು ಹಾಗೂ ದೇಹದ ಆರೋಗ್ಯವನ್ನು ಹಾಳು ಮಾಡುತ್ತದೆ. ಇದೆರಡಕ್ಕೂ ಯೋಗದಲ್ಲಿಯೇ ಪರಿಹಾರವಿದೆ.
ಆರೋಗ್ಯ ತಜ್ಞರ ಪ್ರಕಾರ, ಯೋಗಾಸನಗಳನ್ನು ನಿರಂತರವಾಗಿ ಅಭ್ಯಾಸ ಮಾಡುವುದು ಇಂತಹ ಸಮಸ್ಯೆಗಳನ್ನು ತಪ್ಪಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಎಲ್ಲಾ ವಯಸ್ಸಿನ ಜನರು ತಮ್ಮ ನಿಯಮಿತ ದಿನಚರಿಯಲ್ಲಿ ಯೋಗಾಭ್ಯಾಸವನ್ನು ಸೇರಿಸುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲಸ ಹಾಗೂ ಆತುರಾತುರದ ಜೀವನದಿಂದಾಗಿ ಅವರಿಗೆ ಸಮಯ ಸಿಗ್ತಿಲ್ಲ. ಇದು ಒತ್ತಡವನ್ನು ಹೆಚ್ಚು ಮಾಡಿ, ಆರೋಗ್ಯವನ್ನು ಹದಗೆಡಿಸುತ್ತದೆ. ಪದೇ ಪದೇ ಮೂಡ್ ಸ್ವಿಂಗ್ ಆಗುತ್ತದೆ. ಸದಾ ಕಿರಿಕಿರಿ, ಕೋಪ ಕಾಡುತ್ತದೆ. ಮೂಡ್ ಸರಿಯಿಲ್ಲ, ಇವತ್ತು ಮೂಡ್ ಕೆಟ್ಟಿದೆ ಎನ್ನುವವರು, ಪದೇ ಪದೇ ಮೂಡ್ ಹಾಳು ಮಾಡಿಕೊಳ್ಳುವವರು ಮನಸ್ಸನ್ನು ಸ್ಥಿಮಿತದಲ್ಲಿಡಲು ಕೆಲ ಯೋಗಾಸವನ್ನು ಮಾಡಬೇಕು. ನಿಯಮಿತವಾಗಿ ಈ ಯೋಗಗಳ ಅಭ್ಯಾಸ ಮಾಡಿದ್ರೆ ಮೂಡ್ ಸದಾ ಫ್ರೆಶ್ ಆಗಿರುತ್ತದೆ. ಮನಸ್ಸು ಎಂದಾಗ ಎಲ್ಲರೂ ಧ್ಯಾನ ಹಾಗೂ ಪ್ರಾಣಾಯಾಮ ಮಾಡುವ ಸಲಹೆ ನೀಡ್ತಾರೆ. ಧ್ಯಾನ ಹಾಗೂ ಪ್ರಾಣಾಯಾಮದಿಂದ ಮಾತ್ರವಲ್ಲ ನೀವು ಯೋಗ ಭಂಗಿಗಳಿಂದ ಕೂಡ ಮನಸ್ಸನ್ನು ನಿಯಂತ್ರಿಸಬಹುದು.
ಸೌಂದರ್ಯ ಹೆಚ್ಚಿಸಿಕೊಳ್ಳಲು ಫೇಷಿಯಲ್ ಯೋಗ
ಮೂಡ್ (Mood) ಸರಿ ಮಾಡುತ್ತೆ ಈ ಯೋಗ (Yoga) :
ಪರ್ವತಾಸನ (Parvatasana) : ಪರ್ವತಾಸನ ಅಥವಾ ಪರ್ವತ ಭಂಗಿಯು ಇಡೀ ದೇಹಕ್ಕೆ ಪ್ರಯೋಜನಕಾರಿ. ವಿಶೇಷವಾಗಿ ಇದು ಮೆದುಳಿ (brain)ಗೆ ತುಂಬಾ ಪ್ರಯೋಜನ (benefit)ಕಾರಿ ಎಂದು ತಿಳಿದುಬಂದಿದೆ. ಮನಸ್ಥಿತಿ ಸುಧಾರಿಸಲು, ಮೂಡ್ ಹಾಳಾಗದಂತೆ ನೋಡಿಕೊಳ್ಳಲು ಪರ್ವತಾಸನ ಮಾಡಬೇಕು. ಇದು ನರಮಂಡಲವನ್ನು ಶಾಂತಗೊಳಿಸಲು ಮತ್ತು ನಮ್ಮ ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ನಾವು ಮಾನಸಿಕವಾಗಿ ಆರೋಗ್ಯಕರವಾಗಿ ಮತ್ತು ಸದೃಢವಾಗಿರುತ್ತೇವೆ. ಉತ್ತಮ ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಇದರ ಅಭ್ಯಾಸವು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ .
ಅಧೋಮುಖ ಶ್ವಾನಾಸನ (Adhomukha Shwanasana) : ಅಧೋಮುಖ ಶ್ವಾನಾಸನ ಯೋಗ ಕೂಡ ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಜೊತೆಗೆ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಧೋಮುಖ ಶ್ವಾನಾಸನವು ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಈ ಯೋಗದ ಅಭ್ಯಾಸವು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ರಕ್ತ ಪರಿಚಲನೆ ನಮ್ಮ ದೇಹ ಆರೋಗ್ಯಕರವಾಗಿರಲು ಅವಶ್ಯಕವಾಗಿದೆ.
ಪ್ರಸವದ ಮೊದಲು, ಆಮೇಲೆ ಮಾಡಲೇಬೇಕಾದ ಯೋಗಾಸನಗಳು
ಭುಜಂಗಾಸನ : ಬೆನ್ನು ನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ಭುಜಂಗಾಸನ ಯೋಗವು ಬಹಳ ಪ್ರಯೋಜನಕಾರಿ. ಕೋಬ್ರಾ ಭಂಗಿ ಎಂದೂ ಕರೆಯಲ್ಪಡುವ ಅತ್ಯಂತ ಪರಿಣಾಮಕಾರಿ ಆಸನಗಳಲ್ಲಿ ಒಂದಾಗಿದೆ. ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಉತ್ತೇಜಿಸಲು ಇದರ ಅಭ್ಯಾಸವು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕೋಬ್ರಾ ಭಂಗಿಯು ಶ್ವಾಸಕೋಶವನ್ನು ತೆರೆಯುವ ಮೂಲಕ ದೇಹಕ್ಕೆ ಹೆಚ್ಚಿನ ಆಮ್ಲಜನಕವನ್ನು ಪಡೆಯಲು ಸಹಾಯ ಮಾಡುತ್ತದೆ. ಇದರಿಂದ ಮನಸ್ಸು ಶಾಂತ ಮತ್ತು ಸ್ಥಿರವಾಗಿರುತ್ತದೆ.
ಭಂಗಿಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವವರು ಧ್ಯಾನ ಮತ್ತು ಪ್ರಾಣಾಯಾಮವನ್ನಾದ್ರೂ ಮಾಡಬೇಕು. ಕೇವಲ 5 ನಿಮಿಷ ಧ್ಯಾನ ಮಾಡಿದ್ರೂ ಮನಸ್ಸು ಫ್ರೆಶ್ ಆಗುತ್ತದೆ. ಪ್ರಾಣಾಯಾಮ ಕೂಡ ಮನಸ್ಸು ಮತ್ತು ಶರೀರಿ ಎರಡಕ್ಕೂ ಪ್ರಯೋಜನಕಾರಿಯಾಗಿದೆ.