ದೆಹಲಿಯಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢ, ಭಾರತದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

Published : Aug 02, 2022, 04:22 PM IST
ದೆಹಲಿಯಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢ, ಭಾರತದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

ಸಾರಾಂಶ

ಕೊರೋನಾ ಕಾಟದಿಂ ಹೈರಾಣಾಗಿರುವ ಜನರಿಗೆ ಸದ್ಯ ಮಂಕಿಪಾಕ್ಸ್ ಭೀತಿ ಆವರಿಸಿದೆ. ದೆಹಲಿಯಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ವಾಸಿಸುತ್ತಿರುವ ಇನ್ನೊಬ್ಬ ನೈಜೀರಿಯಾದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ಬಂದಿದೆ. ಇದು ದೆಹಲಿಯ 3ನೇ ಮಂಕಿಪಾಕ್ಸ್ ಪ್ರಕರಣ ಎಂಬುದಾಗಿ ತಿಳಿದು ಬಂದಿದೆ. ಈಗಾಗದೇ ದೇಶದಲ್ಲಿ 7 ಮಂದಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿತ್ತು. ಇಂದು ದೆಹಲಿಯಲ್ಲಿ ಮೂರನೇ ಮಂಕಿಪಾಕ್ಸ್ ಸೋಂಕು ದೃಢಪಟ್ಟ ಕಾರಣ, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ನಿನ್ನೆಯಷ್ಟೇ ವಿದೇಶ ಪ್ರಯಾಣದ ಇತಿಹಾಸವನ್ನು ಹೊಂದಿರದ 35 ವರ್ಷದ ನೈಜೀರಿಯಾದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ (Monkeypox) ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದ್ದವು. ನೈಜೀರಿಯನ್ ಪ್ರಜೆಯನ್ನು ಸೋಂಕಿನ ಚಿಕಿತ್ಸೆಗಾಗಿ ನೋಡಲ್ ಆಸ್ಪತ್ರೆಯಾದ ದೆಹಲಿ ಸರ್ಕಾರ ನಡೆಸುವ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಐದು ದಿನಗಳಿಂದ ಅವರಿಗೆ ಗುಳ್ಳೆಗಳು ಮತ್ತು ಜ್ವರದ (Fever) ಲಕ್ಷಣವಿದೆ. ಅವರ ಮಾದರಿಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿದೆ. ಸೋಮವಾರ ಸಂಜೆ ಬಂದ ವರದಿಯು ಅವರಿಗೆ ಪಾಸಿಟಿವ್ ಎಂದು ತೋರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಫ್ರಿಕನ್ ಮೂಲದ ಮಂಕಿಪಾಕ್ಸ್ ನ ಇಬ್ಬರು ಶಂಕಿತ ರೋಗಿಗಳನ್ನೂ(Patients) ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮಂಕಿಪಾಕ್ಸ್ ಸೋಂಕು ತಡೆ, ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ, ಜಿಲ್ಲಾಡಳಿತಗಳಿಗೆ ಸೂಚನೆ

ಭಾರತದಲ್ಲಿ ಮಂಗನ ಕಾಯಿಲೆಯ ಎಂಟು ಪ್ರಕರಣಗಳು ವರದಿ
ಭಾರತವು ಪ್ರಸ್ತುತ ಎಂಟು ಮಂಕಿಪಾಕ್ಸ್ ಪ್ರಕರಣಗಳನ್ನು ಹೊಂದಿದೆ. ಅದರಲ್ಲಿ ಐದು ರೋಗಿಗಳು ವಿದೇಶಿ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ತಿಳಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಪ್ರಕರಣ ಜುಲೈ 24ರಂದು ವರದಿಯಾಗಿದೆ. ಇಲ್ಲಿಯವರೆಗೆ, ಭಾರತದಲ್ಲಿ ಮಂಗನ ಕಾಯಿಲೆಯ (Monkeypox) ಎಂಟು ಪ್ರಕರಣಗಳು ವರದಿಯಾಗಿವೆ.

ಕೇರಳದಿಂದ ಐದು ಸೋಂಕುಗಳು (Virus) ವರದಿಯಾಗಿದ್ದು, ಈ ಪೈಕಿ 22 ವರ್ಷದ ಯುವಕ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. ಜುಲೈ 30ರಂದು ಸಾವನ್ನಪ್ಪಿದ 22 ವರ್ಷದ ಯುವಕನ ಪರೀಕ್ಷೆಗಳು ಮನುಷ್ಯನಿಗೆ ಮಂಗನ ಕಾಯಿಲೆ ಇದೆ ಎಂದು ತೋರಿಸಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವಾಲಯ (Kerala Health Ministry) ಹೇಳಿದೆ. ಈ ಸಾವು ಆಫ್ರಿಕಾದ ಹೊರಗೆ ನಾಲ್ಕನೇ ಮಂಕಿಪಾಕ್ಸ್-ಸಂಬಂಧಿತ ಸಾವಾಗಿದೆ.

ದೇಶದ ಮೊದಲ ಮಂಕಿಪಾಕ್ಸ್‌ ಸೋಂಕಿತ ಗುಣಮುಖ

ಮತ್ತೊಂದು ಬೆಳವಣಿಗೆಯಲ್ಲಿ, ರಾಜಸ್ಥಾನವು ಮಂಗನ ಕಾಯಿಲೆಯ ಮೊದಲ ಶಂಕಿತ ಪ್ರಕರಣವನ್ನು ವರದಿ ಮಾಡಿದೆ. ಕಿಶನ್‌ಗಢದ 20 ವರ್ಷದ ಯುವಕನನ್ನು ಜೈಪುರದ ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ರೋಗಿಯು ಜ್ವರದಿಂದ ಬಳಲುತ್ತಿದ್ದರು ಮತ್ತು ಅವರ ದೇಹದಲ್ಲಿ ಗಾಯ (Injury) ಗಳಿವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಅವರ ಮಾದರಿಗಳನ್ನು ಸೋಮವಾರ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಮಂಕಿಪಾಕ್ಸ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ರೋಗನಿರ್ಣಯ ಸೌಲಭ್ಯಗಳ ವಿಸ್ತರಣೆಗೆ ಸಹಾಯ ಮಾಡಲು ಕೇಂದ್ರವು ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿದೆ. NITI ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪಾಲ್ ಅವರು ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಸದಸ್ಯರು ಸಚಿವಾಲಯದ ಅಧಿಕಾರಿಗಳು ಮತ್ತು ದೇಶದ ಪ್ರಮುಖ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!