ಸೂರ್ಯ ನಮಸ್ಕಾರ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಶಿಕ್ಷಕ ಸಾವು

By Vinutha Perla  |  First Published Mar 15, 2023, 11:19 AM IST

ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಹೃದಯಘಾತವಾಗಿ ಜನರು ಕುಸಿದುಬಿದ್ದು ಸಾವನ್ನಪ್ಪೋದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದೆಡೆ ಯೋಗ ಮಾಡುತ್ತಿರುವಾಗಲೇ ಶಿಕ್ಷಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


ಉತ್ತರಪ್ರದೇಶ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಯೋಗ ಮಾಡುತ್ತಿದ್ದಾಗ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಯಾಗ್‌ರಾಜ್‌ನ  ಶಂಕರಘಾಟ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಓಂ ಪ್ರಕಾಶ್ ತ್ರಿಪಾಠಿ ಮೃತ ವ್ಯಕ್ತಿ. ಇವರು ಮೂಲತಃ ಮಧ್ಯಪ್ರದೇಶದ ಬಾಲಘಾಟ್‌ನವರು. ಎಂದಿನಂತೆ ಪ್ರಯಾಗ್‌ರಾಜ್‌ನ ತೇಲಿಯಾರ್‌ಗಂಜ್‌ನಲ್ಲಿರುವ ಕರ್ಜನ್ ಸೇತುವೆಯ ಮೇಲೆ ಸ್ನೇಹಿತರೊಂದಿಗೆ ಯೋಗ ಮಾಡುತ್ತಿದ್ದರು. ತ್ರಿಪಾಠಿ ಸೂರ್ಯ ನಮಸ್ಕಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಮೂಗಿನಲ್ಲಿ ರಕ್ತಸ್ರಾವ ಶುರುವಾಯಿತು. ತಕ್ಷಣ ಅವರ ಸ್ನೇಹಿತರು ಟಿಬಿ ಸಪ್ರು ಆಸ್ಪತ್ರೆಗೆ ಕರೆದೊಯ್ದರು. ತ್ರಿಪಾಠಿ ಅವರ ಗಂಭೀರ ಸ್ಥಿತಿಯನ್ನು ನೋಡಿ, ಅವರನ್ನು ಸಪ್ರುದಿಂದ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. 

ಓಂಪ್ರಕಾಶ್ ತ್ರಿಪಾಠಿಯ ತಂದೆ ಅನಂತ್‌ರಾಮ್‌, ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದರು. ಓಂ ಪ್ರಕಾಶ್ ಅವರು ತಮ್ಮ ಪತ್ನಿ ಡಾಲಿ ಅವರೊಂದಿಗೆ ಪ್ರಯಾಗ್‌ರಾಜ್‌ನ ಶಂಕರ್ ಘಾಟ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಯುಪಿಯ ಮೂಲ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡ ತ್ರಿಪಾಠಿ ಅವರು ಮಧುಮೇಹದ (Diabetes) ಸಮಸ್ಯೆಯನ್ನು ಹೊಂದಿದ್ದರು. ಇದರಿಂದಾಗಿ ಅವರು ತಮ್ಮ ಆರೋಗ್ಯದ (Health) ಬಗ್ಗೆ ಬಹಳ ಜಾಗೃತರಾಗಿದ್ದರು. ನಿಯಮಿತವಾಗಿ ಯೋಗ ಮಾಡುತ್ತಿದ್ದರು. ಜತೆಗೆ ಸ್ನೇಹಿತರಲ್ಲಿ ಜಾಗೃತಿ (Awareness) ಮೂಡಿಸಿ ಯೋಗ ಮಾಡುವಂತೆ ಪ್ರೇರೇಪಿಸುತ್ತಿದ್ದರು.

Tap to resize

Latest Videos

ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ

ಮಾರ್ಚ್ 12 ರ ರಂಗಪಂಚಮಿಯಂದು ಉಜ್ಜಯಿನಿಯಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾರ್ಚ್ 12 ರಂದು ರಂಗಪಂಚಮಿಯಂದು ಮಹಾಕಾಳೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಭಾಗವಹಿಸಿದ ಬಾಲಕ ಸಾವನ್ನಪ್ಪಿದ್ದನು. ಬಾಲಕನನ್ನು ಮಯಾಂಕ್ ಎಂದು ಗುರುತಿಸಲಾಗಿತ್ತು.  ಮಹಾಕಾಳೇಶ್ವರ ದೇವಸ್ಥಾನದ ಸಹಾಯಕ ಅರ್ಚಕರ ಮಗ ಮೃತಪಟ್ಟಿದ್ದನು.

ಪಾಠ ಮಾಡುತ್ತಿದ್ದಾಗ್ಲೇ ಶಿಕ್ಷಕರಿಗೆ ಹಾರ್ಟ್ ಅಟ್ಯಾಕ್,
ಕೆಲದಿನಗಳ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ತರಗತಿಯಲ್ಲೇ ಸಾವನ್ನಪ್ಪಿದ್ದರು. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ವೇಟಪಾಲೆಂನಲ್ಲಿ ಈ ಘಟನೆ ನಡೆದಿತ್ತು. ಮೃತರನ್ನು ಇಂಕೊಳ್ಳು ಗ್ರಾಮದ ವೀರಬಾಬು (45) ಎಂದು ಗುರುತಿಸಲಾಗಿತ್ತುದೆ. ಇವರು ವಾಕಾವರಿ ಪಾಲೆಂನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು. ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗಾಬರಿಗೊಂಡ ವಿದ್ಯಾರ್ಥಿಗಳು ತಕ್ಷಣ ಇತರ ವಿದ್ಯಾರ್ಥಿಗಳಿಗೆ (Students) ಮಾಹಿತಿ ನೀಡಿದ್ದು, ಅವರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಶಿಕ್ಷಕರನ್ನು ಹತ್ತಿರದ ಆಸ್ಪತ್ರೆಗೆ (Hospital) ಸಾಗಿಸಿದ್ದರು. ಆದರೆ ಅಷ್ಟರಲ್ಲೇ ವೀರಬಾಬು ಮೃತಪಟ್ಟಿದ್ದರು.

ಆಗಾಗ ಹೃದಯ ತಪಾಸಣೆ ಮಾಡಿಕೊಳ್ಳೋದ್ರಿಂದ ಹಾರ್ಟ್‌ಅಟ್ಯಾಕ್ ತಪ್ಪಿಸಬಹುದಾ?

ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು
ತೀರಾ ಚಿಕ್ಕವಯಸ್ಸಿನವರೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಹಠಾತ್ತನೆ ಸಾವಿಗೀಡಾಗುತ್ತಿರುವಾಗಲೇ, ಕೋವಿಡ್‌ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಆರೋಗ್ಯವಂತರಾಗಿದ್ದ ವ್ಯಕ್ತಿಗಳಲ್ಲಿ ಹೃದಯಸ್ತಂಭನದಿಂದ ಮರಣ (Death) ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.50ರಷ್ಟು ಮಂದಿ ಧೂಮಪಾನದ ನಂಟನ್ನೇ ಹೊಂದಿಲ್ಲದವರು. ಬಹುತೇಕ ಮಂದಿಗೆ ಹೃದಯ ಸಮಸ್ಯೆಯ ಕೌಟುಂಬಿಕ ಹಿನ್ನೆಲೆಯೇ ಇಲ್ಲ ಎಂದು ದೆಹಲಿಯ ವೈದ್ಯರು (Doctors) ಹೇಳಿದ್ದಾರೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ದೆಹಲಿಯ ಕೆಲವು ಆಸ್ಪತ್ರೆಗಳಲ್ಲಿ ಹೃದಯ ಸ್ತಂಭನದಿಂದ ಸಾವು ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.10ರಿಂದ 15ರವರೆಗೂ ಹೆಚ್ಚಳ ಕಂಡುಬಂದಿದೆ. ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಗಳಲ್ಲಿ ಸಾವು ಹಾಗೂ ಹೃದಯ ಸ್ತಂಭನ, ಪಾಶ್ರ್ವವಾಯು, ಶ್ವಾಸಕೋಶ ಸಮಸ್ಯೆಯ ಅಪಾಯದ (Dangerous) ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತಿವೆ ಎಂದು ದೆಹಲಿಯ ವೈದ್ಯರು ಹೇಳಿದ್ದಾರೆ.

click me!