ಕೆಲವೊಂದು ಖಾಯಿಲೆಯ ಲಕ್ಷಣ ಕಾಣದೆ ದಾಳಿಯಿಡುತ್ತದೆ. ಇದ್ರಲ್ಲಿ ಬುದ್ಧಿಮಾಂದ್ಯತೆ ಕೂಡ ಒಂದು ಎನ್ನಬಹುದು. ಹುಟ್ಟುವಾಗಲೇ ಈ ಖಾಯಿಲೆ ಹೊತ್ತು ತರುವ ಮಕ್ಕಳು ದೊಡ್ಡವರಾಗ್ತಿದ್ದಂತೆ ಅದ್ರ ಲಕ್ಷಣ ಕಾಣಿಸುತ್ತದೆ. ಇನ್ನು ವಯಸ್ಸಾದವರಲ್ಲಿ ಪ್ರಕರಣ ಕೈ ಮೀರಿದೆ ಎಂದಾಗ ರೋಗ ಲಕ್ಷಣ ಕಾಣಿಸಿಕೊಳ್ಳೋದೇ ಹೆಚ್ಚು.
ಬುದ್ಧಿಮಾಂದ್ಯತೆ ಎನ್ನುವುದು ಕೆಲವರಿಗೆ ಹುಟ್ಟಿನಿಂದಲೇ ಬರುತ್ತದೆ. ಕೆಲವರಿಗೆ ಇದು 50 ರ ನಂತರದ ಇಳಿ ವಯಸ್ಸಿನಲ್ಲಿ ಆರಂಭವಾಗುತ್ತದೆ. ಕೆಲವರಿಗೆ ಇದು ಅನುವಂಶೀಯವಾಗಿಯೂ ಕೂಡ ಬಂದಿರುತ್ತದೆ. ಜನನ ಸಮಯದಲ್ಲಿ ಏನಾದರೂ ತೊಂದರೆಯಾಗಿದ್ದಲ್ಲಿ ಅಥವಾ ಅವಧಿಗೂ ಮುಂಚೆ ಹುಟ್ಟಿದ ಮಗುವಿನಲ್ಲಿ ಕೂಡ ಒಮ್ಮೊಮ್ಮೆ ಬುದ್ಧಿಮಾಂದ್ಯತೆ ಕಂಡುಬರಬಹುದು. ಮಗುವಾಗಲೀ, ವಯಸ್ಕರಾಗಲೀ ಡೈಮೆನ್ಶಿಯಾ ಸಮಸ್ಯೆಯಿಂದ ಬಳಲುತ್ತಿರುವವರ ಚಲನೆ, ಗ್ರಹಿಕೆ, ಭಾಷೆ ಮತ್ತು ವರ್ತನೆಗಳಲ್ಲಿ ನಿಧಾನಗತಿಯನ್ನು ನಾವು ಕಾಣಬಹುದು. ಇವರ ಮಾನಸಿಕ ಸಾಮರ್ಥ್ಯದಲ್ಲಿ ಕೂಡ ಕೊರತೆ ಕಂಡುಬರುತ್ತದೆ. ಹುಟ್ಟುವ ಮಗುವಿನಲ್ಲಿನ ಬುದ್ಧಿಮಾಂದ್ಯತೆಯನ್ನು ಅವರ ಬೆಳವಣಿಗೆಯ ಹಂತದಲ್ಲಿ ಕಂಡುಹಿಡಿಯಬಹುದು. ಆದರೆ ವಯಸ್ಕರಲ್ಲಿ ಉಂಟಾಗುವ ಡೈಮೆನ್ಶಿಯಾ ಸಮಸ್ಯೆಯನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ.
ಒಂದು ಅಧ್ಯಯನ (Study) ದ ವರದಿಯ ಪ್ರಕಾರ ಭಾರತದಲ್ಲಿ 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಲ್ಲಿ ಡೆಮೆನ್ಶಿಯಾ (Dementia) ಪ್ರತಿಶತ 8.44 ರಷ್ಟಿದೆ. ಇದು ದೇಶದ 10.8 ಮಿಲಿಯನ್ ಹಿರಿಯ ನಾಗರಿಕರಿಗೆ ಸಮನಾಗಿದೆ. ಈ ಅಂಕಿಅಂಶವು ಅಮೆರಿಕ, ಬ್ರಿಟನ್ ದೇಶಗಳಲ್ಲಿ ದಾಖಲಾದ ಅಂಕಿಅಂಶಗಳಿಗೆ ಸಮನಾಗಿದೆ. ನ್ಯುರೋಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದೆ. ಈ ಅಧ್ಯಯನದಲ್ಲಿ 31,477 ಮಂದಿ ಹಿರಿಯ ವಯಸ್ಕರ ಡೇಟಾವನ್ನು ವಿಶ್ಲೇಶಿಸಲು ಸೆಮಿ-ಸುಪರವೈಸ್ಡ್ ಮಶಿನ್ ಲರ್ನಿಂಗ್ ಎಂಬ ಕೃತಕ ಬುದ್ಧಿಮತ್ತೆ ಯಂತ್ರವನ್ನು ಬಳಸಲಾಗಿತ್ತು.
undefined
ನಿದ್ರೆ ಮಾತ್ರೆ ಸೇವಿಸೋ ಅಭ್ಯಾಸ ಇದೆಯೇ? ಅಪಾಯ ಇದೆ ಎಚ್ಚರ !
ಬುದ್ಧಿಮಾಂದ್ಯತೆಯನ್ನು ಹೇಗೆ ನಿರ್ಣಯಿಸಲಾಗುತ್ತದೆ? : ಹಲವು ಸಂಸ್ಥೆಗಳ ಸಂಶೋಧನಾಕಾರರ ಗುಂಪು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲರ್ನಿಂಗ್ ಅನ್ನು ತಯಾರಿಸಿತು. ಇದರಲ್ಲಿ ಸರ್ರೆ ವಿಶ್ವವಿದ್ಯಾಲಯ, ಮಿಚಿಗನ್ ವಿಶ್ವವಿದ್ಯಾಲಯ, ದಕ್ಷಿಣ ಕ್ಯಾಲಿಫೋರ್ನಿಯಾ (California) ವಿಶ್ವವಿದ್ಯಾಲಯ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮುಂತಾದವು ಸೇರಿದೆ. ಇಂಟಲಿಜೆನ್ಸ್ ಲರ್ನಿಂಗ್ ಮಾಡೆಲ್ ಅನ್ನು ಡೇಟಾ ದೊಂದಿಗೆ ಸೇರಿಸಲಾಯಿತು. ಇದರಲ್ಲಿ ಪ್ರತಿಶತ 70ರಷ್ಟು ಲೇಬಲ್ ಮಾಡಲಾದ ಡೇಟಾ ಸೆಟ್ ಅನ್ನು ಒಳಗೊಂಡಿದೆ. ಈ ಎಲ್ಲ ಡೇಟಾಗಳ ನೆರವಿನಿಂದ ಬುದ್ಧಿಮಾಂದ್ಯತೆಯನ್ನು ನಿರ್ಣಯಿಸಲಾಗಿದೆ. ಉಳಿದ ಪ್ರತಿಶತ 30ರಷ್ಟು ಭಾಗದ ಡೇಟಾಗಳನ್ನು ಎಐ ಮುನ್ಸೂಚನೆಗಳ ನಿಖರತೆಯನ್ನು ಪರೀಕ್ಷಿಸಲು ಬಳಸಲಾಗಿದೆ.
ಇವರಲ್ಲಿ ಬುದ್ಧಿಮಾಂದ್ಯತೆ ಹೆಚ್ಚಿರುತ್ತೆ: ಅಧ್ಯಯನದ ಪ್ರಕಾರ ವೃದ್ಧರು, ಮಹಿಳೆಯರು, ಅನಕ್ಷರಸ್ಥರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಬುದ್ಧಿಮಾಂದ್ಯತೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ವ್ಯಾಧಿಯಿಂದ ಬಳಲುತ್ತಿರುವವರು ಪ್ರತಿನಿತ್ಯವೂ ಕಷ್ಟದಲ್ಲೇ ಬದುಕುತ್ತಾರೆ. ಇದು ವಯೋಸಹಜ ಖಾಯಿಲೆಯಾದರೂ ಕೂಡ ಯಾರಿಗೂ ಇದು ಮುಂಚಿತವಾಗಿ ತಿಳಿಯುವುದಿಲ್ಲ ಮತ್ತು ಎಲ್ಲರಲ್ಲಿಯೂ ಕಾಣಿಸುವುದಿಲ್ಲ. ಇತ್ತೀಚೆಗೆ ವ್ಯಕ್ತಿಯಲ್ಲಾಗುವ ಕೆಲವು ಬದಲಾವಣೆಗಳನ್ನು ಗಮನಿಸಿ ಹಲವು ಬಗೆಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಗರ್ಭಿಣಿಯರು ಗೋಡಂಬಿ ತಿಂದರೆ ಮಾಡುತ್ತೆ ಆರೋಗ್ಯದ ಮೇಲೆ ಮ್ಯಾಜಿಕ್!
ಇತ್ತೀಚಿನ ದಿನಗಳಲ್ಲಿ ಡೆಮೆನ್ಶಿಯಾ ತೊಂದರೆ ಹಲವರಲ್ಲಿ ಕಾಣಿಸಿಕೊಳ್ಳುತ್ತಿರುವುದು ಶೋಚನೀಯ. ಬುದ್ಧಿಮಾಂದ್ಯತೆಯ ಕಾರಣದಿಂದಾಗಿ ಎಷ್ಟೋ ಅನಾಹುತಗಳು, ಆತ್ಮಹತ್ಯೆಗಳು ಕೂಡ ನಡೆಯುತ್ತಿವೆ. ಪ್ರಾರಂಭಿಕ ಹಂತದಲ್ಲಿ ಬುದ್ಧಿಮಾಂದ್ಯತೆಯನ್ನು ತಡೆಗಟ್ಟಲು ಲಿಥಿಯಂ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಲಿಥಿಯಂ ಚಿಕಿತ್ಸೆ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ವಯಸ್ಸು ಹೆಚ್ಚಾದಂತೆ ಮಾನಸಿಕ ಸ್ಥಿತಿಗಳಲ್ಲಿ ಕೂಡ ಏರುಪೇರಾಗುವುದುರಿಂದಲು ಕೂಡ ಬುದ್ಧಿಮಾಂದ್ಯತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವುದು, ಅವರಲ್ಲಿ ವಿಶ್ವಾಸ ಮೂಡಿಸುವುದು, ಅವರ ರಕ್ಷಣೆಯ ಭರವಸೆ ನೀಡುವುದು, ಜನರ ಜೊತೆ ಅವರು ಹೆಚ್ಚು ಬೆರೆಯುವಂತೆ ಮಾಡಬೇಕು. ಇದರಿಂದ ಅವರ ಸ್ವಭಾವದಲ್ಲಿ ಬದಲಾವಣೆ ಆಗಬಹುದು. 50 ವರ್ಷ ಮೇಲ್ಪಟ್ಟ ನಂತರ ಕೆಲವರು ಯಾರೊಂದಿಗೂ ಬೆರೆಯದೇ, ಸಣ್ಣ ಪುಟ್ಟ ಕೆಲಸ ಅಥವಾ ವ್ಯಾಯಾಮವನ್ನು ಮಾಡದೇ ಇದ್ದರೆ ಅಥವಾ ಯಾವಾಗಲೂ ಚಿಂತೆಯಲ್ಲೇ ಕುಳಿತಿದ್ದರೆ ಅಂತವರನ್ನು ಮಾನಿಟರ್ ಮಾಡುವ ಮಾಡಬೇಕು. ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಬುದ್ಧಿಮಾಂದ್ಯತೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.