
ಪ್ರತಿಯೊಬ್ಬರಿಗೂ ತಮ್ಮ ಮುಖ ಸುಂದರವಾಗಿ ಕಾಣಬೇಕು. ಮುಖದಲ್ಲಿ ಯಾವುದೇ ಕಲೆಗಳು ಇರಬಾರದು ಮತ್ತು ಮುಖ ಯಾವಾಗಲೂ ಹೊಳೆಯುತ್ತಿಬೇಕು ಎನ್ನುವ ಆಸೆ ಪ್ರತಿಯೋಬ್ಬ ಮಹಿಳೆಯ ಆಸೆ. ಆದರೆ ನಮ್ಮಲ್ಲಿ ಹೆಚ್ಚಿನವರು ಎಣ್ಣೆಯುಕ್ತ ತ್ವಚೆಯನ್ನು (Oily Skin) ಹೊಂದಿರುತ್ತಾರೆ. ಎಣ್ಣೆ ಯುಕ್ತ ಚರ್ಮ ಹೊಂದಿರುವವರು ಚೆನ್ನಾಗಿ ಕಾಣಿಸುವುದಿಲ್ಲ ಎಂದಲ್ಲ, ಆದರೆ ಎಣ್ಣೆಯುಕ್ತ ಚರ್ಮ ಹೊಂದಿರುವವರು ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಇಂಥಹವರ ಮುಖವು ನಿರಂತರವಾಗಿ ಎಣ್ಣೆಯುಕ್ತವಾಗಿ ಕಾಣುತ್ತದೆ. ಬಿಸಿಲಿಗೆ ಹೋದರೆ ಮತ್ತು ಚರ್ಮ ಎಣ್ಣೆ ಬಡಿದಂತೆ ಕಾಣುತ್ತದೆ. ಮತ್ತು ಹಾಕಿಕೊಂಡ ಮೇಕಪ್ (Make Up) ಹೆಚ್ಚು ಕಾಲ ಉಳಿಯುವುದಿಲ್ಲ.
ಎಣ್ಣೆಯುಕ್ತ ಚರ್ಮವನ್ನು ಹೊಂದಿರುವುದು ಕೆಟ್ಟದ್ದಲ್ಲ. ಏಕೆಂದರೆ ಸೆಬಮ್ ಮತ್ತು ಸೆಬಾಸಿಯಸ್(Sebaceous) ಗ್ರಂಥಿಗಳು ಕೊಬ್ಬು ಮತ್ತು ನೈಸರ್ಗಿಕ ಎಣ್ಣೆಗಳನ್ನು ಉತ್ಪಾದಿಸುತ್ತವೆ, ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ಮತ್ತು ಇದು ಒಣಗುವುದನ್ನು ತಡೆಯುತ್ತದೆ. ಮತ್ತು ಮುಖ ಪ್ರೇಶ್ ಆಗಿರುವಂತೆ ನೋಡಿಕೊಳ್ಳುತ್ತದೆ. ಆದರೆ ಎಣ್ಣೆಯುಕ್ತ ಚರ್ಮವು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸುತ್ತದೆ ಇದರಿಂದ ಚರ್ಮದ ರಂಧ್ರಗಳನ್ನು ಮುಚ್ಚಿ ಮುಖದ ಮೇಲೆ ಮೊಡವೆಗಳನ್ನು ಮತ್ತು ಜಿಡ್ಡುನ್ನ (Pimples) ಉಂಟುಮಾಡಬಹುದು.
ಎಣ್ಣೆ ಚರ್ಮದಿಂದ ಮುಕ್ತಿ ಪಡೆಯಲು ಈ ಸಲಹೆಗಳನ್ನ ಫಾಲೋ ಮಾಡಿ
ಸನ್‌ಸ್ಕ್ರೀನ್ ಬಳಸಿ(Sunscreen): ಪ್ರತಿದಿನ ಸನ್‌ಸ್ಕ್ರೀನ್(Sunscreen) ಬಳಸುವುದರಿಂದ ಸೂರ್ಯನ ಕಿರಣಗಳಿಂದ ಅದು ಚರ್ಮವನ್ನ ಸಂರಕ್ಷಿಸುತ್ತದೆ.ಪ್ರತಿದಿನ SPF 50+ ಇರುವ ಸನ್‌ಸ್ಕ್ರೀನ್ ಬಳಸುವುದರಿಂದ ಚರ್ಮವು ಎಣ್ಣೆ ಯುಕ್ತವಾಗುವುದನ್ನು ಅಥವಾ ಒಣಗುವುದು ತಡೆಯಬಹುದು. ಇತ್ತೀಚಿನ ದಿನಗಳಲ್ಲಿ ಓಝೋನ್ ಪದರ ಹಾಳಾಗುತ್ತಿದ್ದು ಸೂರ್ಯನ್‌ಬಿಸಿಲು ಸಹ ಹಾನಿಕರವಾಗುತ್ತಿದೆ. ನಮ್ಮನ್ನ ನಾವು ಹೆಚ್ಚು ಬಿಸಿಲಿಗೆ ಒಡ್ಡಿಕೊಂಡರೆ ಚರ್ಮದ ವಿವಿಧ ಸಮಸ್ಯೆಗಳು ಬರುವಂತಹ ಸಾಧ್ಯತೆ ಇದೆ. ಆದರೆ ನಮ್ಮ ದೇಹಕ್ಕೆ ವಿಟಾಮಿನ್ ಡಿ(Vitamin D) ಚರ್ಮಕ್ಕೆ ಬಹಳ ಮಖ್ಯವಾಗಿದೆ. ಹಾಗಾಗಿ ಬೆಳಗ್ಗಿನ ಹಾಗೂ ಸಂಜೆಯ ಇಳಿ ಬಿಸಿಲು ದೇಹಕ್ಕೆ ಒಳ್ಳೆಯದು. ಆದರೆ ಸೂರ್ಯನ ಕಿರಣಗಳಿಂದ ಮುಖದ ಚರ್ಮವನ್ನ ಕಾಪಾಡಿಕೊಳ್ಳಬೇಕಾದರೆ ಉತ್ತಮ ಸನ್‌ಸ್ಕ್ರೀನ್ ಅಗತ್ಯ. ಡಾಕ್ಟರ್ ಸಲಹೆಯಂತೆ, ನಿಮ್ಮ ಚರ್ಮಕ್ಕನುಗುಣವಾಗಿ ಬಳಸುವುದು ಉತ್ತಮ.
ಮಾಯಿಶ್ಚರೈಸರ್ (Moisturizer): ಪ್ರತಿನಿತ್ಯ ಮಾಯಿಶ್ಚರೈಸರ್ ಬಳಸುವುದರಿಂದ ರಂಧ್ರಗಳು ಮುಚ್ಚಿಹೋಗುವುದಿಲ್ಲ ಅಥವಾ ಮೊಡವೆಗಳು ಉಂಟಾಗುವುದಿಲ್ಲ. ಅಲ್ಲದೇ ಇದು ನಿಮ್ಮ ಚರ್ಮವನ್ನು ರಕ್ಷಿಸುತ್ತದೆ ಮತ್ತು ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುವುದನ್ನು ತಡೆಯುತ್ತದೆ. ಚರ್ಮ ಒಣಗದಂತೆ ಮಾಡುತ್ತದೆ. ಜೊತೆಗೆ ಚರ್ಮಕ್ಕೆ ಆಂತರಿಕವಾಗಿ ಹೊಳಪು ನೀಡಲು ಸಹಾಯ ಮಾಡುತ್ತದೆ. ಡಾಕ್ಟರ್ ಸಲಹೆಯಂತೆ, ನಿಮ್ಮ ಚರ್ಮಕ್ಕನುಗುಣವಾಗಿ ಮಾಯಿಶ್ಚರೈಸರ್ ಬಳಸುವುದು ಉತ್ತಮ.
ಟೋನರ್(Toner) ಬಳಸಿ: ಟೋನರ್ ಬಳಸುವುದರಿಂದ ಚರ್ಮವು ಆಳವಾಗಿ ಶುದ್ಧವಾಗುತ್ತದೆ ಮತ್ತು ಮುಖದಿಂದ ಎಣ್ಣೆಯುಕ್ತತೆಯನ್ನು ತೆಗೆದುಹಾಕುತ್ತದೆ. ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಬ್ಲಾಟಿಂಗ್ ಪೇಪರ್(Blotting paper) ಅನ್ನುಬಳಸುವುದರಿಂದ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು, ಹಣೆ, ಮೂಗು ಮತ್ತು ಗಲ್ಲಗಳಿಗೆ ಬ್ಲಾಟಿಂಗ್ ಪೇಪರ್ ಅನ್ನು ನಿಧಾನವಾಗಿ ಹಚ್ಚಿ. ಇದು ನಿಮ್ಮ ಮುಖದಲ್ಲಿನ ಎಣ್ಣೆ ಅಂಶವನ್ನ ತೆಗೆದುಹಾಕಲು ಸಹಾಯ ಮಾಡುತ್ತದೆ.
ಕ್ಲೆನ್ಸರ್ ಬಳಸಿ(Cleanser): ದಿನನಿತ್ಯ ನಾವು ಹಲವು ಕಡೆ ಓಡಾಡುತ್ತಲೇ ಇರುತ್ತೆವೆ. ಮಾಲಿನ್ಯದಿಂದ ನಮ್ಮ ಮುಖದ ಮೆಲೆ ಸಾಕಷ್ಟು ಬೇಡವಾದ ಅಂಶಗಳು ಮುಖದ ಮೇಲೆ ಹಾನಿಮಾಡುತ್ತಿರುತ್ತವೆ.ಹಾಗಾಗಿ ಪ್ರತಿನಿತ್ಯ ಉತ್ತಮ ಕ್ಲೆನ್ಸರ್(Cleanser) ಬಳಸುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದಲ್ಲದೇ, ಮಾಲಿನ್ಯ (Pollution)ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಚರ್ಮದ ಆಳದಿಂದ ಹೊಳಪನ್ನ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.