
ಹೊಸ ಗ್ಲಾಸ್ ಬಾಟಲಿಗಳು(Glass bottles), ಪ್ಲಾಸ್ಟಿಕ್ ಡಬ್ಬಗಳು(Plastic Cans) ಅಥವಾ ಟಿಫಿನ್ ಬಾಕ್ಸ್(Tiffin Box) ಖರೀದಿಸಿದಾಗ ಅವುಗಳ ಮೇಲಿದ್ದ ಸ್ಟಿಕ್ಕರ್‌ಗಳನ್ನು ತೆಗೆದುಹಾಕುವುದು ತಲೆ ಬಿಸಿ ಕೆಲಸವಾಗಿರುತ್ತದೆ. ವಿಶೇಷವಾಗಿ ರೇಟ್ ಟ್ಯಾಗ್(Rate tag)ಗಳನ್ನು ತುಂಬಾ ಬಿಗಿಯಾಗಿ ಅಂಟಿಸಲಾಗಿರುವುದರಿಂದ, ತೆಗೆದುಹಾಕುವಾಗ ಪಾತ್ರೆಯ ಮೇಲೆ ಅಂಟುಬಿದ್ದ ಕಲೆಗಳು ಹಾಗೇ ಉಳಿದುಬಿಡುತ್ತವೆ. ಕೆಲವೊಮ್ಮೆ ಈ ಸ್ಟಿಕ್ಕರ್‌ಗಳನ್ನು ತೆಗೆಯುವಾಗ ಬಾಕ್ಸ್ ಅಥವಾ ಬಾಟಲಿಯ ಮೇಲ್ಮೈಗೆ ಸ್ಕ್ರ್ಯಾಚ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಇದು ಕೆಲವೊಮ್ಮೆ ಪಾತ್ರೆಗಳ ಮೇಲೆ ಹಾಗೆ ಉಳಿದುಬಿಡುತ್ತದೆ. ಪಾತ್ರೆಯ ಮೇಲೆ ಇಂತ ಸ್ಟಿಕ್ಕರ್ ಇದ್ದರೆ ಅದು ಪಾತ್ರೆಗಳು ಚೆನ್ನಾಗಿ ಕಾಣೀಸುವುದಿಲ್ಲ.
ಈ ರೀತಿಯ ಸಂದರ್ಭದಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸದೇ, ಮನೆಯಲ್ಲಿಯೇ ಲಭ್ಯವಿರುವ ಕೆಲ ಸರಳ ಉಪಕರಣಗಳ ಮೂಲಕ ಸ್ಟಿಕ್ಕರ್‌ಗಳನ್ನು(Stickers) ಸುಲಭವಾಗಿ, ಸುರಕ್ಷಿತವಾಗಿ ತೆಗೆದುಹಾಕಬಹುದು. ಇದು ಹೆಚ್ಚು ಸಮಯವೂ ತೆಗೆದುಕೊಳ್ಳದು ಮತ್ತು ಬಟ್ಟಲು ಅಥವಾ ಬಾಕ್ಸ್(Box)ಗೆ ಹಾನಿಯುಂಟು ಮಾಡುವುದೂ ಇಲ್ಲ. ಸುಲಭವಾಗಿ ತೆಗೆದುಹಾಕಬಹುದು.
ಸ್ಟಿಕ್ಕರ್‌ಗಳ ಅಂಟು ನಿವಾರಣೆಗೆ ಮನೆಯಲ್ಲಿಯೇ ಸುಲಭ ಪರಿಹಾರಗಳು:
ಬೇಕಿಂಗ್ ಸೋಡಾ + ಎಣ್ಣೆ ಪೇಸ್ಟ್(Baking soda + oil paste) ಒಂದು ಟೀ ಸ್ಪೂನ್ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆ ಬೆರೆಸಿ ಪೇಸ್ಟ್ ಮಾಡಿ.10 ನಿಮಿಷ ಇಡಿ. 10 ನಿಮಿಷಗಳ ನಂತರ ಒದ್ದೆಯಾದ ಬಟ್ಟೆಯಿಂದ ನಿಧಾನವಾಗಿ ಉಜ್ಜಿ.ಅಂಟು ಸುಲಭವಾಗಿ ಹೊರಬರುತ್ತದೆ.
ಬಿಸಿ ನೀರಿನಲ್ಲಿ ನೆನೆಸುವುದು(Soaking in hot water) ಒಂದು ಪಾತ್ರೆಯಲ್ಲಿ ಬಿಸಿನೀರು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಡಿಶ್ ವಾಶ್ ಲಿಕ್ವಿಡ್ ಸೇರಿಸಿ.ಈ ಮಿಶ್ರಣವನ್ನು ಸ್ಟಿಕ್ಕರ್ ಇರುವ ಜಾಗಕ್ಕೆ ಹಚ್ಚಿ.5–10 ನಿಮಿಷ ನೆನೆಸಿದ ನಂತರ ಸ್ಪಾಂಜ್ ಅಥವಾ ಸ್ಕ್ರಬ್ಬರ್ ಬಳಸಿ ನಿಧಾನವಾಗಿ ಉಜ್ಜಿ. ಅಂಟು ಮೃದುವಾಗಿ ತೆಗೆದು ಬರುತ್ತದೆ.
ಹೇರ್ ಡ್ರೈಯರ್ ಬಳಕೆ (Using a hair dryer) ಹೇರ್ ಡ್ರೈಯರ್‌ನಿಂದ ಬಿಸಿ ಗಾಳಿಯನ್ನು ಸ್ಟಿಕ್ಕರ್ ಮೇಲೆ ಕೆಲವು ಸೆಕೆಂಡುಗಳ ಕಾಲ ಬಿಸಿಮಾಡಿ.ಶಾಖದಿಂದ ಅಂಟು ಕರಗುತ್ತದೆ.ಈಗ ಸ್ಟಿಕ್ಕರ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.ಪ್ಲಾಸ್ಟಿಕ್ ಮೇಲ್ಮೈ ಮೇಲೆ ಹೆಚ್ಚು ಶಾಖ ಬಳಸಬೇಡಿ, ಅದರಿಂದ ಪ್ಲಾಸ್ಟಿ(Plastic) ಪಾತ್ರೆ ಹಾನಿಯಾಗಬಹುದು.
ನೇಲ್ ಪಾಲಿಷ್ ರಿಮೂವರ್ (ಅಸಿಟೋನ್) ನೇಲ್ ಪಾಲಿಷ್ ರಿಮೂವರ್‌ನಲ್ಲಿರುವ ಅಸಿಟೋನ್ ಅಂಟು ಕರಗಿಸಲು ಸಹಾಯಕವಾಗುತ್ತದೆ.ನೇಲ್ ಪಾಲಿಷ್‌ನ ಹತ್ತಿಯಲ್ಲಿ ನೆನಸಿ ಸ್ಟಿಕ್ಕರ್‌ನ ಮೇಲೆ ಹಚ್ಚಿ, 10 ಕಾಲ ಇಡಿ ಆನಂತರ ತೊಳೆಯಿರಿ.
ವಿನೆಗರ್ ಬಳಸಿ ಕ್ಲೀನ್ ಮಾಡುವುದು(Vinegar) ವಿನೆಗರ್ ಒಂದು ನೈಸರ್ಗಿಕ ದ್ರಾವಕವಾಗಿದೆ.ಹತ್ತಿ ಉಂಡೆಯಿಂದ ಸ್ವಲ್ಪ ವಿನೆಗರ್‌ನ್ನು ತೆಗೆದುಕೊಂಡು ಸ್ಟಿಕ್ಕರ್ ಮೇಲೆ ಹಚ್ಚಿ.10 ನಿಮಿಷಗಳ ಕಾಲ ಬಿಟ್ಟು ಬಳಿಕ ಒರೆಸಿ ತೊಳೆಯಿರಿ.ಇದರಿಂದ ಸ್ಟಿಕರ್ ಹೋಗುತ್ತದೆ. ಇದು ಕೇವಲ ಪ್ಲಾಸ್ಟಿಕ್ ಪಾತ್ರೆಗಳಿಗೆ ಮಾತ್ರವಲ್ಲದೆ ಗಾಜು, ಲೋಹ ಪಾತ್ರೆಗಳಿಗೂ ಸ್ಟಿಕ್ಕರ್‌ಗಳನ್ನು(Stickers) ಉಪಯೋಗಿಸಬಹುದು.
ನಿಂಬೆ + ಉಪ್ಪು ಸ್ಕ್ರಬ್(Lemon + salt scrub) ಸ್ವಲ್ಪ ನಿಂಬೆರಸಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಸ್ಟಿಕ್ಕರ್ ಮೇಲೆ ಹಚ್ಚಿ ಐದು ನಿಮಿಷದ ವರೆಗೆ ಸ್ಕ್ರಬ್ ಮಾಡಿ.ನಿಂಬೆಯ ಆಮ್ಲ ಅಂಟನ್ನು ಕರಗಿಸುತ್ತದೆ.ಇದು ಗಾಜು ಮತ್ತು ಸ್ಟೀಲ್ ಪಾತ್ರೆಗಳ ಸ್ಟಿಕರ್‌ಗಳನ್ನ ತೆಗೆಯಲು ಉತ್ತಮ ಉದಾಹರಣೆಯಾಗಿದೆ.
ಈ ಕೆಲವು ವಿಧಾನಗಳನ್ನ ಬಳಸಿ ಹೊಸ ಗ್ಲಾಸ್ ಬಾಟಲಿಗಳು(Glass bottles), ಪ್ಲಾಸ್ಟಿಕ್ ಡಬ್ಬಗಳು(Plastic Cans) ಅಥವಾ ಟಿಫಿನ್ ಬಾಕ್ಸ್(Tiffin Box)ಗಳ ಮೇಲಿನ ಸ್ಟಿಕ್ಕರ್‌ಗಳನ್ನು(Stickers)ಗಳನ್ನ ತೆಗೆಯಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.