ರಾತ್ರಿ ಮಲಗುವ ಮುನ್ನ ಲೈಟ್ ಆಫ್ ಮಾಡುವುದು ಸಾಮಾನ್ಯವಾಗಿ ಎಲ್ಲರೂ ಪಾಲಿಸುವ ಅಭ್ಯಾಸ. ಆದರೆ ಕೆಲವೊಬ್ಬರು ಇದಕ್ಕಿಂತ ವಿಭಿನ್ನವಾಗಿ ಲೈಟ್ ಆನ್ ಮಾಡಿಟ್ಟು ಮಲಗುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಇದರಿಂದ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ರಾತ್ರಿ ಲೈಟ್ ಆನ್ ಮಾಡಿಟ್ಟು ಮಲಗುವ ಅಭ್ಯಾಸ ದೇಹದ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ದೇಹ ಮೆಲಟೋನಿನ್ ಎಂಬ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ. ಇದು ದೇಹದ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸುತ್ತದೆ ಮತ್ತು ಸಿಂಕ್ರೊನೈಸ್ ಮಾಡುತ್ತದೆ, ಈ ಹಾರ್ಮೋನ್ ರಕ್ತದೊತ್ತಡ ನಿಯಂತ್ರಣ, ಸಂತಾನೋತ್ಪತ್ತಿ ಮತ್ತು ಉರಿಯೂತವನ್ನು ತಡೆಗಟ್ಟುವಂತಹ ಇತರ ಪ್ರಮುಖ ದೈಹಿಕ ಕಾರ್ಯಗಳಿಗೆ ಸಹ ಕಾರಣವಾಗಿದೆ. ಹೀಗಾಗಿ ಲೈಟ್ ಆನ್ ಮಾಡಿಟ್ಟು ಮಲಗೋ ಅಭ್ಯಾಸ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ.
ರಕ್ತದೊತ್ತಡ ಹೆಚ್ಚಿಸುತ್ತೆ:
ಮೆಲಟೋನಿನ್ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆದರೆ ನಿದ್ರೆಯ ಸಮಯದಲ್ಲಿ (Sleeping time) ಬೆಳಕಿಗೆ ಅನಗತ್ಯವಾಗಿ ಒಡ್ಡಿಕೊಳ್ಳುವುದರಿಂದ ಉಂಟಾಗುವ ಮೆಲಟೋನಿನ್ ಕಡಿಮೆಯಾಗುವುದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಕ್ರೊನೊಬಯಾಲಜಿ ಇಂಟರ್‌ನ್ಯಾಶನಲ್ ನಡೆಸಿದ ಸಂಶೋಧನೆಯು ರಾತ್ರಿಯಲ್ಲಿ ಹೆಚ್ಚಿನ ಪ್ರಮಾಣದ ಬೆಳಕಿಗೆ ಒಡ್ಡಿಕೊಂಡ ಜನರು ಕತ್ತಲೆಯಲ್ಲಿ ಮಲಗುವ ಜನರಿಗಿಂತ ಗಮನಾರ್ಹವಾಗಿ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ ಎಂದು ನಿರ್ಧರಿಸಿದೆ.
undefined
ನಿದ್ರೆ ಕಣ್ಣಲ್ಲಿ ನಡೆದುಕೊಂಡು ಹೋಗಿ ಕೊರಗಜ್ಜನ ಮುಂದೆ ನಿಂತ ಬಾಲಕಿ: ಮುಂದಾಗಿದ್ದೇ ರೋಚಕ
ಮೈಗ್ರೇನ್ ಪ್ರಚೋದಿಸುತ್ತದೆ:
ಮಲಗುವ ಮುನ್ನ ಅಥವಾ ಹಾಸಿಗೆಯಲ್ಲಿ ಟಿವಿ ನೋಡುವ ಮೊದಲು ಗ್ಯಾಜೆಟ್‌ಗಳನ್ನು ಬಳಸುತ್ತೀರಾ. ಹಾಗಿದ್ದಲ್ಲಿ, ನೀವು ತಕ್ಷಣ ಅದನ್ನು ನಿಲ್ಲಿಸುವುದು ಒಳ್ಳೆಯದು. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟೆಲಿವಿಷನ್‌ಗಳಂತಹ ಎಲೆಕ್ಟ್ರಾನಿಕ್‌ಗಳು ಮೈಗ್ರೇನ್‌ಗಳನ್ನು ಪ್ರಚೋದಿಸುವ ನೀಲಿ ಬೆಳಕನ್ನು ಹೊರಸೂಸುತ್ತವೆ. ನೀಲಿ ಬೆಳಕು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತದೆ. ಇದು ಮೈಗ್ರೇನ್, ಕಣ್ಣಿನ ಆಯಾಸ ಮೊದಲಾದ ಸಮಸ್ಯೆಗೆ ಕಾರಣವಾಗುತ್ತದೆ.
ನಿದ್ರಾಹೀನತೆಯ ಸಾಧ್ಯತೆ ಹೆಚ್ಚಿಸುತ್ತದೆ:
ಲೈಟ್ ಆನ್ ಮಾಡಿ ಮಲಗುವ ಅಭ್ಯಾಸ ನಿದ್ರಾಹೀನತೆಯ ಸಮಸ್ಯೆಗೆ ಕಾರಣವಾಗಬಹುದು. ದೇಹವು (Body) ಕಡಿಮೆ ಮೆಲಟೋನಿನ್ ಹೊಂದಿದ್ದರೆ, ನಿದ್ದೆಯ ಗುಣಮಟ್ಟ ಕಡಿಮೆಯಾಗುತ್ತದೆ. ಇದು ರಾತ್ರಿಯ ಹೊತ್ತು ನೀವು ಹಲವಾರು ಬಾರಿ ಎಚ್ಚರಗೊಳ್ಳಲು ಕಾರಣವಾಗುತ್ತದೆ. ವಿಶ್ರಾಂತಿಯ ಕೊರತೆಯು ಬೆಳಿಗ್ಗೆ ಎದ್ದ ತಕ್ಷಣ ಮೈಗ್ರೇನ್‌ಗೆ ಕಾರಣವಾಗುತ್ತದೆ. ಇದರಿಂದ ಕ್ರಮೇಣ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗುತ್ತದೆ.
ಗಿನ್ನೆಸ್ ದಾಖಲೆಗಾಗಿ 7 ದಿನ ನಿದ್ರಿಸದೇ ಕಣ್ಣೀರು ಸುರಿಸಿ ಹುಚ್ಚಾಟ: ಈಗ ದೃಷ್ಟಿ ಕಳ್ಕೊಂಡು ಪರದಾಟ
ಖಿನ್ನತೆಗೆ ಕಾರಣವಾಗುತ್ತೆ:
ಸ್ವಲ್ಪ ಸಮಯದ ವರೆಗೆ ಉತ್ತಮ ನಿದ್ರೆಯನ್ನು ಹೊಂದಿಲ್ಲದಿದ್ದರೆ, ಅದು ನಿಮ್ಮ ದೈಹಿಕ ಸ್ಥಿತಿ ಮಾತ್ರವಲ್ಲ, ನಿಮ್ಮ ಮಾನಸಿಕ ಸ್ಥಿತಿಯನ್ನು ಸಹ ತೊಂದರೆಗೆ ಒಳಪಡಿಸುತ್ತದೆ. ಹಲವಾರು ಅಧ್ಯಯನಗಳು ನಿದ್ರಾಹೀನತೆ ಮತ್ತು ಖಿನ್ನತೆಯ (Anxiety) ನಡುವಿನ ನೇರ ಸಂಬಂಧವನ್ನು ಸಾಬೀತುಪಡಿಸಿವೆ. ಈ ಖಿನ್ನತೆಯು ನಿಮಗೆ ನಿದ್ರಿಸುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.
ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಹಗಲಿನ ಹೊತ್ತಿನಲ್ಲಿ ಮಲಗುತ್ತಿದ್ದರೆ, ನೀವು ಕೋಣೆಯನ್ನು ಕಪ್ಪಾಗಿಸುವ ಪರದೆಗಳನ್ನು ಖರೀದಿಸಿ ಮಲಗುವುದು ಒಳ್ಳೆಯದು. ಇದು ಮೆಲಟೋನಿನ್ ಅನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ. ಇದರಿಂದ ನಿದ್ರೆ ಹಾಗೂ ಎಚ್ಚರವಾಗಿರುವ ದೇಹದ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗುವುದಿಲ್ಲ.
ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸಲೂ ಬೆಸ್ಟ್ ಮದ್ದು ಈ Sleep Talk, ಏನಿದು ಈ ಸಿಂಪಲ್ ಟೆಕ್ನಿಕ್?
ನೀವು ಮಲಗುವ ಸಮಯದಲ್ಲಿ ವಿವಿಧ ಬೆಳಕಿನ ಮೂಲಗಳನ್ನು ಬಳಸುವುದನ್ನು ತಪ್ಪಿಸಿ. ಲೈಟ್, ಮೊಬೈಲ್ ಯಾವುದನ್ನೂ ಬಳಸದಿರಿ. ನಮ್ಮ ಮೆದುಳನ್ನು ಉತ್ತೇಜಿಸುವ ಚಟುವಟಿಕೆಗಳನ್ನು ತಪ್ಪಿಸುವುದರಿಂದ ದೇಹವು ಮಲಗುವ ವೇಳೆಗೆ ಸರಿಯಾಗಿ ನಿದ್ರೆಗಾಗಿ ತಯಾರಿಯನ್ನು ಪ್ರಾರಂಭಿಸಬಹುದು. ಮಲಗುವ ಕನಿಷ್ಠ ಎರಡು ನಾಲ್ಕು ಗಂಟೆಗಳ ಮೊದಲು ದೊಡ್ಡ ಊಟ, ಕೆಫೀನ್ ಮತ್ತು ಅಲ್ಕೋಹಾಲ್ ಅನ್ನು ತಪ್ಪಿಸಿ.