ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನರಲ್ಲಿ ಹೆಚ್ಚಾಗಿದ್ಯಾ ಹಾರ್ಟ್‌ಅಟ್ಯಾಕ್‌?

Published : Jul 22, 2023, 09:04 AM IST
ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನರಲ್ಲಿ ಹೆಚ್ಚಾಗಿದ್ಯಾ ಹಾರ್ಟ್‌ಅಟ್ಯಾಕ್‌?

ಸಾರಾಂಶ

ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನರಲ್ಲಿ ಹೆಚ್ಚಾದ ಹೃದಯಾಘಾತ ಪ್ರಕರಣಗಳಿಗೆ ಕಾರಣವೇನು ಎಂಬುದರ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನರಲ್ಲಿ ಹೆಚ್ಚಾದ ಹೃದಯಾಘಾತ ಪ್ರಕರಣಗಳಿಗೆ ಕಾರಣವೇನು ಎಂಬುದರ ಕುರಿತಾಗಿ ಸಾಕಾಗುವಷ್ಟುಸಾಕ್ಷಿಗಳು ದೊರಕಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ, ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸಚ್‌ರ್‍ ಈ ಹೃದಯಾಘಾತಗಳಿಗೆ (Heartattack) ಕಾರಣವೇನು ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತಿದೆ. 18ರಿಂದ 40 ವರ್ಷ ವಯೋಮಾನದವರಲ್ಲಿ ಹೆಚ್ಚಾಗಿರುವ ಹೃದಯಾಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ 40 ಆಸ್ಪತ್ರೆಗಳಲ್ಲಿ (Hospital) ಅಧ್ಯಯನ ನಡೆಯುತ್ತಿದೆ. ಅಲ್ಲದೇ ಈ ರೀತಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಅಧ್ಯಯನ (Study) ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಮ್‌ನಲ್ಲಿ ಹಾರ್ಟ್‌ಅಟ್ಯಾಕ್‌ನಿಂದ ಯುವಕ ಸಾವು; ವರ್ಕೌಟ್​​​ ಮಾಡುವಾಗ್ಲೇ ಯಾಕೆ ಹೀಗಾಗುತ್ತೆ?

ಅಲ್ಲದೇ ದೇಶದಲ್ಲಿ ಎನ್‌ಪಿ-ಎನ್‌ಸಿಡಿ ಅಡಿಯಲ್ಲಿ 724 ಕ್ಲಿನಿಕ್‌ಗಳು, 210 ಕಾರ್ಡಿಯಾಕ್‌ ಕೇರ್‌ ಯುನಿಟ್‌ಗಳು, 326 ಜಿಲ್ಲಾ ಡೇ ಕೇರ್‌ ಸೆಂಟರ್‌ಗಳು ಮತ್ತು 6,110 ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು. ಈ ನಡುವೆ, ದೇಶದಲ್ಲಿ ಶುಕ್ರವಾರ 109 ಕೋವಿಡ್‌ ಕೇಸು ದಾಖಲಾಗಿವೆ. ಯಾರೂ ಸಾವನ್ನಪ್ಪಿಲ್ಲ (Death). ಸಕ್ರಿಯ ಪ್ರಕರಣ 1460ಕ್ಕೆ ಇಳಿದಿವೆ.

ಕೋವಿಡ್ ಸೋಂಕಿಗೂ, ಹಾರ್ಟ್‌ಅಟ್ಯಾಕ್‌ಗೂ ಸಂಬಂಧವಿದ್ಯಾ?
ಕೋವಿಡ್‌ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್‌ ಹೆಚ್ಚಾಗ್ತಿದೆ ಅನ್ನೋ ಮಾತು ಈ ಹಿಂದೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಇನ್ನು ಕೆಲವರು ಕೊರೋನಾ ಲಸಿಕೆಯನ್ನು ಹಾಕಿಸಿಕೊಂಡ ನಂತರ ಹೃದಯಾಘಾತ ಹೆಚ್ಚಾಗ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇದರ ಅಸಲಿಯತ್ತೇನು? ಕೋವಿಡ್‌ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್‌ ಹೆಚ್ಚಾಗ್ತಿದೆ ಅನ್ನೋ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದರು. 

ಹೃದಯಾಘಾತಕ್ಕೂ ಮೊದಲು ಚರ್ಮದಲ್ಲಿ ಹೀಗೆಲ್ಲಾ ಬದಲಾವಣೆಯಾಗುತ್ತೆ, ಗಮನಿಸ್ಕೊಳ್ಳಿ

ಯುವ ಮತ್ತು ಆರೋಗ್ಯವಂತ ಜನರಲ್ಲಿಯೂ ಸಹ ಹೆಚ್ಚುತ್ತಿರುವ ಹೃದಯಾಘಾತದ ಬಗ್ಗೆ ಮಾತನಾಡಿದ ಸಚಿವರು, ಆರೋಗ್ಯ ಸಚಿವಾಲಯವು (Health ministry) ಕೋವಿಡ್‌ ಮತ್ತು ಹೆಚ್ಚುತ್ತಿರುವ ಹೃದಯಾಘಾತದ ಮಧ್ಯೆಯಿರುವ ಸಂಭವನೀಯ ಸಂಬಂಧವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. ಕೋವಿಡ್‌ಗೆ ತುತ್ತಾಗಿದ್ದ ಯುವಜನರಲ್ಲಿ ಇತ್ತೀಚಿನ ಹೃದಯಾಘಾತಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸರ್ಕಾರವು ಸಂಶೋಧನೆಯನ್ನು ಮಾಡುತ್ತಿದೆ. ಮತ್ತು ಎರಡು ಮೂರು ತಿಂಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ' ಎಂದು ಅವರು ಹೇಳಿದ್ದರು.

'ದಿಢೀರ್ ಹೃದಯಾಘಾತದ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಹಲವಾರು ಯುವ ಕಲಾವಿದರು, ಕ್ರೀಡಾಪಟುಗಳು,  ಪ್ರದರ್ಶನ ಮಾಡುವಾಗ ವೇದಿಕೆಯಲ್ಲೇ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಇಂಥಾ ಘಟನೆಗಳು ಹಲವಾರು ಸ್ಥಳಗಳಿಂದ ವರದಿಯಾಗಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕಾಗಿದೆ" ಎಂದು ಅವರು ಹೇಳಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?