Brain Health: ತೂಕ ಹೆಚ್ಚಿದರೆ ಮೆದುಳಿನ ಆರೋಗ್ಯಕ್ಕೂ ತೊಂದರೆ!

By Suvarna News  |  First Published Jul 22, 2023, 3:39 PM IST

ಜುಲೈ 22ರಂದು ವಿಶ್ವ ಮಿದುಳು ದಿನ ಆಚರಿಸಲಾಗುತ್ತದೆ. ನರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ. ಕೆಲವು ಆರೋಗ್ಯಕರ ಅಭ್ಯಾಸಗಳಿಂದ ಮಿದುಳನ್ನು ಚೆನ್ನಾಗಿಟ್ಟುಕೊಳ್ಳಲು ಸಾಧ್ಯ. ಅವುಗಳನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅನಿವಾರ್ಯವೂ ಹೌದು.
 


ಇಂದು ವಿಶ್ವ ಮಿದುಳು ದಿನವನ್ನು ಆಚರಿಸಲಾಗುತ್ತಿದೆ. ಮಿದುಳಿನ ಆರೋಗ್ಯದ ಕುರಿತು ಅರಿವು ಮೂಡಿಸುವುದು, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಗಮನ ಸೆಳೆಯುವುದು ಇದರ ಹಿಂದಿನ ಉದ್ದೇಶ. ಈ ಬಾರಿಯ ಥೀಮ್‌, ಲೀವ್‌ ನೋ ಒನ್‌ ಬಿಹೈಂಡ್.‌ ಅಂದರೆ, ಯಾರನ್ನೂ ಹಿಂದುಳಿಯಲು ಬಿಡಬಾರದು. ನರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ, ಸೂಕ್ತ ಚಿಕಿತ್ಸೆ ಹಾಗೂ ಉತ್ತಮ ಜೀವನಶೈಲಿಯ ಮೂಲಕ ಎಲ್ಲರ ಬದುಕನ್ನು ಹಸನುಗೊಳಿಸುವುದು ಇದರ ಆಶಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾಕಷ್ಟು ಜನ ಆದ್ಯತೆ ನೀಡುತ್ತಿದ್ದಾರೆ. ಡೆಮೆನ್ಷಿಯಾ ಸೇರಿದಂತೆ ಮಿದುಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಉತ್ತಮ ಜೀವನಶೈಲಿಯ ಮೂಲಕ ಸೂಕ್ತವಾಗಿ ನಿರ್ವಹಣೆ ಮಾಡಬಹುದು ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅಮೇರಿಕನ್‌ ಅಕಾಡೆಮಿ ಆಫ್‌ ನ್ಯೂರಾಲಜಿ ಸಂಸ್ಥೆಯ ಅಧ್ಯಯನದ ಪ್ರಕಾರ, ಏಳು ಪ್ರಕಾರದ ಕಾರ್ಡಿಯೋವಾಸ್ಕ್ಯಲರ್‌ ಮತ್ತು ಮಿದುಳಿನ ಆರೋಗ್ಯಕ್ಕೆ ಸಂಬಂಧಿಸಿದ ಅಂಶಗಳು ಡೆಮೆನ್ಷಿಯಾಕ್ಕೆ ಕಾರಣವಾಗುತ್ತವೆ. ಇವೆಲ್ಲವೂ ಉತ್ತಮ ಜೀವನಶೈಲಿಗೆ ಸಂಬಂಧಿಸಿವೆ ಎನ್ನುವುದು ಪ್ರಮುಖ ಅಂಶ.

•    ಓದುವುದು (Reading)
ಓದುವ ಅಭ್ಯಾಸ ಉಳ್ಳವರಿಗೆ ಮಿದುಳಿಗೆ (Brain) ಸಂಬಂಧಿಸಿದ ಸಮಸ್ಯೆಗಳು (Problems) ಕಾಡುವುದು ಕಡಿಮೆ. ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮಿದುಳನ್ನು ಉತ್ತೇಜಿಸುವ (Stimulate) ಪ್ರಕ್ರಿಯೆ ಓದುವ ಸಮಯದಲ್ಲಿ ಉಂಟಾಗುತ್ತದೆ. 

Tap to resize

Latest Videos

ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನರಲ್ಲಿ ಹೆಚ್ಚಾಗಿದ್ಯಾ ಹಾರ್ಟ್‌ಅಟ್ಯಾಕ್‌?

•    ಚಟುವಟಿಕೆಯಿಂದ (Activity) ಕೂಡಿರುವುದು
ದೈಹಿಕ ಚಟುವಟಿಕೆ ನಡೆಸುವವರಿಗೂ ಮಿದುಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಉಂಟಾಗುವುದು ಕಡಿಮೆ. ಮಿದುಳಿನ ಕೋಶಗಳು (Cells) ಎನರ್ಜಿಯಿಂದ (Energy) ಕೂಡಿರಲು ಹಾಗೂ ಆರೋಗ್ಯವಾಗಿರಲು ದೈಹಿಕ ಚಟುವಟಿಕೆ ನೆರವಾಗುತ್ತದೆ. ನಿಯಮಿತವಾಗಿ ವ್ಯಾಯಾಮ (Exercise) ಮಾಡುವುದರಿಂದ ಮಿದುಳಿಗೆ ಆಮ್ಲಜನಕದ (Oxigen) ಪೂರೈಕೆ ಹೆಚ್ಚುತ್ತದೆ. ಮಿದುಳಿನ ಕಾರ್ಯಕ್ಷಮತೆ ಉತ್ತಮವಾಗಲು ಇದರಿಂದ ಅನುಕೂಲವಾಗುತ್ತದೆ. ಚಿಂತನೆ ಶಕ್ತಿ ಕುಂದದಂತೆ ನೋಡಿಕೊಳ್ಳಲು ಸೂಕ್ತ ವ್ಯಾಯಾಮ ಅತ್ಯಗತ್ಯ.

•    ಆರೋಗ್ಯಕರ ಕೊಬ್ಬು (Healthy Fat)
ದೇಸಿ ತುಪ್ಪ (Ghee), ಬೆಣ್ಣೆ (Butter), ತೆಂಗಿನೆಣ್ಣೆಯಂತಹ ಆರೋಗ್ಯಕರ ಕೊಬ್ಬಿನ ಸೇವನೆಯಿಂದ ದೇಹದಲ್ಲಿ ಉತ್ತಮ ಕೊಬ್ಬಿನಂಶ ಹೆಚ್ಚುತ್ತದೆ. ಹಣ್ಣುಗಳು, ತರಕಾರಿ, ಪ್ರೊಟೀನ್‌, ಧಾನ್ಯಗಳಿಂದ ಮಿದುಳಿನ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಸಂಸ್ಕರಿತ ಆಹಾರ (Processed Food), ಸಕ್ಕರೆಯುಕ್ತ ಪಾನೀಯಗಳು, ತಿಂಡಿಗಳಿಂದ ದೂರವಿರಬೇಕು. ಪ್ಯಾಕೆಟ್‌ ನಲ್ಲಿರುವ ತಿನಿಸುಗಳು ಅಪಾಯಕಾರಿಯಾಗಿದ್ದು, ದೇಹದಲ್ಲಿ ಕೆಟ್ಟ ಕೊಬ್ಬಿನ ಪ್ರಮಾಣ ಹೆಚ್ಚಿಸುತ್ತವೆ. ಇದರಿಂದ ಮಿದುಳಿಗೆ ಹಾನಿಯಾಗುತ್ತದೆ.

•    ತೂಕ ನಿರ್ವಹಣೆ (Weight)
ದೇಹದ ಎತ್ತರಕ್ಕೆ ಎಷ್ಟು ಅಗತ್ಯವೋ ಅಷ್ಟು ತೂಕ ಹೊಂದಿರುವುದು ಅತಿ ಉತ್ತಮ. ಹೆಚ್ಚು ತೂಕ ಹೊಂದಿರುವುದು ಬೊಜ್ಜು (Obesity) ಸಮಸ್ಯೆಗೆ ಕಾರಣವಾಗಬಲ್ಲದು. ಬೊಜ್ಜಿನ ಸಮಸ್ಯೆ ಉಂಟಾದಾಗ ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತವೆ. ಜತೆಗೆ, ಮಿದುಳಿನ ಸಮಸ್ಯೆಗಳೂ ಉಂಟಾಗುತ್ತವೆ.

Health Tips: ಮಲೆನಾಡಲ್ಲಿ ಬೆಳಗ್ಗೆ ತುಪ್ಪ, ಬೆಲ್ಲದ ಜೊತೆ ತಿಂಡಿ ತಿನ್ನೋದ್ಯಾಕೆ ಗೊತ್ತಾ?

•    ಧೂಮಪಾನದಿಂದ (Smoking) ದೂರ
ಧೂಮಪಾನದಿಂದ ಆರೋಗ್ಯದ ಮೇಲೆ ಒಟ್ಟಾರೆ ಪ್ರಭಾವ ಉಂಟಾಗುತ್ತದೆ. ಎಲ್ಲ ರೀತಿಯಲ್ಲೂ ಇದು ಹಾನಿಕರ. ಮುಖ್ಯವಾಗಿ, ಮಿದುಳಿಗೂ ಇದರಿಂದ ತೀವ್ರವಾಗಿ ಘಾಸಿಯಾಗುತ್ತದೆ. ಧೂಮಪಾನದಿಂದ ಸ್ಟ್ರೋಕ್‌ (Stroke) ಮತ್ತು ಅಲ್ಜೀಮರ್ಸ್‌ ಸಮಸ್ಯೆ ಉಂಟಾಗುತ್ತದೆ.

•    ರಕ್ತದೊತ್ತಡ (Blood Pressure) ನಿರ್ವಹಣೆ
ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮಿದುಳಿಗೆ ಹಾನಿಯಾಗುತ್ತದೆ. ಮಿದುಳಿನ ಸೂಕ್ಷ್ಮ ರಕ್ತನಾಳಗಳು (Blood Vessels) ಇದರಿಂದ ಡ್ಯಾಮೇಜ್‌ ಆಗುತ್ತವೆ. ಇದರಿಂದ ವಿವೇಚನೆ ಶಕ್ತಿ ದೂರವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಸ್ಟ್ರೋಕ್‌ ಸಂಭವಿಸುತ್ತದೆ.  

•    ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ (Sugar Level)
ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿರುವುದು ಅತ್ಯಂತ ಅಪಾಯಕಾರಿ, ನಿರಂತರವಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದರೆ ಮಿದುಳು ಘಾಸಿಗೆ ತುತ್ತಾಗುತ್ತದೆ. ಸ್ಮರಣೆ (Memory) ನಾಶ, ಕಲಿಕಾ ಶಕ್ತಿ ಕುಂಠಿತವಾಗುವುದು, ಮೂಡಿನಲ್ಲಿ (Mood) ವ್ಯತ್ಯಾಸ, ತೂಕ ಏರಿಕೆ, ಹಾರ್ಮೋನ್‌ (Hormone) ಬದಲಾವಣೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಕೊನೆಗೆ, ಅಲ್ಜೀಮರ್ಸ್‌ ಕೂಡ ಉಂಟಾಗಬಹುದು.
 

click me!