ಹೆಚ್ಚಿನ ಗಂಡಸರಿಗೆ ಮುಖ್ಯವಾಗಿ ಕಾಡುವ ಸಮಸ್ಯೆ ಶೀಘ್ರಸ್ಖಲನ ಅಥವಾ ಪ್ರಿಮೆಚ್ಯೂರ್ ಎಜಾಕ್ಯುಲೇಶನ್. ಇದ್ಯಾಕೆ ಕಾಡುತ್ತೆ? ಇದನ್ನು ನಿಯಂತ್ರಿಸಿ ಹೆಚ್ಚು ಹೊತ್ತು ಸಂಭೋಗ ನಡೆಸುವ ಶಕ್ತಿ ಗಳಿಸಿಕೊಳ್ಳುವುದು ಹೇಗೆ?
ಪ್ರಶ್ನೆ: ನಾನು ಮೂವತ್ತು ವರ್ಷದ ಗಂಡಸು. ಮದುವೆಯಾಗಿ ಎರಡು ವರ್ಷಗಳಾಗಿವೆ. ಸೆಕ್ಸ್‌ನಲ್ಲಿ ಸಾಕಷ್ಟು ತೃಪ್ತಿ ಸಿಗುತ್ತಿಲ್ಲ. ವಾರಕ್ಕೆ ಮೂರು ಬಾರಿ ಮಿಲನ ನಡೆಸುತ್ತೇವೆ. ಆದರೆ ಎರಡೇ ನಿಮಿಷದಲ್ಲಿ ನನ್ನ ಶಕ್ತಿಯೆಲ್ಲ ಖರ್ಚಾಗಿಬಿಡುತ್ತದೆ. ನನ್ನ ಪತ್ನಿಗೆ ಸಾಕಷ್ಟು ಸೆಕ್ಸ್ ಸುಖ ಕೊಡೋಕೆ ನನ್ನಿಂದ ಸಾಧ್ಯವಾಗ್ತಿಲ್ಲ ಎಂಬ ಬೇಸರ ಕಾಡುತ್ತಿದೆ. ಹಾಗಂತ ನನಗೇನೂ ಇತರ ಆರೋಗ್ಯ ಸಮಸ್ಯೆಗಳಾಗಲೀ, ಬೊಜ್ಜಾಗಲೀ ಇಲ್ಲ. ಆರೋಗ್ಯವಾಗಿಯೇ ಇದ್ದೇನೆ. ಆದರೂ ಯಾಕೆ ಹೀಗೆ ಆಗುತ್ತಿದೆ, ಇದನ್ನು ತಡೆಯೋದು ಹೇಗೆ?
ಉತ್ತರ: ನಿಮ್ಮ ಈ ಸಮಸ್ಯೆ ಅಪರೂಪದ್ದೇನಲ್ಲ. ನೂರರಲ್ಲಿ ಎಂಬತ್ತರಷ್ಟು ಗಂಡಸರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂಬುದು ನಿಮಗೆ ಗೊತ್ತಾ! ಆದರೆ ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ಆದರೆ ಒಳಗೊಳಗೇ ನೋವು ಅನುಭವಿಸುತ್ತಾರೆ. ಇವರ ಸಂಗಾತಿಗಳು, ಇವರಿಗೆ ಆ ವಿಷಯದ ಬಗ್ಗೆ ಹೆಚ್ಚು ಒತ್ತಡ ಹಾಕುವುದಿಲ್ಲ. ಒತ್ತಿ ಹೇಳಿದರೆ ಎಲ್ಲಿ ಗಂಡನ ಪುರುಷತ್ವವನ್ನೇ ಅವಮಾನಿಸಿದಂತೆ ಆಗುವುದೋ ಎಂದು ಪತ್ನಿಯರು ಭಾವಿಸುತ್ತಾರೆ. ಹಾಗೇ ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ತಮ್ಮ ಪುರುಷತ್ವವೇ ಅವಮಾನಿತವಾದಂತೆ ಎಂಬ ಭಾವನೆ ಗಂಡಸರಲ್ಲೂ ಮೂಡುತ್ತದೆ. ಪುರುಷತ್ವಕ್ಕೂ ಇದಕ್ಕೂ ಸಂಬಂಧವಿಲ್ಲ. ಕೆಲವರು ತಾವು ಗಂಟೆಗಟ್ಟಲೆ ಸಂಭೋಗಿಸಬಲ್ಲೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಅದೂ ನಿಜವಲ್ಲ. ಒಂದು ನಿಮಿಷದಿಂದ ಐದು ನಿಮಿಷದವರೆಗೆ ಗಂಡಸಿನ ಸ್ಖಲನದ ಹಿಡಿತದ ರೇಂಜ್ ಬೇರೆ ಬೇರೆ ಇರಬಹುದು. ಅದರಲ್ಲಿ ತೃಪ್ತಿ ಪಟ್ಟುಕೊಳ್ಳಬೇಕು ಅಥವಾ ಆ ಅವಧಿಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇದಕ್ಕೆ ಒಂದು ವ್ಯಾಯಾಮವಿದೆ.
ಇದನ್ನು ಕೆಗೆಲ್ ಎಕ್ಸರ್‌ಸೈಜ್ ಅಥವಾ ಕೆಗೆಲ್ ವ್ಯಾಯಾಮ ಎಂದು ಕರೆಯುತ್ತಾರೆ. ಇದು ನಿಮ್ಮ ಪೆಲ್ವಿಕ್ ಭಾಗದಲ್ಲಿರುವ ಸ್ನಾಯುಗಳನ್ನು ನಿಯಂತ್ರಿಸುವ ಒಂದು ವ್ಯಾಯಾಮ. ಇದನ್ನು ಗುರುತಿಸುವುದು ಹೇಗೆ ಎಂಬುದು ಮೊದಲ ಪ್ರಶ್ನೆ. ನೀವು ಮೂತ್ರ ಮಾಡುವಾಗ ಗಮನಿಸಿ. ಮೂತ್ರ ಬರುತ್ತಿರುವಂತೆ ಒಮ್ಮೆಲೇ ಅದನ್ನು ತಡೆಹಿಡಿಯಿರಿ. ಹಾಗೆ ತಡೆಹಿಡಿದ ಸ್ನಾಯು ಯಾವುದು ಎಂಬುದನ್ನು ಗುರುತಿಸಿಕೊಳ್ಳಿ. ಅದೇ ನಿಮ್ಮ ಪೆಲ್ವಿಕ್ ಸ್ನಾಯು. ಈ ಸ್ನಾಯುವನ್ನೇ ನೀವು ವ್ಯಾಯಾಮಕ್ಕೆ ಒಳಪಡಿಸಬೇಕಿರುವುದು.
ವ್ಯಾಯಾಮ ಮಾಡುವ ಕ್ರಮ ಹೀಗೆ: ಸುಖವಾಗಿ ಕುಳಿತುಕೊಳ್ಳಿ ಅಥವಾ ಆರಾಮವಾಗಿ ಮಲಗಿಕೊಳ್ಳಿ. ನಂತರ ಪೆಲ್ವಿಕ್ ಸ್ನಾಯುಗಳನ್ನು ಬಿಗಿಹಿಡಿಯಿರಿ. ಐದು ಸಕೆಂಡ್ ಕಾಲ ಬಿಗಿಹಿಡಿಯಿರಿ. ನಂತರ ಐದು ಸೆಕೆಂಡ್ ಕಾಲ ಹಗುರ ಬಿಡಿ. ಪುನಘ ಐದು ಸೆಕೆಂಡ್ ಕಾಲ ಬಿಗಿಹಿಡಿಯಿರಿ. ಹೀಗೆ ಐದು ಬಾರಿ ಮಾಡಿ. ಮೊದಲು ದಿನಕ್ಕೆ ಐದು ಬಾರಿ, ಪ್ರತಿಸಲ ಐದು ಸಲದಂತೆ ಮಾಡಿ. ಇದು ಆರಂಭದಲ್ಲಿ ವ್ಯಾಯಾಮ ಮಾಡುವ ಕ್ರಮ. ಆರಂಭದಲ್ಲಿ ಐದು ಸೆಕೆಂಡ್ ಸಾಧ್ಯವಾಗದಿದ್ದರೆ ಮೂರು ಸೆಕೆಂಡ್ ಕೂಡ ಮಾಡಬಹುದು. ಇದನ್ನು ನೀವು ಕಚೇರಿಯಲ್ಲಿ ಕುಳಿತಿದ್ದಂತೆ, ಇನ್ಯಾರ ಗಮನಕ್ಕೂ ಬರದಂತೆ ಕೂಡ ಮಾಡಬಹುದು. ಹಾಗೇ ಹಿಡಿತ ಸಿಕ್ಕಿದ ಬಳಿಕ, ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು.
ಲಾಕ್‌ಡೌನ್ ವೇಳೆ ಕೊರೋನಾ ಸೆಕ್ಸ್‌ಗೆ ಭಾರಿ ಬೇಡಿಕೆ!
ಇದು ಒಂದು ಸರಳವಾದ ವ್ಯಾಯಾಮ. ಇದರಲ್ಲಿ ಕೈಕಾಲುಗಳನ್ನು ಉಪಯೋಗಿಸಿ, ಪೃಷ್ಣಭಾಗವನ್ನು ಮೇಲಕ್ಕೆತ್ತಿ, ಕೈಕಾಲುಗಳ ಆಧಾರದಿಂದ ಮಾಡುವ ಕೆಗೆಲ್ ವ್ಯಾಯಾಮ ಕೂಡ ಇದೆ. ಹಾಗೇ ಇತರ ವೈವಿಧ್ಯಗಳಿವೆ. ಇವುಗಳ್ನೆಲ್ಲ ಕಲಿತರೆ ಒಳ್ಳೆಯದು. ಆದರೆ ಪ್ರತಿನಿತ್ಯ ಬಿಡದೆ ಮಾಡಬೇಕು. ಆದರೆ ಶೀಘ್ರಸ್ಖಲನ ನಿವಾರಿಸಿಕೊಳ್ಳಲು ಮೇಲೆ ಹೇಳಿದ ವ್ಯಾಯಾಮವನ್ನು ಮಾಡಿದರೆ ಸಾಕು. ಆದರೆ ಒಮ್ಮೆ ಆರಂಭಿಸಿದರೆ ಅದರ ದೃಢತೆಯ ಫಲ ಸರಿಯಾಗಿ ಕಾಣಿಸಲು ಕನಿಷ್ಠ ಎರಡು ತಿಂಗಳಾದರೂ ನಿರಂತರವಾಗಿ ವ್ಯಾಯಾಮ ಮಾಡಬೇಕು. ಅದರಿಂದ ನಿಮ್ಮ ಪೆಲ್ವಿಕ್ ಸ್ನಾಯುಗಳ ಬಲವಾಗುತ್ತದೆ. ಒಮ್ಮೆ ನಿಮಗೆ ಉದ್ರೇಕ ಉಂಟಾದರೆ, ವೀರ್ಯಸ್ಖಲನ ಆಗದಂತೆ ಬಹುಕಾಲ ತಡೆಹಿಡಿಯಲು ಅದರಿಂದ ಸಾಧ್ಯವಾಗುತ್ತದೆ. ಸಂಗಾತಿಗೂ ಹೆಚ್ಚು ಕಾಲ ಸುಖ ನೀಡಲು ಸಾಧ್ಯವಾಗಬಹುದು.
ಈ ಅಭ್ಯಾಸಗಳಿಗೆ ಬೈ, ಸೆಕ್ಸ್‌ಗೆ ಹಾಯ್ ! ಏನಿದು ಟ್ರೆಂಡ್!
ಆದರೆ ಒಂದು ಮಾತು ತಿಳಿದಿರಲಿ: ಉತ್ತಮ ಆರೋಗ್ಯ ಹಾಗೂ ಸಾಕಷ್ಟು ಮುನ್ನಲಿವು ಅರ್ಥಾತ್ ಫೋರ್ ಪ್ಲೇಗಳು ನಿಮ್ಮ ಸಂಭೋಗದ ಗುಣಮಟ್ಟವನ್ನು ನಿರ್ಧರಿಸುತ್ತವೆ. ನೀವು ಎಷ್ಟು ಹೊತ್ತು ಸ್ಖಲನ ತಡೆಹಿಡಿಯಬಲ್ಲಿರಿ ಎಂಬುದಕ್ಕಿಂತಲೂ ನಿಮ್ಮ ಹಾಗೂ ಸಂಗಾತಿಯ ಮೂಡ್ ಎಷ್ಟು ಚೆನ್ನಾಗಿದೆ ಎಂಬುದೇ ಸಂತೃಪ್ತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
#FeelFree: ಚೆಂದುಳ್ಳಿ ಹೆಂಡ್ತಿ ಇದ್ರೂ ಗಂಡ ಹಸ್ತ ಮೈಥುನ ಮಾಡ್ಕೋತಾನಲ