ಕೊರೋನಾತಂಕ ಮಧ್ಯೆ ಲೈಂಗಿಕ ಕ್ರಿಯೆ ಮಾಡುವವರಿಗೆ ವಿಜ್ಞಾನಿಗಳ ಮಹತ್ವದ ಸಲಹೆ!

By Kannadaprabha News  |  First Published Jun 6, 2020, 8:57 AM IST

ಲೈಂಗಿಕ ಕ್ರಿಯೆ ವೇಳೆ ಮಾಸ್ಕ್‌ ಧರಿಸಲು ವಿಜ್ಞಾನಿಗಳ ಸಲಹೆ| ಅಮೆರಿಕದ ಹಾರ್ವರ್ಡ್‌ ವಿವಿ ಅಧ್ಯಯನ


ಲಂಡನ್‌(ಜೂ.06): ಕೊರೋನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಸಂಗಾತಿಗಳು ಮಾಸ್ಕ್‌ ಧರಿಸಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಅಮೆರಿಕದ ಹಾರ್ವರ್ಡ್‌ ವಿವಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಶಿಫಾರಸು ಮಾಡಲಾಗಿದೆ. ಸಂಶೋಧಕರು ಈ ಕುರಿತ ಪ್ರಬಂಧವನ್ನು ಅನಲ್ಸ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ಡಿಫರೆಂಟಾಗಿ ಹಸ್ತಮೈಥುನ ಮಾಡೋಕೆ ಹೋಗಿ ಜಾರ್ಜರ್ ಕೇಬಲ್ ಒಳಗೆ ಸೇರಿಸ್ಕೊಂಡ!

Tap to resize

Latest Videos

‘ಕೊರೋನಾ ಸಮಯದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆಯ ವಿಧಾನಗಳು’ ಎಂಬ ಪ್ರಬಂಧದಲ್ಲಿ ತಜ್ಞರು ಕೊರೋನಾ ತಡೆಯಲು ಹಲವಾರು ಶಿಫಾರಸುಗಳನ್ನು ಮಾಡಿದ್ದಾರೆ. ‘ಸೆಕ್ಸ್‌ ನಡೆಸದೇ ಇರುವುದು ಅತ್ಯಂತ ಸುರಕ್ಷಿತ. ನಂತರದ ಸುರಕ್ಷಿತ ವಿಧಾನ ಹಸ್ತಮೈಥುನ. ಮೂರನೇ ವಿಧಾನವೆಂದರೆ ಡಿಜಿಟಲ್‌ ಲೈಂಗಿಕ ಕ್ರಿಯೆ. ನಾಲ್ಕನೆಯದು, ನಿಮ್ಮದೇ ಸಂಗಾತಿಯ ಜೊತೆಗೆ ಮಾತ್ರ ಲೈಂಗಿಕ ಕ್ರಿಯೆ ನಡೆಸುವುದು. ಆದರೆ, ಈ ವೇಳೆ ಮಾಸ್ಕ್‌ ಧರಿಸಿರಬೇಕು. ಮುತ್ತು ಕೊಡಬಾರದು. ಕಟ್ಟಕಡೆಯ ಆಯ್ಕೆಯೆಂದರೆ ಮನೆಯಿಂದ ಹೊರಗಿನವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು’ ಎಂದು ವಿವರಿಸಿದ್ದಾರೆ.

ಇತ್ತ ಬ್ರಿಟನ್ನಿನಲ್ಲಿ ಕೆಲ ದಿನಗಳ ಹಿಂದೆ ಬೇರೆ ಬೇರೆ ಮನೆಯಲ್ಲಿ ವಾಸಿಸುವ ಸಂಗಾತಿಗಳು ಲೈಂಗಿಕ ಕ್ರಿಯೆ ನಡೆಸುವುದು ಅಥವಾ ಒಂದೇ ಮನೆಯಲ್ಲಿ ರಾತ್ರಿ ಕಳೆಯುವುದನ್ನು ನಿಷೇಧಿಸಿ ಕಾನೂನು ಜಾರಿಗೊಳಿಸಲಾಗಿದೆ.

click me!