ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚು!

By Suvarna News  |  First Published Jun 7, 2020, 2:15 PM IST

ಕ್ಯಾಲ್ಸಿಯಂ ಮಾತ್ರೆಗಳ ಬಳಕೆ ಹೆಚ್ಚಾಗುತ್ತಿದೆ. ಇದು ಬಹಳ ಆತಂಕಕಾರಿ. ಕ್ಯಾಲ್ಸಿಯಂ ಮಾತ್ರೆಗಳನ್ನು ನಿತ್ಯವೂ ತಿನ್ನೋದರಿಂದ ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಆಗೋ ಸಾಧ್ಯತೆ ಇದೆ. ಇದರ ಬದಲು ಆಹಾರದ ಮೂಲಕವೇ ದೇಹಕ್ಕೆ ಬೇಕಾದಷ್ಟು ಕ್ಯಾಲ್ಸಿಯಂ ಒದಗಿಸಬಹುದು. ಆ ಆಹಾರಗಳು ಯಾವುವು?


ಮಧುಸೂದನ್ ಮಧ್ಯ ವಯಸ್ಕ. ಮಧ್ಯಮ ವರ್ಗದ ಗ್ರಹಸ್ಥ. ಕಂಪೆನಿಯೊಂದರಲ್ಲಿ‌ ಕೆಲಸ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ಅವರಿಗೆ ಹೃದಯದ ರಕ್ತನಾಳಗಳಲ್ಲಿ‌‌ ಬ್ಲಾಕೇಜ್ ಆಗಿ ಲಘು ಹೃದಯಾಘಾತವಾಯಿತು. ಇವರ ಪತ್ನಿ ಮನೆಯ ಸಮಾಚಾರವನ್ನೆಷ್ಟೇ ನಿಭಾಯಿಸುವ ಗೃಹಿಣಿ. ಅವರು ಉದ್ಯೋಗ ಕ್ಕೆ ಹೋಗೋದಿಲ್ಲ. ಇಬ್ಬರು ಮಕ್ಕಳು ಓದುತ್ತಿದ್ದಾರೆ. ಮಧುಸೂದನ್ ಅವರ ಆದಾಯದಿಂದಲೇ ಕುಟುಂಬ ನಿರ್ವಹಣೆಯಾಗಬೇಕು. ಆಗಾಗ ಫ್ರೆಂಡ್ಸ್ ಜೊತೆಗೆ ಪಾರ್ಟಿ ಮಾಡೋದು ಬಿಟ್ಟರೆ ಹೇಳಿಕೊಳ್ಳುವಂಥಾ ದುಶ್ಚಟಗಳೇನೂ ಇವರಿಗಿಲ್ಲ. ಹೊರಗಿನ ಆಹಾರ ತಿನ್ನೋದು ಕಡಿಮೆ. ಮನೆ ಊಟ ಮಾಡೋದೇ ಜಾಸ್ತಿ. ತಮಗೆ ಹೃದಯಾಘಾತ ಆದಮೇಲೆ ಮಧುಸೂದನ ಅವರಿಗೆ ಚಿಂತೆಗಿಟ್ಟುಕೊಂಡಿತು. ಅವರ ಬಳಿ ಹೇಳಿಕೊಳ್ಳುವಂಥಾ  ತನಗೇನಾದರೂ ಹೆಚ್ಚು ಕಮ್ಮಿ ಆದರೆ ನಾಳೆ ಹೆಂಡತಿ ಮಕ್ಕಳ ಕತೆಯೇನು ಅನ್ನೋ ಚಿಂತೆ. 

ಕ್ಯಾಲ್ಸಿಯಂ ಹೆಚ್ಚಿರೋ ಹಾಲು ಕುಡಿಯೋಕೆ ಬೇಜಾರಾದ್ರ ಹೀಗ್ ಮಾಡಿ

ಈ ಟೈಮ್ ನಲ್ಲೇ ಅವರು ತಮ್ಮ ಹೃದಯಾಘಾತಕ್ಕೆ ಕಾರಣ ಏನಿರಬಹುದು ಅಂತ ಯೋಚಿಸುತ್ತಿದ್ದರು. ದುಶ್ಚಟಗಳೇನೂ ಇಲ್ಲದ, ಹೊರಗಿನ ಆಹಾರವನ್ನೂ ತಿನ್ನದ, ಬಿಪಿ, ಶುಗರ್ ಸಮಸ್ಯೆ ಯೂ ಇಲ್ಲದ ಆರೋಗ್ಯವಂತ ತಾನು ಅಂದುಕೊಂಡಿದ್ದೆನಲ್ಲಾ, ಇದು ಯಾಕಾಯ್ತು ಅಂತ ಬಹಳ ಚಿಂತಿಸಿದರು. ಆಪ್ತರನ್ನು ವಿಚಾರಿಸಿದರು. ಅವರಲ್ಲೊಬ್ಬ ಆಹಾರತಜ್ಞನೂ ಇದ್ದ. ಆತ ಇವರ ಆಹಾರಕ್ರಮದ ಬಗೆಗೆಲ್ಲ ತಿಳಿದುಕೊಂಡು ಕ್ಯಾಲ್ಸಿಯಂ ಟ್ಯಾಬ್ಲೆಟ್ ಏನಾದ್ರೂ ತಿನ್ನುತ್ತಿದ್ದೀರಾ ಅಂತ ವಿಚಾರಿಸಿದರು. 

ಮಧುಸೂದನ್ ಆರೋಗ್ಯದ ಬಗ್ಗೆ ಬಹಳ ಕಾನ್ಶಿಯಸ್. ವಯಸ್ಸು ನಲವತ್ತೈದು ದಾಟುತ್ತಿದ್ದ ಹಾಗೆ ಮುಂದೆ ಕೈ ಕಾಲಿನ‌ ಮೂಳೆ ಸಮಸ್ಯೆ ಬರಬಾರದು ಅನ್ನುವ‌ ಮುಂದಾಲೋಚನೆಯಲ್ಲಿ ಕಳೆದೆರಡು ವರ್ಷಗಳಿಂದ ದಿನವೂ ಕ್ಯಾಲ್ಸಿಯಂ ಮಾತ್ರೆ ತಿನ್ನುತ್ತಿದ್ದರು. ನನ್ನನ್ನು ಇನ್ನಷ್ಟು ಆರೋಗ್ಯವಂತನನ್ನಾಗಿ‌ ಮಾಡುವ ಕ್ಯಾಲ್ಸಿಯಂ ಟ್ಯಾಬ್ಲೆಟ್ ಬಗ್ಗೆ ಈ‌ ಗೆಳೆಯನಿಗ್ಯಾಕೆ ಅನುಮಾನ ಅನ್ನುವುದು ಗೊತ್ತಾಗಲಿಲ್ಲ. ಆದರೂ ವಿವರ ಹೇಳಿದರು. ಆಗ ಗೆಳೆಯ ಹೇಳಿದ - 'ನಿನಗೆ ಮೋಸ್ಟ್ ಲೀ ಕ್ಯಾಲ್ಸಿಫಿಕೇಶನ್ ಆಗಿರಬೇಕು. ಕ್ಯಾಲ್ಸಿಯಂ ಟ್ಯಾಬ್ಲೆಟ್ ರೆಗ್ಯುಲರ್ ಆಗಿ‌ ತಿನ್ತಾ ಇದ್ರೂ‌ ಕೆಲವೊಮ್ಮೆ ಕ್ಯಾಲ್ಸಿಯಂ ನ ಅಂಶ ಹೃದಯಕ್ಕೆ ಹೋಗುವ ರಕ್ತವನ್ನ ಬ್ಲಾಕ್‌ ‌ಮಾಡಿ ಹೃದಯಾಘಾತ ಆಗೋ ಹಾಗೆ ಮಾಡಬಲ್ಲದು. ವೈದ್ಯರ advice ಇಲ್ಲದೇ ನೀನು ಕ್ಯಾಲ್ಸಿಯಂ ಮಾತ್ರೆ ತಿಂದಿದ್ದು ತಪ್ಪು ಅಂತ ವಿವರಿಸಿದ. ಆ ಆಹಾರ ತಜ್ಞ ಹೇಳುವ ಪ್ರಕಾರ ನಮ್ಮ ಊಟದಲ್ಲೇ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಸಾಕಷ್ಟು ಕ್ಯಾಲ್ಸಿಯಂ ದೇಹಕ್ಕೆ ಹೋಗುತ್ತೆ. 

Tap to resize

Latest Videos

undefined

ರಾಗಿಯ ಕ್ಯಾಲ್ಸಿಯಂನ ಕಣಜ
ಪಾಲಿಶ್ ಮಾಡಿರೋ ಅಕ್ಕಿ ಸೇವನೆಯಿಂದ ರೋಗ, ಮಧುಮೇಹ ಹೆಚ್ಚಾಗಬಹುದು. ಪಾಲಿಶ್ ಮಾಡದ ಅಕ್ಕಿ, ರಾಗಿ ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಸಿಗುತ್ತೆ. ವಾರಕ್ಕೆರಡು ಸಲವಾದರೂ ರಾಗಿ‌ಮುದ್ದೆ, ರಾಗಿ ಗಂಜಿ ಅಥವಾ ಅಂಬಲಿ ಅಭ್ಯಾಸ ಮಾಡಿ. 

ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು! ...
ಕರಿಬೇವು
ನಾವು ಊಟ ಅಥವಾ ತಿಂಡಿ‌ ಮಾಡುವಾಗ ಅದರಲ್ಲಿ ಸಿಗುವ ಕರಿಬೇವನ್ನು ತೆಗೆದು ಪಕ್ಕಕ್ಕಿಡುತ್ತೇವೆ. ಆದರೆ ಕರಿಬೇವಿನಲ್ಲಿ ಅಧಿಕ ಕ್ಯಾಲ್ಸಿಯಂ ಇದೆ. ಇದನ್ನು ನಿತ್ಯವೂ ಸೇವಿಸುತ್ತಿದ್ದರೆ ಕ್ಯಾಲ್ಸಿಯಂ ಡಿಫೀಷಿಯನ್ಸಿ ಬರೋದಿಲ್ಲ. ತಲೆಕೂದಲ ಬೆಳವಣಿಗೆಗೂ ಉತ್ತಮ.

ವೀಳ್ಯದೆಲೆ
ಹಿಂದೆ ಬಾಣಂತಿಯರಿಗೆ ಬಲವಂತವಾಗಿಯಾದರೂ ವೀಳ್ಯದೆಲೆ ಸುಣ್ಣ ತಿನ್ನಿಸುತ್ತಿದ್ದರು. ಮಗುವಿಗೆ ಹಾಲೂಡುವ ಕಾರಣ ಕ್ಯಾಲ್ಸಿಯಂ ಕೊರತೆಯಾಗದೇ ಇರಲಿ ಎನ್ನುವುದು ಕಾರಣ. ಊಟದ ಬಳಿಕ ವೀಳ್ಯದೆಲೆ ತಿನ್ನುತ್ತಾರೆ. ಇದು ಕ್ಯಾಲ್ಸಿಯಂ ಗೆ ಅತ್ಯುತ್ತಮ. 

ಹುಡುಗರಿಗೆ ಅಕ್ಕನ ವಯಸ್ಸಿನವಳೆಂದರೆ ಆಕರ್ಷಣೆ, ಯಾಕಿರಬಹುದು? ...

ಹಾಲು, ಮೊಸರು
ನಿತ್ಯವೂ ಒಂದು ಲೋಟ ಹಾಲು ಕುಡಿಯುವವರಿಗೆ ಕ್ಯಾಲ್ಸಿಯಂ ಸಮಸ್ಯೆ ಆಗಲ್ಲ. ಮೊಸರು ತಿನ್ನುತ್ತಿದ್ದರೂ ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಹೋಗುತ್ತದೆ. 

ಹಸಿರು ತರಕಾರಿ
ನಾರಿನಂಶ ಇರುವ ಹಸಿರು ತರಕಾರಿ ಜೀರ್ಣಕ್ರಿಯೆ ಗೂ ಒಳ್ಳೆಯದು. ಅಧಿಕ‌ ಕಬ್ಬಿಣದ ಅಂಶವೂ ಇದರಲ್ಲಿದೆ. 

ಆರೋಗ್ಯ ಕ್ಷೇತ್ರದ ಹೊಸ ಬೆಳೆವಣಿಗೆ ವರ್ಚುಯಲ್ ಕನ್ಸಲ್ಟೇಶನ್ ...


 

click me!