ಮನುಷ್ಯನ ಕಿವಿಯೊಳಗೆ ಮಾಂಸ ತಿನ್ನುವ ಹುಳುಗಳು ಪತ್ತೆಯಾದ ಭಯಾನಕ ಹಾಗೂ ಆಘಾತಕಾರಿ ಘಟನೆ ಪೋರ್ಚುಗಲ್‌ನಲ್ಲಿ ನಡೆದಿದೆ. ಕಿವಿ ನೋವೆಂದು ಆಸ್ಪತ್ರೆಗ ಬಂದ 64 ವರ್ಷದ ವೃದ್ಧನ ಕಿವಿಯನ್ನು ತಪಾಸಣೆ ನಡೆಸಿದ ವೈದ್ಯರು ಈ ಆಘಾತಕಾರಿ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಪೋರ್ಚುಗಲ್: ಮನುಷ್ಯನ ಕಿವಿಯೊಳಗೆ ಮಾಂಸ ತಿನ್ನುವ ಹುಳುಗಳು ಪತ್ತೆಯಾದ ಭಯಾನಕ ಹಾಗೂ ಆಘಾತಕಾರಿ ಘಟನೆ ಪೋರ್ಚುಗಲ್‌ನಲ್ಲಿ ನಡೆದಿದೆ. ಕಿವಿ ನೋವೆಂದು ಆಸ್ಪತ್ರೆಗ ಬಂದ 64 ವರ್ಷದ ವೃದ್ಧನ ಕಿವಿಯನ್ನು ತಪಾಸಣೆ ನಡೆಸಿದ ವೈದ್ಯರು ಈ ಆಘಾತಕಾರಿ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಿವಿನೋವು, ಕಿವಿಯಲ್ಲಿ ರಕ್ತ ಸ್ರಾವ ಹಾಗೂ ತುರಿಕೆ ಹಿನ್ನೆಲೆಯಲ್ಲಿ 64 ವರ್ಷದ ವೃದ್ಧರೊಬ್ಬರು ಆಸ್ಪತ್ರೆಗೆ ಹೋಗಿದ್ದು, ಈತನ ಕಿವಿ ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಬರಿಗೊಂಡಿದ್ದಾರೆ. ತಪಾಸಣೆ ನಡೆಸಿದಾಗ ವೃದ್ಧನ ಕಿವಿಯ ಒಳಗೆ ಮಾಂಸ ತಿನ್ನುವ ಹಲವು ಜೀವಂತ ಹುಳುಗಳು ಓಡಾಡುತ್ತಿದ್ದವು. ಇವು ಅಜ್ಜನ ಕಿವಿ ತಮಟೆಯನ್ನೇ ಬ್ಲಾಕ್ ಮಾಡಿದ್ದವು.
ಪೋರ್ಚುಗಲ್‌ನ ಪೆಡ್ರೊ ಹಿಸ್ಪನೊ ಆಸ್ಪತ್ರೆಯ ವೈದ್ಯರು ಈ ವಿಚಿತ್ರ ಪ್ರಕರಣವನ್ನು ನ್ಯೂ ಇಂಗ್ಲೆಂಡ್‌ನ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟಿಸಿದ್ದು, ಅನೇಕರನ್ನು ಈ ಘಟನೆ ಬೆಚ್ಚಿ ಬೀಳಿಸಿದೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಈ ವೃದ್ಧನನ್ನು ನಾಲ್ಕು ದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯಕೀಯ ಜರ್ನಲ್‌ನಲ್ಲಿ ತಿಳಿಸಿರುವಂತೆ, ದೈಹಿಕ ತಪಾಸಣೆ ವೇಳೆ ವೈದ್ಯರಿಗೆ ಈ ವೃದ್ಧನ ಕಿವಿಯಲ್ಲಿ ಅಸಂಖ್ಯ ಪ್ರಮಾಣದ ಹುಳುಗಳ ಮೊಟ್ಟೆಗಳು ಕಿವಿಯ ತಮಟೆಯನ್ನು ಬ್ಲಾಕ್ ಮಾಡಿರುವುದು ಕಂಡು ಬಂದಿದೆ.
undefined
ನಂತರ ವೈದ್ಯರು ಕಿವಿಗೆ ನೀರು ಬಿಟ್ಟು ವೃದ್ಧರ ಕಿವಿಯನ್ನು ಸ್ವಚ್ಛ ಮಾಡಿದ್ದಾರೆ. ಅಲ್ಲದೇ ಕಿವಿಗೆ ರೋಗ ನಿರೋಧಕ ಇಯರ್ ಡ್ರಾಪ್ (ear drops), ಬೋರಿಕ್ ಆಸಿಡ್ (boric acid solution) ಸೊಲ್ಯೂಷನ್ ನೀಡಿದ್ದಾರೆ. ಈ ಬಗ್ಗೆ ನ್ಯೂಸ್ ವೀಕ್‌ಗೆ ಮಾತನಾಡಿದ, ಈ ವೃದ್ಧರಿಗೆ ಚಿಕಿತ್ಸೆ ನೀಡಿದ ಓರ್ವ ವೈದ್ಯ ಕ್ಯಾಟರಿನಾ ರಾಟೋ ಪ್ರಕಾರ, ಈ ವರದ್ಧನ ಕಿವಿಯಲ್ಲಿದ್ದ ಹುಳುಗಳ ಮೊಟ್ಟೆಗಳು ಸಿಲಿಂಡರ್ ಆಕಾರದಲ್ಲಿ ಇದ್ದು, ಬಿಳಿ ಹಳದಿ ಬಣ್ಣವನ್ನು ಹೊಂದಿದ್ದವು. ಈ ಹುಳುಗಳು ಕೊಕ್ಲಿಯೊಮಿಯಾ ಹೋಮಿನಿವೊರಾಕ್ಸ್ (Cochliomyia hominivorax species) ಎಂಬ ಹುಳುಗಳ ಜಾತಿಗಳೊಂದಿಗೆ ಹೊಂದಿಕೆಯಾಗುತ್ತವೆ.
ಅಲ್ಲದೇ ಈ ಕೊಕ್ಲಿಯೊಮಿಯಾ ಹೋಮಿನಿವೊರಾಕ್ಸ್, ಜಾತಿಯ ಹುಳುಗಳು ಸಾಮಾನ್ಯವಾಗಿ ಸ್ಕ್ರೈವ್ ವರ್ಮ್ ಪ್ಲೈ ಎಂದು ಕರೆಯಲ್ಪಡುವವು. ಇವು ಪರಾವಲಂಬಿಗಳಾಗಿದ್ದು, ಇವು ಬಿಸಿ ರಕ್ತದ ಪ್ರಾಣಿಗಳ ದೇಹದ ಭಾಗಗಳನ್ನು ತಿಂದು ಬದುಕುವವು. ಇವುಗಳಲ್ಲಿ ಹೆಣ್ಣು ಹುಳುಗಳು ಜೀವಂತ ಮಾಂಸದ ಮೇಲೆ 250 ರಿಂದ 500 ಮೊಟ್ಟೆಗಳನ್ನು ಇಡುವವು. ಸಾಮಾನ್ಯವಾಗಿ ಪ್ರಾಣಿಗಳ ದೇಹದಲ್ಲಿರುವ ಗಾಯಗಳನ್ನು ಗುರಿಯಾಗಿಸಿಕೊಳ್ಳುವವು. ಅಲ್ಲದೇ ಆ ಗಾಯವನ್ನು ಕೊರೆಯುತ್ತ ಸಾಗುವವು. ಇದೇ ಕಾರಣಕ್ಕೆ ಇವುಗಳನ್ನು ಸ್ಕ್ರಿವ್ ವರ್ಮ್ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಸಂದರ್ಭದಲ್ಲಿ ಪ್ರಾಣಿಗಳು ಸಾಯುವ ಹಂತ ತಲುಪವು. ಆದರೆ ಈಗ ಈ ಹುಳುಗಳಿಂದ ಆಸ್ಪತ್ರೆಗೆ ದಾಖಲಾದ ವೃದ್ಧ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
8 ತಿಂಗಳ ಮಗುವಿನ ಗಂಟಲಲಿತ್ತು ಬಾಟಲ್ ಮುಚ್ಚಳ: ಫೊರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ
ಮರಣೋತ್ತರ ಪರೀಕ್ಷೆ ಮಾಡಲು ಬಂದ ವೈದ್ಯೆಗೆ ಶಾಕ್... ಹೆದರಿ ಓಡಿದ ಡಾಕ್ಟರ್
ಅಬ್ಬಬ್ಬಾ..ವ್ಯಕ್ತಿಯ ಹೊಟ್ಟೆಯೊಳಗಿತ್ತು 10 ಕೆಜಿ ತೂಕದ ಬೃಹತ್ ಗೆಡ್ಡೆ !
ಅಬ್ಬಬ್ಬಾ..ಮಹಿಳೆ ನುಂಗಿದ್ದು ಬರೋಬ್ಬರಿ 55 ಬ್ಯಾಟರಿ, ಆಪರೇಷನ್ ಮಾಡಿದ ವೈದ್ಯರೇ ಸುಸ್ತು !