ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಏನೇನೋ ಮಾಡೋ ಮೊದಲು ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ!

By Suvarna News  |  First Published Aug 3, 2022, 3:50 PM IST

ನಮ್ಮ ಉತ್ತಮ ಆರೋಗ್ಯಕ್ಕೆ ಅಡಿಪಾಯ ಎಂದರೆ ನಮ್ಮ ದೈನಂದಿನ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಹಾಗಾದರೆ ಸ್ವಚ್ಛತೆಯೂ ಅದರ ಒಂದು ಭಾಗ ಎಂದಾಯಿತು. ಕೆಲವರು ಮಾತನಾಡುವಾಗ ಬಾಯಿಯಿಂದ ಹೊರಡುವ ದುರ್ವಾಸನೆಗೆ ಓಡಿ ಹೋಗಬೇಕು ಹಾಗಿರುತ್ತೆ. ಕಾರಣ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇರುವುದು. ಬಾಯಿ ಸರಿಯಾಗಿ ಇಟ್ಟುಕೊಳ್ಳದಿದ್ದರೆ ಬ್ಯಾಕ್ಟೀರಿಯಾಗಳು, ಸೂಕ್ಷಾö್ಮಣು ಜೀವಿಗಳು ಹೆಚ್ಚಾಗಿ ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಬಾಯಿ, ಹಲ್ಲು, ಒಸಡು, ನಾಲಿಗೆ ತೊಂದರೆಗಳು ಉಂಟಾಗಬಹುದು. ಹೀಗಾಗಬಾರದೆಂದರೆ ಮನೆಯಲ್ಲಿಯೇ ನಾವು ಮಾಡಬಹುದಾದ ಮನೆಮದ್ದುಗಳು ಇವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.


ನಮ್ಮ ದೇಹವು ಸಣ್ಣ ಸಣ್ಣ ಅಂಗಾAಗಗಳಿAದ ಕೂಡಿದೆ. ಅವುಗಳ ವಿಶಿಷ್ಟ ಕಾರ್ಯ ಮತ್ತು ಪಾತ್ರಗಳನ್ನು ಹೊಂದಿದ್ದು, ದೇಹದ ಇತರೆ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಹಾಗೆ ನಮ್ಮ ಬಾಯಿ ದೇಹದ ಪ್ರಮುಖ ಭಾಗವಾಗಿದೆ. ಹಲ್ಲು, ತುಟಿ, ಒಸಡು, ನಾಲಿಗೆ ಇವು ಸಹ ಒಳಗೊಂಡಿದೆ. ಹಲ್ಲುಗಳು, ಒಸಡುಗಳಲ್ಲಿ ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರಬಹುದು. ಕಳಪೆ ಮೌಖಿಕ ನೈರ್ಮಲ್ಯವು ಮಧುಮೇಹ, ಹೃದ್ರೋಗ, ಮೂತ್ರಪಿಂಡದ ಆರೋಗ್ಯ, ಬುದ್ಧಿಮಾಂದ್ಯತೆ ಮತ್ತು ಇತರೆ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಮೌಖಿಕ ನೈರ್ಮಲ್ಯದ ಬಗ್ಗೆ ಗಂಭೀರ ಕಾಳಜಿ ಅಗತ್ಯವಿದೆ. 

ಉತ್ತಮ ಮೌಖಿಕ ನೈರ್ಮಲ್ಯ ಸಾಧಿಸುವುದು ಸುಲಭದ ಕೆಲಸವಲ್ಲ. ಇತ್ತೀಚಿನ ದಿನಗಳಲ್ಲಿ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗಿದೆ. ಪರಿಣಾಮವಾಗಿ, ಸೂಕ್ಷ್ಮತೆ, ಒಸಡು ನೋವು, ಕುಳಿಗಳು, ಜಿಂಗೈವಿಟಿಸ್, ಒಸಡುಗಳ ಊತ ಮುಂತಾದ ಬಾಯಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನಿಯಮಿತವಾಗಿ ದಂತ ಭೇಟಿ, ಹಲ್ಲುಜ್ಜುವುದು, ಫ್ಲಾಸ್, ಆಹಾರವನ್ನು ನಿಯಂತ್ರಿಸುವುದು ಇವು ಹಲ್ಲಿನ ಕಾಯಿಲೆಗಳನ್ನು ತಡೆಗಟ್ಟಲು, ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು. ಹಲ್ಲುಗಳನ್ನು ಆರೋಗ್ಯಕರ ಹಾಗೂ ಉತ್ತಮವಾಗಿಡಲು ಇಲ್ಲಿದೆ ಕೆಲ ಮನೆಮದ್ದುಗಳು. 

Tap to resize

Latest Videos

ಆಯುರ್ವೇದ
ಆಯುರ್ವೇದದಲ್ಲಿ ಬಾಯಿಯ ಆರೋಗ್ಯದ ಬಗ್ಗೆ ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ ಹಲವು ಔಷಧೀಯ ಸಸ್ಯಗಳ ಗಿಡಮೂಲಿಕೆಗಳ ಕಡ್ಡಿಗಳನ್ನು ಜಗಿಯುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಈ ಪದ್ಧತಿಯನ್ನು ಇಂದಿಗೂ ಗ್ರಾಮೀಣ ಭಾರತದ ಹೆಚ್ಚಿನ ಜನರು ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಬೇವು, ಲೈಕೋರೈಸ್, ಅರ್ಜುನ ಇವುಗಳ ಆರೋಗ್ಯಕರ ಕೊಂಬೆಗಳು ಹಲ್ಲುಗಳಿಗೆ ಉತ್ತಮ ಮೌಖಿಕ ಆರೈಕೆಯನ್ನು ಒದಗಿಸುತ್ತವೆ. ನಗರ ಪ್ರದೇಶದ ಜನರು ಮಾಡಬೇಕಾದ ಕೆಲಸಗಳು ಇಲ್ಲಿವೆ.
 

ಹಲ್ಲಿನ ಅಂದ ಕೆಡಿಸುವ 'ಪಾಚಿ'ಗೆ ಪರಿಹಾರ ನಮ್ಮಲ್ಲೇ ಇದೆ!

1. ನಾಲಿಗೆಯ ಮಡಿಕೆ ಮತ್ತು ಚಡಿಗಳಲ್ಲಿ ಸಂಗ್ರಹವಾದ ಅಮಾ(ಟಾಕ್ಸಿನ್) ಮತ್ತು ಆಹಾರದ ಅವಶೇಷಗಳನ್ನು ತೆಗೆದುಹಾಕಲಿಉ ಲೋಹದ ಟಂಗ್ ಕ್ಲೀನರ್ ಅಥವಾ ಸ್ಕಾçಪರ್‌ನಿಂದ ನಾಲಿಗೆಯನ್ನು ನಿಧಾನವಾಗಿ ಸ್ವಚ್ಛಗೊಳಿಸುವುದು.
2. ಹಲ್ಲುಜ್ಜಲು ಹರ್ಬಲ್ ಟೂತ್ ಪೌಡರ್ ಬಳಸಿ. ಬೇವು, ಇದ್ದಿಲು ಜೊತೆಗೆ ಮೌಖಿಕ ನೈರ್ಮಲ್ಯಕ್ಕಾಗಿ ಮಿಸ್ಟಾಕ್ ಅತ್ಯಂತ ಪ್ರಬಲವಾದ ಗಿಡಮೂಲಿಕೆಗಳಲ್ಲಿ ಒಂದಾಗಿದೆ.
3. ಆಯಿಲೆಎ ಪುಲ್ಲಿಂಗ್ ಎಂದರೆ ಸ್ವಲ್ಪ ಪ್ರಮಾಣದ ವರ್ಜಿನ್ ಎಣ್ಣೆಯನ್ನು ಬಾಯಿಯಲ್ಲಿ ೨-೬೫ ನಿಮಿಷಗಳ ಕಾಲ ಸ್ವಿಶ್ ಮಾಡುವ ವಿಧಾನವಾಗಿದೆ. ಹಲ್ಲು ಮತ್ತು ಒಸಡುಗಳಿಗೆ ಅಂಟಿಕೊAಡಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಸೂಕ್ಷಾö್ಮಣುಜೀವಿಗಳು ತೈಲ ಅಣುಗಳಿಗೆ ಅಂಟಿಕೊಳ್ಳುತ್ತವೆ. ಇದು ಪ್ಲೇಕ್ ರಷನೆಯನ್ನು ತಡೆಯುತ್ತದೆ ಮತ್ತು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.

ಮನೆಮದ್ದು
ಎಳ್ಳಿನ ಎಣ್ಣೆ

ಎಳ್ಳೆಣ್ಣೆ ವಿಧಾನವು ಆಯುರ್ವೇದದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಇದು ಬಿಳಿಯಾಗಿಸುವುದಲ್ಲದೆ ದೇಹವನ್ನು ನಿರ್ವಿಷಗೊಳಿಸಿ, ಶುದ್ಧೀಕರಿಸುತ್ತದೆ. ಬಾಯಿಯನ್ನು ನೀರಿನ ಬದಲು ಎಣ್ಣೆಯಿಂದ ತೊಳೆಯಬೇಕು. ಸುಮಾರು ಒಒಂದು ಚಮಚ ಎಳ್ಳೆಣ್ಣೆಯನ್ನು ೧೫-೨೦ ನಿಮಿಚ ಬಾಯಿಯಲ್ಲಿಟ್ಟುಕೊಂಡು ಗಾರ್ಗ್ಲ್ ಮಾಡಬೇಕು. ಎಣ್ಣೆಯು ಬಾಯಿಯ ಪ್ರತೀ ಮೂಲೆಯನ್ನು ತಲುಪಬೇಕು. ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಮಾಡಬೇಕು. ಗಾರ್ಗ್ಲಿಂಗ್ ಮಾಡಿದ ನಂತರ, ಎಣ್ಣೆಯನ್ನು ಉಗುಳಿ, ಬಾಯಿಯನ್ನು ನೀರಿನಲ್ಲಿ ಸ್ವಚ್ಛಗೊಳಿಸಿಸಬೇಕು. ನಿಯಮಿತ ಹೀಗೆ ಮಾಡಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದ್ರೆ ಹಲ್ಲಿಗೂ ಎಫೆಕ್ಟ್

ಬೇ ಲೀಫ್
ಕೆಳಗಿನ ಹಲ್ಲುಗಳಲ್ಲಿ ಸಾಮಾನ್ಯವಾಗಿ ಹಳದಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಇದನ್ನು ನೋಡುವುದು ಹಾಗೂ ಅನುಭವಿಸುವುದು ಕಷ್ಟ. ಇದನ್ನು ಹೋಗಲಾಡಿಸಲು ಬೇ ಲೀಫ್  ಬೆಸ್ಟ್. ಹಲ್ಲಿನ ಮೇಲೆ ಕೆಲ ಸಮಯದಲ್ಲಿ ಕಾಣಿಸಿಕೊಳ್ಳುವ ಹಳದಿ ಅಥವಾ ಕಪ್ಪು ಪದರವನ್ನು ಇದು ಸ್ವಚ್ಛಗೊಳಿಸುತ್ತದೆ. ೨-೩ ಬೇ ಲೀಫ್ ಅಥವಾ ತೇಜ್ ಪಟ್ಟಾವನ್ನು ಪುಡಿ ಮಾಡಿ ಪ್ರತೀ ಮೂರು ದಿನಗಳಿಗೊಮ್ಮೆ ಅದನ್ನು ಹಲ್ಲಿನ ಪುಡಿಯಾಗಿ ಬಳಸಬಹುದು. ಒಂದು ಬೇ ಎಲೆಯನ್ನು ಹಲ್ಲುಗಳಿಗೆ ಉಜ್ಜಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಇದು ಹಲ್ಲುಗಳನ್ನು ಬಿಳುಪುಗೊಳಿಸುವುದು ಮಾತ್ರವಲ್ಲ, ಹೆಚ್ಚು ಪ್ರಕಾಶಮಾನವಾಗಿಸುತ್ತದೆ.

ಉಪ್ಪು
ಉಪ್ಪಿನೊಂದಿಗೆ ಹಲ್ಲುಜ್ಜುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ಇದು ನೈಸರ್ಗಿಕ ಮತ್ತು ತುಲನಾತ್ಮಕವಾಗಿ ಸುರಕ್ಷಿತವಾಗಿದೆ. ಸಮುದ್ರದ ಉಪ್ಪು ಸಾಮಾನ್ಯವಾಗಿ ಪುಡಿ ಉಪ್ಪಿಗಿಂತ ಒಳ್ಳೆಯದು. ಏಕೆಂಧರೆ ಇದು ಸಂಸ್ಕರಿಸದ ಮತ್ತು ಖನಿಜಗಳು ಹಾಗೂ ಇತರೆ ಪೋಷಕಾಂಶಗಳಿAದ ತುಂಬಿರುತ್ತದೆ. ಉಪ್ಪು ಹಲ್ಲುಗಳ ಕಲೆಗಳನ್ನು ತೆಗೆದುಹಾಕಿ ಬಿಳುಪಾಗಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಸೋಂಕು ನಿವಾರಕವೂ ಹೌದು. ಉಪ್ಪಿನಲ್ಲಿ ಹಲ್ಲುಜ್ಜುವುದರಿಂದ ಪ್ಲೇಕ್ ಅನ್ನು ಒಡೆಯಲು ಸಹಾಯ ಮಾಡುತ್ತದೆ ಮತ್ತು ರೋಗ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಆಗಾಗ್ಗೆ ನಿಯಮಿತವಾಗಿ ಇದನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಅಂಗೈಗೆ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಟೂತ್ ಬ್ರಷ್‌ನ ಬಿರುಗೂದಲುಗಳನ್ನು ಉಜ್ಜಬಹುದು. ಹಲ್ಲುಜ್ಜುವಾಗ ಬ್ರಷ್ ಮತ್ತು ಟೂತ್‌ಪೇಸ್ಟ್ನಲ್ಲಿ ಉಪ್ಪನ್ನು ಬೆರೆಸಿ ಬ್ರಷ್ ಮಾಡಬಹುದು. ಹೀಗೆ ಮಾಡಿದ ನಂತರ ನೀರಿನಲ್ಲಿ ಬಾಯಿ ತೊಳೆಯುವುದನ್ನನು ಮರೆಯಬೇಡಿ. ಇಲ್ಲದಿದ್ದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಬಹುದು.

ಮಕ್ಕಳು ಚಿಪ್ಸ್ ತಿಂದ್ರೆ ಹಲ್ಲು ಹಾಳಾಗೋದು ಗ್ಯಾರಂಟಿ

೪. ಅರಿಶಿಣ
ಅರಿಶಿನ ಮತ್ತು ಹರಳೆಣ್ಣೆಯ ಸಂಯೋಜನೆಯು ನಂಜು ನಿರೋಧಕ ಗುಣಲಕ್ಷಣವನ್ನು ಹೊಂದಿದೆ. ೧೦ ಗ್ರಾಂ ಅರಿಶಿಣ ಪುಡಿ ಮತ್ತು ೫ ಗ್ರಾಂ ಹುರಿದ ಹರಳೆಣ್ಣೆಯನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪುಡಿ ಮಾಡಿ. ದಿನಕ್ಕೆ ಎರಡು ಬಾರಿ ಹಲ್ಲುಜ್ಜಲು ಬಳಸಿ. ಬೆಳಗ್ಗೆ ಮತ್ತು ರಾತ್ರಿ ನಿದ್ರೆಗೂ ಮೊದಲು ಈ ಪುಡಿಯನ್ನು ಬಳಸಿದರೆ ಹಲ್ಲುಗಳಲ್ಲಿನ ಕೆಟ್ಟ ಬಣ್ಣವು ತೊಡೆದುಹಾಕಲು ಸಹಾಯ ಮಾಡುತ್ತದೆ,

೫. ಬಾಳೆಹಣ್ಣು
ಬಾಳೆಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬಾಳೆಹಣ್ಣಿನ ಸಿಪ್ಪೆಯ ಬಿಳಿ ಒಳಭಾಗವನ್ನು ಹಲ್ಲುಗಳಿಗೆ ಉಜ್ಜಿ, ಒಂದೆರಡು ನಿಮಿಷಗಳ ನಂತರ ಬಾಯಿಯನ್ನು ತೊಳೆಯಬೇಕು. ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮುಂತಾದ ಖನಿಜಗಳಿವೆ. ಅತ್ಯುತ್ತಮವಾದ ಉತ್ಕರ್ಷಣ ನಿರೋಧಕವಾಗಿರುವುದರಿಂದ ಇದು ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದೆ.

೬. ಬೇವು
ಆಯುರ್ವೇದದಲ್ಲಿ ಬೇವಿಗೆ ಮಹತ್ವದ ಸ್ಥಾನವಿದೆ. ಪ್ರತೀ ಹಂತದಲ್ಲೂ ಇದರ ಪ್ರಯೋಜನವಿದ್ದು, ಬೇವು ಒಂದು ಬೆಲೆಬಾಳುವ ಮರವಾಗಿದೆ. ಇದರ ಬೇರಿನಿಂದ ಹಣ್ಣಿನವರೆಗೂ ಉಪಯುಕ್ತವಾಗಿದೆ. ಬೇವಿನ ಮರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಅನೇಕ ಟೂತ್‌ಪೇಸ್ಟ್ ಬ್ರಾಂಡ್‌ಗಳಲ್ಲಿ ಬಳಸಲಾಗುತ್ತದೆ. ಬೇವಿನ ಮೌತ್‌ವಾಶ್‌ಗಳು ಪ್ಲೇಕ್ ನಿರ್ಮಾಣದ ವಿರುದ್ಧ ಹೋರಾಡುತ್ತವೆ. ದಿನಕ್ಕೆ ಎರಡು ಬಾರಿ ಬಳಸಿದರೆ ಜಿಂಗೈವಿಟಿಸ್ ಅನ್ನು ತಡೆಯುತ್ತದೆ. ಬೇವಿನ ಎಲೆಗಳನ್ನು ಹಲ್ಲುಗಳಿಗೆ ಪ್ರತಿದಿನ ಉಜ್ಜುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ದೂರ ಮಾಡುತ್ತದೆ ಮತ್ತು ಪರಿದಂತದ ಕಾಯಿಲೆಯಿಂದ ರಕ್ಷಿಸುತ್ತದೆ.

click me!