3 ವರ್ಷದ ಸಯಾಮಿ ಬಾಲಕರ ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು: 27 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ

By Suvarna News  |  First Published Aug 3, 2022, 12:51 PM IST

ಬ್ರೆಜಿಲ್‌ನ ರಿಯೋ ಡಿ ಜಿನೈರೋದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಸುಮಾರು 27 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಬ್ರಿಟಿಷ್‌ ನರ ಶಸ್ತ್ರಜ್ಞ, ಮಕ್ಕಳ ತಜ್ಞ, ಸರ್ಜನ್‌ ಡಾ. ನೂರ್ ಉಲ್‌ ಒವಸೆ ಜಿಲಾನಿ ಸಯಾಮಿ ಮಕ್ಕಳನ್ನು  ಬೇರ್ಪಡಿಸಿದ್ದಾರೆ.


ಬ್ರೆಜಿಲ್‌: ಅವಳಿ ಮಕ್ಕಳನ್ನು ನೀವು ನೋಡಿರಬಹುದು. ಒಂದೇ ತರ ಕಾಣಿಸುವ ಇವರು ಎಲ್ಲರಂತೆ ಚಟುವಟಿಕೆಯಿಂದ ಬೆರೆಯುತ್ತಾರೆ. ಆದರೆ ಇಲ್ಲಿ ಮಕ್ಕಳೇನೋ ಟ್ವಿನ್ಸ್ ಆದರೆ ಒಬ್ಬರನ್ನೊಬ್ಬರು ಬೇರ್ಪಡಿಸಲಾಗದಂತಹ ಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡೆ ಜನಿಸಿದ್ದರು. ಇಬ್ಬರ ತಲೆಯು ಪರಸ್ಪರ ಅಂಟಿಕೊಂಡು ಹುಟ್ಟಿದ ಪರಿಣಾಮ ಇವರು ಒಬ್ಬರನ್ನೊಬ್ಬರು ಬಿಟ್ಟು ಸ್ವತಂತ್ರವಾಗಿ ಇರುವಂತಿರಲಿಲ್ಲ. ವೈದ್ಯರು ಹಾಗೂ ಮಕ್ಕಳ ಪೋಷಕರಿಗೂ ಇವರನ್ನು ಬೇರ್ಪಡಿಸುವುದು ಸವಾಲಿನ ವಿಚಾರವಾಗಿತ್ತು. ಕಡೆಗೂ ದೇವರ ಮೇಲೆ ಭಾರ ಹಾಕಿ ವೈದ್ಯರು ಈ ಸಯಾಮಿ ಮಕ್ಕಳಿಗೆ ಈಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಡಿಸುವ ಮೂಲಕ ಹೊಸ ಜನ್ಮ ನೀಡಿದ್ದಾರೆ.

ಬ್ರೆಜಿಲ್‌ನ ರಿಯೋ ಡಿ ಜಿನೈರೋದಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಬ್ರಿಟಿಷ್‌ ನರ ಶಸ್ತ್ರಜ್ಞ, ಮಕ್ಕಳ ತಜ್ಞ, ಸರ್ಜನ್‌ ಡಾ. ನೂರ್ ಉಲ್‌ ಒವಸೆ ಜಿಲಾನಿ ಈ ಅಪರೂಪದ ಅಪರೇಷನ್ ಅನ್ನು ನಡೆಸಿದ್ದಾರೆ. ಸುಮಾರು 27 ಗಂಟೆಗಳ ಸುದೀರ್ಘ ಸಮಯವನ್ನು ಈ ಯಶಸ್ವಿ ಶಸ್ತ್ರಚಿಕಿತ್ಸೆ ತೆಗೆದುಕೊಂಡಿದೆ. 

Tap to resize

Latest Videos

ಬ್ರೆಜಿಲ್‌ನ ಅರ್ಥೂರ್ ಲಿಮಾ ಹಾಗೂ ಬೆರ್ನಾರ್ಡೊ ಪರಸ್ಪರ ತಲೆ ಅಂಟಿಕೊಂಡೇ ಹುಟ್ಟಿದ್ದರು. ಪ್ರಸ್ತುತ ಮೂರು ವರ್ಷದ ಈ ಅವಳಿ ಮಕ್ಕಳಿಗೆ ವೈದ್ಯರು ಒಟ್ಟು ಏಳು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಗ್ರೇಟ್‌ ಒರ್ಮೊಡ್‌ ಸ್ಟ್ರೀಟ್‌ ಆಸ್ಪತ್ರೆಯ ಮಕ್ಕಳ ತಜ್ಞ, ಸರ್ಜನ್‌ ಡಾ. ನೂರ್ ಉಲ್‌ ಒವಸೆ ಜಿಲಾನಿ ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು. ಈ ಟ್ವಿನ್‌ಗಳ ಶಸ್ತ್ರಚಿಕಿತ್ಸೆಗೆ ಜಿಲಾನಿ ಅವರ ಚಾರಿಟಿ ಜೆಮಿನಿ ಹಣಕಾಸಿನ ನೆರವು ನೀಡಿತ್ತು. ಇದೊಂದು ಇದುವರೆಗೆ ತಾವು ನಡೆಸಿದರಲ್ಲೇ ಅತ್ಯಂತ ಕಷ್ಟಕರವಾದ ಪ್ರತ್ಯೇಕಗೊಳಿಸುವ ಪ್ರಕ್ರಿಯೆಯಾಗಿತ್ತು ಎಂದು ಸರ್ಜರಿ ಮಾಡಿದವರು ಹೇಳಿದ್ದಾರೆ.

ಹಕ್ಕು ಚಲಾಯಿಸಿದ ಸಯಾಮಿ ಅವಳಿಗಳಿಗೊಂದು ಸಲಾಂ

ಲಂಡನ್ ಮತ್ತು ರಿಯೊದ ಶಸ್ತ್ರಚಿಕಿತ್ಸಕರು ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ಗಳ ಆಧಾರದ ಮೇಲೆ ಅವಳಿಗಳ ವಿಆರ್‌ ಪ್ರೊಜೆಕ್ಷನ್‌ಗಳನ್ನು ಬಳಸಿಕೊಂಡು ತಿಂಗಳುಗಳ ಕಾಲ ಹಲವು ತಂತ್ರಗಳ ಟ್ರಯಲ್ ಮಾಡಿದ್ದರು. ಇದೊಂದು ಬಾಹ್ಯಾಕಾಶ ಯುಗದ ವಿಚಾರ ಎಂದು ವಿವರಿಸಿದ ಡಾ ಜೀಲಾನಿ, ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ, ಪ್ರತ್ಯೇಕ ದೇಶಗಳಲ್ಲಿನ ಶಸ್ತ್ರಚಿಕಿತ್ಸಕರು ಹೆಡ್‌ಸೆಟ್‌ಗಳನ್ನು ಧರಿಸಿ ಒಂದೇ ವರ್ಚುವಲ್ ರಿಯಾಲಿಟಿ ರೂಮ್ ನಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.

ಇದೊಂದು ಅದ್ಭುತವಾದ ಕೆಲಸ ಅಂಗರಚನಾಶಾಸ್ತ್ರ ತುಂಬಾ ಕುತೂಹಲಕಾರಿಯಾಗಿದ್ದು, ಶಸ್ತ್ರಚಿಕಿತ್ಸೆಗೆ ಮೊದಲು ನೀವು ಮಕ್ಕಳನ್ನು ಯಾವುದೇ ಅಪಾಯಕ್ಕೆ ಸಿಲುಕಿಸುವಂತಹ ಸಂದರ್ಭವಿದು. ಆದರೆ ಚಿಕಿತ್ಸೆ ಯಶಸ್ವಿಯಾಗಿದ್ದು, ಈ ಕಾರ್ಯ ಸರ್ಜನ್‌ಗಳಿಗೆ ಸಾಕಷ್ಟು ಧೈರ್ಯ ತುಂಬುತ್ತದೆ ಎಂದು ಅವರು ಹೇಳಿದರು. ಇದೊಂದು ನಮ್ಮ ಸಮಯದ ಅತ್ಯಂತ ಕಠಿಣ ಶಸ್ತ್ರಚಿಕಿತ್ಸೆ ಎಂದ ವೈದ್ಯರು, ಇದನ್ನು ವರ್ಚುವಲ್ ಹಾಗೂ ರಿಯಾಲಿಟಿ ಎರಡರ ಸಹಾಯ ಪಡೆದು ಮಾಡಿದ್ದು, ಮನುಷ್ಯ ಮಂಗಳಗೃಹಕ್ಕೆ ಹೋದಷ್ಟೇ ಕ್ಲಿಷ್ಟಕರ ವಿಚಾರ ಎಂದು ಹೇಳಿದರು. 

ಶಸ್ತ್ರಚಿಕಿತ್ಸೆ ನಡೆಸಿದ 27 ಗಂಟೆಗಳ ಅವಧಿಯಲ್ಲಿ ತಾನು ಕೇವಲ 15 ನಿಮಿಷ ಆಹಾರ ಹಾಗೂ ನೀರು ಕುಡಿಯುವುದಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಒಂದಾಗಿದ್ದ ಸೋದರರು ಪ್ರತ್ಯೇಕವಾದ ನಂತರ ಅವರ ರಕ್ತದೊತ್ತಡ ಹಾಗೂ ಹೃದಯ ಬಡಿತ ತೀವ್ರವಾಗಿ ಏರಿಕೆಯಾಗಿತ್ತು. ಅದು ಅವರು ಪರಸ್ಪರ ಸ್ಪರ್ಶಿಸುವವರೆಗೆ ಸುಮಾರು ನಾಲ್ಕು ದಿನಗಳ ಕಾಲ ಏರುಗತಿಯಲ್ಲೇ ಇತ್ತು ಎಂದು ಅವರು ಹೇಳಿದರು. ಸದ್ಯ ಮಕ್ಕಳು ಹುಷಾರಾಗುತ್ತಿದ್ದಾರೆ. 

Punjab Elections: ಸಯಾಮಿ ಅವಳಿಗಳಿಂದ ಪ್ರತ್ಯೇಕ ಮತದಾನ!

ವೈದ್ಯ ಜಿಲಾನಿ ಜೊತೆ ಡಾ. ಗೆಬ್ರಿಯಲ್‌ ಮುಫರೆಜ್‌ ಕೂಡ ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದರು. ಈ ಮಕ್ಕಳ ಪೋಷಕರು ಎರಡು ವರ್ಷಗಳ ಹಿಂದೆ ತಾವು ವಾಸವಿದ್ದ ರೊರೈಮ ಪ್ರದೇಶದಿಂದ ರಿಯೊಗೆ ಆಗಮಿಸಿ ತಮ್ಮ ಮಕ್ಕಳ ಸಮಸ್ಯೆಯನ್ನು ಕೇಳಿ ಕೊಂಡಿದ್ದರು. ಅವರು ಬಹುತೇಕ ನಮ್ಮ ಈ ಆಸ್ಪತ್ರೆಯ ಕುಟುಂಬದ ಭಾಗವಾಗಿದ್ದರು. ಪರಿಣಾಮ ಈಗ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದು ಮಕ್ಕಳ ಬದುಕು ಬದಲಾಗಿದೆ ಎಂದು ಅವರು ಹೇಳಿದರು. 60,000ಕ್ಕೆ ಒಂದು ಪ್ರಕರಣದಲ್ಲಿ ಮಕ್ಕಳು ಹೀಗೆ ಹುಟ್ಟುತ್ತವೆ ಎಂದು ಅವರು ಹೇಳಿದರು. ಇಡೀ ಜಗತ್ತಿನಲ್ಲಿ ಪ್ರತಿ ವರ್ಷ 50 ಜೊತೆ ಮಕ್ಕಳು ಹೀಗೆ ಹುಟ್ಟುತ್ತಾರೆ. ಆದರೆ ಅವರಲ್ಲಿ ಕೇವಲ 15 ಮಕ್ಕಳು ಮಾತ್ರ ಯಶಸ್ವಿಯಾಗಿ ಬದುಕುತ್ತಾರೆ ಎಂದು ತಿಳಿದು ಬಂದಿದೆ. 
 

click me!