ಚೂಯಿಂಗ್ ಗಮ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಹೆಚ್ಚಿನವರಿಗೆ ಗೊತ್ತಿರೋ ವಿಷ್ಯ. ಆದ್ರೂ ಕೆಲ ಮಕ್ಕಳು ಇದನ್ನೇ ಇಷ್ಟಪಟ್ಟು ತಿನ್ತಾರೆ. ಹಾಗೆ 40 ಚೂಯಿಂಗ್ ಗಮ್ ನುಂಗಿದ ಐದು ವರ್ಷದ ಬಾಲಕ ಅಸ್ವಸ್ಥಗೊಂಡಿದ್ದು, ಸರ್ಜರಿ ಮಾಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೇರಿಕಾದಲ್ಲಿ 5 ವರ್ಷದ ಬಾಲಕನೊಬ್ಬನು ದೊಡ್ಡ ಪ್ರಮಾಣದ ಚೂಯಿಂಗ್ ಗಮ್‌ನ್ನು ನುಂಗಿದ ನಂತರ ತುರ್ತು ವೈದ್ಯಕೀಯ ಸರ್ಜರಿಗೆ ಒಳಪಡಬೇಕಾಯಿತು. ಜೆಇಎಮ್ ವರದಿಗಳಲ್ಲಿ ಪ್ರಕಟವಾದ ಕೇಸ್ ಸ್ಟಡಿ ಪ್ರಕಾರ, 40 ಚೂಯಿಂಗ್ ಗಮ್‌ಗಳನ್ನು ನುಂಗಿದ ಅಪರಿಚಿತ ಹುಡುಗನನ್ನು ಓಹಿಯೋದಲ್ಲಿನ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲಾಯಿತು. ಯಾಕೆಂದರೆ ಬಾಲಕ ಒಂದು ದಿನದ ಮೊದಲು ನುಂಗಿದ 40 ಗಮ್ ತುಂಡುಗಳು ಅವನ ಹೊಟ್ಟೆಯಲ್ಲಿ ಒಂದು ಗುಂಪನ್ನು ರೂಪಿಸಿದ್ದವು. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಡಾ ಚಿಝೈಟ್ ಇಹಿಯೋನುನೆಕ್ವು ನೇತೃತ್ವದ ವೈದ್ಯರ ತಂಡವು ಬಾಲಕನ ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದ ಗಮ್ ರೂಪುಗೊಂಡಿರುವುದನ್ನು ಕಂಡುಹಿಡಿದರು.
ಅಧ್ಯಯನದ ಪ್ರಕಾರ, ವೈದ್ಯರು ಬಾಲಕನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಅನ್ನು ಇರಿಸುವ ಮೂಲಕ ಗಮ್ ಅನ್ನು ತೆಗೆದುಹಾಕಿದರು. ಜಿಗುಟಾದ ಗ್ಲೋಬ್‌ನ್ನು ಹೊರತೆಗೆಯಲು ಹಲವಾರು ವೈದ್ಯರು (Doctors) ಮಾಡಿದ ಪ್ರಯತ್ನದಲ್ಲಿ 5 ವರ್ಷ ವಯಸ್ಸಿನ ಬಾಲಕ (Boy) ಗಂಟಲು ನೋವನ್ನು ಅನುಭವಿಸಬೇಕಾಯಿತು, ದೀರ್ಘಾವಧಿಯ ಆರೋಗ್ಯದ (Health) ಪರಿಣಾಮಗಳಿಲ್ಲದ್ದನ್ನು ಪರಿಶೀಲಿಸಿದ ನಂತರ ಬಾಲಕನನ್ನು ಬಿಡುಗಡೆ ಮಾಡಲಾಯಿತು. ಅದೃಷ್ಟವಶಾತ್, ಚೂಯಿಂಗ್ ಗಮ್ ಕರುಳನ್ನು ತಲುಪಿರಲ್ಲಿಲ್ಲ. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.
23 ವರ್ಷವಾದ್ರೂ ಯೋನಿ ಬೆಳವಣಿಗೆಯಾಗದ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ವೈದ್ಯರು
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ತಜ್ಞರು ಹೇಳುವಂತೆ ವ್ಯಕ್ತಿಯೊಬ್ಬ ನುಂಗಿದ ಗಮ್ ದೇಹ (Body)ದಲ್ಲಿ ಏಳು ವರ್ಷಗಳವರೆಗೆ ಇರುತ್ತದೆ ಎಂಬ ಕಲ್ಪನೆಯನ್ನು ವೈದ್ಯರು ತಳ್ಳಿಹಾಕಿದ್ದಾರೆ. 'ನೀವು ಗಮ್ ತುಂಡನ್ನು ನುಂಗಿದರೂ, ಅದು ನಿಮ್ಮ ಮಲದ ಮೂಲಕ ಸುಮಾರು 40 ಗಂಟೆಗಳ ಒಳಗೆ ಹೊಟ್ಟೆಯಿಂದ ಹೊರಬರುತ್ತದೆ' ಎಂದಿದ್ದಾರೆ. ಮನುಷ್ಯನ ದೇಹ ಚೂಯಿಂಗ್ ಗಮ್‌ನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ, ಅದು ಹೇಗಾದರೂ ದೇಹದಿಂದ ಹೊರಬರುತ್ತದೆ' ಎಂದು ತಿಳಿಸಿದ್ದಾರೆ.
ನೈಲ್ ಕಟ್ಟರ್ ನುಂಗಿದ 8 ತಿಂಗಳ ಮಗು
ಹೀಗೆಯೇ ನಾಸಿಕ್‌ನಲ್ಲೊಂದು ಎಂಟು ತಿಂಗಳ ಮಗು ಆಟವಾಡುತ್ತಾ ಆಕಸ್ಮಿಕವಾಗಿ ನೈಲ್ ಕಟ್ಟರ್‌ನ್ನು ನುಂಗಿ ಬಿಟ್ಟಿತ್ತು. ನಾಸಿಕ್‌ನ ಅಡ್ಗಾಂವ್‌ನಲ್ಲಿರುವ ಡಾ.ವಸಂತ ಪವಾರ್ ವೈದ್ಯಕೀಯ ಕಾಲೇಜಿನ ವೈದ್ಯರು ಶತಪ್ರಯತ್ನದ ನಂತರ 5-ಸೆಂ ನೇಲ್ ಕಟರ್ ಅನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು. ಮಗುವು ಚೂಪಾದ ವಸ್ತುವನ್ನು ನುಂಗಿದ್ದನ್ನು ಪೋಷಕರು ಅರಿತುಕೊಂಡರು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು. ಸಿವಿಲ್ ಆಸ್ಪತ್ರೆಯ ವೈದ್ಯರು ತಕ್ಷಣವೇ ಮಗುವಿನ ಪ್ರಕರಣವನ್ನು ನಾಸಿಕ್‌ನ ಅಡ್ಗಾಂವ್‌ನಲ್ಲಿರುವ ಡಾ.ವಸಂತರಾವ್ ಪವಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದರು.
ಮಹಿಳೆ ಗುಪ್ತಾಂಗದಲ್ಲಿತ್ತು ಬುಲೆಟ್, ಒಳಸೇರಿದ್ದು ಹೇಗೆ ಎಂಬುದೇ ವೈದ್ಯರಿಗೆ ಅಚ್ಚರಿ!
ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಶಶಿಕಾಂತ್ ಅನಿಲ್ ಪೋಲ್ ತಮ್ಮ ತಂಡವನ್ನು ತಕ್ಷಣವೇ ಕಾರ್ಯಪ್ರವೃತ್ತಗೊಳಿಸಿದರು. ಗಂಟಲಿನೊಳಗೆ (Throat) ಸುಮಾರು 15 ಸೆಂ.ಮೀ ಆಳದಲ್ಲಿ ನೇಲ್ ಕಟರ್ ಅಂಟಿಕೊಂಡಿರುವುದು ಎಕ್ಸ್-ರೇ ತೋರಿಸಿದೆ. ಮಗುವಿನ ಜೀವಕ್ಕೆ ತೊಂದರೆಯಾಗದಂತೆ ವಸ್ತುವನ್ನು ಹೇಗೆ ತೆಗೆದುಹಾಕುವುದು ಎಂಬುದು ಕಠಿಣ ಭಾಗವಾಗಿತ್ತು. ಮಗುವಿನ ಉಸಿರಾಟದ ಪ್ರದೇಶದ ಸೂಕ್ಷ್ಮವಾದ ಆದರೆ ಪ್ರಮುಖ ಭಾಗದಲ್ಲಿ ಚೂಪಾದ ವಸ್ತುವು ತನ್ನನ್ನು ತಾನು ಹುದುಗಿಸಿಕೊಂಡು ಆಗಲೇ ಎರಡು ಗಂಟೆಗಳಾಗಿತ್ತು.ಜೂನಿಯರ್ ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರ ತಂಡವು ಅರಿವಳಿಕೆ ತಜ್ಞರೊಂದಿಗೆ ಒಟ್ಟುಗೂಡಿದರು ಮತ್ತು ನೇಲ್-ಕಟರ್ ಅನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು.
ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿತ್ತು ಎಂದು ಡಾ.ಪೋಲ್ ಹೇಳುತ್ತಾರೆ. ಆರಂಭದಲ್ಲಿ, ನಾವು ನೈಲ್ ಕಟ್ಟರ್‌ನಲ್ಲಿ ಉತ್ತಮ ಹಿಡಿತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಪ್ರಕ್ರಿಯೆಯ ಸಮಯದಲ್ಲಿ, ಅದು ಸ್ವಲ್ಪ ಮುಂದೆ ಜಾರಿತು. ಆದರೆ 30 ನಿಮಿಷಗಳ ಕಾರ್ಯವಿಧಾನದ ನಂತರ, ನಾವು ಅಂತಿಮವಾಗಿ ವಸ್ತುವನ್ನು ತೆಗೆದುಹಾಕಲು ಸಾಧ್ಯವಾಯಿತು' ಎಂದಿದ್ದಾರೆ.