ಧೂಮಪಾನ ಮಾಡುವುದು ಸೃಜನಶೀಲತೆಯನ್ನು ಪ್ರಚೋದಿಸುತ್ತದೆ ಎಂಬ ಸಂಗತಿ ವೈಜ್ಞಾನಿಕ ಆಧಾರವಿಲ್ಲದ್ದು. ವಿಜ್ಞಾನಿಗಳು ಸೃಜನಶೀಲ ವ್ಯಕ್ತಿಗಳಲ್ಲಿ ಸೃಜನಶೀಲತೆ ಧೂಮಪಾನದಿಂದ ಹೆಚ್ಚಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ನೋಡಿದ್ದಾರೆ. 'ಧೂಮಪಾನದಿಂದ ಸೃಜನಶೀಲತೆ ಕೆಳಕ್ಕಿಳಿಯುತ್ತದೆ' ಎಂದೇ ನಿರೂಪಿಸಿದ್ದಾರೆ.
ಡಾ.ಕೆ.ಎಸ್ ಪವಿತ್ರಾ
ಮಾರ್ಕ್ ಟ್ರೈನ್ ಹೇಳಿದ ಮಾತು, 'ಧೂಮಪಾನ ಬಿಡುವುದೇನು ತುಂಬಾ ಸುಲಭ. ನಾನು ಸಾವಿರ ಬಾರಿ ಅದನ್ನು ಬಿಟ್ಟಿದ್ದೇನೆ'. ಪ್ರಸಿದ್ಧ ಸಾಹಿತಿಗಳು, ರಂಗಕರ್ಮಿಗಳು ತಲೆ ಓಡಬೇಕೆಂದರೆ ಬಾಯಲ್ಲಿ ಹೊಗೆ ಬಿಡಲೇಬೇಕು ಎಂದು ಬಲವಾಗಿ ನಂಬಿರುತ್ತಾರೆ. ಸಿನಿಮಾ ಮಂದಿಯಂತೂ ಇದರಲ್ಲಿ ಬಲು ಮುಂದೆ, ಸಂಗೀತ ಕಲಾವಿದ, ಸಿನಿಮಾ ನಿರ್ಮಾರ್ತೃ ಡೇವಿಡ್ ಲಿಂಚ್ ಹೇಳಿದ್ದು ಹೀಗೆ- 'ಇರೇಸರ್ ಹೆಡ್ ಎಂಬ ಚಿತ್ರ ಮಾಡುವಾಗ ಪ್ರತಿದಿನ 40 ಕಾಫಿ, 40 ಸಿಗರೇಟು ನನಗೆ ಬೇಕಾಯಿತು. ಅಂದರೆ ಖಾಲಿ ಕ್ಯಾನ್ವಾಸ್ (ಹಾಳೆಯ ಮೇಲೆ ಚಿತ್ರ ಬರೆಯಲೋ ಅಥವಾ ಕಥೆ ಬರೆಯಲೋ ಕೈಯಲ್ಲಿ ಕುಂಚ ಪೆನ್ನು ಹಿಡಿದು ಯೋಚಿಸುವ ಬದಲು ಸಿಗರೇಟು ಬಾಯಲ್ಲಿಟ್ಟು ಹೊಗೆ ಬಿಡುತ್ತಾ ಕಲ್ಪನೆ ಅರಳಿಸುವ ಸಾಹಿತಿ/ ಚಿತ್ರಕಾರ/ಚಿತ್ರ ನಿರ್ದೇಶಕನ ಚಿತ್ರಣವೇ ಹೆಚ್ಚು ನಂಬಲರ್ಹ ಎನಿಸಿಬಿಡುತ್ತದೆ.
undefined
ಧೂಮಪಾನ (Smoking) ಬೇರೆ ಬೇರೆ ಉದ್ಯೋಗ (Job)ಗಳಲ್ಲಿ ಎಷ್ಟು ಕಂಡುಬರುತ್ತದೆ. ಎಂಬ ಬಗ್ಗೆ ಅಧ್ಯ ಯನಗಳೂ ನಡೆದಿವೆ. ಮನರ೦ಜನೆಯ ಉದ್ಯೋಗಗಳಲ್ಲಿ ಪ್ರತಿನಿತ್ಯ ಹೊಸತನ್ನು ಸೃಷ್ಟಿಸುವ ಕಾಯಕಗಳಲ್ಲಿ ದುಡಿಯುವವರು ಇತರರಿಗಿಂತ ಗಮನಾರ್ಹವಾಗಿ ಧೂಮಪಾನ ಮಾಡುತ್ತಾರೆ ಎಂಬುದನ್ನು ಈ ಅಧ್ಯಯನಗಳು ತೋರಿಸಿವೆ. ಸೃಜನಶೀಲ ಕಾಯಕಗಳಲ್ಲಿ ದುಡಿಯುವ ಜನ ಬುದ್ಧಿವಂತರು ಎಂದು ನಂಬುತ್ತೇವಷ್ಟೇ. ಅವರಿಗೆ ಧೂಮಪಾನದಿಂದ ಆಗಬಹುದಾದ ಅಪಾಯಗಳ (Danger) ಬಗ್ಗೆ ಗೊತ್ತಿರದಿರಲು ಸಾಧ್ಯವೇ ಅಂದ ಮೇಲೆ ಅವರು ಧೂಮಪಾನವನ್ನು ಅಪ್ಪಿಕೊಳ್ಳಲು ಕಾರಣವೇನು?
ಇವನೆಂಥಾ ಲಕ್ಕಿ ಗುರೂ..ಬೈಕಿನ ಹಿಂದೆ ಕುಳಿತು ಸ್ಮೋಕ್ ಮಾಡೋಕೆ ಹೆಲ್ಪ್ ಮಾಡ್ತಾಳೆ ಹೆಂಡ್ತಿ!
ಧೂಮಪಾನದಿಂದ ಸೃಜನಶೀಲತೆ ಹೆಚ್ಚಾಗುತ್ತದೆಯೇ?
ಕಲಾವಿದರು ಧೂಮಪಾನ ಮಾಡುವ, ಮುಂದುವರಿಸುವ ಕಾರಣಗಳು ಇತರ ಸಾಮಾನ್ಯ ಜನರಿಗಿಂತ ಬೇರೆಯಾಗೇನೂ ಇರಬೇಕಿಲ್ಲ. 'ಧೂಮಪಾನ ಮಾಡುವುದು ಸೃಜನಶೀಲತೆಯನ್ನು ಪ್ರಚೋದಿಸುತ್ತದೆ' ಎಂಬ ಸಂಗತಿ ವೈಜ್ಞಾನಿಕ (Scientific) ಆಧಾರವಿಲ್ಲದ್ದು. ವಿಜ್ಞಾನಿಗಳು ಸೃಜನಶೀಲ ವ್ಯಕ್ತಿಗಳಲ್ಲಿ ಸೃಜನಶೀಲತೆ ಧೂಮಪಾನದಿಂದ ಹೆಚ್ಚಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ನೋಡಿದ್ದಾರೆ. 'ಧೂಮಪಾನದಿಂದ ಸೃಜನಶೀಲತೆ ಕೆಳಕ್ಕಿಳಿಯುತ್ತದೆ' ಎಂದೇ ನಿರೂಪಿಸಿದ್ದಾರೆ.
ಅರೆ! ಇದು ಹೇಗೆ ಸಾಧ್ಯ? ಧೂಮಪಾನ ಎಂದರೆ ನಿಕೋಟಿನ್ ಎಂಬ ವಸ್ತುವಿನ ಆಟ, ಅದರಿಂದ ಒದಗುವ ಪರಿಣಾಮಗಳಿಗಾಗಿ ವ್ಯಕ್ತಿ ಮತ್ತೆ ಮತ್ತೆ ಉಪಯೋಗಿಸಬೇಕು. ಉಪಯೋಗಿಸದಾಗ ಮಿದುಳು-ಮನಸ್ಸುಗಳು ಚಡಪಡಿಸತೊಡಗುತ್ತವೆ. ಏಕಾಗ್ರತೆ ದೂರದ ಮಾತಾಗುತ್ತದೆ. ಏಕಾಗ್ರಗೊಳ್ಳದ ಮನಸ್ಸು ಕಲಾಕೃತಿಯನ್ನು ರೂಪಿಸುವುದಾದರೂ ಹೇಗೆ?
Health Tips: ಇದು ಬ್ರೈನ್ ಸ್ಟ್ರೋಕ್ ಲಕ್ಷಣ… ಕಡೆಗಣಿಸಿದರೆ ಅಪಾಯ
1994ರಲ್ಲಿ Cigarettes are sublime ಎಂಬ ಪುಸ್ತಕ ಹೊರಬಂತು. ಇದರ ವಿಶೇಷ ಅಂದರೆ ಇದನ್ನು ಬರೆದ ರಿಚರ್ಡ್ ಸ್ಟೈನ್ ಧೂಮಪಾನ ಬಿಡಲು ಪ್ರಯತ್ನಿಸುತ್ತಿದ್ದ. ಹಾಗೆ ಮಾಡಲು ಈ ಪುಸ್ತಕವನ್ನು ಬರೆದ. ಅ೦ದರೆ ಧೂಮಪಾನದಿಂದ ಹೊರಬರಲು ಪುಸ್ತಕ ಬರೆಯುವ ಚಿಕಿತ್ಸೆ ಆತ ಗಮನಿಸಿದ ಕೆಲವು ಅಂಶಗಳು, ಕುತೂಹಲಕಾರಿಯಾದಂತಹವು. ಸಿಗರೇಟ್ ನಿಂದ ಉಂಟಾಗಬಹುದಾದ ವ್ಯಸನ-ಕಾಯಿಲೆ-ಸಾವು ಎಲ್ಲವೂ ಕಲಾವಿದನನ್ನು ಆಕರ್ಷಿಸುವಂತಹವು. ಸಾವೆ೦ದರೇ ಹೆದರಿಕೆಯಿರದವನಿಗೆ ಬಿಡು ಎಂದು ಮನವೊಲಿಸುವುದಾದರೂ ಹೇಗೆ? ಆದರೂ ರಿಚರ್ಡ್ ಡ್ರೈನ್ ತಾನಂತೂ ಧೂಮಪಾನ ತ್ಯಜಿಸಿದ ಎನ್ನುವುದು ಇಲ್ಲಿ ಉಲ್ಲೇಖಾರ್ಹವೇ.
ಎಲ್ಲಾ ಕಲಾವಿದ ಸಾಹಿತಿಗಳು ಧೂಮಪಾನ ಮಾಡಿ ತಮ್ಮ ಕಲೆಯನ್ನು ಸೃಜಿಸುತ್ತಾರೆ ಎಂದು ಇದರರ್ಥವಲ್ಲ. ಆದರೆ ಒಮ್ಮೆ ಧೂಮಪಾನವನ್ನು ತಮ್ಮ ಸಂಗಾತಿಯಾಗಿಸಿಕೊಂಡವರು, ಧೂಮಲೀಲೆಯಿಂದ ತಮ್ಮ ಸೃಜನಶೀಲತೆಯನ್ನು ಮುಂದುವರಿಸಿರುವವರು ವಿರಳವೇ. ಪ್ರಸಿದ್ಧ ಗೀತ ರಚನಾಕಾರ - ಸಂಗೀತ ಕಲಾವಿದ ಲಿಯೋನಾರ್ಡ್ ಕೋಹೆನ್ ತನ್ನ ವಿಶಿಷ್ಟ ಕಂಠದ ಕಾರಣ ವಿವರಿಸಿದ ಬಗೆ ಹೀಗೆ '500 ಟನ್ ವಿಸ್ಕಿ ಮತ್ತು ಮಿಲಿಯನ್‌ಗಟ್ಟಲೆ ಸಿಗರೇಟುಗಳು', 2003ರಲ್ಲಿ ಧೂಮಪಾನ ಬಿಟ್ಟ ಕೋಹೆನ್ ಮತ್ತೆ 2016ರಲ್ಲಿ ತನ್ನ 80ನೆಯ ಹುಟ್ಟುಹಬ್ಬಕ್ಕೆ ಮತ್ತೆ ಸಿಗರೇಟು ಸೇದಲು | ಆರಂಭಿಸಿಬಿಟ್ಟ, ಸುತ್ತುವರಿದಿದ್ದ ಪತ್ರಿಕಾ ವರದಿಗಾರರಿಗೆ ಆತ ಹೇಳಿದ್ದು ಹೀಗೆ - 'ಮೊದಲನೆಯ ಹೊಗೆಗಾಗಿ ನಾನು ಎದುರು ನೋಡುತ್ತಿರುವೆ. ಕಳೆದ 13 ವರ್ಷಗಳ ಕಾಲ ಇದನ್ನೇ ಯೋಚಿಸುತ್ತಿದ್ದೆ!'.
ಧೂಮಪಾನವನ್ನು ಅವಿರತವಾಗಿ ಮಾಡುವ ಬಹಳಷ್ಟು ಜನ ಕಲಾವಿದರ ಭಯವೆಂದರೆ 'ಧೂಮಪಾನವನ್ನು ಬಿಟ್ಟರೆ ನಮಗೆ ಏನೂ ಹೊಳೆಯದೆ ಹೋದರೆ?' ಭಯ ಪಡಬಹುದಾದದ್ದೇ ಹೌದಲ್ಲ ಆದರೆ ಸೃಜನಶೀಲ ವ್ಯಕ್ತಿಗಳೆಂದರೆ ಅವರೂ ನಮ್ಮ ನಿಮ್ಮಂತೆ ಉಸಿರಾಡುವ ಮನುಷ್ಯರಷ್ಟೆ.. ಅವರಿಗೂ ಕಾಯಿಲೆಗಳಾಗಲು ಸಾಧ್ಯವಿದೆ. ವಯಸ್ಸಾಗುತ್ತಾ ಸಾಗುತ್ತದೆ. ಅಂದ ಮೇಲೆ ವೈಜ್ಞಾನಿಕ ಆಧಾರಗಳನ್ನು ಒಪ್ಪಿ ಧೂಮಪಾನವನ್ನು ದೂರ ಮಾಡಿದರೆ, ದೈಹಿಕ ಆರೋಗ್ಯ ಸುಧಾರಿಸುತ್ತದೆ. ಮಿದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಸೃಜನಶೀಲತೆ ಮತ್ತಷ್ಟು ಅರಳುತ್ತದೆ. ಹೊಸತು ಹುಟ್ಟುವ ಸಾಧ್ಯತೆ ಬರುತ್ತದೆ. ತನ್ನ ಸೃಜನಶೀಲತೆಯ ಮೂಲ ಧೂಮಪಾನ ಎಂದು ಸ್ವತಃ ಕಲಾವಿದ ನಂಬುವುದು, ಸಮಾಜ ಅದನ್ನು ಪೋಷಿಸುವುದು ಕಲಾವಿದನ ಪ್ರತಿಭೆಗೆ -ಆತನ ಸಾಮರ್ಥ್ಯಕ್ಕೆ ಮಾಡುವ ಅಪಮಾನವೇ ಸರಿ.
ನಿಜವಾದ ಕಲಾವಿದ ತನ್ನ ಸೃಜನಶೀಲತೆಯನ್ನು ಅರಸಬೇಕಾದದ್ದು ತನ್ನ ಅನುಭವಗಳಲ್ಲಿ, ಆ ಅನುಭವಗಳನ್ನು ಕಲಾಕೃತಿಯಾಗಿ ಪರಿವರ್ತಿಸಬಲ್ಲ. ಅವನ ಪ್ರತಿಭೆಯನ್ನು ದುಡಿಸಿಕೊಳ್ಳುವ ಪ್ರಯತ್ನವನ್ನು ಧೂಮಪಾನ ಮತ್ತಷ್ಟು ಕುಗ್ಗಿಸುತ್ತದೆ. ಮಹೋನ್ನತವಾದ ಚಿತ್ರಕಲೆ ಒಂದು ಅದ್ಭುತ ಕಾದಂಬರಿ, ಮಹಾಕಾವ್ಯ. ಇವೆಲ್ಲವೂ ಕಲಾವಿದೆ ಸಾಹಿತಿಯನ್ನು ಅಮರವಾಗಿಸುವ ದಾರಿಗಳಷ್ಟೆ. ಅಂತೆಯೇ ಧೂಮಪಾನವನ್ನು ಬಿಡುವುದೂ, ಜೀವವನ್ನು ಉಳಿಸುವ, ಅಮರ ಕಲಾಕೃತಿಗಳನ್ನು ಸೃಜಿಸಲು ಕಾಲಾವಕಾಶವೀಯುವ ಹಾದಿಯೇ ಅಹುದು.