
ಚಳಿಗಾಲ(Winter)ದಲ್ಲಿ ಮೈ ಕೈ ಚರ್ಮ ಶುಷ್ಕವಾಗಿ, ಬಿರುಕು ಬಿಟ್ಟು ಉರಿಯುವುದು ಸಹಜ. ಅದಕ್ಕೆ ನಾವು ಮೊದಲೇ ಸಾಕಷ್ಟು ತಯಾರಿ (Preparation) ಮಾಡಿಕೊಂಡಿರುತ್ತೇವೆ. ಚಳಿಗಾಲಕ್ಕೆಂದೇ ವಿಶೇಷವಾಗಿ ಬಳಕೆ ಮಾಡಲು ಮಾಯಿಶ್ಚರೈಸ್ ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ, ಹಿಮ್ಮಡಿ(Heel)ಯೂ ಬಿರುಕು (Crack) ಬಿಟ್ಟು ಸಾಕಷ್ಟು ಸಮಸ್ಯೆ (Problem) ತಂದೊಡ್ಡುತ್ತದೆ. ಆರಂಭದಲ್ಲಿ ಹೆಚ್ಚು ಗಮನ ನೀಡದಿದ್ದರೆ ನಂತರ ಕಿರಿಕಿರಿ (Irritation) ಕೊಡುತ್ತದೆ.
ಕೆಲವರ ಹಿಮ್ಮಡಿ ಅಥವಾ ಪಾದಗಳ ಅಂಚು ತೀವ್ರವಾಗಿ ಬಿರುಕು ಬಿಡುತ್ತದೆ. ಬಿರುಕುಗಳಲ್ಲಿ ಧೂಳು (Dust) ಸೇರಿಕೊಂಡು ಇನ್ನಷ್ಟು ಸಮಸ್ಯೆಯಾಗುತ್ತದೆ. ನೋವು (Pain) ಉಂಟಾಗಬಹುದು, ರಕ್ತ (Blood) ಸೋರಬಹುದು. ಜತೆಗೆ, ಹಿಮ್ಮಡಿ ಒಡೆದಿರುವಾಗ ಎಲ್ಲಾದರೂ ಫಂಕ್ಷನ್ ಗಳಿಗೆ ಹೋಗಲು ಮುಜುಗರವೆನಿಸುತ್ತದೆ. ಪಾದಗಳು ಕಾಣಿಸುವ ಡ್ರೆಸ್ ಧರಿಸಲು ಹಿಂದೇಟು ಹಾಕುವಂತಾಗುತ್ತದೆ.
ಸಾಮಾನ್ಯವಾಗಿ ಒಣಚರ್ಮದವರಿಗೆ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚು. ಅದರೊಂದಿಗೆ, ಸೋರಿಯಾಸಿಸ್ ಅಥವಾ ಎಸ್ಜಿಮಾ (psoriasis and eczema) ಕೂಡ ಕಾರಣವಾಗಿರಬಹುದು. ಹೀಗಾಗಿ, ತೀವ್ರ ಪ್ರಮಾಣದ ಬಿರುಕುಗಳಿದ್ದರೆ ವೈದ್ಯರನ್ನು ಕಾಣಬೇಕು. ಅದರ ಹೊರತಾಗಿ, ಚಳಿಗಾಲದಲ್ಲಿ ಮಾತ್ರ ಹೆಚ್ಚಾಗುವ ಒಡಕು ಹಾಗೂ ಬಿರುಕುಗಳಿಗೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು.
ಬಿರುಕಿಗೆ ಕಾರಣ
• ಗಟ್ಟಿಯಾದ ನೆಲ(Floor)ದ ಮೇಲೆ ದೀರ್ಘಕಾಲ ನಿಂತುಕೊಳ್ಳುವುದು(Standing).
• ಹಿಮ್ಮಡಿ ಭಾಗ ತೆರೆದುಕೊಂಡಿರುವ ಶೂ (Shoe), ಚಪ್ಪಲಿ ಧರಿಸುವುದು.
• ಬೊಜ್ಜು (Obesity)
• ಚರ್ಮ (Skin) ದ ಸ್ಥಿತಿ. ಉದಾಹರಣೆಗೆ, ಕ್ರೀಡಾಪಟುಗಳ ಹಿಮ್ಮಡಿ, ಸೋರಿಯಾಸಿಸ್ ಅಥವಾ ಎಸ್ಜಿಮಾ
Winter Tips: ಚಳಿಗಾಲದಲ್ಲಿ ತಲೆಯನ್ನು ಮುಚ್ಕೋಳ್ಬೇಕು ಯಾಕೆ ?
ಬಿರುಕಿಗೆ ನೈಸರ್ಗಿಕ ಪರಿಹಾರಗಳು
• ಸಾಕಷ್ಟು ನೀರು (Water) ಕುಡಿಯಿರಿ. ನೀರಿನಿಂದ ದೇಹ ನಿರ್ಜಲೀಕರಣಕ್ಕೆ ತುತ್ತಾಗುವುದಿಲ್ಲ. ದೇಹ ಒಣಗುವುದರಿಂದ ಹಿಮ್ಮಡಿ ಬಿರುಕು ಹೆಚ್ಚಾಗುತ್ತದೆ. ಹೀಗಾಗಿ, ನೀರು ಕುಡಿಯುವುದರಿಂದ ಸ್ವಲ್ಪ ಮಟ್ಟಿಗಿನ ಪರಿಹಾರ ದೊರೆಯುತ್ತದೆ.
• ಪಾದ(Foot)ಗಳನ್ನು ನೀರಿನಲ್ಲಿ ಇಟ್ಟುಕೊಳ್ಳಿ. ಸ್ವಲ್ಪ ಬೆಚ್ಚಗಿನ ನೀರಿಗೆ ಕೆಲವು ಹನಿ ಲಿಂಬೆ ರಸ ಸೇರಿಸಿ ಸುಮಾರು 15 ನಿಮಿಷಗಳ ಕಾಲ ಇಟ್ಟುಕೊಳ್ಳಬೇಕು. ಬಳಿಕ, ಹಿಮ್ಮಡಿಯನ್ನು ಮೃದುವಾದ ಬ್ರಷ್ ನಿಂದ ತಿಕ್ಕಬೇಕು. ಇದರಿಂದ ಮೃತ ಚರ್ಮ (Dead Skin) ನಾಶವಾಗಿ, ಹೊಸ ಕೋಶಗಳು ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ.
• ಪ್ಯೂಮಿಸ್ ಸ್ಟೋನ್ (Pumice Stone) ಬಳಕೆ ಮಾಡಿ. ಸ್ನಾನ ಮಾಡುವಾಗ ವಾರಕ್ಕೆ ಮೂರು ಬಾರಿ ಪ್ಯೂಮಿಸ್ ಕಲ್ಲನ್ನು ಉಜ್ಜಿಕೊಳ್ಳಿ. ಇದರಿಂದ ಹಿಮ್ಮಡಿ ಮೃದುವಾಗುತ್ತದೆ.
• ಪೆಟ್ರೋಲಿಯಂ ಜೆಲ್ಲಿ (Petroleum Jelly) ಬಳಕೆ ಮಾಡಿ. ಇದು ಬಿರುಸಾದ ಹಿಮ್ಮಡಿಗಳ ಆಳಕ್ಕಿಳಿದು ತ್ವಚೆಯನ್ನು ಮೃದುಗೊಳಿಸುತ್ತದೆ. ಹಾಸಿಗೆಗೆ ಹೋಗುವ ಮುನ್ನ ಹಿಮ್ಮಡಿಗಳಿಗೆ ಲೇಪಿಸಿಕೊಳ್ಳಬಹುದು. ದಿನವೂ ಸ್ನಾನದ ಬಳಿ ಹಿಮ್ಮಡಿಗಳಿಗೆ ಜೆಲ್ಲಿ ಹಚ್ಚಿಕೊಳ್ಳುವುದರಿಂದ ಪಾದ ಹಾಗೂ ಹಿಮ್ಮಡಿಗಳಲ್ಲಿ ಎಂದಿಗೂ ಬಿರುಕು ಮೂಡುವುದಿಲ್ಲ.
Learning From Home: ಆನ್‌ಲೈನ್ ಕ್ಲಾಸ್ ಬೋರಿಂಗ್ ಆಗ್ತಿದ್ರೆ ಹೀಗೆ ಮಾಡಿ
• ಮಾಯಿಶ್ಚರೈಸ್ ಕ್ರೀಮ್ (Moisturize Cream) ಲೇಪಿಸಿ. ದಿನಕ್ಕೆ ಮೂರು ಬಾರಿ ಮಾಯಿಶ್ಚರೈಸ್ ಕ್ರೀಮ್ ಹಚ್ಚಿಕೊಂಡರೆ ಚರ್ಮ ನಿರ್ಜಲಗೊಳ್ಳುವುದಿಲ್ಲ. ಮೃದುವಾಗುತ್ತದೆ. ಜತೆಗೆ, ತೆಂಗಿನೆಣ್ಣೆ, ಶಿಯಾ ಬೆಣ್ಣೆಯನ್ನೂ ಹಚ್ಚಿಕೊಳ್ಳಬಹುದು. ಪಾದಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಂಡಾದ ಬಳಿಕ ಇವುಗಳನ್ನು ಬಳಸಬಹುದು. ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಇರುತ್ತದೆ. ಶಿಯಾ ಬೆಣ್ಣೆಯಲ್ಲಿ ವಿಟಮಿನ್ ಎ, ಇ ಹಾಗೂ ಎಫ್ ಇರುತ್ತದೆ. ಇದರಿಂದಲೂ ಬಿರುಕು ಬಿಟ್ಟ ಪಾದಗಳಿಗೆ ಹಿತವಾಗುತ್ತದೆ.
• ಬಾಳೆಹಣ್ಣು (Banana) ಅಥವಾ ಬೆಣ್ಣೆಹಣ್ಣು(Avocado)ಗಳ ಪ್ಯಾಕ್ ಮಾಡಿ ನೋಡಿ. ವಿಟಮಿನ್ ಎ, ವಿಟಮಿನ್ ಇ ಅಧಿಕ ಪ್ರಮಾಣದಲ್ಲಿರುವ ಈ ಹಣ್ಣುಗಳ ರಸದಿಂದ ಹಿಮ್ಮಡಿಗೆ ಪ್ಯಾಕ್ ಮಾಡಬಹುದು. ಇದರಿಂದ ಚರ್ಮ ಮೃದುವಾಗಿ ಹಿಗ್ಗುತ್ತದೆ. ಹಾಗೂ ಶುಷ್ಕವಾಗುವುದು ನಿಲ್ಲುತ್ತದೆ. ಅರ್ಧ ಗಂಟೆಗಳ ಕಾಲ ಈ ಹಣ್ಣುಗಳ ಪ್ಯಾಕ್ ಇರಿಸಿಕೊಳ್ಳುವುದರಿಂದ ಅನುಕೂಲವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.