Winter Tips: ಚಳಿಗಾಲದಲ್ಲಿ ತಲೆಯನ್ನು ಮುಚ್ಕೋಳ್ಬೇಕು ಯಾಕೆ ?

By Suvarna News  |  First Published Feb 3, 2022, 9:38 AM IST

ಚಳಿಗಾಲ (Winter) ಬಂತು ಅಂದ್ರೆ ಸಾಕು ಎಲ್ರೂ ದೇಹ ಬೆಚ್ಚಗಿರಲಿ ಅಂತ ಸ್ವೆಟ್ಟರ್ (Sweater) ತೆಗೆದುಕೊಳ್ತಾರೆ. ಟೋಪಿ, ಮಫ್ಲರ್ ತಗೊಳ್ಳೋದು ಕಡಿಮೆ. ಆದ್ರೆ ನಿಮ್ಗೆ ಗೊತ್ತಾ ಸ್ವೆಟ್ಟರ್‌ನಷ್ಟೇ ಮುಖ್ಯವಾಗಿ ನಿಮ್ಗೆ ಬೇಕಾಗೋದು ತಲೆಯ ಟೋಪಿ. ಚಳಿಗಾಲದಲ್ಲಿ ತಲೆ (Head)ಯನ್ನು ಮುಚ್ಚಿಕೊಳದೆ ಇರೋದ್ರಿಂದ ಎಷ್ಟು ತೊಂದ್ರೆಯಿದೆ ಅನ್ನೋದು ನಿಮ್ಗೆ ಗೊತ್ತಾ ?


ಚಳಿಗಾಲ (Winter)ದಲ್ಲಿ ಯಾವಾಗಲೂ ಆರೋಗ್ಯ ದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅಗತ್ಯವಾಗಿದೆ. ಯಾಕೆಂದರೆ ಥಂಡಿ ವಾತಾವರಣದಲ್ಲಿ ಶೀತ, ಕೆಮ್ಮು, ಜ್ವರ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲ ಕೂದಲಿನ ಶುಷ್ಕತೆ, ಒಣಗಿದ ಚರ್ಮ ಮೊದಲಾದ ಸಮಸ್ಯೆಗಳು ಕಂಡು ಬರುತ್ತವೆ. ಹೀಗಾಗಿಯೇ ಚಳಿಗಾಲದಲ್ಲಿ ವಿಶೇಷವಾಗಿ ಸರಿಯಾಗಿ ತಿನ್ನುವುದು, ವ್ಯಾಯಾಮ ಮಾಡುವುದು ಮತ್ತು ಬೆಚ್ಚಗಿರುವಂತೆ ಬಟ್ಟೆಯನ್ನು ಧರಿಸುವುದು ಮುಖ್ಯವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಹಲವರು ತಲೆಯನ್ನು ಮುಚ್ಚಿಕೊಳ್ಳುವುದನ್ನು ನೋಡಿರಬಹುದು. ಇದು ಯಾಕೆ ಅನ್ನೋದು ನಿಮಗೆ ಗೊತ್ತಿದ್ಯಾ ?

ಚಳಿಗಾಲದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದು ಯಾಕೆ ?

Tap to resize

Latest Videos

undefined

ಚಳಿಗಾಲದಲ್ಲಿ ಮನೆಯಿಂದ ಹೊರಗಡೆ ಓಡಾಡುವಾಗ ಜನರು ತಲೆಗೆ ಟೋಪಿ, ಮಫ್ಲರ್, ಸ್ಕಾರ್ಫ್ ಮೊದಲಾದವುಗಳನ್ನು ಧರಿಸುವುದನ್ನು ನೋಡಿರಬಹುದು. ಇದು ಥಂಡಿಯಿಂದ ರಕ್ಷಿಸಿಕೊಳ್ಳಲು ಎಂಬುದು ಹಲವರಿಗೆ ತಿಳಿದಿದೆ. ಆದರೆ, ಇದಲ್ಲದೆಯೂ ಚಳಿಗಾಲದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಅದೆಷ್ಟು ಉಪಯೋಗವಿದೆ ಗೊತ್ತಾ ? ಅಥವಾ ತಲೆಯನ್ನು ಥಂಡಿಗೆ ಒಡ್ಡಿಕೊಂಡಾಗ ಆರೋಗ್ಯ (Health)ಕ್ಕೆ ಅದೆಷ್ಟು ಅಪಾಯವಿದೆ ಗೊತ್ತಾ ?

Winter Foods :ಚಳಿಗಾಲದ ರೋಗಗಳಿಂದ ದೂರವಿರಲು ಈ ಆಹಾರಗಳು ಬೆಸ್ಟ್

ಚಳಿಗಾಲದಲ್ಲಿ ಮನೆಯಿಂದ ಹೊರಬರುವಾಗ ತಲೆ (Head)ಯನ್ನು ಮುಚ್ಚಿಕೊಂಡರೆ ಅನಾರೋಗ್ಯದ ಅಪಾಯವು ಅರ್ಧದಷ್ಟು ಕಡಿಮೆಯಾಗುತ್ತದೆ. ಆಯುರ್ವೇದ ತಜ್ಞ ಡಾ.ನಿಕಿತಾ ಕೊಹ್ಲಿ ಅವರ ಪ್ರಕಾರ, ಚಳಿಗಾಲದಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಇದು ಶಾಖವನ್ನು ಸಂರಕ್ಷಿಸುತ್ತದೆ. ದೇಹ ಬೆಚ್ಚಗಿರುತ್ತದೆ ಮತ್ತು ಆರಾಮದಾಯಕವಾಗಿರುತ್ತದೆ. ನೆತ್ತಿಯು ಶೀತ ವಾತಾವರಣಕ್ಕೆ ತೆರೆದುಕೊಂಡಾಗ, ದೇಹದಿಂದ ಹೆಚ್ಚಿನ ಶಾಖವನ್ನು ಕಳೆದುಕೊಳ್ಳುತ್ತೀರಿ ಮತ್ತು ನೀವು ಶೀತ ಮತ್ತು ಜ್ವರ ಬರುವ ಸಾಧ್ಯತೆ ಹೆಚ್ಚು. 

ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದರಿಂದ ನಿಮ್ಮ ಕೂದಲು (Hair) ಆರೋಗ್ಯಕರವಾಗಿರುತ್ತದೆ. ಶೀತ ಮತ್ತು ಕಠಿಣವಾದ ಹವಾಮಾನವು ಕೂದಲಿನಿಂದ ಎಲ್ಲಾ ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ಅದು ಒಣಗುವಂತೆ ಮಾಡುತ್ತದೆ. ಕೂದಲನ್ನು ಬಾಚುವಾಗ, ಮತ್ತಷ್ಟು ಒಡೆಯುವಿಕೆ ಕಾರಣವಾಗಬಹುದು. ಇದು ನಿಮ್ಮ ನೆತ್ತಿಯನ್ನು ಒಣಗಿಸುತ್ತದೆ ಮತ್ತು ತಲೆಹೊಟ್ಟಿನ ಅಪಾಯವನ್ನು ಹೆಚ್ಚಿಸುತ್ತದೆ. ಟೋಪಿಯನ್ನು ಧರಿಸುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಇದು ನಿಮ್ಮ ನೆತ್ತಿಯ ಶುಷ್ಕತೆ ಮತ್ತು ತುರಿಕೆಯನ್ನು ತಡೆಯುತ್ತದೆ.

Hearing Loss: ಶೀತದಿಂದ ಕಿವಿ ಕೆಪ್ಪಾದೀತು ಎಚ್ಚರ!

ಚಳಿಗಾಲದಲ್ಲಿ ಆರೋಗ್ಯವಾಗಿರುವುದು ಹೇಗೆ ?

ಚಳಿಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ (Immunity Power) ಕಡಿಮೆ ಇರುತ್ತದೆ.  ಹೀಗಾಗಿ ಇತರ ಕಾಲಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗವು ಹೆಚ್ಚು ಸುಲಭವಾಗಿ ಹರಡುತ್ತದೆ. ಆದ್ದರಿಂದ, ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ಕಾಳಜಿ ವಹಿಸುವುದು ಅತ್ಯಗತ್ಯ. ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಲು ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ.

ಸೀಸನಲ್ ಫುಡ್ ತಿನ್ನಿರಿ: ಚಳಿಗಾಲದಲ್ಲಿ ನಾವು ರೀತಿಯ ಆಹಾರ ಸೇವಿಸುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ. ಇದು ನಮ್ಮ ಆರೋಗ್ಯವಾದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಸೀಸನಲ್ ಫುಡ್ (Seasonal Food) ಅಥವಾ ಕಾಲೋಚಿತ ಹಣ್ಣುಗಳು (Fruits) ಮತ್ತು ತರಕಾರಿ (Vegetables)ಗಳನ್ನು ಸೇವಿಸಿ. ಅವು ಪೌಷ್ಠಿಕಾಂಶವನ್ನು ಹೊಂದಿವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಸಾಜ್ ಮಾಡಿ: ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವ ಮೊದಲು ಬಿಸಿ ಎಣ್ಣೆ (Oil)ಯಲ್ಲಿ ಮಸಾಜ್ ಮಾಡುವುದರಿಂದ ಚರ್ಮ ಆರೋಗ್ಯಕರವಾಗಿರುತ್ತದೆ. ಎಣ್ಣೆಯ ಮಸಾಜ್ (Massage) ಚರ್ಮವನ್ನು ತೇವಾಂಶದಿಂದ ಇಡಲು ಮತ್ತು ಶಾಖವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ.

ವ್ಯಾಯಾಮ ಮಾಡುವುದು ಉತ್ತಮ: ಚಳಿಗಾಲದಲ್ಲಿ ವ್ಯಾಯಾಮ (Exercise) ಮಾಡುವುದು ಚಯಾಪಚಯವನ್ನು ಹೆಚ್ಚಿಸಲು, ಅಜೀರ್ಣ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ 30 ನಿಮಿಷಗಳ ಮಿತವಾದ ವ್ಯಾಯಾಮ ಕೂಡ ಆರೋಗ್ಯಕ್ಕೆ ಒಳ್ಳೆಯದು.

click me!