Beer For Hair: ಬಿಯರ್ ಬಳಸಿದ್ರೆ ಕೂದಲು ಸಾಫ್ಟ್ ಆಗುತ್ತೆ ಅಂತಾರೆ..ನಿಜಾನ ?

Suvarna News   | Asianet News
Published : Feb 02, 2022, 06:24 PM ISTUpdated : Feb 02, 2022, 06:29 PM IST
Beer For Hair: ಬಿಯರ್ ಬಳಸಿದ್ರೆ ಕೂದಲು ಸಾಫ್ಟ್ ಆಗುತ್ತೆ ಅಂತಾರೆ..ನಿಜಾನ ?

ಸಾರಾಂಶ

ಅಲ್ಕೋಹಾಲ್ (Alcohol) ಅಂದ್ರೆ ಆಗಲ್ಲ. ಅದ್ರಲ್ಲೂ ಬಿಯರ್ (Beer) ವಾಸನೆ ಯಪ್ಪಾ ಸಹಿಸೋಕಾಗಲ್ಲ ಅಂತೀರಾ. ಆದ್ರೆ ನಯವಾದ, ಸೊಂಪಾದ ಕೂದಲು (Hair) ಬೇಕು ಅನ್ನೋ ಆಸೆನಾ. ಹಾಗಿದ್ರೆ ಬಿಯರ್ ಬಗೆಗಿನ ನಿಮ್ಮ ಓಪಿನೀಯನ್ ಇನ್ಮುಂದೆ ಖಂಡಿತ ಚೇಂಜ್ ಆಗುತ್ತೆ.

ಸೊಂಪಾದ, ನಯವಾದ ಕೂದಲು ಹೊಂದಬೇಕೆಂದು ಪ್ರತಿಯೊಬ್ಬ ಹಣ್ಣುಮಕ್ಕಳೂ ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ (Lifestyle), ಆಹಾರಕ್ರಮದಿಂದ ಈ ರೀತಿಯ ಕೂದಲನ್ನು ಪಡೆಯುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಹಲವು ಆರ್ಯುವೇದಿಕ್ ಶಾಂಪೂ, ಹೇರ್ ಮಾಸ್ಕ್ ಉಪಯೋಗಿಸಿದರೂ ಹೆಚ್ಚು ಪ್ರಯೋಜನವಾಗುವುದಿಲ್ಲ. ಹೀಗಿದ್ದಾಗ ಬಿಯರ್ ಬಳಸಿ ಕೂದಲು (Hair) ತೊಳೆಯಿರಿ, ಕೂದಲು ಸೊಂಪಾಗಿ ಬರುತ್ತದೆ ಎಂದು ಹಲವರು ಸಲಹೆ ನೀಡುವುದಿದೆ. ಅದು ಎಷ್ಟು ನಿಜ. ನೀವು ಕೂಡಾ ಅದನ್ನು ಟ್ರೈ ಮಾಡ್ಬೋದಾ ತಿಳ್ಕೊಳ್ಳಿ.

ಬಿಯರ್ (Beer) ವಿಟಮಿನ್ ಬಿಯಲ್ಲಿ ಸಮೃದ್ಧವಾಗಿದೆ. ಹಾಗಾಗಿಯೇ ಇದು ನಿಮ್ಮ ಕೂದಲನ್ನು ಬಲಗೊಳಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಮಾಲ್ಟ್ ಮತ್ತು ಹಾಪ್‌ಗಳಲ್ಲಿ ಕಂಡುಬರುವ ಪ್ರೋಟೀನ್ (Protein) ಬಿಯರ್‌ನಲ್ಲಿರುವ ಸಕ್ರಿಯ ಪದಾರ್ಥಗಳು) ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ, ಸುಕ್ರೋಸ್ ಮತ್ತು ಮಾಲ್ಟೋಸ್ ಸಕ್ಕರೆಗಳು ಕೂದಲಿನ ಹೊರಪೊರೆಗಳನ್ನು ಬಲಪಡಿಸಲು ಮತ್ತು ಅವುಗಳನ್ನು ಹೊಳೆಯುವಂತೆ ಮಾಡಲು ಕೆಲಸ ಮಾಡುತ್ತವೆ. ಆದ್ದರಿಂದ ನಿಮ್ಮ ಕೂದಲು ಹೊಳಪನ್ನು ಹೊಂದಿಲ್ಲದಿದ್ದರೆ, ಹೆಚ್ಚು ಉದುರುತ್ತಿದ್ದರೆ ಬಿಯರ್ ಬಳಸಿ ನೋಡಿ.

Hair Fall Remedies: ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ

ಬಿಯರ್‌ನಲ್ಲಿ ಸತು, ಫೋಲೇಟ್, ಬಯೋಟಿನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯಂತಹಾ ಅಗತ್ಯ ಪೋಷಕಾಂಶಗಳಿವೆ. ಈ ಎಲ್ಲಾ ಅಂಶಗಳು ಕೂದಲಿನ ಆರೋಗ್ಯ (Health)ವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿವೆ. ಈ ಪೋಷಕಾಂಶಗಳ ಕೊರತೆಯು ಆಂಡ್ರೊಜೆನಿಕ್ ಅಲೋಪೆಸಿಯಾ ಮತ್ತು ಟೆಲೋಜೆನ್ ಎಫ್ಲುವಿಯಮ್ ಅನ್ನು ಪ್ರಚೋದಿಸುತ್ತದೆ ಮತ್ತು ಕೂದಲು ಉದುರುವಿಕೆ ಮತ್ತು ಕೂದಲು ಹಾನಿಗೆ ಕಾರಣವಾಗಬಹುದು.

ಬಿಯರ್‌ನಿಂದ ಕೂದಲು ತೊಳೆಯುವುದು ಏಕೆ ಒಳ್ಳೆಯದು ?
ಕೂದಲಿಗೆ ಶಾಂಪೂ ಬಳಸುವ ಪ್ರತಿಯೊಬ್ಬರೂ ತಮ್ಮ ಗಮನಕ್ಕೆ ಬಾರದೆಯೇ ಕೂದಲಿಗೆ ಬಿಯರ್‌ನ್ನು ಬಳಸುತ್ತಿದ್ದಾರೆ. ಯಾಕೆಂದರೆ ಶಾಂಪೂವನ್ನು ತಯಾರಿಸುವ ಅನೇಕ ಕಂಪೆನಿಗಳು ಇದಕ್ಕೆ ಬಿಯರ್ ಸೇರಿಸುತ್ತವೆ. ವಾಸ್ತವವಾಗಿ, ಡಿ-ಕಾರ್ಬೊನೇಟೆಡ್ ಬಿಯರ್‌ ಕೂದಲಿಗೆ ಕಂಡೀಷನರ್‌ (Conditioner) ಆಗಿ ಕಾರ್ಯ ನಿರ್ವಹಿಸುತ್ತದೆ. ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಮತ್ತು ಕೂದಲಿನ ಪರಿಮಾಣವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. 

Drinking Ritual: ಕುಡಿಯುವ ಮೊದಲು ಮದ್ಯವನ್ನು ನೆಲಕ್ಕೆ ಸಿಂಪಡಿಸುವುದೇಕೆ ?

ಬಿಯರ್ ತಯಾರಿಕೆಯಲ್ಲಿ ಬಳಸುವ ಹಾಪ್ಸ್ ಎಂಬ ಅಂಶ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೂದಲಿನ ಮೇಲೆ ಬಿಯರ್‌ನ್ನು ಬಳಸುವ ಮೊದಲು, ಬಿಯರ್‌ನ್ನು ಡಿ-ಕಾರ್ಬೊನೇಟ್ ಮಾಡಬೇಕಾಗಿದೆ; ಇಲ್ಲದಿದ್ದರೆ ಬಿಯರ್‌ನ ಕಾರ್ಬನ್ ಡೈಆಕ್ಸೈಡ್ ಅನ್ನು ನೀರಿನೊಂದಿಗೆ ಸಂಯೋಜಿಸಿದಾಗ, ಅದು ಗಟ್ಟಿಯಾದ ನೀರನ್ನು ರಚಿಸಬಹುದು, ಇದರಿಂದ ಕೂದಲನ್ನು ತೊಳೆಯಲು ಕಷ್ಟವಾಗುತ್ತದೆ.

ಕೂದಲು ತೊಳೆಯಲು ಬಿಯರ್ ಹೇಗೆ ಬಳಸಬೇಕು ?
ಕೂದಲು (Hair) ತೊಳೆಯಲು ಬಿಯರ್ ಬಳಸುವುದೇನೋ ಸರಿ. ಆದರೆ, ನೀವಿದನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೂದಲು ತೊಳೆಯಲು ಬಿಯರ್  ಬಳಸುವ ಮೊದಲು, ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಮೊದಲಿಗೆ ನೆತ್ತಿಯನ್ನು ಸ್ವಚ್ಛಗೊಳಿಸಲು ನಿಮ್ಮ ಸಾಮಾನ್ಯ ಶಾಂಪೂ (Shampoo)ವನ್ನೇ ಬಳಸಿ.  ಆದರೆ ಕಂಡೀಷನರ್‌ನ್ನು ಬಳಸಬೇಡಿ. ಏಕೆಂದರೆ ನೀವು ಬಿಯರ್‌ನ್ನು ಕೂದಲಿನ ಕಂಡೀಷನರ್ ಆಗಿ ಬಳಸುತ್ತಿದ್ದೀರಿ. 

ಕೂದಲಿಗೆ ಬಿಯರ್ ಬಳಸುವ ಮೊದಲು, ಬಿಯರ್‌ನ್ನು ಡಿ-ಕಾರ್ಬೊನೇಟ್ ಮಾಡಬೇಕಾಗುತ್ತದೆ. ಬಿಯರ್‌ನ್ನು ಡಿ-ಕಾರ್ಬೊನೇಟ್ ಮಾಡಲು, ಅದನ್ನು ಒಂದು ಬಟ್ಟಲಿನಲ್ಲಿ ಸುರಿಯಿರಿ ಮತ್ತು ರಾತ್ರಿಯಿಡೀ ಹಾಗೆಯೇ ಇಡಿ. ಇದರಿಂದ ಬಿಯರ್ ಗಾಳಿಗೆ ಒಡ್ಡಿಕೊಂಡು ಆಕ್ಸಿಡೀಕರಣಗೊಳ್ಳುತ್ತದೆ. ನಂತರ ಇದನ್ನು ತಲೆಕೂದಲು ತೊಳೆಯಲು ಬಳಸಬಹುದಾಗಿದೆ. ಬಿಯರ್ ಅನ್ನು ಕೂದಲಿಗೆ ಬಳಸುವ ಮೊದಲು ಯಾವಾಗಲೂ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

ಕೂದಲನ್ನು ತೊಳೆಯಲು ಯಾವ ರೀತಿಯ ಬಿಯರ್ ಆರಿಸಿಕೊಳ್ಳಬೇಕು ?
ಬಿಯರ್ ಕುಡಿಯುವುದರಿಂದ ನಿರ್ಜಲೀಕರಣವಾಗುತ್ತದೆ ಎಂದು ನೀವು ಕೇಳಿರಬಹುದು. ಕೂದಲಿಗೆ ಉಪಯೋಗಿಸುವುದರಿಂದಲೂ ಇದೇ ಪರಿಣಾಮವಾಗುತ್ತದೆ. ಹೀಗಾಗಿ ಮೊದಲನೆಯದಾಗಿ ಯಾವಾಗಲೂ ಕಡಿಮೆ ಆಲ್ಕೋಹಾಲ್ ಪ್ರಮಾಣವನ್ನು ಹೊಂದಿರುವ ಬಿಯರ್ ಆರಿಸಿಕೊಳ್ಳಿ. ಅದು ಸಾಧ್ಯವಾಗದಿದ್ದರೆ, ಅದನ್ನು ಸ್ವಲ್ಪ ನೀರು (Water) ಸೇರಿಸಿ ದುರ್ಬಲಗೊಳಿಸಿ ನಂತರ ಬಳಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?