ಬೇಸಿಗೆ ಹತ್ತಿರ ಬರುತ್ತಿದೆ. ಬೇಧಿ ಸಾಮಾನ್ಯವಾಗಿ ಕಾಡೋ ರೋಗ. ಹೊರಗಡೆ ಆಹಾರ ಸೇವಿಸಿದರಂತೂ ಪರಿಸ್ಥಿತಿ ಹದಗೆಡುತ್ತದೆ. ಬಿಸಿಲಿನ ಬೇಗೆ ಮತ್ತು ಡೀ ಹೈಡ್ರೈಷನ್ ಜೊತೆಗೆ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ, ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿಯೇ ಸಿಗೋ ಆಹಾರಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇಲ್ ಓದಿ.
ಅತಿಸಾರ(diarrhea) ಅಥವಾ ಲೂಸ್ ಮೋಷನ್ ದೇಹದಿಂದ ಸಾರವನ್ನು ಹೊರಹಾಕುವ ಅನಾರೋಗ್ಯ. ಯಾವಾಗ, ಯಾವ ಸಂದರ್ಭದಲ್ಲಿ ಅತಿಸಾರ ಕಾಡುತ್ತೋ ಗೊತ್ತಾಗೋಲ್ಲ. ಅದರಲ್ಲಿಯೂ ಬೇಸಿಗೆಯಲ್ಲಿ ಮದುವೆಯಂಥ ಶುಭ ಸಮಾರಂಭಗಳ ಊಟ ಮಾಡಿದಲ್ಲಿ ಇದು ಬಹಳಷ್ಟು ಜನರನ್ನು ಕಾಡುತ್ತದೆ. ಇದರಿಂದ ಕಾಡುವ ಸುಸ್ತು(tiredness) ಮತ್ತು ನೋವು ಒಂದೆಡೆಯಾದರೆ, ಬಾಧೆಗೊಳ್ಳುವ ಅಥವಾ ಸೂಕ್ತ ಸಮಯದಲ್ಲಿ ಟಾಯ್ಲೆಟ್ ಸಿಗದೇ ಒದ್ದಾಡುವ ಮಾನಸಿಕ ಯಾತನೆ ಮತ್ತೊಂದು ರೀತಿ.
ಅತಿಸಾರವೂ, ದೇಹದ ರೋಗ ನಿರೋಧಕ ವ್ಯವಸ್ಥೆ(Immune system)ಯ ಒಂದು ಕ್ರಿಯೆ. ಜೀರ್ಣಾಂಗದಲ್ಲಾದ ಯಾವುದೋ ತೊಂದರೆಯನ್ನು ಉಲ್ಬಣಿಸುವ ಬದಲು ಹೆಚ್ಚಿನ ನೀರಿನೊಂದಿಗೆ ದೇಹದಿಂದ ಆದಷ್ಟೂ ಬೇಗ ವಿಸರ್ಜಿಲು ಈ ಅತಿಸಾರ ನೆರವಾಗುತ್ತದೆ. ಆದ್ರಿಂದ ಈ ಬಗ್ಗೆ ಭಯ ಬೇಡ. ಕಾಯಿಲೆ ಏನೂ ಅಲ್ಲ. ಆದರೆ, ಸುಸ್ತು ಮಾಡೋದಂತೂ ಸತ್ಯ. ಸಾಮಾನ್ಯವಾಗಿ ಈ ತೊಂದರೆ ಒಂದರಿಂದ ಎರಡು ದಿನಗಳವರೆಗೆ ಮಾತ್ರವೇ, ಮೊದ ಮೊದಲು ವಿಪರೀತ ಇರುತ್ತದೆ. ಬರ ಬರುತ್ತಾ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಜೀರ್ಣ ಸಮಸ್ಯೆ ಅಥವಾ ದೂಷಿತ ಆಹಾರ ಸೇವನೆಯಿಂದ ಅತಿಸಾರ ಕಾಡಿದರೆ ತಕ್ಷಣವೇ ಪರಿಹಾರ ಸಿಗುತ್ತೆ ಬಿಡಿ. ಆದರೆ, ವೈರಸ್ ಅಥವಾ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಅತಿಸಾರ ಉಂಟಾದರೆ, ಇದು ಉಲ್ಬಣಗೊಂಡರೆ, ಮೂರನೆಯ ದಿನವೂ ಮುಂದುವರೆಯಬಹುದು. ಆಗ ವೈದ್ಯರ ತಪಾಸಣೆ ಅತ್ಯಗತ್ಯ.
ಲಕ್ಷಣಗಳೇನು?(Symptoms)
ಕಾರಣಗಳೇನು?(Reasons)
ಕಲುಷಿತ ನೀರಿನಲ್ಲಿ ಬ್ಯಾಕ್ಟೀರಿಯಾಗಳಾದ ಈ ಕೊಲೈ, ಸಾಲ್ಮೋನೆಲ್ಲಾ, ಕ್ಯಾಂಪೈಲೋಬ್ಯಾಕ್ಟರ್ ಮೊದಲಾದವು ಇರುತ್ತವೆ. ಈ ನೀರನ್ನು ಕುಡಿದಾಗ ಅಥವಾ ಈ ನೀರಿನಿಂದ ತಯಾರಿಸಿದ ಆಹಾರ ಸೇವನೆಯಿಂದ ಅತಿಸಾರ ಕಾಡಬಹುದು. ವೈರಸ್‌ಗಳಾದ ವೈರಲ್ ಹೆಪಟೈಟಿಸ್, ಹರಿಪ್ಸ್ ಸಿಂಪ್ಲೆಕ್ಸ್, ನೋರೋವೈರಸ್ ಮತ್ತು ರೋಟಾವೈರಸ್ ಅತಿಸಾರವನ್ನು ಪ್ರಚೋದಿಸಬಹುದು. ಕೆಲವೊಮ್ಮೆ ಮಾನಸಿಕ ಒತ್ತಡ(stress)ದಿಂದಲೂ ಹೊಟ್ಟೆ ಉಬ್ಬರಿಸಿ, ಸಮಸ್ಯೆ ಎದುರಾಗಬಹುದು.
ಕೆಲವರಿಗೆ ಜೀರ್ಣ ಶಕ್ತಿ ಚೆನ್ನಾಗಿರೋಲ್ಲ. ಅಂಥವರಿಗೆ ಎಂಥದ್ದೇ ಆಹಾರ ಸೇವಿಸಿದರೂ ಈ ಸಮಸ್ಯೆ ಕಾಡುತ್ತಲೇ ಇರುತ್ತವೆ. ಲ್ಯಾಕ್ಟೋಸ್ ಸಹಿಸಲು ಸಾಧ್ಯವಿಲ್ಲದ(lactose intolerant) ವ್ಯಕ್ತಿಗಳು ಹಾಲು ಅಥವಾ ಡೈರಿ ಉತ್ಪನ್ನಗಳನ್ನು ತಿಂದಾಕ್ಷಣ ಅನೇಕರಿಗೆ ಅತಿಸಾರ ಕಾಡುತ್ತದೆ. ಕೆಲವೊಮ್ಮೆ ಜಠರ ಮತ್ತು ಕರುಳಲ್ಲಿ ಕಾಣಿಸಿಕೊಳ್ಳುವ ಉರಿಯೂತ, ಕ್ರಾನ್ಸ್, ಸೀಲಿಯಾಕ್, ಜಠರದ ಹುಣ್ಣು ಅಥವಾ ಅಲ್ಸರೇಟಿವ್ ಕೋಲೈಟಿಸ್ ಅಥವಾ ಪಿತ್ತಕೋಶದ ಕಾಯಿಲೆಯೂ ಬೇಧಿಯನ್ನುಂಟು ಮಾಡಬಹುದು.
Social Anxiety: ಹೊಸಬರ ಭೇಟಿಯಾಗಲು ಆತಂಕ ಬೇಡ, ಸಿದ್ಧತೆ ಹೀಗಿರಲಿ
ಹಸಿ ಆಹಾರ ಪದಾರ್ಥಗಳ ಸೇವನೆ ಅದರಲ್ಲಿಯೂ ಹಾಲು(Milk), ಮಾಂಸ(Meat) ಈ ಸಮಸ್ಯೆಗೆ ಮೂಲ ಕಾರಣವಾಗುತ್ತದೆ. ಜಠರದಲ್ಲಿ ಎದುರಾಗುವ ಗಂಟುಗಳು ಅಥವಾ ಸಿಸ್ಟಿಕ್ ಫೈಬ್ರೋಸಿಸ್ ಇದ್ದವರಿಗಂತೂ ಈ ಸಮಸ್ಯೆ ತಪ್ಪಿದ್ದೇ ಅಲ್ಲ. ಕೆಲವು ಪ್ರತಿ ಜೀವಕ ಔಷಧಿಗಳ ಅಡ್ಡಪರಿಣಾಮದಿಂದಲೂ ಅತಿಸಾರ ಎದುರಾಗಬಹುದು.
ಇದೇನು ಗಂಭೀರವಾದ ಸಮಸ್ಯೆಯಲ್ಲದಿದ್ದರೂ, ದೇಹದಿಂದ ವಿಪರೀತ ನೀರು ಹೋಗುವ ಪ್ರಮಾಣದಿಂದ ಸುಸ್ತು ಆವರಿಸುತ್ತದೆ. ಹಾಗಾಗಿ, ಅತಿಸಾರ ಎದುರಾದಾಗ ಸಾಕಷ್ಟು ನೀರು ಸೇವನೆ ಹಾಗೂ ನೀರಿನಂಶವಿರುವ ಆಹಾರಗಳನ್ನೇ ಹೆಚ್ಚು ಸೇವಿಸಬೇಕು. ಇಲ್ಲದೇ ಸಿಂಪಲ್ ಮನೆ ಮದ್ದುಗಳು ಸಹಾಯಕ್ಕೆ ಬರುತ್ತವೆ. ಇಲ್ಲಿವೆ ಮಾಹಿತಿ,
ಬಾಳೆಹಣ್ಣು(Banana)
ಅರೇ ಬಾಳೆಹಣ್ಣು ತಿಂದರೆ ಬೇಧಿಯಾಗುತ್ತದೆ, ಮಲಬದ್ಧತೆಯಾದಾಗ ಇದನ್ನು ಸೇವಿಸಬೇಕು ಅಂತ ಎಲ್ಲರಿಗೂ ಗೊತ್ತು. ಆದರೆ, ಅತಿಸಾರಕ್ಕೂ ಇದೊಂದು ಅತ್ಯುತ್ತಮ ಮದ್ದು ಅಂತೇನಾದರೂ ಗೊತ್ತಾ? ಪೂರ್ಣ ಹಣ್ಣಾಗಿರದ ಬಾಳೆಹಣ್ಣು ತಿನ್ನುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ಆದರೆ, ಬಾಳೆಹಣ್ಣು ತುಂಬಾ ಪಕ್ವವಾಗಿರಬಾರದು. ಸ್ವಲ್ಪ ಕಾಯಿ ಕಾಯಿ ಇದ್ದರೆ ಮಾತ್ರ ಒಳಿತು. ಸೇರದಿದ್ದರೆ ಮೊಸರಿನೊಂದಿಗೆ ತಿನ್ನಬಹುದು. ಅದಕ್ಕೊಂದು ಸ್ವಲ್ಪ ಉಪ್ಪು, ಒಗ್ಗರಣೆ ಹಾಕಿಕೊಂಡು, ಕೋಸಂಬರಿಯಂತೆಯೂ ಸೇವಿಸಬಹುದು. ಇದರಲ್ಲಿರುವ ಪೆಕ್ಟಿನ್ ಅಂಶ ಕರುಳಿನ ದ್ರವಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಮಲ ವಿಸರ್ಜನೆ ಸುಸೂತ್ರವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಮ್ ಸಮೃದ್ಧವಾಗಿದ್ದು, ಇದನ್ನು ಸೇವಿಸಿದಾಗ ದೇಹದಲ್ಲಿ ಕಳೆದು ಹೋದ ದ್ರವಗಳನ್ನು ಮರು ಸ್ಥಾಪಿಸಬಹುದು.
ಸೇಬು(Apple)
ಸೇಬು ವಿವಿಧ ಕಾರಣಗಳಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬುವುದು ಎಲ್ಲರಿಗೂ ಗೊತ್ತು. ಜೀರ್ಣ ಕ್ರಿಯೆಗೆ ಸಹಕರಿಸುವ ಇದು, ಮಕ್ಕಳಲ್ಲಿ ಅತಿಸಾರ ಕಂಡಾಗಲೂ ತಿನಿಸಿದರೊಳಿತು. ಈ ಹಣ್ಣಿನಲ್ಲಿ ನೈಸರ್ಗಿಕ ಪ್ರತಿ ಜೀವಕಗಳಿದ್ದು, ಕರುಳುಗಳಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ ಹಾಗೂ ಉರಿಯನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮಜೀವಿ ನಿವಾರಕ ಗುಣಗಳನ್ನು ಹೊಂದಿರುವ ಸೇಬು ಸೋಂಕನ್ನು ನಿವಾರಿಸುತ್ತದೆ. ಸೇಬಿನಲ್ಲಿರುವ ಪೆಕ್ಟಿನ್ ನೀರಿನಂಶವನ್ನು ಕರುಳು ಹೀರಿಕೊಂಡು ಕಲ್ಮಶಗಳನ್ನು ಗಟ್ಟಿಯಾಗಿಸುತ್ತದೆ. ಹೊಟ್ಟೆಯಲ್ಲಿ Ph ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ಜೀರ್ಣಾಂಗಗಳ ಸಹಜ ವಾತಾವರಣ ಮರಳಿ ಬರುತ್ತದೆ. ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಸೇಬಿನ ತಿರುಳು ಹಾಗೂ ಕೊಂಚ ಜೇನು ಬೆರೆಸಿ, ಕಲಕಿ ಕುಡಿಯಬೇಕು. ದಿನಕ್ಕೆರಡು ಬಾರಿ ಸೇವಿಸಿದರೆ ಅತ್ಯುತ್ತಮ ಪರಿಣಾಮಕಾರಿ.
ಮೊಸರು(Curd)
ಅತಿಸಾರಕ್ಕಿದು ಅತ್ಯುತ್ತಮ ನೈಸರ್ಕಿಕ ಆಹಾರ. ಒಂದು ಬಟ್ಟಲು ಮೊಸರನ್ನು, ಬೇಕಾದರಲ್ಲಿ ಉಪ್ಪು ಹಾಕಿಕೊಂಡು, ದಿನಕ್ಕಿ ವಾರದವರೆಗೆ ಮೂರು ಸಾರಿ ಸೇವಿಸಿದರೆ ದೇಹಕ್ಕೆ ಅಗತ್ಯ ಎನರ್ಜಿ ಸಿಕ್ಕಿದಂತಾಗುತ್ತದೆ. ಮೊಸರಲ್ಲಿ ಜೀರ್ಣಕಾರಿ ಬ್ಯಾಕ್ಟೀರಿಯಾಗಳಿವೆ. ಇವು ಕರುಳುಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಸೇವಿಸುವ ಮುನ್ನವೇ ಅರ್ಧದಷ್ಟು ಜೀರ್ಣಗೊಂಡಿರುತ್ತದೆ. ಈ ಆಹಾರವನ್ನು ಜೀರ್ಣಿಸಿಕೊಳ್ಳುವುದು ನಮ್ಮ ಜೀರ್ಣಾಂಗಗಳಿಗೆ ಅತಿ ಸುಲಭ. ಅಷ್ಟೇ ಅಲ್ಲ ಬೇಧಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ದವೂ ಹೋರಾಡುತ್ತವೆ. ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತವೆ.
Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?
ಎಳನೀರು(Tender coconut)
ಬೇಸಿಗೆಯಲ್ಲಿ ಎಳನೀರು ಜೀವ ರಕ್ಷಕದಂತೆ ಕಾರ್ಯ ನಿರ್ವಹಿಸುತ್ತದೆ. ಆರೋಗ್ಯ(health)ವಾಗಿರಲು ಆಗಾಗ ಇದರ ಸೇವನೆ ಅತ್ಯಗತ್ಯ. ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಿನ ನೀರಿನಂಶದ ಅಗತ್ಯವಿದ್ದು, ಎಳನೀರು, ಮೂತ್ರವರ್ಧಕ ಹಾಗೂ ಜೀರ್ಣಾಂಗಗಳನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ. ಎನರ್ಜಿ ಲೆವಲ್ ಹೆಚ್ಚಸು ಎಳನೀರನ್ನು ದಿನಕ್ಕೊಂದರೆಡು ಬಾರಿ ಕುಡಿದರೊಳಿತು. ಇದರಲ್ಲಿರುವ ಪೊಟ್ಯಾಷಿಯಮ್ ಮತ್ತು ಸೋಡಿಯಂನಂತಹ ಎಲೆಕ್ಟ್ರೋಲೈಟ್‌ಗಳಿದ್ದು, ದೇಹದ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಪುನಃಸ್ಥಾಪಿಸುತ್ತದೆ. ಇದು ದೇಹ ಕಳೆದುಕೊಂಡಿದ್ದ ನೀರಿನಂಶವನ್ನು ಮರು ತುಂಬಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರ ಅಸಾಧಾರಣ ರಾಸಾಯನಿಕ ಸಂಯೋಜನೆಯು ಪುನರ್ಜಲೀಕರಣ ಮಾಡುವುದಲ್ಲದೆ, ಪೋಷಕಾಂಶಗಳಾದ ಅಮೈನೋ ಆಮ್ಲಗಳು, ಕೊಬ್ಬಿನಾಮ್ಲಗಳು, ವಿಟಮಿನ್ ಸಿ, ಮೆಗ್ನೀಷಿಯಮ್ ಮತ್ತು ಕಿಣ್ವಗಳನ್ನು ದೇಹಕ್ಕೆ ಅಗತ್ಯದಷ್ಟು ಒದಗಿಸುತ್ತದೆ ಮತ್ತು ಇದು ಬಲವಾದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ.
ಜೀರಿಗೆ ನೀರು(jeera)
ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ, ಅಲ್ಲದೇ ಮಹಿಳೆಯರು ಅನುಭವಿಸುವ ತಿಂಗಳ ಸ್ರಾವದ ನೋವಿಗೆ ಜೀರಿಗೆ ಬೆಸ್ಟ್ ಮದ್ದು. ಒಂದು ಕಪ್ ನೀರು, ಒಂದು ಚಿಕ್ಕ ಚಮಚ ಜೀರಿಗೆಯನ್ನು ಒಟ್ಟಾಗಿ ಕುದಿಸಬೇಕು. ಅದು ಸುಮಾರು ಅರ್ಧಕ್ಕಿಂತಲೂ ಕಡಿಮೆಯಾಗೋ ತನಕ ಕುದ್ದ ನಂತರ, ಕೆಳಗಿಳಿಸಿ, ತಣಿಯಲು ಬಿಡಬೇಕು. ತಣಿದ ನಂತರ ಸೋಸಿ, ದಿನಕ್ಕೆ ಮೂರ್ನಾಲ್ಕು ಬಾರಿ ಕುಡಿಯಬಹುದು. ಜೀರಿಗೆಯಲ್ಲಿರುವ ಪ್ರತಿ ಜೀವಕ ಗುಣಲಕ್ಷಣಗಳು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಸಾಯುಸುತ್ತದೆ. ಉರಿಯೂತವುಂಟಾಗಿರುವ ಕರುಳನ್ನು ಸರಿ ಮಾಡಬಲ್ಲದು. ದೇಹದ ನೀರಿನಂಶ ಹೆಚ್ಚಿಸುತ್ತದೆ. ದೇಹದ ಉಷ್ಣತೆಯನ್ನು ನಾರ್ಮಲ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಪೊಟ್ಯಾಷಿಯಮ್ ದೇಹದ ಎಲೆಕ್ಟ್ರೋಲೈಟುಗಳ ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ.
Weight Loss Diet: ಸಣ್ಣಗಾಗ್ಬೇಕಾ ? ತಟ್ಟೆಯಲ್ಲಿ ನೆಗೆಟಿವ್ ಕ್ಯಾಲೊರಿ ಫುಡ್ ಇರ್ಲಿ
ಹಸಿಶುಂಠಿ(Ginger)
ಹೊಟ್ಟಿ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದೂ ಬೆಸ್ಟ್ ಔಷಧಿ. ಆಯುರ್ವೇದ(Ayurveda)ದ ಪ್ರಕಾರ, ಅತಿಸಾರಕ್ಕೆ ಹಸಿಶುಂಠಿ ಅತ್ಯುತ್ತಮ ಪರಿಹಾರ. ಅಜೀರ್ಣತೆಯಿಂದ ಎದುರಾದ ಅತಿಸಾರಕ್ಕೆ ಇದಕ್ಕಿಂತ ಬೆಸ್ಟ್ ಮದ್ದು ಮತ್ತೊಂದಿಲ್ಲ. ಎರಡು ಚಮಚ ಶುಂಠಿ ರಸಕ್ತೆ, ಜೇನು ಸೇರಿಸಿಕೊಂಡು, ತುಸು ಉಗುರು ಬೆಚ್ಚಗಿನ ನೀರಿನೊಂದಿಗೆ ದಿನಕ್ಕೆ ಮೂರ್ನಾಲ್ಕು ಬಾರಿ ಕುಡಿಯಬಹುದು. ಶುಂಠಿಯಲ್ಲಿರುವ ಪ್ರತಿಜೀವಕ ಗುಣ ಅತಿಸಾರವನ್ನು ಪ್ರಚೋದಿಸುವ ಹಾನಿಕಾರಕ ರೋಗಕಾರಕಗಳನ್ನು ಕೊಲ್ಲುತ್ತದೆ. ಕರುಳುಗಳಲ್ಲಿ ಆಹಾರ ಸರಾಗವಾಗಿ ಸಾಗುವಂತೆ ಮಾಡಲು ಶುಂಠಿ ನೆರವಾಗುತ್ತದೆ. ಜೀರ್ಣಾಂಗಗಳ ಕಿಣ್ವಗಳನ್ನು ಹೆಚ್ಚಿಸಿ, ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ
ಲಿಂಬೆರಸ(Lemon)
ಊರಿನ ಕಡೆ ಬೂದಿನ ಹನಿ ಮಾಡುತ್ತಾರೆ. ಬೆಚ್ಚಗಿನ ನೀರಿಗೆ ಲಿಂಬೆರಸ, ಒಂದೆರಡು ಮೆಣಸಿನ ಕಾಳು(pepper) ಹಾಗೂ ತುಸು ಒಣ ಶುಂಠಿ ಹಾಕಿ ನೀರಿನಲ್ಲಿ ಕುದಿಸಿ, ಅದಕ್ಕೆ ಲಿಂಬೆರಸ ಹಾಗೂ ಚಿಟಿಕೆ ಉಪ್ಪ ಹಾಕಿ ಕುಡಿದರೆ ಅತ್ಯಂತ ಪರಿಣಾಮಕಾರಿ. ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿದರೆ ಉದರ ಸಂಬಂಧ ಪ್ರತಿಯೊಂದೂ ಸಮಸ್ಯೆಯೂ ತಕ್ಷಣವೇ ಪರಿಹಾರ ಕಾಣುವಲ್ಲಿ ಅನುಮಾನವೇ ಇಲ್ಲ. ಲಿಂಬೆರಸದಲ್ಲಿ ಉರಿಯೂತ ನಿವಾರಕ ಮತ್ತು ಆಮ್ಲೀಯ ಗುಣಗಳಿವೆ, ಇದು ಉರಿಯುತ್ತಿರುವ ಕರುಳನ್ನು ಶಾಂತಗೊಳಿಸುತ್ತದೆ ಮತ್ತು ದೇಹದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳನ್ನು ದೇಹಕ್ಕೆ ಒದಗಿಸುತ್ತದೆ. ಇದರಿಂದ ಶಕ್ತಿ ಸಹಜವಾಗಿಯೇ ಹೆಚ್ಚುತ್ತದೆ.