Weight Loss Tips: ಮನೆಯಲ್ಲೇ ತಯಾರಿಸಬಹುದಾದ ಹೆಲ್ದೀ ಡ್ರಿಂಕ್ಸ್ ಕುಡೀರಿ.. ಸೂಪರ್ ಸ್ಲಿಮ್ ಆಗಿ

By Suvarna News  |  First Published Feb 25, 2022, 8:33 PM IST

ದಿನ ಹೋಗ್ತಾ ಇರೋ ಹಾಗೇ ದಪ್ಪಗಾಗ್ತಾ ಹೋಗ್ತಿದ್ದೀರಾ ? ಸಣ್ಣಗಾಗ್ಬೇಕು ಅಂತ ಜಿಮ್ (Gym), ಡಯೆಟ್ (Diet) ಅಂತ ಏನೇನೋ ಸರ್ಕಸ್ ಮಾಡ್ತಿದ್ದೀರಾ ? ಟೆನ್ಶನ್ ಬಿಡಿ, ಈ ಸೂಪರ್ ಡ್ರಿಂಕ್ಸ್ (Super Drinks) ಟ್ರೈ ಮಾಡಿ. 
 


ಅಧಿಕ ತೂಕ (Weight) ಇವತ್ತಿನ ದಿನಗಳಲ್ಲಿ ಸಾರ್ವತ್ರಿಕ ಸಮಸ್ಯೆ. ಎಲ್ಲರೂ ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಆದ್ರೆ ಇದಕ್ಕಾಗಿ ಹೆಚ್ಚು ದುಡ್ಡು ವ್ಯಯಿಸುವುದು, ಕೃತಕ ಡ್ರಿಂಕ್ಸ್ ತೆಗೆದುಕೊಳ್ಳುವುದು ಹಲವರಿಗೆ ಇಷ್ಟವಾಗದ ವಿಷಯ. ಆದ್ರೆ ನಿಮ್ಗೆ ಗೊತ್ತಾ ? ಅಡುಗೆ ಕೋಣೆ (Kitchen)ಯಲ್ಲಿರುವ ಕೆಲವೊಂದು ವಸ್ತುಗಳನ್ನು ಬಳಸಿ ತೂಕನಷ್ಟಕ್ಕೆ ನೆರವಾಗುವ ಸೂಪರ್ ಡ್ರಿಂಕ್ಸ್ ತಯಾರಿಸಬಹುದು. ಹೆಲ್ತ್‌ಸೇಕ್‌ನ ಸಂಸ್ಥಾಪಕಿ, ಪೌಷ್ಟಿಕತಜ್ಞೆ ಪ್ರಿತಿಕಾ ಬೇಡಿ ಸೂಚಿರುವ, ಸರಳವಾದ ಅಡುಗೆ ಪದಾರ್ಥಗಳೊಂದಿಗೆ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಸೂಪರ್ ಡ್ರಿಂಕ್ಸ್ ಲಿಸ್ಟ್ ಇಲ್ಲಿದೆ.

ಜೀರಾ ನೀರು
ತೂಕ ನಷ್ಟಕ್ಕೆ ಜೀರಿಗೆ (Cumin) ನೀರು ಸೇವಿಸುವುದು ಅತ್ಯುತ್ತಮ. ಬಿಸಿ ನೀರಿಗೆ ಜೀರಿಗೆ ಕಾಳುಗಳನ್ನು ಹಾಕಿ ಕುಡಿಯವುದರಿಂದ ಬೇಗನೇ ತೂಕ ಕಳೆದುಕೊಳ್ಳಬಹುದು. ಈ ಮಿಶ್ರಣವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಒಟ್ಟಾರೆ ಆರೋಗ್ಯ (Health)ವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹವನ್ನು ಶುದ್ಧೀಕರಿಸಲು ಸಹ ಉಪಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಪ್ರತಿದಿನ ಬೆಳಗ್ಗೆ ಇದನ್ನು ಕುಡಿಯಿರಿ.

Latest Videos

undefined

Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ

ಒಂದು ಕಪ್ ಬೆಚ್ಚಗಿನ ನೀರು ಮತ್ತು ಆಪಲ್ ಸೈಡರ್ ವಿನೆಗರ್ 
ದೈನಂದಿನ ಆಹಾರದಲ್ಲಿ ತೂಕ ಇಳಿಸುವ ಪಾನೀಯವಾಗಿ ಆಪಲ್ ಸೈಡರ್ ವಿನೇಗರ್‌ (Vinegar)ನ್ನು ಬಳಸುವುದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಉಪಾಹಾರವನ್ನು ತಿನ್ನುವ ಮೊದಲು, ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಆಪಲ್ ಸೈಡರ್ ವಿನೇಗರ್ ಸೇರಿಸಿ. ಆಪಲ್ ಸೈಡರ್ ವಿನೇಗರ್‌ನಲ್ಲಿರುವ ಅಸಿಟಿಕ್ ಆಮ್ಲ ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದ ಕೊಬ್ಬನ್ನು ಕರಗಿಸುತ್ತದೆ. ಈ ಪಾನೀಯವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹ ನೆರವಾಗುತ್ತದೆ.

ನಿಂಬೆಯೊಂದಿಗೆ ಹಸಿರು ಚಹಾ  
ಗ್ರೀನ್ ಟೀ (Green Tea) ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಇದು ತೂಕ ನಷ್ಟಕ್ಕೂ ಉತ್ತಮವಾಗಿದೆ. ಚಯಾಪಚಯವನ್ನು ಹೆಚ್ಚಿಸುವಲ್ಲಿ ಹಸಿರು ಚಹಾವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಣಾಮವಾಗಿ, ನೀವು ಸೇವಿಸುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ದೇಹವು ಸೂಪರ್ ಪರಿಣಾಮಕಾರಿಯಾಗುತ್ತದೆ. ನಿಂಬೆ (Lemon)ಯೊಂದಿಗೆ ಹಸಿರು ಚಹಾವನ್ನು ಕುಡಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ. 12 ವಾರಗಳ ಕಾಲ ಈ ಪಾನೀಯವನ್ನು ಸೇವಿಸಿದವರು ಸುಮಾರು 0.2- 3.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಜೇನುತುಪ್ಪದೊಂದಿಗೆ ದಾಲ್ಚಿನ್ನಿ ನೀರು 
ಹೆಚ್ಚುವರಿ ತೂಕವನ್ನು ಕಳೆದುಕೊಂಡು ನೀವು ಸಣ್ಣಗಾಗಲು ಯತ್ನಿಸುತ್ತಿದ್ದರೆ, ಕಚ್ಚಾ ಜೇನುತುಪ್ಪದೊಂದಿಗೆ ದಾಲ್ಚಿನ್ನಿ ಸೇರಿಸಿಕೊಂಡು ತಿನ್ನಬಹುದು. ಈ ಪದಾರ್ಥಗಳು ದೇಹದಿಂದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಜೀರ್ಣಾಂಗವ್ಯೂಹದ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿಗಳನ್ನು ನಿವಾರಿಸುತ್ತದೆ. ಇದು ದೇಹದಲ್ಲಿನ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಅಧಿಕ ರಕ್ತದ ಗ್ಲೂಕೋಸ್ ಮಟ್ಟದಿಂದ ಉಂಟಾಗುವ ಕೊಬ್ಬಿನ ಶೇಖರಣೆಯ ಹೆಚ್ಚಳವನ್ನು ತಡೆಯುತ್ತದೆ. 

Food Tips: ಊಟ ಬಿಟ್ರೆ ಸಣ್ಣಗಾಗ್ತೀವಿ ಅನ್ನೋದು ಸುಳ್ಳು. ಹಾಗೆ ಮಾಡ್ಬೇಡಿ

ಜೇನುತುಪ್ಪದೊಂದಿಗೆ ದಾಲ್ಚಿನ್ನಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆಗಾಗ ಸುಮ್ ಸುಮ್ನೆ ತಿನ್ನುವುದನ್ನು ಇದು ತಪ್ಪಿಸುತ್ತದೆ. ಜೇನುತುಪ್ಪ (Honey)ವು ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ್ದು ಅದು ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹವು ಕೊಬ್ಬನ್ನು ಸುಡುವಂತೆ ಮಾಡಲು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸುವ ಮಧುಮೇಹ ಹೊಂದಿರುವ ರೋಗಿಗಳಲ್ಲಿ ದೇಹದ ತೂಕ ಗಮನಾರ್ಹವಾಗಿ ಇಳಿಯುತ್ತದೆ ಎಂದು ತಿಳಿದುಬಂದಿದೆ.

ಬೆಳ್ಳುಳ್ಳಿ ನೀರು 
ಸಾಮಾನ್ಯವಾಗಿ ಎಲ್ಲರ ಅಡುಗೆಮನೆಯಲ್ಲಿಯೂ ಬೆಳ್ಳುಳ್ಳಿ (Garlic) ಇರುತ್ತದೆ. ಇದು ತೂಕ ನಿರ್ವಹಣೆಗೆ ಅತ್ಯುತ್ತಮ ಅನ್ನೋದು ನಿಮಗೆ ಗೊತ್ತಾ ? ಪೌಷ್ಟಿಕತಜ್ಞ ಆಕೃತಿ ಕಲ್ರಾ, ಬೆಳ್ಳುಳ್ಳಿ ನೀರು ಕುಡಿಯವುದು ತೂಕನಷ್ಟಕ್ಕೆ ಪೂರಕವಾಗಿದೆ ಎಂದು ಹೇಳುತ್ತಾರೆ. ಪ್ರತಿದಿನ ಹಸಿ ಬೆಳ್ಳುಳ್ಳಿ ಮತ್ತು ನೀರನ್ನು ಸೇವಿಸುವುದು ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ 2-3 ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಮತ್ತು ಅದರ ರುಚಿಯನ್ನು ಹೆಚ್ಚಿಸಲು ನಿಂಬೆ ರಸವನ್ನು ಸೇರಿಸಿ. ಪ್ರತಿದಿನ ಬೆಳಗ್ಗೆ ವಿಶೇಷವಾಗಿ ತಯಾರಿಸಿದ ಬೆಳ್ಳುಳ್ಳಿ ನೀರನ್ನು ಕುಡಿಯುವುದರಿಂದ ತೂಕ ಕಳೆದುಕೊಳ್ಳಬಹುದು.

click me!