Asianet Suvarna News Asianet Suvarna News

Social Anxiety: ಹೊಸಬರ ಭೇಟಿಯಾಗಲು ಆತಂಕ ಬೇಡ, ಸಿದ್ಧತೆ ಹೀಗಿರಲಿ

ಯಾರನ್ನಾದರೂ ಭೇಟಿಯಾಗುವ ಆತಂಕದಲ್ಲಿದ್ದೀರಾ? ಕೆಲವು ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡರೆ ಆ ಆತಂಕವನ್ನು ಆರಾಮಾಗಿ ನಿವಾರಿಸಿಕೊಳ್ಳಬಹುದು. ಹಾಗಿದ್ದರೆ, ನಿಮ್ಮ ಸಿದ್ಧತೆ ಹೇಗೆಲ್ಲ ಇರಬೇಕು ಎಂದು ನೋಡಿಕೊಳ್ಳಿ.
 

Ways to Make Friends When You Have Social Anxiety
Author
Bangalore, First Published Feb 26, 2022, 12:31 PM IST

ಹೊಸಬರನ್ನು (New People) ಭೇಟಿ (Meet) ಮಾಡುವಾಗ ಒಂದು ರೀತಿಯ ತಳಮಳ ಉಂಟಾಗುವುದನ್ನು ನೀವು ಯಾವಾಗಲಾದರೂ ಅನುಭವಿಸಿರಬಹುದು. ಅದು ಬ್ಯುಸಿನೆಸ್‌ ಮೀಟ್‌ ಆಗಿರಬಹುದು, ವ್ಯವಹಾರ, ಸಂಬಂಧ (Relationship) ಯಾವುದೇ ವಿಚಾರಕ್ಕಾಗಿರಬಹುದು. ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಆಪ್ತರಾಗಿದ್ದು, ನೇರವಾಗಿ ಅವರನ್ನು ನೋಡುವಾಗಿನ ಆತಂಕ(Anxiety) ಇರಬಹುದು.

ಅದುವರೆಗೆ ಮುಖ ಪರಿಚಯವಿಲ್ಲದ ವ್ಯಕ್ತಿಗಳನ್ನು ಭೇಟಿಯಾಗುವಾಗ ಒಂದು ಬಗೆಯ ತಲ್ಲಣವಾಗುತ್ತದೆ, ಅದು ಹೊಟ್ಟೆಯ ನಾಭಿಯಿಂದ ಎದೆಯವರೆಗೆ ಕಂಪನ ಸೃಷ್ಟಿಸುತ್ತದೆ. 
ಹೊಸಬರನ್ನು ಭೇಟಿಯಾಗುವಾಗ ಕೆಲವು ಸಿದ್ಧತೆ ಅಗತ್ಯ. ಅವುಗಳನ್ನು ಕೈಗೊಂಡರೆ ಹೆಚ್ಚಿನ ಆತಂಕಕ್ಕೆ ಎಡೆ ಇಲ್ಲದಂತೆ ಮಾಡಬಹುದು. ನಿಮ್ಮ ಸಿದ್ಧತೆ ಹೀಗಿರಲಿ.

•    ಸೂಕ್ತ ಸ್ಥಳದ ಆಯ್ಕೆ (Selection of Place)
ಹೊಸಬರನ್ನು ಭೇಟಿಯಾಗುವಾಗ ಯಾವುದೋ ಹೊಸ ಜಾಗವನ್ನು ಆಯ್ಕೆ ಮಾಡಿಕೊಳ್ಳುವ ಬದಲು ನಿಮಗೆ ಗೊತ್ತಿರುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ. ನೀವು ಚೆನ್ನಾಗಿ ಬಲ್ಲ ಸ್ಥಳವೇ ಆಗಿದ್ದರೆ ಕಂಫರ್ಟ್‌ (Comfort) ಹೆಚ್ಚು. ನೀವು ಇಷ್ಟಪಡುವ ಸ್ಥಳವಾಗಿದ್ದರಂತೂ ಇನ್ನೂ ಉತ್ತಮ. ಅಲ್ಲಿಗೆ ತಕ್ಕಂತೆ ಹೇಗೆ ಡ್ರೆಸ್‌ (Dress) ಮಾಡಿಕೊಳ್ಳಬಹುದು ಎನ್ನುವ ಅರಿವೂ ನಿಮಗಿರುತ್ತದೆ. ಅಲ್ಲದೆ, ಅಲ್ಲಿನ ತಿಂಡಿ, ತಿನಿಸುಗಳ ಪರಿಚಯವೂ ಇರುತ್ತದೆ. ಇದರಿಂದ ನಿಮಗೊಂದು ವಿಶ್ವಾಸ ಸುಲಭವಾಗಿ ದಕ್ಕಿಬಿಡುತ್ತದೆ. ಅಲ್ಲಿನ ತಿನಿಸುಗಳನ್ನು ನೀವೇ ಆರ್ಡರ್‌ ಮಾಡುವ ಜತೆಗೆ, ಅದರ ಕುರಿತಾಗಿಯೇ ಮಾತುಕತೆ ಆರಂಭಿಸಬಹುದು.

•    ಪ್ರಾಮಾಣಿಕತೆ (Honesty)
ಯಾರನ್ನೇ ಭೇಟಿಯಾದರೂ ಪ್ರಾಮಾಣಿಕ ನಿಲುವನ್ನು ವ್ಯಕ್ತಪಡಿಸಿ. ಕೇವಲ ತೋರಿಕೆಯ ನಿಲುವಾದರೆ ಇನ್ನೊಮ್ಮೆ ಭೇಟಿಯಾಗುವಾಗ ಅಂದಿನ ಮಾತುಗಳು ಮರೆತು ಬೇರೆಯದೇ ಅನಿಸಿಕೆ ವ್ಯಕ್ತವಾಗಬಹುದು. ಆಗ ಅವರಿಗೆ ನಿಮ್ಮ ಬಗ್ಗೆ ವಿಶ್ವಾಸ ಬರುವುದಿಲ್ಲ. ಅಲ್ಲದೆ, ನರ್ವಸ್‌ ಆಗಿರುವ ಕುರಿತಾಗಿಯೂ ಹೇಳಿಕೊಳ್ಳಬಹುದು. 

•    ವಿಷಯದ ಸಿದ್ಧತೆ ಇರಲಿ (Preparation about Subject)
ಭೇಟಿಯ ಕುರಿತು ಸರಿಯಾದ ಸಿದ್ಧತೆ ಇದ್ದಾಗ ಆತಂಕಪಡುವ ಅಗತ್ಯವಿರುವುದಿಲ್ಲ. ಸಂಭಾವ್ಯ ಪ್ರಶ್ನೆಗಳು, ಅದಕ್ಕೆ ತಕ್ಕ ಪ್ರತ್ಯುತ್ತರಗಳು, ಸಾಂದರ್ಭಿಕ ಮಾತುಗಳು, ನೀವು ಹೇಳಬೇಕಾದ ವಿಷಯಗಳ ಕುರಿತು ಸ್ಪಷ್ಟತೆ ಇರಲಿ. ನಿಮ್ಮ ವಿಷಯದ ಕುರಿತು ಸಮಗ್ರ ತಿಳಿವಳಿಕೆ ಹೊಂದಿರುವುದು ಮುಖ್ಯ. ಒಂದೊಮ್ಮೆ ಎಲ್ಲ ಮಾಹಿತಿ ಇಲ್ಲದಿದ್ದ ಸಮಯದಲ್ಲಿ 'ತಿಳಿದು ಹೇಳುತ್ತೇನೆʼ ಎನ್ನುವ ಪ್ರಾಮಾಣಿಕತೆ ಇರಲಿ. ಬದಲಿಗೆ, ಏನೇನೋ ಮಾತನಾಡುವ ಗಡಿಬಿಡಿ ತೋರಬೇಡಿ.

Weight Loss Diet: ಸಣ್ಣಗಾಗ್ಬೇಕಾ ? ತಟ್ಟೆಯಲ್ಲಿ ನೆಗೆಟಿವ್ ಕ್ಯಾಲೊರಿ ಫುಡ್ ಇರ್ಲಿ

•    ನಿಮ್ಮ ನಿಲುವಿನ ಬಗ್ಗೆ ಗಮನ ನೀಡಿ (Appearance)
ಧರಿಸುವ ಡ್ರೆಸ್‌, ಹಾಕಿಕೊಳ್ಳುವ ಚಪ್ಪಲಿ, ಕಟ್ಟುವ ವಾಚ್‌, ತೆಗೆದುಕೊಳ್ಳುವ ಬ್ಯಾಗ್‌ ಮುಂತಾದ ಎಲ್ಲದರ ಕಡೆಗೆ ಗಮನವಿರಲಿ. ಎಲ್ಲವೂ ಹೊಸತಾಗಿಯೇ ಇರಬೇಕೆಂದಲ್ಲ. ಸೂಕ್ತವಾಗಿರಲಿ. ಏಕೆಂದರೆ, ಮೊದಲ ನೋಟದಲ್ಲಿ ಉಂಟಾಗುವ ಭಾವನೆ ಮುಖ್ಯ. ಅದನ್ನು ಸುಲಭವಾಗಿ ಅಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮಾತಿನಲ್ಲಿ ಇಣುಕುವ ಶಬ್ದಗಳಿಂದ ಹಿಡಿದು ನಿಮ್ಮ ಹಾವಭಾವ, ಫೋನ್‌ ಕಾಲ್‌ ಗಳಲ್ಲಿ ಪ್ರತಿಕ್ರಿಯೆ ನೀಡುವ ಕುರಿತಾಗಿಯೂ ಎಚ್ಚರಿಕೆ ಇರಲಿ. 

Name Astrology: ಈ ಅಕ್ಷರಗಳ ಹೆಸರಿನವರು ಉತ್ತಮ ಪತಿಯಾಗಬಲ್ಲರು

•    ಸಕಾರಾತ್ಮಕ ದೃಷ್ಟಿಕೋನ ನಿಮ್ಮದಾಗಿರಲಿ (Possitive Mind)
ನಿಮ್ಮ ಭೇಟಿ ಫಲಪ್ರದವಾಗಲಿ ಬಿಡಲಿ. ಎದುರಿನ ವ್ಯಕ್ತಿಯನ್ನು ನೋಡಿದಾಕ್ಷಣ ಅಥವಾ ಮಾತುಕತೆಯ ಮಧ್ಯದಲ್ಲೇ ಆಸಕ್ತಿ ಕಳೆದುಕೊಳ್ಳಬೇಡಿ. ನಿಮ್ಮ ನಿರೀಕ್ಷೆ ಒಂದಾದರೆ, ಅವರೊಂದಿಗಿನ ಮಾತುಕತೆ ಬೇರೆಯದೇ ರೀತಿಯಲ್ಲಿ ಸಾಗಿದರೂ ಭರವಸೆ ಕಳೆದುಕೊಳ್ಳಬೇಡಿ. ಪ್ರಯತ್ನ ನಿಮ್ಮದಾಗಿರಲಿ. ಸಕಾರಾತ್ಮಕ ದೃಷ್ಟಿಕೋನವಿರಲಿ. ವ್ಯಾವಹಾರಿಕ ಮಾತುಕತೆಯಾಗಿದ್ದರೆ ತೀರ ಖಾಸಗಿ ವಿಚಾರಗಳ ಚರ್ಚೆ ಬೇಡ. ಹುಡುಗ-ಹುಡುಗಿ ಭೇಟಿಯಾಗಿದ್ದರೆ ಖಾಸಗಿ ವಿಚಾರಗಳ ಜತೆಗೆ ಸಮಾನ ಆಸಕ್ತಿಯ ವಿಷಯಗಳ ಕುರಿತಾಗಿಯೂ ಚರ್ಚೆ ಮಾಡುವುದು ಒಳ್ಳೆಯದು. ಮಾತನಾಡುವ ಭರದಲ್ಲಿ ನಿಮ್ಮ ಸ್ನೇಹಿತರ ಲಿಸ್ಟ್‌ ನೀಡುವುದು, ನಿಮ್ಮ ಅತಿ ಇಷ್ಟದ ಸ್ನೇಹಿತರು, ಅವರೊಂದಿಗಿನ ಒಡನಾಟಗಳ ಬಗ್ಗೆ ಹೇಳುತ್ತ ಎದುರಿನವರನ್ನು ಬೋರ್‌ ಹೊಡೆಸಬೇಡಿ. ಮಾತುಕತೆ ಆಸಕ್ತಿದಾಯಕವಾಗಿರಲಿ. 

Follow Us:
Download App:
  • android
  • ios