ಹುಟ್ಟು ಸಹಜ..ಸಾವು ನಿಶ್ಚಿತ ಅನ್ನೋ ಮಾತೇ ಇದೆ. ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇಬೇಕು. ಆದ್ರೆ ಸಾವು ಹೇಗೆ ಬರುತ್ತದೆ ಎಂಬುದೇ ಯಾರಿಗೂ ತಿಳಿದಿರದ ವಿಷಯ. ಅದರಲ್ಲೂ ಕೆಲವೊಮ್ಮೆ ವ್ಯಕ್ತಿಗಳು ಹಠಾತ್ ಸಾಯುವುದನ್ನು ನೋಡಿ ಬದುಕು ಎಷ್ಟು ಕ್ಷಣಿಕ ಅನಿಸಿಬಿಡುತ್ತದೆ.
ಸಾವು..ಬಹುಶಃ ಜಗತ್ತಿನಲ್ಲಿ ಎಲ್ಲರೂ ಅತ್ಯಂತ ಹೆಚ್ಚು ಭಯಪಡುವ ವಿಷಯವದು. ಬದುಕಿಗೆ ವಿದಾಯ ಹೇಳಿ ಹೋಗಲು ಬಯಸುವವರು ಕಡಿಮೆ. ಆದರೇನು ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇಬೇಕು. ಆದರೆ ಈ ಸಾವು ಹೇಗೆ ಬರುತ್ತದೆ ಎಂಬುದೇ ವಿಚಿತ್ರ . ಕೆಲವೊಬ್ಬರು ತುಂಬಾ ಸಾಧಾರಣವಾಗಿ ಸತ್ತರೆ, ಇನ್ನೂ ಕೆಲವರು ತುಂಬಾ ಅಸಾಧಾರಣ ಸಾವಾಗಿರುತ್ತದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಸಿದು ಬಿದ್ದು ಸಾವನ್ನಪ್ಪುವುದು, ಹೃದಯಾಘಾತ ಮೊದಲಾದವುಗಳು ಹೆಚ್ಚಾಗುತ್ತಿವೆ. ಸದ್ಯ ಇಂಥಹದ್ದೇ ವೀಡಿಯೋವೊಂದು ವೈರಲ್ ಆಗ್ತಿದೆ.
ಹೈದರಾಬಾದ್‌ನ ಕಾಲಾ ಪತ್ತರ್ ಪ್ರದೇಶದಲ್ಲಿ ವಿವಾಹ ಸಮಾರಂಭದ ಭಾಗವಾಗಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಮದುವೆ ಮನೆಯಲ್ಲಿ,ವರನಿಗೆ ಅರಿಶಿನ ಹಚ್ಚಲು ಬಂದ ವ್ಯಕ್ತಿ ಈ ರೀತಿ ಸಾವನ್ನಪ್ಪಿರೋದನ್ನು ನೋಡಬಹುದಾಗಿದೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ಬದುಕು ಎಷ್ಟು ಕ್ಷಣಿಕ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
Viral Video: ನಡುರಸ್ತೆಯಲ್ಲೇ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಬದುಕಿಸಿದ ಟ್ರಾಫಿಕ್ ಪೊಲೀಸ್!
ವರನಿಗೆ ಅರಿಶಿನ ಲೇಪಿಸುತ್ತಿದ್ದ ವೇಳೆ ಕುಸಿದುಬಿದ್ದು ವ್ಯಕ್ತಿ ಸಾವು
ವೈರಲ್ ಆಗುತ್ತಿರುವ ಈ ಹಳದಿ ಸಮಾರಂಭದ ವೀಡಿಯೊದಲ್ಲಿ ರಬ್ಬಾನಿ ವರನ (Groom) ಪಾದಗಳ ಮೇಲೆ ಅರಿಶಿನವನ್ನು ಲೇಪಿಸುತ್ತಿರುವುದನ್ನು ನೋಡಬಹುದು. ವ್ಯಕ್ತಿ ಸಮಾರಂಭದಲ್ಲಿದ್ದ ಅತಿಥಿಗಳೊಂದಿಗೆ ನಗುತ್ತಾ ಮಾತನಾಡುತ್ತಿದ್ದರು . ಸ್ಥಳದಲ್ಲಿ ಹಾಜರಿದ್ದ ಇತರ ಅತಿಥಿಗಳು (Guests) ನಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದರೆ ನಗು ನಗುತ್ತಲೇ ಅರಿಶಿನ ಹಚ್ಚಲು ಬಾಗಿದಾಗ ಹೃದಯ ಸ್ತಂಭನ (Heart attack)ಕ್ಕೊಳಗಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.
ಫೆಬ್ರವರಿ 20 ರಂದು ಹೈದರಾಬಾದ್ ನಗರದ ಕಾಲಾ ಪಥರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಮೊಹಮ್ಮದ್ ರಬ್ಬಾನಿ ಎಂಬ ವ್ಯಕ್ತಿ ಹಳದಿ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
Health Tips: ಹೃದಯ ಸ್ತಂಭನವಾದಾಗ ಹೀಗೆ ಮಾಡಿದ್ರೆ ವ್ಯಕ್ತಿ ಬದುಕೋ ಚಾನ್ಸ್ ಹೆಚ್ಚು
ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ ರಬ್ಬಾನಿ ವರನ ಪಾದಗಳ ಮೇಲೆ ಅರಿಶಿನವನ್ನು ಲೇಪಿಸುತ್ತಿದ್ದರು. ಸಮಾರಂಭದಲ್ಲಿದ್ದ ಅತಿಥಿಗಳೊಂದಿಗೆ ನಗುತ್ತಾ ಮಾತನಾಡುತ್ತಿದ್ದರು . ಸ್ಥಳದಲ್ಲಿ ಹಾಜರಿದ್ದ ಇತರ ಅತಿಥಿಗಳು ನಗುವುದನ್ನು ನೋಡಬಹುದು. ಆದರೆ ನಗು ನಗುತ್ತಲೇ ಅರಿಶಿನ ಹಚ್ಚಲು ಬಾಗಿದಾಗ ಹೃದಯ ಸ್ತಂಭನಕ್ಕೊಳಗಾಗಿ ವ್ಯಕ್ತಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ವರ ಮತ್ತು ಇತರ ಅತಿಥಿಗಳು ತಕ್ಷಣವೇ ಅವರನ್ನು ತಕ್ಷಣ ಕುಸಿದು ಬಿದ್ದಿದ್ದ ರಬ್ಬಾನಿಯವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮರುದಿನ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ತಿಳಿದುಬಂದಿದೆ. ರಬ್ಬಾನಿ ದಿಢೀರ್ ಮರಣದ ನಂತರ ಮದುವೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
Man Dropped Dead During Haldi Ceremony. I wonder what killed him... Vacine only killed millions so hmm pic.twitter.com/xKxbIOZAAY
ಈ ಘಟನೆಯನ್ನು ಸಮಾರಂಭದಲ್ಲಿದ್ದ ಕೆಲವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ಆಘಾತಕಾರಿ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @MaxMalone1111 ಹೆಸರಿನ ಖಾತೆಯೊಂದಿಗೆ ಈ ವೀಡಿಯೊವನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಹೈದರಾಬಾದ್‌ನಲ್ಲೇ ಇದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದ್ದು, 24 ವರ್ಷದ ವಿಶಾಲ್ ಎಂಬ ಪೊಲೀಸ್ ಪೇದೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ವರ್ಕೌಟ್ ಮಾಡುವಾಗ ಹಾರ್ಟ್ ಅಟ್ಯಾಕ್ ಆಗೋದ್ಯಾಕೆ ?