Malaria New Antifungal Drug: ಮಲೇರಿಯಾಕ್ಕೆ ಬಂತು ಹೊಸ ಔಷಧ, ಇನ್ನಾದ್ರೂ ಮಲೇರಿಯಾ ಕಾಟ ಕಡಿಮೆ ಆಗ್ಬೋದಾ?

By Suvarna News  |  First Published Feb 24, 2023, 5:36 PM IST

ಪ್ರತಿವರ್ಷ ನಮ್ಮ ದೇಶದಲ್ಲಿ ಸಾವಿರಾರು ಮಂದಿ ಮಲೇರಿಯಾಕ್ಕೆ ತುತ್ತಾಗುತ್ತಾರೆ. ನೂರಾರು ಮಂದಿ ಸಾವಿಗೀಡಾಗುತ್ತಾರೆ. ಮಲೇರಿಯಾ ವಿರುದ್ಧ ಪ್ರಸ್ತುತ ಎಸಿಟಿ ಎನ್ನುವ ಚಿಕಿತ್ಸೆ ಚಾಲ್ತಿಯಲ್ಲಿದೆ. ಇದೀಗ, ಭುವನೇಶ್ವರ ಮೂಲದ ಸಂಸ್ಥೆಯೊಂದು ಮಲೇರಿಯಾಕ್ಕೆ ಪರಿಣಾಮಕಾರಿ ಔಷಧವನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ. 


ಮಲೇರಿಯಾ ಹೆಸರು ಕೇಳಿದರೆ ನಮ್ಮ ದೇಶದ ಹಲವು ಪ್ರದೇಶಗಳು ಅಕ್ಷರಶಃ ನಡುಗುತ್ತವೆ. ಜನ ಎಚ್ಚರಿಕೆ ವಹಿಸಲು ಶುರುಮಾಡುತ್ತಾರೆ. ಆಡಳಿತ ವ್ಯವಸ್ಥೆ ಎಷ್ಟೇ ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೂ ಮಲೇರಿಯಾ ತನ್ನ ಕರಾಮತ್ತನ್ನು ತೋರಿಸುತ್ತಲೇ ಇರುತ್ತದೆ. ಮಲೇರಿಯಾದಿಂದ ಇದುವರೆಗೆ ದೇಶಕ್ಕಾದ ಹಾನಿ ಅಷ್ಟಿಷ್ಟಲ್ಲ. ಮಲೇರಿಯಾವೊಂದರಿಂದಲೇ ನಮ್ಮ ದೇಶ ಸಾಕಷ್ಟು ಅನುಭವಿಸಿದೆ. ಪ್ರತಿವರ್ಷ ಸಾವಿರಾರು ಜನ ಇದಕ್ಕೆ ತುತ್ತಾಗುತ್ತಾರೆ. 2022ರಲ್ಲಿ 45 ಸಾವಿರಕ್ಕೂ ಅಧಿಕ ಮಂದಿ ಮಲೇರಿಯಾಕ್ಕೆ ಸಿಲುಕಿ ನಲುಗಿದ್ದರು ಎಂದರೆ ಇದರ ಕಬಂಧಬಾಹುವಿನ ಅರಿವಾಗಬಹುದು. 2021ರಲ್ಲೂ ಮಲೇರಿಯಾ ಆರ್ಭಟ ಭಾರೀ ಜೋರಾಗಿತ್ತು. ಆ ವರ್ಷ 1.60 ಸಾವಿರ ಜನ ಮಲೇರಿಯಾ ಸೋಂಕಿಗೆ ಒಳಗಾಗಿದ್ದರು. ಇದರಿಂದಾಗುವ ಸಾವು-ನೋವು ಸಹ ಅಪಾರ. ವೈಜ್ಞಾನಿಕ ಜಗತ್ತು ಇಷ್ಟು ಸಾಧನೆ ಮಾಡಿದ್ದರೂ, ಎಂತೆಂತಹ ರೋಗಗಳಿಗೆ ಪರಿಹಾರ ಕಂಡುಹಿಡಿದರೂ ಮಲೇರಿಯಾ ಮಾತ್ರ ವಿಜ್ಞಾನಿಗಳ ಅಳತೆಗೆ ಸಿಗದಂತೆ ವರ್ತಿಸುತ್ತಿತ್ತು. ಇದೀಗ, ವಿಜ್ಞಾನಿಗಳ ಅಂಗಳದಿಂದ ಸಂತಸದ ಸುದ್ದಿಯೊಂದು ಬಂದಿದೆ.

ಕುಖ್ಯಾತ ಮಲೇರಿಯಾಕ್ಕೆ ಹೊಸ ಔಷಧ ಕಂಡುಹಿಡಿಯಲಾಗಿದೆ. ಈಗಾಗಲೇ ಈ ಔಷಧದ ಕ್ಲಿನಿಕಲ್ ಟ್ರಯಲ್ ಕೂಡ ಮುಗಿದಿದ್ದು, ಪರಿಣಾಮಕಾರಿ ಔಷಧ ಎನ್ನುವುದು ಸಾಬೀತಾಗಿದೆ. ನಿಜಕ್ಕೂ ಇದು ಬದಲಾವಣೆಯ ಸಮಯ ಎನ್ನಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ, ಈಗ ವಿಜ್ಞಾನಿಗಳು ಕ್ಲೇಮ್ ಮಾಡಿದಂತೆ ಪರಿಣಾಮಕಾರಿಯೇ ಆದರೆ, ಗ್ರೈಸೆಯೊಫುಲ್ವಿನ್ ಆಂಟಿಫಂಗಲ್ ಔಷಧ ದೇಶದ ಚಿತ್ರಣವನ್ನೇ ಬದಲಿಸಬಲ್ಲದು. ಮಲೇರಿಯಾವನ್ನು ದೇಶದಿಂದ ಹೊಡೆದೋಡಿಸಬಲ್ಲದು. ಮಲೇರಿಯಾ ಸಾವಿನ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ತರಬಲ್ಲದು. 

Tap to resize

Latest Videos

ಇನ್ಮುಂದೆ ದೇಶದಲ್ಲೇ ಔಷಧಗಳ ಮೂಲ ಪದಾರ್ಥ, MRI ಮಷಿನ್ ಉತ್ಪಾದನೆಯೂ ಆಗುತ್ತೆ!

ಪರಿಣಾಮಕಾರಿ ಔಷಧ (Effective Medicine): ಭುವನೇಶ್ವರ ಮೂಲದ ಲೈಫ್ ಸೈನ್ಸಸ್ ಸಂಸ್ಥೆ (Life Sciences Institute-ಐಎಲ್ ಎಸ್) ಮಲೇರಿಯಾಕ್ಕೆ (Malaria) ಔಷಧವನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ. ಗ್ರೈಸೆಯೊಫುಲ್ವಿನ್ (Griseofulvin) ಆಂಟಿಫಂಗಲ್ (Antifungal) ಔಷಧ ಕ್ಲಿನಿಕಲ್ ಪರೀಕ್ಷೆಗಳಲ್ಲಿ (Clinical Trial) ಉತ್ತಮ ಪರಿಣಾಮ ದಾಖಲಿಸಿದೆ ಎಂದು ತಿಳಿಸಿದೆ. ಡಾ. ವಿಶ್ವನಾಥನ್ ಅರುಣ್ ನಾಗರಾಜ್ ನೇತೃತ್ವದ ತಂಡ ಈ ಸಾಧನೆ ಮಾಡಿದೆ. ಇದು ಕೇಂದ್ರ ಸರ್ಕಾರದ ಬಯೋಟೆಕ್ನಾಲಜಿ (Bio Technology) ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಹಾಲಿ ಬಳಕೆಯಲ್ಲಿರುವ ಆರ್ಟೆಮಿಸಿನಿನ್ ಆಧಾರದ ಸಂಯೋಜಿತ ಥೆರಪಿಯಾಗಿರುವ ಎಸಿಟಿ (ACT) ಜತೆಗೆ ಈ ಹೊಸ ಔಷಧವನ್ನೂ ಬಳಕೆ ಮಾಡಿದರೆ ಅತ್ಯುತ್ತಮ ಪರಿಣಾಮ ಸಾಧ್ಯ ಎನ್ನುವುದು ವಿಜ್ಞಾನಿಗಳ ಹೇಳಿಕೆ. ಎಸಿಟಿ ಚಿಕಿತ್ಸೆ (Therapy) ಮಲೇರಿಯಾಕ್ಕೆ ಶಿಫಾರಸುಗೊಂಡಿರುವ ಚಿಕಿತ್ಸೆಯಾಗಿದೆ. 

ಮಲೇರಿಯಾ ಪರಾವಲಂಬಿ (Parasites) ಜೀವಿಗಳು ಮಾನವ ದೇಹಕ್ಕೆ ಪ್ರವೇಶಿಸಿದ ಬಳಿಕ ಕೆಂಪು ರಕ್ತಕಣಗಳ (Red Blood Cells) ಮೇಲೆ ದಾಳಿ ಮಾಡುತ್ತವೆ. ಹಿಮೋಗ್ಲೋಬಿನ್ ಅಂಶವನ್ನು ಪತನಗೊಳಿಸುತ್ತವೆ. ಹಿಮೋಗ್ಲೋಬಿನ್ ಇಲ್ಲವಾದರೆ ಆಮ್ಲಜನಕ (Oxigen) ಮತ್ತು ರಕ್ತ ಜತೆಯಾಗದೆ ದೇಹದಲ್ಲಿ ತೀವ್ರತರದ ಪರಿಣಾಮಗಳು ಉಂಟಾಗುತ್ತವೆ. ನಾವೆಲ್ಲರೂ ಶಾಲೆಯಲ್ಲಿ ಓದಿರುವಂತೆ ಮಲೇರಿಯಾ ಕೀಟಾಣು ಅನಾಫಿಲಿಸ್ ಎಂಬ ಸೊಳ್ಳೆಯಿಂದ ಮಾತ್ರವೇ ಹರಡುತ್ತವೆ. ಆದರೂ ಇದರ ನಿಯಂತ್ರಣ ಕಷ್ಟಸಾಧ್ಯ ಎಂದರೆ ಸೊಳ್ಳೆಗಳ ವ್ಯಾಪಕತೆ ಅರಿಯಬಹುದು. 

ಹೆಣ್ಣಿನ್ನು ರಿಲ್ಯಾಕ್ಸ್ ಆಗಬಹುದು, ಗಂಡಿಗೇ ಬಂದಿದೆ ಗರ್ಭ ನಿರೋಧಕ ಮಾತ್ರೆ!

ಹೊಸ ಔಷಧ ಹೇಗೆ ಕೆಲಸ ಮಾಡುತ್ತೆ?: ಎಸಿಟಿಯನ್ನು ಪ್ಲಾಸ್ಮೊಡಿಯಂ ಫಾಲ್ಸಿಪ್ಯಾರಮ್ ಮಲೇರಿಯಾಕ್ಕೆ ಬಳಕೆಯಲ್ಲಿರುವ ಚಿಕಿತ್ಸೆಯಾಗಿದೆ. ಸೋಂಕಿನ (Infection) ಬಳಿಕ ವ್ಯಕ್ತಿಯಲ್ಲಿ ಹಿಮೋಗ್ಲೋಬಿನ್ ಹಾನಿಯಾದಾಗ ಹೀಮ್ (Heme) ಎನ್ನುವ ಜೈವಿಕ ಅಣು ಬಿಡುಗಡೆಯಾಗುತ್ತದೆ. ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುವ ಹೀಮ್ ನಿಂದಾಗಿ ಮಲೇರಿಯಾ ತೀವ್ರವಾಗುತ್ತದೆ. ಆ ಹಂತದಲ್ಲಿ ಅದು ಹಿಮೋಜೊಯಿನ್ ಆಗಿ ಬದಲಾಗುತ್ತದೆ. ಇದು ವ್ಯಕ್ತಿಯ ಸಾವಿಗೆ (Death) ಸಹ ಕಾರಣವಾಗಬಲ್ಲದು.

ಇದೀಗ, ಹೊಸದಾಗಿ ಸೃಷ್ಟಿಸಲಾಗಿರುವ ಗ್ರೈಸೆಯೊಫುಲ್ವಿನ್ ಹೀಮ್ ಬೆಳವಣಿಗೆಯನ್ನು ತಡೆಯುತ್ತದೆ. ಕೀಟಾಣುಗಳು ಹೀಮ್ ಉತ್ಪಾದನೆ ಮಾಡುವ ಸಾಮರ್ಥ್ಯ ಕಳೆದುಕೊಂಡು ಹಿಮೋಜಾಯಿನ್ ತಯಾರಾಗುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ಮಲೇರಿಯಾದ ತೀವ್ರತೆ ಕಡಿಮೆಯಾಗಿ ಸಾವುನೋವಿನ ಪ್ರಮಾಣವೂ ಕಡಿಮೆಯಾಗುತ್ತದೆ. ಹೊಸ ಔಷಧ ತೀರ ದುಬಾರಿಯೇನಲ್ಲ (Expensive) ಹಾಗೂ ಸುರಕ್ಷಿತವಾಗಿದೆ (Safe) ಎಂದು ವಿಜ್ಞಾನಿಗಳ ತಂಡ ಹೇಳಿದೆ.  

click me!