ಮಕ್ಕಳು ಆಟವಾಡುತ್ತಾ ಸಣ್ಣಪುಟ್ಟ ವಸ್ತುಗಳನ್ನು ನುಂಗುವುದು ಸಾಮಾನ್ಯವಾಗಿದೆ. ಕಾಯಿನ್, ರಿಂಗ್ ಮೊದಲಾದವುಗಳನ್ನು ನುಂಗಿಬಿಡುತ್ತಾರೆ. ಕೆಲವೊಮ್ಮೆ ಹಿರಿಯರು ಸಹ ಇಂಥಾ ಎಡವಟ್ಟು ಮಾಡಿಕೊಳ್ಳೋದಿದೆ. ಹಾಗೆಯೇ ರಾಜಸ್ಥಾನದಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುತ್ತಾ ಟೂತ್‌ಬ್ರಶ್‌ನ್ನೇ ನುಂಗಿಬಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳು ನಾಣ್ಯ ನುಂಗುವುದು, ಸಣ್ಣಪುಟ್ಟ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ರಾಜಸ್ಥಾನದಲ್ಲೊಬ್ಬ ವ್ಯಕ್ತಿ ಹಲ್ಲುಜ್ಜುವ ಬ್ರಶ್ ನುಂಗಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಉದಯಪುರದ ಚಿತ್ತೋರ್‌ನ ಗೋಪಾಲ್ ಸಿಂಗ್ ರಾವ್ (53) ಹಲ್ಲುಜ್ಜುತ್ತಿದ್ದಾಗ ಟೂತ್ ಬ್ರಷ್ ಗಂಟಲಿನೊಳಗೆ ಹೋಗಿದೆ. ತಕ್ಷಣ ಬಾಯಿಯೊಳಗೆ ಕೈ ಹಾಕಿ ಅದನ್ನು ಹೊರತೆಗೆಯೋಣ ಅಂದುಕೊಂಡರೆ ಬ್ರಶ್ ಹೊಟ್ಟೆಯೊಳಗೆ ಜಾರಿ ಹೋಗಿದೆ. ತಕ್ಷಣ ಗೋಪಾಲ್ ಸಿಂಗ್‌ಗೆ ಉಸಿರುಗಟ್ಟೋಕೆ ಆರಂಭವಾಯಿತು. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಅಲ್ಲಿನ ವೈದ್ಯರು ಟೂತ್ ಬ್ರಶ್ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಗೋಪಾಲ್ ಸಿಂಗ್‌ನ್ನು ಅಮೇರಿಕನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ರಷ್ ಹೊಟ್ಟೆಯಲ್ಲಿ (Stomach) ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸಕ ಡಾ. ಶಶಾಂಕ್ ಜೆ ತ್ರಿವೇದಿ ಅವರ ತಂಡವು ಎಂಡೋಸ್ಕೋಪಿಕ್ ವಿಧಾನದಿಂದ ಬ್ರಶ್‌ನ್ನು ತೆಗೆದುಹಾಕಲು ನಿರ್ಧರಿಸಿತು. ಅಚ್ಚರಿಯ ವಿಚಾರವೆಂದರೆ. ಶಸ್ತ್ರಚಿಕಿತ್ಸೆ (Surgery)ಯಿಲ್ಲದೆ ವೈದ್ಯರು ಹಲ್ಲುಜ್ಜುವ ಬ್ರಷ್ ಅನ್ನು ಹೊಟ್ಟೆಯಿಂದ ಹೊರತೆಗೆದರು.
40 ಚೂಯಿಂಗ್ ಗಮ್ ನುಂಗಿದ ಐದು ವರ್ಷದ ಬಾಲಕ, ಸರ್ಜರಿ ಮಾಡಿದ ವೈದ್ಯರೇ ಬೆಚ್ಚಿಬಿದ್ರು!
ಬಾಯಿಯ ಮೂಲಕ 12 ಸೆಂ.ಮೀ. ಉದ್ದದ ಟೂತ್ ಬ್ರಷ್ ಹೊರ ತೆಗೆದ ವೈದ್ಯರು
ಶಸ್ತ್ರಚಿಕಿತ್ಸಕ ಡಾ.ಶಶಾಂಕ್ ಜೆ ತ್ರಿವೇದಿ ಎಂಡೋಸ್ಕೋಪಿಕ್ ವಿಧಾನದಿಂದ ಅದನ್ನು ಹೊರ ತೆಗೆದರು. ವ್ಯಕ್ತಿಯ ಬಾಯಿಯ (Mouth) ಮೂಲಕ 12 ಸೆಂ.ಮೀ. ಉದ್ದದ ಟೂತ್ ಬ್ರಷ್ ಅನ್ನು ಹೊರ ತೆಗೆಯಲಾಯಿತು. ರೋಗಿಯನ್ನು ಒಂದು ದಿನ ಐಸಿಯುನಲ್ಲಿಟ್ಟ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಇಂತಹ ಘಟನೆಗಳು ತೀರಾ ವಿರಳ ಎಂದು ಡಾ.ಶಶಾಂಕ್ ಹೇಳಿದರು. ಟೂತ್ ಬ್ರಷ್ ನುಂಗಿರುವ ಐವತ್ತು ಪ್ರಕರಣಗಳು ಇಲ್ಲಿಯವರೆಗೆ ಜಗತ್ತಿನಲ್ಲಿ ಸಂಭವಿಸಿವೆ. ಆದರೆ ಯಾವುದೇ ಆಪರೇಷನ್ ಇಲ್ಲದೆ ಟೂತ್ ಬ್ರಷ್ ತೆಗೆಯುತ್ತಿರುವುದು ರಾಜಸ್ಥಾನದಲ್ಲಿ ಇದೇ ಮೊದಲು ಎಂದಿದ್ದಾರೆ.
ಈ ಮೊದಲು 2019 ರಲ್ಲಿ ದೆಹಲಿಯ ಏಮ್ಸ್ ನಲ್ಲಿ ಇಂಥಹದ್ದೇ ಘಟನೆಯೊಂದು ವರದಿಯಾಗಿತ್ತು. ಪ್ರಸ್ತುತ ನಡೆದಿರುವ ಈ ಪ್ರಕರಣ ರಾಜಸ್ಥಾನದಲ್ಲಿ ಟೂತ್ ಬ್ರಶ್ ನುಂಗಿದ ಮೊದಲ ಪ್ರಕರಣವಾಗಿದೆ. ಈಗ ಈ ಪ್ರಕರಣವನ್ನು ಜನರಲ್ ಆಫ್ ಸರ್ಜರಿಯಲ್ಲಿ ಪ್ರಕಟಿಸಲು ಮತ್ತು WHO (ವಿಶ್ವ ಆರೋಗ್ಯ ಸಂಸ್ಥೆ) ದಾಖಲೆಗಳಲ್ಲಿ ನೋಂದಣಿಗಾಗಿ ಕಳುಹಿಸಲಾಗುತ್ತದೆ ಎಂದರು. ಈ ಹಿಂದೆಯೂ ಇಂಥಾ ಹಲವು ಘಟನೆಗಳು ನಡೆದಿದ್ದವು.
ಬಳ್ಳಾರಿ: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
ಹಲ್ಲಿನ ಸೆಟ್‌ನ್ನೇ ನುಂಗಿದ್ದ ವ್ಯಕ್ತಿ
ವ್ಯಕ್ತಿಯೊಬ್ಬ ಹಲ್ಲಿನ ಸೆಟ್‌ನ್ನು ನುಂಗಿದ್ದ. ಇದು ಶ್ವಾಸಕೋಶದಲ್ಲಿ ಸಿಲುಕಿ ಹಾಕಿಕೊಂಡಿತ್ತು ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬ ಬೆಳ್ಳಿಯ ನಕಲಿ ಹಲ್ಲಿನ ಸೆಟ್‌ನ್ನು ದರಿಸಿದ್ದ. ಆದರೆ ಆಹಾರ ಸೇವಿಸುವಾಗ ಆಕಸ್ಮಿಕವಾಗಿ ಹಲ್ಲಿನ ಸೆಟ್‌ನ್ನು ನುಂಗಿಬಿಟ್ಟಿದ್ದಾನೆ. ಇದರ ಪರಿಣಾಮವಾಗಿ ವ್ಯಕ್ತಿಯಲ್ಲಿ ಭಾರೀ ಕೆಮ್ಮು ಮತ್ತು ಉಬ್ಬಸ ಕಾಣಿಸಿಕೊಂಡಿತು. ಕ್ಯುರಸ್ ವೈದ್ಯಕೀಯ ಜರ್ನಲ್‌ನಲ್ಲಿ ಈ ವಾರ ಪ್ರಕಟವಾದ ಕೇಸ್ ಸ್ಟಡಿ ಪ್ರಕಾರ, ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ಕರೆದೊಯ್ದು ಎಕ್ಸ್‌ರೇ ತೆಗೆಯಲಾಯಿತು. ಈ ಸಂದರ್ಭದಲ್ಲಿ ಅವರ ಶ್ವಾಸನಾಳದಲ್ಲಿ (Lungs) 1.5 ಇಂಚಿನ ಹಲ್ಲಿನ ಸೆಟ್ ಸಿಲುಕಿಕೊಂಡಿರೋದು ತಿಳಿದುಬಂತು.
ನಂತರ ವೈದ್ಯರು ಬ್ರೋನೋಸ್ಕೋಪಿ ಮಾಡಿ ಶ್ವಾಸನಾಳದಲ್ಲಿ ಸಿಲುಕಿದ್ದ ಹಲ್ಲಿನ ಸೆಟ್‌ನ್ನು ಹೊರತೆಗೆದರು. ಬ್ರೋನೋಸ್ಕೋಪಿ ಎಂಬುದು ಶ್ವಾಸಕೋಶಕ್ಕೆ ಫ್ಲೆಕ್ಸಿಬಲ್ ಟ್ಯೂಬ್, ಬ್ರೋನೋಸ್ಕೋಪ್‌ನ್ನು ಬಳಸಿ ಸಿಲುಕಿಹಾಕಿಕೊಂಡಿರುವ ವಸ್ತುವನ್ನು ಹೊರತೆಗೆಯುವ ವಿಧಾನವಾಗಿದೆ. ಈ ಚಿಕಿತ್ಸೆಯಿದ ಶ್ವಾಸಕೋಶದ ಸ್ನಾಯುಗಳು ಬಿಗಿಯಾದ ಅನುಭವವಾಯಿತು ಎಂದು ರೋಗಿ (Patient) ತಿಳಿಸಿದ್ದ.