ಆಹಾರವನ್ನು ತಿನ್ನುವಾಗ ಕೆಲವೊಮ್ಮೆ ಜಗಿಯದೆ ಅಚಾನಕ್ಕಾಗಿ ನುಂಗಿಬಿಡುತ್ತೇವೆ. ಚಾಕೊಲೇಟ್, ಹಣ್ಣುಗಳನ್ನು ತಿನ್ನುವಾಗ ಹಲವರಿಗೆ ಈ ಸಮಸ್ಯೆ ಆಗುತ್ತದೆ. ಆದ್ರೆ ಇಲ್ಲೊಬ್ಬ ಭೂಪ ಆಕಸ್ಮಿಕವಾಗಿ ಹಲ್ಲಿನ ಸೆಟ್‌ನ್ನೇ ನುಂಗಿದ್ದಾನೆ. ಆಮೇಲೆ ಆಗಿದ್ದೇನು?
ಯಾವುದೇ ಆಹಾರವನ್ನು ಸರಿಯಾಗಿ ಜಗಿದು ನುಂಗುವುದು ರೂಢಿ. ಹೀಗಿದ್ರೂ ಕೆಲವೊಮ್ಮೆ ಆಕಸ್ಮಿಕವಾಗಿ ತಿಂದ ಆಹಾರ ಹಾಗೆಯೇ ನುಂಗಿ ಹೋಗುವುದಿದೆ. ಪುಟ್ಟ ಮಕ್ಕಳು ಹೀಗೆ ಗೋಲಿ, ಕಾಯಿ ಮೊದಲಾದವುಗಳನ್ನು ನುಂಗಿಬಿಡುತ್ತಾರೆ. ಹೀಗಾದಾಗ ನುಂಗಿದ ವಸ್ತುಗಳು ಶ್ವಾಸಕೋಶಕ್ಕೆ ಹೋಗಿ ಸೇರುವ ಕಾರಣ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ತಕ್ಷಣ ವೈದ್ಯರ ನೆರವು ಪಡೆಯುವುದು ಅಗತ್ಯ. ಕೇವಲ ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರೂ ಕೆಲವೊಮ್ಮೆ ಆಕಸ್ಮಿಕವಾಗಿ ಮಾಡಿಕೊಳ್ಳುತ್ತಾರೆ. ಬಾಯಿಗೆ ಹಾಕಿದ ವಸ್ತುವನ್ನು ನುಂಗಿ ಒದ್ದಾಡುತ್ತಾರೆ. ಹಾಗೆ ಚಾಕೋಲೇಟ್, ಹಣ್ಣು ಇತರ ಯಾವುದೇ ಆಹಾರ ನುಂಗಿಬಿಡುವುದು ಸರಿ. ಆದರೆ ಇಲ್ಲೊಬ್ಬ ವ್ಯಕ್ತಿ ಹಲ್ಲಿನ ಸೆಟ್‌ನ್ನೇ ನುಂಗಿಬಿಟ್ಟಿದ್ದಾನೆ.
ನಂಬೋಕೆ ಕಷ್ಟವಾದರೂ ಇದು ನಿಜ. 22 ವರ್ಷದ ವ್ಯಕ್ತಿ, ಆಕಸ್ಮಿಕವಾಗಿ ದಂತಗಳನ್ನು ನುಂಗಿದ್ದು, ನಂತರ ಇದು ಶ್ವಾಸಕೋಶದಲ್ಲಿ ಸಿಲುಕಿ ಹಾಕಿಕೊಂಡಿದೆ. ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬ ಬೆಳ್ಳಿಯ ನಕಲಿ ಹಲ್ಲಿನ ಸೆಟ್‌ನ್ನು ದರಿಸಿದ್ದಾನೆ. ಆದರೆ ಆಹಾರ ಸೇವಿಸುವಾಗ ಆಕಸ್ಮಿಕವಾಗಿ ಹಲ್ಲಿನ ಸೆಟ್‌ನ್ನು ನುಂಗಿಬಿಟ್ಟಿದ್ದಾನೆ. ಇದರ ಪರಿಣಾಮವಾಗಿ ವ್ಯಕ್ತಿಯಲ್ಲಿ ಭಾರೀ ಕೆಮ್ಮು ಮತ್ತು ಉಬ್ಬಸ ಕಾಣಿಸಿಕೊಂಡಿತು.
undefined
ಸಹೋದರನ ಜೊತೆ ಜಗಳ ಮಾಡ್ಕೊಂಡು ಮೊಬೈಲ್‌ನ್ನೇ ನುಂಗಿದ ಯುವತಿ!
ಶ್ವಾಸನಾಳದಲ್ಲಿತ್ತು 1.5 ಇಂಚಿನ ಹಲ್ಲಿನ ಸೆಟ್
ಕ್ಯುರಸ್ ವೈದ್ಯಕೀಯ ಜರ್ನಲ್‌ನಲ್ಲಿ ಈ ವಾರ ಪ್ರಕಟವಾದ ಕೇಸ್ ಸ್ಟಡಿ ಪ್ರಕಾರ, ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ಕರೆದೊಯ್ದು ಎಕ್ಸ್‌ರೇ ತೆಗೆಯಲಾಯಿತು. ಈ ಸಂದರ್ಭದಲ್ಲಿ ಅವರ ಶ್ವಾಸನಾಳದಲ್ಲಿ (Lungs) 1.5 ಇಂಚಿನ ಹಲ್ಲಿನ ಸೆಟ್ ಸಿಲುಕಿಕೊಂಡಿರೋದು ತಿಳಿದುಬಂತು. ನಂತರ ವೈದ್ಯರು ಬ್ರೋನೋಸ್ಕೋಪಿ ಮಾಡಿ ಶ್ವಾಸನಾಳದಲ್ಲಿ ಸಿಲುಕಿದ್ದ ಹಲ್ಲಿನ ಸೆಟ್‌ನ್ನು ಹೊರತೆಗೆದರು. ಬ್ರೋನೋಸ್ಕೋಪಿ ಎಂಬುದು ಶ್ವಾಸಕೋಶಕ್ಕೆ ಫ್ಲೆಕ್ಸಿಬಲ್ ಟ್ಯೂಬ್, ಬ್ರೋನೋಸ್ಕೋಪ್‌ನ್ನು ಬಳಸಿ ಸಿಲುಕಿಹಾಕಿಕೊಂಡಿರುವ ವಸ್ತುವನ್ನು ಹೊರತೆಗೆಯುವ ವಿಧಾನವಾಗಿದೆ.
ಈ ಚಿಕಿತ್ಸೆಯಿದ ಶ್ವಾಸಕೋಶದ ಸ್ನಾಯುಗಳು ಬಿಗಿಯಾದ ಅನುಭವವಾಯಿತು ಎಂದು ರೋಗಿ (Patient) ತಿಳಿಸಿದ್ದಾನೆ. ನಂತರ ವೈದ್ಯರು ಸ್ಟೀರಾಯ್ಡ್ ಚಿಕಿತ್ಸೆಯನ್ನು (Treatment) ನೀಡಿದರು. ಬಳಿಕ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ವ್ಯಕ್ತಿ ನಿರಂತರವಾಗಿ ಸ್ಟೀರಾಯ್ಡ್ ಚಿಕಿತ್ಸೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
25 ವರ್ಷದ ಯುವಕನ ಹೊಟ್ಟೆಯಿಂದ 56 ಬ್ಲೇಡ್ ತುಂಡು ತೆಗೆದ ವೈದ್ಯರು
ಈ ಹಿಂದೆ ಅರುಣಾಚಲ ಪ್ರದೇಶದಲ್ಲಿಯೂ ಇಂಥಹದ್ದೇ ಘಟನೆಯೊಂದು ನಡೆದಿತ್ತು. ವ್ಯಕ್ತಿಯೊಬ್ಬ ಟೂತ್‌ಬ್ರಶ್‌ನ್ನು ನುಂಗಿದ್ದ. ಇದು ಹೊಟ್ಟೆಯೊಳಗೆ ಹೋಗಿ ಸಿಲುಕಿಹಾಕಿಕೊಂಡಿತ್ತು. ರೋಗಿಯು ತಕ್ಷಣ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದ ಕಾರಣ ಯಾವುದೇ ಜೀವಾಪಾಯವಾಗಲ್ಲಿಲ್ಲ. ವೈದ್ಯರು ವ್ಯಕ್ತಿಯ ಹೊಟ್ಟೆಯ ಒಳಗಿಂದ 19 ಸೆ.ಮೀ ಉದ್ದದ ಟೂತ್‌ಬ್ರಶ್ ಹೊರತೆಗೆದರು. 39 ವರ್ಷದ ವ್ಯಕ್ತಿ ಹಲ್ಲುಜ್ಜುವಾಗ ಈ ಘಟನೆ ಸಂಭವಿಸಿತ್ತು. ಗಂಟಲನ್ನು ಬ್ರಶ್‌ನಿಂದ ಕ್ಲೀನ್ ಮಾಡುತ್ತಿರುವಾಗ ಬ್ರಶ್ ಜಾರಿ ಹೊಟ್ಟೆಯನ್ನು ಸೇರಿತ್ತು.
ಕೋಪದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದ!
ವ್ಯಕ್ತಿಯೊಬ್ಬ ಕೋಪದ ಭರದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದಿದ್ದ ಘಟನೆ ಅಮೆರಿಕದಲ್ಲಿ ನಡೆದಿತ್ತು ಕಾಂಡೋಮ್ ಇದ್ದ ಬಾಳೆ ಹಣ್ಣು ತಿಂದ ವ್ಯಕ್ತಿ 24 ಗಂಟೆ ಮಲ ವಿಸರ್ಜನೆ ಮಾಡದೇ ಒದ್ದಾಡುತ್ತಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಸಿಟಿ ಸ್ಕಾ್ಯನ್ ಮಾಡಿದಾಗ ಆತನ ಹೊಟ್ಟೆಯಲ್ಲಿ ಕಾಂಡೋಮ್ ಸುತ್ತಿದ್ದ ಬಾಳೆ ಹಣ್ಣು (Banana) ಇರುವುದು ಕಂಡುಬಂದಿತ್ತು. ಇದನ್ನು ವಿಶ್ವದ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ, ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡ ನಂತರ ಅಪರಿಚಿತ ರೋಗಿಯು ಆಸ್ಪತ್ರೆಗೆ ವರದಿ ಮಾಡಿದ ನಂತರ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಗೆ ಯಾವುದೇ ಆಹಾರ (Food) ಅಥವಾ ಪಾನೀಯವನ್ನು ಕುಡಿಯಲು ಸಾಧ್ಯವಾಗಲಿಲ್ಲ ಮತ್ತು 24 ಗಂಟೆಗಳ ಕಾಲ ಕರುಳಿನ (Gut) ಚಲನೆಯನ್ನು ಹೊಂದಿರಲಿಲ್ಲ ಎಂದು ತಿಳಿದುಬಂದಿದೆ. ವೈದ್ಯರು ಸಿಟಿ ಸ್ಕ್ಯಾನ್ ಮಾಡಿದರು.
ಈ ಸಂದರ್ಭದಲ್ಲಿ ಕಾಂಡೋಮ್ ಸುತ್ತಿದ ಬಾಳೆಹಣ್ಣು ಅವನ ಸಣ್ಣ ಕರುಳಿಗೆ ಅಡ್ಡಿಯಾಗಿರುವುದದು ತಿಳಿದುಬಂತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಬಾಳೆಹಣ್ಣನ್ನು ಹೊರತೆಗೆಯಲಾಗಿದೆ. ವೈದ್ಯಕೀಯ ವೃತ್ತಿ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ರೀತಿಯ ಘಟನೆ ನಡೆದಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದರು.