Health Tips : ಉಂಗುರ ಧರಿಸೋರು ಓದ್ಲೇಬೇಕು.. ಎಂಬೆಡೆಡ್ ರಿಂಗ್ ಸಿಂಡ್ರೋಮ್ ಕಾಡಬಹುದು!

By Suvarna News  |  First Published May 21, 2023, 7:00 AM IST

ನಮ್ಮ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ನಾವು ಧರಿಸುವ ಬಟ್ಟೆ, ಆಭರಣ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮದಲ್ಲಿ ಸಣ್ಣ ಬದಲಾವಣೆ ಕಂಡ್ರೂ ನಾವು ಎಚ್ಚೆತ್ತುಕೊಳ್ಳಬೇಕು. ಇಲ್ಲ ಅಂದ್ರೆ ಆಸ್ಪತ್ರೆ ಬೆಡ್ ಏರ್ಬೇಕಾಗುತ್ತೆ.
 


ಉಂಗುರ, ಬೆರಳಿನ ಸೌಂದರ್ಯವನ್ನು ಹೆಚ್ಚಿಸುತ್ತೆ. ಜನರು ನಾನಾ ಬಗೆಯ ಉಂಗುರಗಳನ್ನು ಧರಿಸ್ತಾರೆ. ಬೆಳ್ಳಿ, ಬಂಗಾರ, ಪ್ಲಾಟಿನಂ ಸೇರಿದಂತೆ ಆರ್ಟಿಫಿಶಿಯಲ್ ಉಂಗುರ ಧರಿಸುವವರ ಸಂಖ್ಯೆ ಸಾಕಷ್ಟಿದೆ. ಒಂದು ಕೈನ ಐದೂ ಬೆರಳಿಗೆ ಉಂಗುರ ಧರಿಸುವವರಿದ್ದಾರೆ. ಉಂಗುರ ಬಿಗಿಯಾಗಿದ್ರೆ ಕಳಚಿ ಬೀಳುವ ಅಪಾಯ ಕಡಿಮೆ ಎನ್ನುವ ಕಾರಣಕ್ಕೆ ಕೆಲವರು ಬಿಗಿಯಾದ ಉಂಗುರವನ್ನು ಧರಿಸ್ತಾರೆ. ನೀವೂ ಉಂಗುರ ತೊಡುವ ಹವ್ಯಾಸ ಹೊಂದಿದ್ದರೆ ಅದ್ರಿಂದ ಕಾಡುವ ರೋಗದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ನಿಮ್ಮ ಕೈ (Hand) ಅಂದವನ್ನು ದುಪ್ಪಟ್ಟು ಮಾಡುವ ಉಂಗುರ (Ring) ಕೂಡ ಸೋಂಕಿಗೆ ಕಾರಣವಾಗುತ್ತದೆ. ಲಕ್ನೋದಲ್ಲಿ ವ್ಯಕ್ತಿಯೊಬ್ಬರಿಗೆ ಸಮಸ್ಯೆ ಕಾಣಿಸಿಕೊಂಡಿತ್ತು. ಉಂಗುರ ಧರಿಸಿದ್ದ ಬೆರಳಿನಲ್ಲಿ ತುರಿಕೆ (Itching) ಕಾಣಿಸಿಕೊಂಡಿತ್ತು. ತುರಿಕೆಯನ್ನು ಸಾಮಾನ್ಯ ಎಂದು ಪರಿಗಣಿಸಿದ್ದ.  ಕೆಲ ದಿನಗಳಲ್ಲಿ ತುರಿಕೆ ಜೊತೆ ಊತ (Swelling)ವೂ ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿದ ವೈದ್ಯರು, ಇದನ್ನು ಎಂಬೆಡೆಡ್ ರಿಂಗ್ ಸಿಂಡ್ರೋಮ್ ಎಂದು ಶಂಕೆ ವ್ಯಕ್ತಪಡಿಸಿದ್ದರು. ಮೊದಲು ಉಂಗುರ ಕತ್ತರಿಸಿದ ವೈದ್ಯರು ನಂತ್ರ ಬೆರಳಿಗೆ ಹಚ್ಚಲು ಕ್ರೀಂ ನೀಡಿದ್ದರು. ಆರಂಭದಲ್ಲಿಯೇ ಈ ರೋಗ ಪತ್ತೆಯಾದ್ರೆ ಚಿಕಿತ್ಸೆ ನೀಡಬಹುದು. ಇಲ್ಲವೆಂದ್ರೆ ಬೆರಳು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಎಂಬೆಡೆಡ್ ರಿಂಗ್ ಸಿಂಡ್ರೋಮ್ ಸಾಮಾನ್ಯ ರೋಗವಲ್ಲ. ಇದು ಅಪರೂಪದ ರೋಗವಾಗಿದ್ದು, ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Latest Videos

undefined

ಬೊಜ್ಜು, ಕೂದಲು ಉದುರೋಕೆ ಕಾರಣವಾಗುತ್ತಾ..ತಜ್ಞರು ಏನಂತಾರೆ?

ಎಂಬೆಡೆಡ್ ರಿಂಗ್ ಸಿಂಡ್ರೋಮ್ ಅಂದ್ರೇನು? : ಉಂಗುರವನ್ನು ಬಿಗಿಯಾಗಿ ಧರಿಸುವುದ್ರಿಂದ ಚರ್ಮದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಇದನ್ನು ಎಂಬೆಡೆಡ್ ರಿಂಗ್ ಸಿಂಡ್ರೋಮ್ ಎನ್ನಲಾಗುತ್ತದೆ. ತೂಕ ಹೆಚ್ಚಾದ್ರೂ ಜನರು ಉಂಗುರ ಬದಲಿಸೋದಿಲ್ಲ. ಇದ್ರಿಂದ ಉಂಗುರ ಬಿಗಿಯಾಗಲು ಶುರುವಾಗುತ್ತದೆ. ಎಂಬೆಡೆಡ್ ರಿಂಗ್ ಸಿಂಡ್ರೋಮ್ ಸೋಂಕು ಕೈ ಮತ್ತು ಮೂಳೆಗಳಿಗೆ ಹರಡುತ್ತದೆ. ಕೆಲ ಸಂದರ್ಭದಲ್ಲಿ ಬೆರಳನ್ನು ಕತ್ತರಿಸಬೇಕಾಗುತ್ತದೆ. ಇದ್ರ ಚಿಕಿತ್ಸೆ ಮೊದಲು ಉಂಗುರವನ್ನು ಕತ್ತರಿಸಬೇಕಾಗುತ್ತದೆ. 

ಎಂಬೆಡೆಡ್ ರಿಂಗ್ ಸಿಂಡ್ರೋಮ್ ಲಕ್ಷಣ : ಬಿಗಿಯಾಗಿ ಉಂಗುರ ಧರಿಸುವುದ್ರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಬೆರಳಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಬೆರಳಿನಲ್ಲಿ ತುರಿಕೆ ಹಾಗೂ ಉರಿ ಕೂಡ ಕಾಡುತ್ತದೆ. ಉಂಗುರ ಹಾಕಿದ ಜಾಗದಲ್ಲಿ ಗುಳ್ಳೆ ಕಾಣಿಸಿಕೊಳ್ಳುತ್ತದೆ.  

Astrology Tips: ಧನಲಾಭವಾಗಬೇಕಂದ್ರೆ ಈ ಉಂಗುರ ಧರಿಸಿ

ಎಂಬೆಡೆಡ್ ರಿಂಗ್ ಸಿಂಡ್ರೋಮ್ ಲಕ್ಷಣ ಕಾಣಿಸಿಕೊಳ್ತಿದ್ದಂತೆ ಏನು ಮಾಡ್ಬೇಕು? : ಮೊದಲನೇಯದಾಗಿ ನೀವು ಎಂಬೆಡೆಡ್ ರಿಂಗ್ ಸಿಂಡ್ರೋಮ್ ಲಕ್ಷಣ ಕಾಣಿಸಿಕೊಳ್ಳಲಿ ಬಿಡಲಿ ಯಾವುದೇ ಕಾರಣಕ್ಕೂ ಬಿಗಿಯಾದ ಉಂಗುರವನ್ನು ಧರಿಸಬೇಡಿ. ನಿಮ್ಮ ತೂಕ ಹೆಚ್ಚಾಗ್ತಿದೆ, ಉಂಗುರ ಬಿಗಿಯಾಗ್ತಿದೆ ಎಂದಾಗ ಅದನ್ನು ತೆಗೆಯುವುದು ಸೂಕ್ತ. ಒಂದ್ವೇಳೆ ಎಂಬೆಡೆಡ್ ರಿಂಗ್ ಸಿಂಡ್ರೋಮ್ ಲಕ್ಷಣ ಕಾಣಿಸಿಕೊಂಡಿದ್ದರೆ ತಕ್ಷಣ ಉಂಗುರವನ್ನು ತೆಗೆಯಬೇಕು. ವೈದ್ಯರನ್ನು ಭೇಟಿಯಾಗಿ ಔಷಧಿ ತೆಗೆದುಕೊಳ್ಳಿ. ವೈದ್ಯರು ಬ್ಯಾಕ್ಟೀರಿಯಾ ವಿರೋಧಿ ಕ್ರೀಂ ಅಥವಾ ಲೋಷನ್ ನೀಡುತ್ತಾರೆ. ಅದನ್ನು ಸರಿಯಾದ ಸಮಯಕ್ಕೆ ಹಚ್ಚಿ. ಕೆಲ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ.  

ಎಲ್ಲರ ಚರ್ಮಕ್ಕೆ ಎಲ್ಲ ಲೋಹ ಹೊಂದಿಕೆಯಾಗೋದಿಲ್ಲ. ಕೆಲವರಿಗೆ ಬಂಗಾರ, ಬೆಳ್ಳಿ ಸೇರಿದಂತೆ ಬೇರೆ ಬೇರೆ ಲೋಹಗಳು ಅಲರ್ಜಿಯುಂಟು ಮಾಡುತ್ತವೆ. ನೀವು ಉಂಗುರು ಧರಿಸ್ತಿದ್ದಂತೆ ನಿಮಗೆ ತುರಿಕೆಯಾದ್ರೆ ಉಂಗುರ ತೆಗೆದಿಡುವುದು ಒಳ್ಳೆಯದು. ನಿರಂತರವಾಗಿ ಉಂಗುರವನ್ನು ನೀವು ಧರಿಸಿದ್ರೆ ಅಲ್ಲಿ ಬೆವರು ನಿಂತು ಬ್ಯಾಕ್ಟೀರಿಯಾ ಬೆಳೆದುಕೊಳ್ಳುತ್ತದೆ. ಆಗಾಗ ಉಂಗುರ ತೆಗೆದು ಸ್ವಚ್ಛಗೊಳಿಸುತ್ತಿರಬೇಕು. ಸ್ನಾನ ಮಾಡುವ ಸಂದರ್ಭದಲ್ಲಿ ಉಂಗುರವನ್ನು ತೆಗೆದಿಟ್ಟುಕೊಳ್ಳಬೇಕು. ರೋಗ ಲಕ್ಷಣ ಕಾಣಿಸಿಕೊಳ್ತಿದ್ದರೆ ಆಂಟಿಬ್ಯಾಕ್ಟೀರಿಯಲ್ ಟಾಲ್ಕಮ್ ಪೌಡರ್ ಅನ್ನು ಬೆರಳಿಗೆ ಸಿಂಪಡಿಸಿ. ಇದು ಬೆವರನ್ನು ಹೀರಿಕೊಂಡು ಸೋಂಕು ಬೆಳೆಯದಂತೆ ತಡೆಯುತ್ತದೆ.
 

click me!