Stress and Happiness: ಒತ್ತಡವನ್ನು ಖುಷಿಯನ್ನಾಗಿ ಬದಲಿಸಿಕೊಳ್ಳಿ!

By Suvarna News  |  First Published May 20, 2023, 5:44 PM IST

ನಕಾರಾತ್ಮಕ ವಿಚಾರಗಳಿಂದ ದೂರವಾಗಬೇಕು ಎಂದು ಯತ್ನಿಸುತ್ತಿರುವವರು ನೀವಾಗಿದ್ದರೆ ಕೆಲವು ದೃಢ ವಾಕ್ಯಗಳ ಮೂಲಕ ಯತ್ನಿಸಬಹುದು. ಮಿದುಳಿಗೆ ಸಕಾರಾತ್ಮಕ ಸಂಕಲ್ಪಗಳನ್ನು, ನಂಬಿಕೆಗಳನ್ನು ನೀಡುವ ಮೂಲಕ ಖಂಡಿತವಾಗಿ ಬದಲಾವಣೆ ತಂದುಕೊಳ್ಳಲು ಸಾಧ್ಯ.


ಒತ್ತಡ ಜತೆಗಿದ್ದಾಗ ಜೀವನದ ಪ್ರತಿ ಕ್ಷೇತ್ರವೂ ಅದರ ಪ್ರಭಾವಕ್ಕೆ ತುತ್ತಾಗುತ್ತದೆ. ಎಲ್ಲ ನಿರ್ಧಾರ, ಸನ್ನಿವೇಶಗಳಲ್ಲೂ ನಕಾರಾತ್ಮಕತೆ ಮಧ್ಯಪ್ರವೇಶ ಮಾಡುತ್ತದೆ. ವ್ಯಕ್ತಿಯನ್ನು ನೆಗೆಟಿವಿಟಿಯಲ್ಲಿ ಮುಳುಗಿಸುತ್ತದೆ. ಆದರೆ, ಅಂತಹ ಭಾವನೆಗಳಲ್ಲಿ ಚೆನ್ನಾಗಿ ಬದುಕಲು ಸಾಧ್ಯವಿಲ್ಲ. ಧನಾತ್ಮಕ ಚಿಂತನೆಗಳು ಮತ್ತು ಸಂತಸವಿಲ್ಲದಿದ್ದರೆ ಜೀವನದಲ್ಲಿ ಖಂಡಿತವಾಗಿ ಸೊಗಸಿರುವುದಿಲ್ಲ. ಒಟ್ಟಾರೆ ಆರೋಗ್ಯ, ಸುಖಕ್ಕೆ ಉತ್ತಮ ಚಿಂತನೆಗಳು ಬೇಕೇ ಬೇಕು. ಎಲ್ಲರಿಗೂ ಒತ್ತಡವಿದ್ದೇ ಇರುತ್ತದೆ. ಆದರೂ ಕೆಲವರು ಸಂತಸದಿಂದ, ಧನಾತ್ಮಕ ಚಿಂತನೆಗಳೊಂದಿಗೆ ಪರಿಪೂರ್ಣವಾಗಿ ಜೀವಿಸುತ್ತಾರೆ. ಅವರಿಗೆ ಒತ್ತಡ ನಿಭಾಯಿಸುವ ತಂತ್ರಗಾರಿಕೆ ಗೊತ್ತಿರುತ್ತದೆ.  ಒತ್ತಡವನ್ನು ಸಂತಸಕ್ಕೆ ಪರಿವರ್ತಿಸಿಕೊಳ್ಳುವುದರಲ್ಲಿ ಜಾಣತನವಿದೆ. ಹಲವು ರೀತಿಯಲ್ಲಿ ಇದಕ್ಕೆ ಯತ್ನಿಸಬಹುದು. ಸಕಾರಾತ್ಮಕ ದೃಢಸಂಕಲ್ಪಗಳಿಂದ ಇದನ್ನು ಸಾಧಿಸಬಹುದು. ಒತ್ತಡದ ಸಮಯದಲ್ಲಿ ಸಕಾರಾತ್ಮಕತೆಯನ್ನು ರೂಢಿಸಿಕೊಳ್ಳುವ ವಿಧಾನವನ್ನು ಅರಿತುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಕೆಲವು ಹೇಳಿಕೆಗಳು ಅಥವಾ ವಾಕ್ಯಗಳು ನಿಮಗೆ ಸಹಕಾರಿಯಾಗಬಲ್ಲವು. ಕೇವಲ ಸಕಾರಾತ್ಮಕ ಹೇಳಿಕೆ ಅಥವಾ ವಾಕ್ಯಗಳಿಂದ ಮನಸ್ಥಿತಿ ಬದಲಾಗಲು ಸಾಧ್ಯವಿಲ್ಲ ಎನಿಸಬಹುದು. ಆದರೆ, ನಿರಂತರವಾಗಿ ಪ್ರಯತ್ನಿಸಿ ನೋಡಿದರೆ ಬದಲಾವಣೆ ಕಾಣಲು ಸಾಧ್ಯ. ಇದಕ್ಕಾಗಿ ನೀವು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಬೇಕು. ಏಕೆಂದರೆ, ನಂಬಿಕೆ ಎನ್ನುವುದು ಮಿದುಳಿಗೆ ಟಾನಿಕ್‌ ಇದ್ದ ಹಾಗೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ, ಇಂತಹ ಹೇಳಿಕೆಗಳಿಂದ ಮನಸ್ಸು ಸಕಾರಾತ್ಮಕತೆಯತ್ತ ಹೊರಳುತ್ತದೆ.

•    ಬುದ್ಧಿವಂತಿಕೆಯ (Wise) ನಿರ್ಧಾರಗಳಿಗೆ ನನ್ನನ್ನು ನಾನು ನಂಬುತ್ತೇನೆ
ಇಂಥದ್ದೊಂದು ಹೇಳಿಕೆ (Statement) ಎಷ್ಟು ದೃಢವಾಗಿದೆ ನೋಡಿ. ನಮ್ಮನ್ನು ನಾವು ನಂಬಲು ಆರಂಭಿಸಿದಾಗ ಒತ್ತಡ (Stress) ಕಡಿಮೆಯಾಗುತ್ತದೆ. ನಿಮ್ಮ ನಿರ್ಧಾರಗಳ (Decision) ಬಗ್ಗೆ ಬಗ್ಗೆ ಹಿತವೆನಿಸುತ್ತದೆ. ಇತರ ಜನರ ನೆಗೆಟಿವ್‌ (Negative) ಅನಿಸಿಕೆ ಮತ್ತು ಸ್ವಯಂ ಅನುಮಾನಗಳಿಂದ ಮುಕ್ತಿ ದೊರೆಯುತ್ತದೆ.

Latest Videos

undefined

Shiva Meditation: ಆಲಸ್ಯದಿಂದ ಹಿಡಿದು ಹೃದಯ ಸಮಸ್ಯೆ ದೂರ ಮಾಡುತ್ತೆ ಈ ಧ್ಯಾನ

•    ಕಷ್ಟದ ಸಮಯ (Hard Time) ಎದುರಿಸುತ್ತಿದ್ದೇನೆ, ನೆಗೆಟಿವಿಟಿ ರಿಲೀಸ್‌ ಮಾಡುತ್ತೇನೆ
ಯಾವುದೇ ಅಡೆತಡೆ ನಿವಾರಿಸಿಕೊಳ್ಳುವ ಶಕ್ತಿ ನಿಮಗಿದೆ. ಈ ದೃಢ ಹೇಳಿಕೆ ನಿಮ್ಮ ಸಾಮರ್ಥ್ಯವನ್ನು ನಿಮಗೆ ನೆನಪಿಸುತ್ತದೆ. ನೆಗೆಟಿವಿಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ನಿಮಗೆ ನೀವು ಹೇಳಿಕೊಳ್ಳುವುದರಿಂದ ಸಮಸ್ಯೆಯ ಬಗ್ಗೆ ಯೋಚಿಸುವುದು ಕಡಿಮೆಯಾಗುತ್ತದೆ. ಕಷ್ಟದ ಸಮಯದಿಂದ ಹೇಗೆ ಹೊರಬರಬೇಕು ಎನ್ನುವ ಬಗ್ಗೆ ಹೆಚ್ಚು ತಾರ್ಕಿಕವಾಗಿ ಯೋಚಿಸಲು ಸಹಕಾರಿಯಾಗುತ್ತದೆ.

•    ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಿದ್ದೇನೆ, ಇದು ಬೇಕಾದಷ್ಟಾಯಿತು
ಕಷ್ಟದ (Difficult) ಸಮಯದಲ್ಲಿ ಏನು ಮಾಡಿದರೂ ಸಾಲದು ಎನಿಸುತ್ತದೆ. ಹೀಗಾಗಿ, ಇನ್ನಷ್ಟು ಸಮಸ್ಯೆಗಳನ್ನು (Problems) ಮೈಮೇಲೆ ಎಳೆದುಕೊಳ್ಳುವುದು ಸಾಮಾನ್ಯ. ಆದರೆ, ಮೇಲಿನ ಈ ಹೇಳಿಕೆ ನಿಮ್ಮ ಮನಸ್ಸಿನ ಸ್ಥಿತಿ (Situation) ನಿಮ್ಮ ಪ್ರಯತ್ನ (Try) ಮತ್ತು ಸ್ವ ಮೌಲ್ಯಕ್ಕೆ ಚೈತನ್ಯ ನೀಡುತ್ತದೆ.

•    ಒತ್ತಡ ದೇಹದಿಂದ (Body) ಹೊರ ಹೋಗುತ್ತಿದೆ
ಈ ಹೇಳಿಕೆಯನ್ನು ದಿನಕ್ಕೆ ಕೆಲ ಸಮಯ ಹೇಳಿಕೊಳ್ಳುವುದರಿಂದ ದೇಹದಿಂದ ಒತ್ತಡ ಹೊರಹೋಗಲು ಅನುಕೂಲವಾಗುತ್ತದೆ. ವಿಷುವಲೈಸೇಷನ್‌ (Visualise) ನಿಂದಲೂ ಭಾರೀ ಸಹಾಯವಾಗುತ್ತದೆ.

Health Tips: ಯುವಜನರಲ್ಲಿ ಕಾಡುವ ಮಾನಸಿಕ ರೋಗಕ್ಕೆ ಕುಟುಂಬವೇ ಕಾರಣ!

•    ನಾನು ನಿಯಂತ್ರಿಸಬಲ್ಲ (Control) ವಿಚಾರಗಳಿಗೆ ಮಾತ್ರ ಆದ್ಯತೆ
ನಾವು ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲವನ್ನೂ ನಿಯಂತ್ರಿಸಲು ಮುಂದಾದರೆ ನಕಾರಾತ್ಮಕತೆ ಮತ್ತು ಒತ್ತಡ ಗಂಟುಬೀಳುವುದು ಗ್ಯಾರೆಂಟಿ. ನೀವು ನಿಯಂತ್ರಿಸಬಲ್ಲ ಅಂಶಗಳ  ಕುರಿತು ಅತಿಯಾಗಿ ಸುಖಾಸುಮ್ಮನೆ ವಿಚಾರ ಮಾಡುವ ಬದಲು ಕೆಲಸ ಮಾಡಲು (Start Work) ಆರಂಭಿಸುತ್ತೀರಿ. 

•    ನಾನು ಧನಾತ್ಮಕ (Positive) ವ್ಯಕ್ತಿ, ಧನಾತ್ಮಕತೆಯನ್ನೇ ಆಕರ್ಷಿಸುತ್ತೇನೆ
ಅತಿಯಾದ ನಕಾರಾತ್ಮಕ ಚಿಂತನೆ ನಿಮ್ಮನ್ನು ನಕಾರಾತ್ಮಕ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಆದರೆ, ಇದನ್ನೇ ಸಕಾರಾತ್ಮಕತೆಗೆ ಬದಲಿಸಿಕೊಂಡರೆ ಸಕಾರಾತ್ಮಕ ವ್ಯಕ್ತಿಗಳು, ವಿಚಾರಗಳನ್ನೇ ಗುರುತಿಸಲು ಆರಂಭಿಸುತ್ತೀರಿ.

•    ಇಂದು ಶಾಂತಿ ಲಭ್ಯವಾಗುವ (Find Peace) ಕ್ಷಣಕ್ಕೆ ಕಾಯುತ್ತೇನೆ
ಇದು ಭಾರೀ ತಂತ್ರಗಾರಿಕೆಯಿಂದ ಕೂಡಿರುವ ವಾಕ್ಯವಾಗಿದ್ದು, ಇದರ ಪರಿಣಾಮವಾಗಿ ನೀವು ಆ ದಿನ ಉತ್ತಮ ವಿಚಾರಗಳನ್ನು ಗುರುತಿಸುವ ದೃಷ್ಟಿಕೋನ ಹೊಂದುತ್ತೀರಿ. 
 

click me!