Health Tips : ಕೋಲ್ಡ್ ಪ್ರೆಸ್ಡ್ ಆಯಿಲ್ ಅಂದ್ರೇನು? ಅದ್ರ ಲಾಭವೇನು ಗೊತ್ತಾ?

Published : Mar 08, 2023, 07:00 AM IST
Health Tips :  ಕೋಲ್ಡ್ ಪ್ರೆಸ್ಡ್ ಆಯಿಲ್ ಅಂದ್ರೇನು? ಅದ್ರ ಲಾಭವೇನು ಗೊತ್ತಾ?

ಸಾರಾಂಶ

ಎಣ್ಣೆಯಲ್ಲಿ ಸಾಕಷ್ಟು ವಿಧವಿದೆ. ಯಾವ ಎಣ್ಣೆ ಬಳಸಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಗೊಂದಲ ಜನರಲ್ಲಿದೆ. ಈಗಿನ ದಿನಗಳಲ್ಲಿ ಕೆಮಿಕಲ್ ಮಿಶ್ರಿತ ಎಣ್ಣೆಗಳು ಮಾರುಕಟ್ಟೆಗೆ ಬರ್ತಿರೋದ್ರಿಂದ ಈ ಗೊಂದಲ ಹೆಚ್ಚಾಗಿದೆ. ನಾವಿಂದು ಕೋಲ್ಡ್ ಪ್ರೆಸ್ಡ್ ಆಯಿಲ್ ಬಳಕೆಯಿಂದಾಗುವ ಪ್ರಯೋಜವನ್ನು ನಿಮಗೆ ತಿಳಿಸ್ತೇವೆ.  

ಅಡುಗೆಯಿಂದ ಹಿಡಿದು  ಕೂದಲಿನವರೆಗೆ ನಾವು ಎಣ್ಣೆಯನ್ನು ಬಳಸ್ತೇವೆ. ಅನೇಕರು ಕೈ, ಮೈಗೆ ಕೂಡ ಎಣ್ಣೆ ಹಚ್ಚಿಕೊಳ್ತಾರೆ. ಪ್ರತಿನಿತ್ಯದಲ್ಲಿ ನಾವು ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ ಮುಂತಾದವುಗಳನ್ನು ಹೆಚ್ಚಾಗಿ ಬಳಸುತ್ತೇವೆ. ಸಾಮಾನ್ಯವಾಗಿ ಕಾಯಿ ಅಥವಾ ಎಣ್ಣೆ ಬೀಜಗಳನ್ನು ಬಿಸಿ ಮಾಡಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಕೋಲ್ಡ್ ಪ್ರೆಸ್ಡ್ ಎಣ್ಣೆಯನ್ನು ತೆಗೆಯುವಾಗ ಬೀಜಗಳನ್ನು ಬಿಸಿಮಾಡುವುದಿಲ್ಲ. ಈ ವಿಧಾನದಲ್ಲಿ ಎಣ್ಣೆಯ ಬೀಜಗಳನ್ನು ಗಾಣದಲ್ಲಿ ಒತ್ತಿ ಎಣ್ಣೆಯನ್ನು ಹಿಂಡಿ ತೆಗೆಯಲಾಗುತ್ತದೆ. ಹಾಗಾಗಿ ಕೋಲ್ಡ್ ಪ್ರೆಸ್ ಎಣ್ಣೆಯಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ರಾಸಾಯನಿಕಗಳು ಇಲ್ಲದ ಕಾರಣ ಇದರಲ್ಲಿ ಎಸಿಡ್ ಮೌಲ್ಯವೂ ಕಡಿಮೆ ಪ್ರಮಾಣದಲ್ಲಿರುತ್ತದೆ.

ಮೊದಲಿನಿಂದಲೂ ಎಣ್ಣೆ (Oil) ಎಂದರೆ ಹಾಟ್ ಪ್ರೆಸ್ಡ್ (Hot Pressed) ಎಣ್ಣೆಯೇ ಆಗಿರುತ್ತಿತ್ತು. ಆದರೆ ಇತ್ತೀಚೆಗೆ ಈ ಕೋಲ್ಡ್ ಪ್ರೆಸ್ಡ್ ಎಣ್ಣೆ ಬೆಳಕಿಗೆ ಬಂದಿದೆ. ಇನ್ನೂ ಅನೇಕ ಮಂದಿಗೆ ಇದರ ಬಗ್ಗೆ ತಿಳಿದಿಲ್ಲ. ಈ ಕೋಲ್ಡ್ ಪ್ರೆಸ್ಡ್ (Cold Pressed) ಹೇಗೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನೋಡೋಣ.

H3N2 ವೃದ್ಧರು, ಮಕ್ಕಳಿಗೆ ಹೆಚ್ಚು ಅಪಾಯಕಾರಿ, ಸಾವಿನ ಪ್ರಮಾಣ ಕಡಿಮೆ, ಆದರೆ ನಿರ್ಲಕ್ಷ್ಯ ಬೇಡ

• ಕೋಲ್ಡ್ ಪ್ರೆಸ್ಡ್ ಎಣ್ಣೆ ಉತ್ಕರ್ಷಣ ನಿರೋಧಕಗಳು, ಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಜೀವಸತ್ವಗಳು, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ (Vitamin E) ಗಳನ್ನು ಹೊಂದಿದೆ. ಈ ಎಲ್ಲ ಗುಣಗಳು ನಮ್ಮ ಶರೀರದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
• ತಣ್ಣನೆಯ ವಿಧಾನದಲ್ಲಿ ತಯಾರಾದ ಎಣ್ಣೆಯ ಸೇವನೆಯಿಂದ ಚರ್ಮ ಕೂಡ ಆರೋಗ್ಯವಾಗಿರುತ್ತೆ. ಇದು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಈ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಇರುವುದರಿಂದ ಇದು ಮೊಡವೆಗಳ ಸಮಸ್ಯೆಯನ್ನು ಕೂಡ ದೂರಮಾಡುತ್ತದೆ.
• ಡಯಾಬಿಟೀಸ್ ಖಾಯಿಲೆ ಹೊಂದಿರುವವರು ಕೋಲ್ಡ್ ಪ್ರೆಸ್ಡ್ ಎಣ್ಣೆಯನ್ನು ಸೇವಿಸಬೇಕು. ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಸ್ಥಿತಿಯಲ್ಲಿಡುತ್ತದೆ.
• ಕೋಲ್ಡ್ ಪ್ರೆಸ್ಡ್ ಆಯಿಲ್ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಶರೀರದ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಈ ಎಣ್ಣೆಯನ್ನು ಬಳಸಿದರೆ ಸಾಕಷ್ಟು ಪ್ರಯೋಜನ ಕಾಣಬಹುದು.
• ತಣ್ಣನೆಯ ಎಣ್ಣೆಯಲ್ಲಿನ ಎಂಟಿಆಕ್ಸಿಡೆಂಟ್ ಫ್ರೀ ರೆಡಿಕಲ್ಸ್ ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವವರು ಈ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಒಳ್ಳೆಯ ಪ್ರಯೋಜನ ಪಡೆಯಬಹುದು.
• ಕೋಲ್ಡ್ ಎಣ್ಣೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಅಂಶಗಳನ್ನು ಒಳಗೊಂಡಿರುವ ಕೋಲ್ಡ್ ಪ್ರೆಸ್ಡ್ ಆಯಿಲ್ ರಕ್ತನಾಳದ ಖಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೆಂಪು, ಹಸಿರು, ಕಪ್ಪು ದ್ರಾಕ್ಷಿ, ಬೇಸಿಗೆಯಲ್ಲಿ ಯಾವ್ದನ್ನು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು?

ತಣ್ಣನೆಯ ಎಣ್ಣೆಯನ್ನು ತೆಗೆಯುವಾಗ ಯಾವುದೇ ತರಹದ ಕೆಮಿಕಲ್ ಗಳನ್ನು ಬಳಸಲಾಗುವುದಿಲ್ಲ. ಈ ಎಣ್ಣೆಯನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಹಿಂಡುವುದರಿಂದ ಬೀಜದಲ್ಲಿರುವ ಪೋಷಕ ಸತ್ವಗಳು ಎಣ್ಣೆಯಲ್ಲಿಯೇ ಇರುತ್ತವೆ. ಹಾಗಾಗಿ ಅಡುಗೆಯಲ್ಲಿ ಬಳಸುವಾಗ ಮೊದಲ ಬಾರಿಗೆ ಬಿಸಿಯಾಗುವ ಕಾರಣ ನೈಸರ್ಗಿಕ ರುಚಿ ಮತ್ತು ಪೋಷಕಾಂಶಗಳು ಹೇರಳವಾಗಿರುತ್ತದೆ. ಆದ್ದರಿಂದ ಈ ಎಣ್ಣೆ ಅತೀ ಶುದ್ಧವಾದ ಎಣ್ಣೆಯಾಗಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದು. ರಿಫೈನ್ಡ್ ಆಯಿಲ್ ಗೆ ಹೋಲಿಸಿದಲ್ಲಿ ಕೋಲ್ಡ್ ಪ್ರೆಸ್ ವಿಧಾನದಿಂದ ತಯಾರಿಸಲಾದ ಎಣ್ಣೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ರಿಫೈನ್ಡ್ ಎಣ್ಣೆಯನ್ನು ಅಧಿಕ ತಾಪಮಾನದಲ್ಲಿ ತಯಾರಿಸುತ್ತಾರೆ. ಈ ವಿಧಾನದಲ್ಲಿ ಶಾಖ ಮತ್ತು ರಾಸಾಯನಿಕಗಳ ಮಿಶ್ರಣದಿಂದ ಎಣ್ಣೆಯ ಬೀಜದಲ್ಲಿನ ನೈಸರ್ಗಿಕ ಗುಣ ಇರುವುದಿಲ್ಲ.

ಕೋಲ್ಡ್ ಪ್ರೆಸ್ ಎಣ್ಣೆಗೆ ಗಾಣದ ಎಣ್ಣೆ  ಎಂದು ಕೂಡ ಕರೆಯಲಾಗುತ್ತದೆ. ಎಳ್ಳೆಣ್ಣೆ, ತೆಂಗಿನ ಎಣ್ಣೆ, ಅಗಸೆ ಬೀಜಗಳನ್ನು ಕೋಲ್ಡ್ ಪ್ರೆಸ್ ವಿಧಾನದಲ್ಲಿ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಈ ಎಣ್ಣೆಗಳು ಸಾಮಾನ್ಯ ಎಣ್ಣೆಗಿಂತ ಕೊಂಚ ದುಬಾರಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?