ಎಡಿಎಚ್ ಡಿ ಸಮಸ್ಯೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ತೊಂದರೆ ತಂದೊಡ್ಡುತ್ತದೆ. ಈ ತೊಂದರೆ ಉಳ್ಳ ಸಾಕಷ್ಟು ಜನ ತಮ್ಮ ಉದ್ಯೋಗದ ಸ್ಥಳದಲ್ಲಿ ಯಶಸ್ವಿಯಾಗದೆ ವಿಶ್ವಾಸ ಕಳೆದುಕೊಳ್ಳುವುದು ಸಾಮಾನ್ಯ. ಕಚೇರಿಯಲ್ಲಿ ಯಶಸ್ಸು ಗಳಿಸಲು ಕೆಲವು ಟಿಪ್ಸ್ ಅನುಸರಿಸಬೇಕು.
ಕೂತಲ್ಲಿ ಕೂರಲಾಗದೆ ಹಿಂಸೆ, ಏಕಾಗ್ರತೆ ಇಲ್ಲದ ಚಿತ್ತ, ಮನಸ್ಸನ್ನು ಕೇಂದ್ರೀಕರಿಸಿ ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಿತಿ, ಕೊಟ್ಟ ಕೆಲಸವನ್ನು ಪೂರೈಸಲು ಆಗದಿರುವುದು, ಆಗಾಗ ಏನಾದರೂ ಮರೆತುಹೋಗುವುದು, ಸರಿಯಾಗಿ ಕೇಳಿಸಿಕೊಳ್ಳಲಿಕ್ಕೇ ಆಗದಿರುವುದು, ಸುಲಭವಾಗಿ ಬೋರ್ ಎನಿಸುವುದು, ಬೇಗ ಇನ್ನೊಂದರ ಕಡೆ ಆಕರ್ಷಣೆ…ಇವೆಲ್ಲ ಯಾವಾಗಲಾದರೊಮ್ಮೆ ಎಲ್ಲರಿಗೂ ಉಂಟಾಗುವ ಸಮಸ್ಯೆ. ಆದರೆ, ಸದಾಕಾಲ ಇದೇ ರೀತಿ ಆಗುತ್ತಿದ್ದರೆ ಗಂಭೀರ ಸಮಸ್ಯೆ ಎದುರಾಗುವುದು ಖಚಿತ. ಈ ಸಮಸ್ಯೆಯನ್ನು ಅಟೆನ್ಷನ್ ಡೆಫಿಸಿಟ್ ಡಿಸಾರ್ಡರ್ -ಎಡಿಎಚ್ ಡಿ ಎನ್ನಲಾಗುತ್ತದೆ. ಚಿಕ್ಕ ಮಕ್ಕಳಲ್ಲಿ ಎಡಿಎಚ್ ಡಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಸಮಯದಲ್ಲಿ ತಾಳ್ಮೆ ಇರುವುದಿಲ್ಲ, ಗೊಂದಲ ಹೆಚ್ಚಿರುತ್ತದೆ. ನೆನಪಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಬಹುದು, ನಿದ್ರಾ ಸಮಸ್ಯೆ, ಬಂಧಿಯಾಗಿರುವ ಭಾವನೆಗಳು ಉಂಟಾಗಬಹುದು. ಪದೇ ಪದೆ ಮೂಡಿನಲ್ಲಿ ವ್ಯತ್ಯಾಸವಾಗಬಹುದು. ಇಂತಹ ಸಮಸ್ಯೆ ಮಕ್ಕಳಲ್ಲಿದ್ದರೆ ಅದು ಅವರ ಒಟ್ಟಾರೆ ಬೆಳವಣಿಗೆಗೆ ಹಾನಿಯಾಗುತ್ತದೆ. ಮಕ್ಕಳಲ್ಲಿರುವ ಸಮಸ್ಯೆ ನಿವಾರಣೆಗೆ ಹಲವಾರು ಮಾರ್ಗೋಪಾಯಗಳನ್ನು ತಜ್ಞರು ನೀಡುತ್ತಾರೆ. ಇದೇ ಸಮಸ್ಯೆ ದೊಡ್ಡವರಾದ ಬಳಿಕವೂ ಇದ್ದರೆ ಉದ್ಯೋಗದ ಸ್ಥಳದಲ್ಲಿ ಭಾರೀ ತೊಂದರೆ ಆಗುತ್ತದೆ.
ತಜ್ಞರ ಪ್ರಕಾರ, ಎಡಿಎಚ್ ಡಿ (Attention Deficit Disorder) ಇರುವ ಮಕ್ಕಳು ಸಾಮಾಜಿಕ ಜೀವನ (Social Life) ಹಾಗೂ ಶಾಲೆಯಲ್ಲಿ (School) ಭಾರೀ ಸಮಸ್ಯೆ ಎದುರಿಸುತ್ತಾರೆ. ಸ್ನೇಹಿತರನ್ನು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಹೆಚ್ಚು ಶಿಕ್ಷೆಗೆ ಒಳಗಾಗುತ್ತಾರೆ, ಗಮನ ನೀಡದ ವರ್ತನೆಯಿಂದ ಸೋಮಾರಿ (Lazy) ಎಂದು ತಪ್ಪಾಗಿ ಬಿಂಬಿತರಾಗಬಹುದು. ಅವರನ್ನು ರೇಗಿಸುವುದು ಸುಲಭ. ಈ ಮಕ್ಕಳಿಗೆ ಭಾವನೆಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ. ದಿನ ಕಳೆದಂತೆ ಈ ಮಕ್ಕಳಲ್ಲಿ ಆತ್ಮವಿಶ್ವಾಸ (Self Esteem) ಕುಗ್ಗಬಹುದು. ಖಿನ್ನತೆ (Depression), ಆತಂಕದ (Anxiety) ಸಮಸ್ಯೆ ಹೆಚ್ಚಬಹುದು. ವ್ಯಸನಗಳಿಗೆ ದಾಸರಾಗಬಹುದು. ಉದ್ಯೋಗದ (Office) ಸ್ಥಳದಲ್ಲೂ ಇವರು ಸಮಸ್ಯೆಗೆ ತುತ್ತಾಗುತ್ತಾರೆ. ಆದರೆ, ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಉದ್ಯೋಗವನ್ನು ನಿಭಾಯಿಸಬಹುದು.
ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಸನ ಬೆಸ್ಟ್
ಎಡಿಎಚ್ ಡಿ ಉಳ್ಳವರು ಕಚೇರಿಯಲ್ಲಿ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡಲು ಸಮಸ್ಯೆ ಎದುರಿಸಬಹುದು. ಹೀಗಾಗಿ, ಜೀವನಶೈಲಿಯಲ್ಲಿ ಕೆಲವು ಸುಧಾರಣೆ ಮಾಡಿಕೊಳ್ಳುವುದು ಅಗತ್ಯವಾಗುತ್ತದೆ. ಕೆಲವು ಸಿಂಪಲ್ ಟಿಪ್ಸ್ ಅನುಸರಿಸುವ ಮೂಲಕ ಎಡಿಎಚ್ ಡಿ ಇದ್ದರೂ ಉದ್ಯೋಗದಲ್ಲಿ ಯಶಸ್ವಿ ಎನಿಸಿಕೊಳ್ಳಬಹುದು.
• ಕೆಲಸಕ್ಕೆ ಕೂರುವ ಮುನ್ನ ಸಾಕಷ್ಟು ನೀರು (Water) ಕುಡಿಯಿರಿ. ಸ್ವಲ್ಪ ತಿಂಡಿಯನ್ನೂ ಸೇವಿಸಿ. ದೇಹ ಹೈಡ್ರೇಟ್ (Hydrate) ಆಗಿದ್ದರೆ ಆತಂಕ ಕಾಡುವುದಿಲ್ಲ, ಮಿದುಳು ಗೊಂದಲಕ್ಕೆ (Brain Fog) ಒಳಗಾಗುವುದಿಲ್ಲ.
• ಕೆಲಸವನ್ನು ಪೂರ್ಣಗೊಳಿಸಲು ಸಮಯ ನಿಗದಿ (Set Time) ಪಡಿಸಿಕೊಳ್ಳಿ. ಇದರಿಂದ ಉಂಟಾಗುವ ಧನಾತ್ಮಕ ಒತ್ತಡದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.
• ಕೆಲಸವನ್ನು ವಿಭಾಗಿಸಿಕೊಳ್ಳಿ. ಸಣ್ಣ ಸಣ್ಣ ಸವಾಲುಗಳನ್ನು ಮೊದಲು ಮುಗಿಸಿಕೊಂಡು ಮಧ್ಯೆ ಬಿಡುವು (Gap) ತೆಗೆದುಕೊಳ್ಳಿ.
• ಬಿಡುವಿನಲ್ಲಿ ವಾಕ್ (Walk) ಮಾಡಿ. ಇದರಿಂದ ದೇಹಕ್ಕೆ ಉತ್ತೇಜನ ದೊರೆಯುತ್ತದೆ. ಸಹೋದ್ಯೋಗಿಗಳೊಂದಿಗೆ ಮಾತನಾಡಿ. ಆದರೆ, ಮೊಬೈಲ್ ನೋಡಬೇಡಿ, ಯಾವುದೇ ಗ್ಯಾಜೆಟ್ (Gadgets) ಬಳಸಬೇಡಿ.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಹೆಚ್ಚುತ್ತೆ ಏಕಾಗ್ರತೆ
• ಟೇಬಲ್ (Table) ಮೇಲೆ ಹಲವಾರು ವಸ್ತುಗಳು ಹರಡಿಕೊಂಡಿರುವುದು ಬೇಡ. ಇದರಿಂದ ಮಿದುಳು ಗೊಂದಲಕ್ಕೆ ಒಳಗಾಗುತ್ತದೆ. ಸಾಧ್ಯವಾದಷ್ಟೂ ನೀಟಾಗಿ ಇಟ್ಟುಕೊಳ್ಳಿ. ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಡೆಸ್ಕ್ ಟಾಪ್ (Desktop) ಕೂಡ ಹೀಗೆಯೇ ನೀಟಾಗಿ ಇರಬೇಕು.
• ಜೀವನಶೈಲಿ (Lifestyle), ಆಹಾರ ಪದ್ಧತಿಯಲ್ಲೂ (Food) ಬದಲಾವಣೆ ಅಗತ್ಯ. ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ದಿನಕ್ಕೆ ಎರಡಕ್ಕಿಂತ ಹೆಚ್ಚು ಕಾಫಿ ಅಥವಾ ಟೀ ಬೇಡ. ದಿನವೂ 20-30 ನಿಮಿಷ ವ್ಯಾಯಾಮ ಮಾಡಲೇಬೇಕು. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ವ್ಯಾಯಾಮದಿಂದ ಒತ್ತಡ ನಿವಾರಣೆ ಮಾಡುವ ಹಾರ್ಮೋನುಗಳು ಸ್ರವಿಕೆ ಆಗುತ್ತವೆ. ಕನಿಷ್ಟ 6-8 ತಾಸುಗಳ ಉತ್ತಮ ನಿದ್ರೆ ಅಗತ್ಯ.