PCOD : ಯಾವುದೇ ಔಷಧಿಯಿಲ್ಲದೆ ಪಿಸಿಒಡಿಗೆ ಹೀಗೆ ಹೇಳಿ ಗುಡ್ ಬೈ

Suvarna News   | Asianet News
Published : Dec 23, 2021, 02:23 PM IST
PCOD : ಯಾವುದೇ ಔಷಧಿಯಿಲ್ಲದೆ ಪಿಸಿಒಡಿಗೆ ಹೀಗೆ ಹೇಳಿ ಗುಡ್ ಬೈ

ಸಾರಾಂಶ

ಫಾಸ್ಟ್ ಫುಡ್ ನೋಡಿದಾಗ ಬಾಯಲ್ಲಿ ನೀರು ಬರುತ್ತೆ.  ಪ್ಯಾಕೆಟ್ ಫುಡ್, ಜ್ಯೂಸ್ ಸೇವನೆ ಈಗ ಕಾಮನ್ ಆಗಿದೆ. ಬೆಳಿಗ್ಗೆ ಏಳೋಕೆ ಕಷ್ಟ. ವ್ಯಾಯಾಮ, ಯೋಗ ದೂರ ದೂರ. ಇದು ಅನೇಕ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಕೆಟ್ಟ ಅಭ್ಯಾಸಗಳೇ ಮಹಿಳೆಯರ ಪಿಸಿಒಡಿಗೆ ಮೂಲವಾಗಿದೆ.

ದಾರಿ ತಪ್ಪಿದ ಜೀವನಶೈಲಿ ಅನೇಕ ಸಮಸ್ಯೆಗೆ ಕಾರಣವಾಗ್ತಿದೆ. ಅದ್ರಲ್ಲಿ ಹಾರ್ಮೋನು(hormone)ಗಳ ಅಸಮತೋಲನ ಕೂಡ ಒಂದು.  ಹಾರ್ಮೋನ್ ಬದಲಾವಣೆ  ಪುರುಷನಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತವೆ. ಇದರಿಂದ ಮಹಿಳೆಯರು ಪಿಸಿಒಡಿ(PCOD)ಗೆ ಬಲಿಯಾಗುತ್ತಿದ್ದಾರೆ. ಪ್ರತಿ 5 ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ಪಿಸಿಒಡಿಯಿಂದ ಬಳಲುತ್ತಿದ್ದಾರೆ.   
ಪಿಸಿಒಡಿ ಗರ್ಭಕೋಶ (Uterus)ಕ್ಕೆ ಸಂಬಂಧಿಸಿದ ಖಾಯಿಲೆಯಾಗಿದೆ.ಅಂಡಾಶಯಗಳಲ್ಲಿ ಅಪ್ರೌಢ ಮೊಟ್ಟೆಗಳಿರುವುದನ್ನು ಪಿಸಿಒಡಿ ಎನ್ನುತ್ತಾರೆ. ಪಿಸಿಒಡಿ ಇರುವವರಿಗೆ ಮುಟ್ಟು ಸರಿಯಾಗಿ ಆಗದೆ ಸಮಸ್ಯೆ ಕಾಡುತ್ತದೆ. ಕೆಲವರಿಗೆ ಅತಿಯಾದ ರಕ್ತಸ್ರಾವವಾದ್ರೆ ಮತ್ತೆ ಕೆಲವರಿಗೆ ಕಡಿಮೆ ರಕ್ತಸ್ರಾವವಾಗುತ್ತದೆ.ತೀಕ್ಷ್ಣವಾದ ನೋವು, ಕಿರಿಕಿರಿ ಮತ್ತು ಮನಸ್ಥಿತಿ ಬದಲಾವಣೆ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ದೇಹದ ಭಾಗಗಳಲ್ಲಿ ದಪ್ಪ ಕೂದಲು ಕಾಣಿಸಿಕೊಳ್ಳುತ್ತದೆ ಆದ್ರೆ ತಲೆ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ನೋವಿನ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ.  ಗರ್ಭಧಾರಣೆ ಕಷ್ಟವಾಗುತ್ತದೆ ಜೊತೆಗೆ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ. 

ಪಿಸಿಒಡಿ ಗೆ ಕಾರಣಗಳು : ಇದು ಜೀವನಶೈಲಿ (Lifestyle) ಸಂಬಂಧಿತ ಕಾಯಿಲೆಯಾಗಿದೆ. ಆರೋಗ್ಯಕರ ಜೀವನಶೈಲಿ ಅಳವಡಿಸುವ ಮೂಲಕ ಇದ್ರಿಂದ ರಕ್ಷಣೆ ಪಡೆಯಬಹುದು. ಜಂಕ್ ಫುಡ್ (Junk Food )ಮತ್ತು ಹೊರಗಿನ ಆಹಾರ ಹೆಚ್ಚಾಗಿ ಸೇವಿಸುವ ಮಹಿಳೆಯರಿಗೆ ಇದು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.ನಿಯಮಿತ ವ್ಯಾಯಾಮ ಮಾಡದ ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಾರೆ. ಗಂಟೆಗಳ ಕಾಲ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದು, ತೂಕ ಹೆಚ್ಚಳ,ಸದಾ ಕಿರಿಕಿರಿ,ಒತ್ತಡದಲ್ಲಿರುವ ಮಹಿಳೆಯರಿಗೆ ಇದರ ಅಪಾಯ ಹೆಚ್ಚು. 
ಮೊದಲೇ ಹೇಳಿದಂತೆ ಇದು ಜೀವನಶೈಲಿಗೆ ಸಂಬಂಧಿಸಿರುವುದರಿಂದ ಮೊದಲು ನಿಮ್ಮ ಆಹಾರದ ಬಗ್ಗೆ ಗಮನ ನೀಡಬೇಕು. ಇದಕ್ಕೆ ಔಷಧಿಯಿದೆ. ಆದ್ರೆ ಔಷಧಿ ಬಿಟ್ಟರೆ ಆರೋಗ್ಯ ಬಿಗಡಾಯಿಸುತ್ತದೆ. ಹಾಗಾಗಿ ಜೀವನ ಶೈಲಿಯಲ್ಲಿ ಸುಧಾರಣೆ ತಂದಲ್ಲಿ ರೋಗ ತಾನಾಗಿಯೇ ದೂರವಾಗುತ್ತದೆ. 

ಈ ಆಹಾರ ಸೇವಿಸಿ ಪಿಸಿಒಡಿ ಓಡಿಸಿ 

ವಿಟಮಿನ್ ಡಿ (Vitamin D )ಸಮೃದ್ಧ ಆಹಾರ : ಪಿಸಿಓಡಿಗೆ ಬಲಿಯಾದ ಮಹಿಳೆಯರು ಸಾಕಷ್ಟು ವಿಟಮಿನ್ ಡಿ ಮತ್ತು ವಿಟಮಿನ್ ಬಿ ಇರುವ ಆಹಾರ ಸೇವನೆ ಮಾಡಬೇಕು.ಬೆಳಗಿನ ಉಪಾಹಾರ ತಪ್ಪಿಸಿಬಾರದು. ಬೆಳಿಗ್ಗೆ ಎದ್ದ ಅರ್ಧ ಗಂಟೆಯೊಳಗೆ ಆಹಾರ ಸೇವನೆ ಮಾಡುವುದು ಒಳ್ಳೆಯದು. ಬೆಳಿಗ್ಗೆ ನೆನೆಸಿದ ಬಾದಾಮಿ ಮತ್ತು ವಾಲ್ನಟ್ಸ್ ಜೊತೆ ಆರೋಗ್ಯಕರ ಆಹಾರ ಸೇವನೆ ಮಾಡಿ.  ಮೊಟ್ಟೆಯ ಬಿಳಿಭಾಗ, ಪನೀರ್ ಸ್ಯಾಂಡ್‌ವಿಚ್‌ಗಳು, ಓಟ್ಸ್ ನಂತಹ ಪ್ರೋಟೀನ್ ಭರಿತ ಆಹಾರ ಸೇವನೆ ಮಾಡಿ.  ಊಟಕ್ಕೆ 2 ಗಂಟೆಗಳ ಮೊದಲು ಸಾಕಷ್ಟು ಸಲಾಡ್ ತಿನ್ನಿರಿ. ರಾತ್ರಿಯ ಊಟದಲ್ಲಿ, ಸೂಪ್, ಇಡ್ಲಿ, ಪನೀರ್ ಇರಲಿ. ಹಾಗೆ ಸಾಕಷ್ಟು ನೀರು ಸೇವನೆ ಮಾಡಿ.

Wifes Secret: ಗಂಡನಿಗೆ ಗೊತ್ತಾಗಬಾರದು ಎಂದು ಹೆಂಡತಿ ಬಚ್ಚಿಡುವ ಟಾಪ್ ಸೀಕ್ರೆಟ್ಸ್ !

ನಡಿಗೆ,ವ್ಯಾಯಾಮ (Walk, Exercise): ಪ್ರತಿ ದಿನ ವ್ಯಾಯಾಮ ಅನಾರೋಗ್ಯವನ್ನು ದೂರವಿಡುತ್ತದೆ. ಪ್ರತಿ ದಿನ 30 ರಿಂದ 45 ನಿಮಿಷಗಳ ಕಾಲ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.  ಸರಳ ಯೋಗ ಮತ್ತು ವ್ಯಾಯಾಮವನ್ನು ನಿಯಮಿತವಾಗಿ ಮಾಡಿ.
ಈ ಆಹಾರದಿಂದ ದೂರವಿರಿ : ಬಿಳಿ ಬ್ರೆಡ್, ಪಾಸ್ತಾ, ಪೇಸ್ಟ್ರಿ, ಕೇಕ್, ಚಿಪ್ಸ್,ತಂಪು ಪಾನೀಯ,ಐಸ್ ಕ್ರೀಮ್, ಸೋಡಾ ಮತ್ತು ಪ್ಯಾಕ್ ಮಾಡಿದ ಆಹಾರ,ಜ್ಯೂಸ್ ಸೇವನೆ ಮಾಡಬೇಡಿ.   ಸಂಸ್ಕರಿಸಿದ ಮಾಂಸಗಳು ಮತ್ತು ಕೆಂಪು ಮಾಂಸಗಳಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವನೆ ಮಾಡಬೇಡಿ. 

Stop these Mistakes : ಈ ತಪ್ಪು ಮಾಡಿದ್ರೆ ಸಣ್ಣ ವಯಸ್ಸಲ್ಲೇ ಮುದುಕರಂತೆ ಕಾಣ್ತೀರಿ..

ಡಯೆಟ್ ಪ್ಲಾನ್ (Diet Plan )ಹೀಗಿರಲಿ :
ಹಸಿರು ತರಕಾರಿ, ಸೊಪ್ಪು,ಹಸಿರು ಕ್ಯಾಪ್ಸಿಕಂ, ಕೆಂಪುಮೆಣಸು, ಬೀನ್ಸ್, ಪಾಲಕ್, ಕ್ಯಾರೆಟ್ ಮತ್ತು ಸೇಬು ಹಣ್ಣು, ದಾಳಿಂಬೆ ಮತ್ತು ಕಿವಿ, ಬೆರ್ರಿ, ಸಿಹಿ ಗೆಣಸು,ಕೊತ್ತಂಬರಿ ಮುಂತಾದ  ಹೆಚ್ಚಿನ ಫೈಬರ್ ಇರುವ ಆಹಾರವನ್ನು ಸೇವಿಸಿ.
ಚಯಾಪಚಯವನ್ನು ಹೆಚ್ಚಿಸಲು ದಿನಕ್ಕೆ ಎರಡು ಬಾರಿ ಗ್ರೀ ಟೀ ಸೇವನೆ ಮಾಡಿ. ಆಲಿವ್ ಆಯಿಲ್ ಬಳಸಿ. ಮೊಟ್ಟೆ,ಮೀನಿನಂತಹ ಪ್ರೋಟೀನ್ ಭರಿತ ಆಹಾರ ಸೇವನೆ ಮಾಡಿ. ಬಾದಾಮಿ,ವಾಲ್ನಟ್ಸ್,ಟೊಮ್ಯಾಟೊ,ಅಗಸೆ ಬೀಜ, ದಾಲ್ಚಿನ್ನಿ ಮತ್ತು ಅರಿಶಿನ ನಿಮ್ಮ ಡಯೆಟ್ ನಲ್ಲಿ ಇರಲಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!
ಎಷ್ಟು ದೂರದಿಂದ ಕುಳಿತು ಟಿವಿ ನೋಡೋದು ಬೆಸ್ಟ್‌? 32, 43, 55 ಇಂಚು ಟಿವಿಗಳಿಗೆ ಬೇರೆಯದೇ ಲೆಕ್ಕಾಚಾರ ಎಂದ ತಜ್ಞರು..