Pregnant Tips : ಗರ್ಭಧಾರಣೆ ಸಾಧ್ಯವಾಗ್ತಿಲ್ವಾ? ನಿಮ್ಮ ಡಯೆಟ್‌ನಲ್ಲಿರಲಿ ಈ ಆಹಾರ

By Suvarna News  |  First Published Dec 22, 2021, 12:58 PM IST

ಮಕ್ಕಳಿರಲವ್ವ ಮನೆ ತುಂಬ ಎಂದು ಹಿಂದಿನ ಕಾಲದಲ್ಲಿ ಹರಸುತ್ತಿದ್ದರು. ಅವರ ಮಾತಿನಂತೆ ಆರೇಳು ಮಕ್ಕಳು ಮನೆಯಲ್ಲಿರುತ್ತಿದ್ದರು. ಈಗ ಕಾಲ ಬದಲಾಗಿದೆ. ಒಂದು ಮಗು ಪಡೆಯೋದು ಕಷ್ಟ ಎನ್ನುವಂತಾಗಿದೆ.


ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನ(Infertility) ದೊಡ್ಡ ಸಮಸ್ಯೆಯಾಗುತ್ತಿದೆ. ಮಹಿಳೆಯರು ಶಿಕ್ಷಣ (Education)ಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಡಿಗ್ರಿ,ಮಾಸ್ಟರ್ ಡಿಗ್ರಿ,ಪಿಎಚ್ಡಿ ಹೀಗೆ ಉನ್ನತ ಶಿಕ್ಷಣ ಮುಗಿಸಿ ಉದ್ಯೋಗ ಪಡೆಯುತ್ತಿದ್ದಾರೆ. ಉದ್ಯೋಗ (Job) ಸಿಕ್ಕ ತಕ್ಷಣ ಮಹಿಳೆಯರು ಮದುವೆಯಾಗ್ತಿಲ್ಲ. ವೃತ್ತಿ ಹಾಗೂ ಸ್ವಾವಲಂಬನೆಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಮದುವೆ ವಯಸ್ಸು 35 ಮೀರುತ್ತಿದೆ. ವಯಸ್ಸು ಹೆಚ್ಚಾದಂತೆ  ಫಲವತ್ತತೆಯ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಗರ್ಭಧರಿಸಲು ತೊಂದರೆ ಮಾಡ್ತಿದೆ. ಅನೇಕ ಮಹಿಳೆಯರಿಗೆ ಗರ್ಭ ಧರಿಸುವುದು ತೊಂದರೆಯಾಗ್ತಿದೆ. 

ಕೇವಲ ಇದು ಮಾತ್ರ ಕಾರಣವಲ್ಲ,ವೃತ್ತಿ ಬದುಕಿನಲ್ಲಿ ಮಹಿಳೆಯರಿಗೆ ಆರೋಗ್ಯ,ಆಹಾರದ ಬಗ್ಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ. ಸಮಯದ ಕೊರತೆಯಿಂದಾಗಿ ಮಹಿಳೆಯರು ಸಿಕ್ಕ ಆಹಾರ ಸೇವನೆ ಮಾಡುತ್ತಾರೆ. ಹೊರಗಿನ ಆಹಾರ ಸೇವನೆ ಅನಿವಾರ್ಯವಾಗುತ್ತದೆ. ಪೋಷಕಾಂಶವಿಲ್ಲದ ಆಹಾರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡದಿರುವುದು ಕೂಡ ಅನೇಕ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಮಹಿಳೆಯ ಅನಾರೋಗ್ಯ ಫಲವತ್ತತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.  

Latest Videos

ಫಲವತ್ತತೆಯನ್ನು ಹೆಚ್ಚಿಸಲು ಅಥವಾ ಆರೋಗ್ಯವಾಗಿರಲು ಅತಿ ಹೆಚ್ಚು ಗಮನ ನೀಡಬೇಕಾಗಿಲ್ಲ. ಆಹಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕವೂ ಮಗು ಪಡೆಯಬಹುದು.ಕೆಲವು ಸರಳವಾದ ಆಹಾರ ಸೇವನೆ ಮೂಲಕ ಗರ್ಭಧಾರಣೆ (Pregnancy)ಯ ಸಾಧ್ಯತೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಇಂದು ಹೇಳ್ತೆವೆ.

Relationship Tips: ಅವಳಿಗೆ ನಾನು ಇಷ್ಟವಿಲ್ಲ. ಆದ್ರೆ ಮರೆಯೋಕಾಗ್ತಿಲ್ಲ..ಏನ್ಮಾಡ್ಲಿ..?

ಫಲವತ್ತತೆ ಹೆಚ್ಚಿಸುವ ಆಹಾರಗಳು :

ಪ್ರೋಟೀನ್ (Protein) : ಗರ್ಭ ಧರಿಸಲು ಪ್ರೋಟೀನ್ ಅತ್ಯಂತ ಮುಖ್ಯವಾಗಿದೆ. ಬೇಳೆಕಾಳುಗಳಿಂದ ಸಮೃದ್ಧ ಪ್ರೊಟೀನ್ ಸಿಗುತ್ತದೆ. ಸಾಕಷ್ಟು ಪ್ರೋಟೀನ್, ಮೊಳಕೆ ಕಾಳುಗಳು, ಮಾಂಸ ಮತ್ತು ಕೋಳಿಗಳಲ್ಲಿ ಕಂಡುಬರುತ್ತದೆ.  
ಅಮೆರಿಕಾದ ಕಾಲೇಜ್ ಆಫ್ ಫಾರ್ಮಸಿ ಮತ್ತು ನ್ಯೂಟ್ರಿಷನ್‌ನ ಪ್ರೊಫೆಸರ್ ಗಾರ್ಡನ್ ಝೋಲೋ, ಮಹಿಳೆಯರ ಫಲವತ್ತತೆಯ ಮೇಲೆ ದ್ವಿದಳ ಧಾನ್ಯಗಳ ಪರಿಣಾಮವೇನು ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಮಹಿಳೆಯರಿಗೆ ವಾರಕ್ಕೆ 14 ಬಾರಿ ಬೇಳೆಕಾಳುಗಳಿಂದ ಮಾಡಿದ ಊಟವನ್ನು ನೀಡಲಾಯಿತು. ಈ ಆಹಾರ ಸೇವನೆಯು ಮಹಿಳೆಯರ ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸಮತೋಲಿತ ಹಾರ್ಮೋನುಗಳು ಮತ್ತು ಅಂಡಾಶಯದಲ್ಲಿನ ಕೋಶಕ ಚೀಲಗಳನ್ನು ಕಡಿಮೆ ಮಾಡುತ್ತದೆ  ಎಂಬುದು ಬಹಿರಂಗವಾಯಿತು.

ವಿಟಮಿನ್ಸ್ (Vitamins) : ಜೀವಸತ್ವಗಳಿಗಾಗಿ ಕಿತ್ತಳೆ ಮತ್ತು ಪಾಲಕವನ್ನು ತಿನ್ನಬೇಕು. ಹಣ್ಣುಗಳನ್ನು ತಿನ್ನುವುದರಿಂದ ಎಗ್ಸ್ ಗುಣಮಟ್ಟವನ್ನು ಸುಧಾರಿಸಬಹುದು. ವಿಟಮಿನ್ಸ್ ಆಹಾರ ಸೇವನೆ ಮಾಡುವುದ್ರಿಂದ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು.
ವಿಟಮಿನ್ ಬಿ ಎಗ್ಸ್ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಂಡೋತ್ಪತ್ತಿಗೆ ಸಂಬಂಧಿತ ಬಂಜೆತನವನ್ನು ತಡೆಯುತ್ತದೆ. ಇದಲ್ಲದೆ, ವಿಟಮಿನ್ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. ಗರ್ಭ ಧರಿಸಲು ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ಆಹಾರದಲ್ಲಿ ವಿಟಮಿನ್ ಸಿ, ಫೋಲಿಕ್ ಆಮ್ಲ, ಕಬ್ಬಿಣ, ಒಮೆಗಾ -3 ಕೊಬ್ಬಿನಾಮ್ಲಗಳು, ಸೆಲೆನಿಯಮ್ ಮತ್ತು ಸತುವು ಅಧಿಕವಾಗಿರುವ ಆಹಾರಗಳನ್ನು ಸೇರಿಸಬೇಕು.

Sex Coffee Trend: 2022ರಲ್ಲಿ ‘ಸೆಕ್ಸ್ ಕಾಫಿ’ ಟ್ರೆಂಡ್‌, ಏನಿದು..?

ನೀರು (Water): ಪ್ರತಿಯೊಬ್ಬರು ಆರೋಗ್ಯವಾಗಿರಲು ನೀರು ಬಹಳ ಮುಖ್ಯ. ಪ್ರತಿ ದಿನ ವ್ಯಕ್ತಿ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕೆಂದು ಸಲಹೆ ನೀಡಲಾಗುತ್ತದೆ. ಗರ್ಭಿಣಿಯಾಗಲು ಸಾಕಷ್ಟು ನೀರು ಕುಡಿಯಬೇಕು. ಹೆಚ್ಚು ನೀರು ಸೇವನೆ ಮಾಡುವುದ್ರಿಂದ ಮೂತ್ರದ ಮೂಲಕ ದೇಹದಿಂದ ವಿಷವು ಹೊರಬರುತ್ತದೆ. ಸಂತಾನೋತ್ಪತ್ತಿ ಅಂಗಗಳ ಜೀವಕೋಶಗಳು ಮತ್ತು ಅಂಡಾಶಯಗಳು, ಗರ್ಭಾಶಯದಂತಹ ಸಂತಾನೋತ್ಪತ್ತಿ ಅಂಗಗಳು ಸೇರಿದಂತೆ ಎಲ್ಲಾ ಅಂಗಗಳು ಮತ್ತು ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಸಹಾಯ ಮಾಡುತ್ತದೆ.
 

click me!