ಇದು ಹೇಳಿ ಕೇಳಿ ಚಳಿಗಾಲ (Winter). ಬಹಳ ಸುಲಭವಾಗಿ ನೆಗಡಿ (Cold), ಕೆಮ್ಮು (Cough) ಕಾಡಿಸುತ್ತವೆ. ಒಣ ಕೆಮ್ಮು ಈ ಕಾಲದ ಸ್ಪೆಷಲ್ ಎಂದೇ ಹೇಳಬಹುದು. ಆಹಾರದಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಒಣಕೆಮ್ಮು ಬಾಧಿಸುತ್ತದೆ. ವಿಶೇಷವಾಗಿ ಮಕ್ಕಳಿಗೆ (Children) ಈ ಸಮಯದಲ್ಲಿ ಒಣಕೆಮ್ಮಿನ ಸಮಸ್ಯೆ ಹೆಚ್ಚು. ಮನೆ (Home)ಯಲ್ಲೇ ಇರುವ ಕೆಲವು ಪದಾರ್ಥಗಳಿಂದ ಒಣಕೆಮ್ಮಿಗೆ ಪರಿಹಾರ (Remedy) ಕಂಡುಕೊಳ್ಳಬಹುದು.
ಚಳಿಗಾಲದಲ್ಲಿ ಅಲರ್ಜಿ (Allergy) ಸಮಸ್ಯೆ ಹೆಚ್ಚಾಗುತ್ತದೆ. ಈಗಂತೂ ಎಲ್ಲೆಲ್ಲೂ ಧೂಳು (Dust). ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ...ಮೇಲಿನಿಂದ ಚಳಿಗಾಲ. ಸಹಜವಾಗಿ ಅಲರ್ಜಿ, ಒಣಕೆಮ್ಮು ಕಾಡಿಸುತ್ತದೆ. ಬದಲಾಗಿರುವ ವಾತಾವರಣವೂ ನೆಗಡಿ, ಒಣಕೆಮ್ಮು, ಕಫ (Sputum) ಹೆಚ್ಚಲು ಅನುಕೂಲಕರವಾಗಿಯೇ ಇದೆ. ಇಂಥ ಸಮಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಕ್ಕಳ ಬಗೆಗಂತೂ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಬೇಕಾದ ಸಮಯ ಇದು.
ಮಕ್ಕಳಿಗೆ ಚೂರು ನೆಗಡಿ, ಕೆಮ್ಮು ಕಂಡಾಕ್ಷಣ ವೈದ್ಯರ (Docter) ಬಳಿ ಹೋಗುವುದು ಇದ್ದೇ ಇದೆ. ಆದರೆ, ಎಷ್ಟೋ ಬಾರಿ ವೈದ್ಯರ ಔಷಧದ ಬಳಿಕವೂ ಒಣಕೆಮ್ಮು ಕಾಡುತ್ತದೆ. ಅಥವಾ ಕೆಲವೊಮ್ಮೆ ಅಲರ್ಜಿ ಸಣ್ಣ ಪ್ರಮಾಣದಲ್ಲಿದ್ದರೆ ಮನೆಯಲ್ಲೇ ಪರಿಹಾರ ಮಾಡಿಕೊಳ್ಳಲು ಯತ್ನಿಸುವುದು ಉತ್ತಮ. ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ಒಣಕೆಮ್ಮಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನಾದರೂ ಮಾಡಬೇಕು.
Parenting Skills: ಮಕ್ಕಳು ಫೇಮಸ್ ಆಗಬೇಕೆ? ಅವರೊಂದಿಗೆ ಖುಷಿ ಹಂಚಿಕೊಳ್ಳಿ
ಒಣಕೆಮ್ಮು ದೇಹವನ್ನು ಹಿಂಡಿ ಹಾಕಿಬಿಡುತ್ತದೆ. ಕೆಮ್ಮಿ ಕೆಮ್ಮಿ ಗಂಟಲು ಒಡೆಯುತ್ತದೆ. ಉರಿಯಾಗುತ್ತದೆ. ಕೆಲವೊಮ್ಮೆ ಕಫ ಕಟ್ಟಿಕೊಂಡಿರಬಹುದು, ಕೆಲವೊಮ್ಮೆ ಕಫವಿಲ್ಲದೆಯೂ ಕೆಮ್ಮು ಕಾಡಿಸಬಹುದು. ನಿಮಗೆ ಗೊತ್ತೇ? ದೇಹ ಉಷ್ಣವಾಗುವುದರಿಂದಲೂ ಗಂಟಲು ಕೆರೆತ, ಒಣಕೆಮ್ಮು ಬಾಧಿಸಬಹುದು.
- ಆರೋರೂಟ್ (Arrowroot) ಬಹುತೇಕ ಎಲ್ಲರಿಗೂ ಗೊತ್ತಿದೆ. ಗ್ರಾಮೀಣ ಭಾಷೆಯಲ್ಲಿ ಅದನ್ನು ಕಾಡುಅರಿಶಿಣದ ಹಿಟ್ಟು ಅಥವಾ ಕೋವೆ ಹಿಟ್ಟು ಎಂದು ಕರೆಯಲಾಗುತ್ತದೆ. ಒಣಕೆಮ್ಮಿಗೆ ಈ ಆರೋರೂಟ್ ಅತ್ಯುತ್ತಮ. ಒಂದು ಚಮಚ ಆರೋರೂಟ್ ಅನ್ನು ತಣ್ಣೀರಿ(Water) ನಲ್ಲಿ ನೆನೆಸಿ ಸರಿಯಾಗಿ ಮಿಕ್ಸ್ ಮಾಡಬೇಕು. ಬಳಿಕ, ಸಣ್ಣ ಉರಿಯಲ್ಲಿ ಅದನ್ನು ಕುದಿಸಬೇಕು. ಈ ನಡುವೆ ಕಲಕುತ್ತಿದ್ದರೆ ಗಂಟುಗಂಟು ಆಗುವುದಿಲ್ಲ. ಕುದಿಯುತ್ತ ಸ್ವಲ್ಪ ಮಂದವಾದಾಗ ಕೆಂಪು ಕಲ್ಲುಸಕ್ಕರೆಯನ್ನು ಬೆರೆಸಬೇಕು. ಬಳಿಕ, ಸ್ವಲ್ಪ ಆರಿದ ಬಳಿಕ ಕುಡಿಯಬೇಕು. ದಿನಕ್ಕೆ ಕನಿಷ್ಠ ಎರಡು ಬಾರಿ ಇದನ್ನು ಮಾಡಿಕೊಂಡು ಸೇವಿಸಿದರೆ ಒಣಕೆಮ್ಮು ಸಾಕಷ್ಟು ಕಡಿಮೆಯಾಗುತ್ತದೆ.
Pregnant Tips : ಗರ್ಭಧಾರಣೆ ಸಾಧ್ಯವಾಗ್ತಿಲ್ವಾ? ನಿಮ್ಮ ಡಯೆಟ್‌ನಲ್ಲಿರಲಿ ಈ ಆಹಾರ
- ಒಣಕೆಮ್ಮಿನ ನಿಯಂತ್ರಣಕ್ಕೆ ಇನ್ನೊಂದು ಅತ್ಯುತ್ತಮ ವಿಧಾನವೆಂದರೆ, ಬಿಸಿನೀರಿನಲ್ಲಿ ಪಾನಕ (Juice) ಮಾಡಿ ಕುಡಿಯುವುದು. ಒಂದು ಲೋಟ ಬಿಸಿ ನೀರಿಗೆ ಕೆಂಪು ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ, ಅರ್ಧ ಲಿಂಬೆರಸ (Lemon) ಸೇರಿಸಬೇಕು. ಬಿಸಿ(Hot) ಯಾಗಿಯೇ ಕುಡಿಯಬೇಕು. ಇದರಿಂದ ಕಫವಿದ್ದರೆ ಕರಗುತ್ತದೆ. ಕೆಮ್ಮಿಗೆ ತಕ್ಷಣ ಪರಿಹಾರ ಸಿಗುತ್ತದೆ.
- ಕೆಂಪು ಕಲ್ಲುಸಕ್ಕರೆ ಹಾಗೂ ಒಂದು ಇಡೀ ಲಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡುತ್ತ ಚೆನ್ನಾಗಿ ಮಿಕ್ಸ್ ಮಾಡಬೇಕು. ಎರಡು ಲವಂಗವನ್ನು ಸುಟ್ಟು ಅದಕ್ಕೆ ಹಾಕಬೇಕು. ಚೆನ್ನಾಗಿ ಮಿಕ್ಸ್ ಆದ ಬಳಿಕ ಆಗಾಗ ಒಂದು ಚಮಚ ರಸವನ್ನು ತಿಂದರೆ ಗಂಟಲು ಕಿರಿಕಿರಿ ಬಹಳಷ್ಟು ಕಡಿಮೆಯಾಗುತ್ತದೆ. ಇದಕ್ಕೆ ಜ್ಯೇಷ್ಠಮಧುವನ್ನೂ ಸ್ವಲ್ಪ ಸೇರಿಸಿಕೊಳ್ಳಬಹುದು. ಇದರಿಂದ ಕಫ ಕರಗುತ್ತದೆ. ಅಲರ್ಜಿ ಕೆಮ್ಮಿದ್ದರೂ ಕಡಿಮೆಯಾಗುತ್ತದೆ.
- ಮನೆಯಲ್ಲಿ ಹುಳಿಮಜ್ಜಿಗೆ ಇದ್ದರೆ ಅದಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು. ಕಫ ಕಟ್ಟಿಕೊಂಡು ಕೆಮ್ಮು ಬರುತ್ತಿದ್ದರೆ ಇದರಿಂದ ಪರಿಹಾರ ಸಿಗುತ್ತದೆ. ಅರ್ಧ ಗ್ಲಾಸ್ ಹುಳಿಮಜ್ಜಿಗೆಗೆ ಸ್ವಲ್ಪ ನೀರು ಹಾಗೂ ಜೋನಿ ಬೆಲ್ಲ ಎರಡು ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿಯಬೇಕು. ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಕರಗಿಸಲು ಇದು ಉತ್ತಮ ಮಾರ್ಗ.
- ದೊಡ್ಡಪತ್ರೆ ಸೊಪ್ಪಿನ ರಸವನ್ನು ಕಫ ಕರಗಿಸಲು ಬಳಸಬಹುದು. ದೊಡ್ಡಪತ್ರೆ ಎಲೆಯನ್ನು ಗ್ಯಾಸ್ ಒಲೆಯ ಉರಿಗೆ ಹಿಡಿದು ಬಿಸಿ ಮಾಡಿದರೆ ಅದರಿಂದ ರಸ ತೆಗೆದುಕೊಳ್ಳಬಹುದು. ಈ ರಸಕ್ಕೆ ಅರ್ಧ ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಎದೆ, ಬೆನ್ನಿಗೆ ಹಚ್ಚಿ ಮಸಾಜ್ ಮಾಡಬೇಕು. ಇದರಿಂದ ಕಫ ಕರಗುವುದು ನಿಮ್ಮ ಅರಿವಿಗೇ ಬರುತ್ತದೆ.
- ಕಫದ ಸಮಸ್ಯೆ ಹೆಚ್ಚಿದ್ದರೆ ವೈದ್ಯರನ್ನು ಕಾಣಲು ಮರೆಯಬೇಡಿ.