ಚಳಿಗಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು celebrity fitness expert ರುಜುತಾ ನೀಡಿರೋ ಟಿಪ್ಸ್ ಇಲ್ಲಿವೆ..

Suvarna News   | Asianet News
Published : Jan 04, 2022, 03:46 PM IST
ಚಳಿಗಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು celebrity fitness expert ರುಜುತಾ ನೀಡಿರೋ ಟಿಪ್ಸ್ ಇಲ್ಲಿವೆ..

ಸಾರಾಂಶ

ದೇಹದ ಆರೋಗ್ಯದ ಕಾಳಜಿಯ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಮುಖ್ಯವಾಗಿರುತ್ತದೆ. ಚಳಿಗಾಲದಲ್ಲಿ ದೇಹ ಹಾಗೂ ಮಾನಸಿಕ ಆರೋಗ್ಯದ ಕಾಳಜಿ ಹೇಗೆ ಮಾಡಬಹುದು ಎಂಬುದಕ್ಕೆ ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ರುಜುತಾ ದಿವೇಕರ್‌ ನೀಡಿರೋ ಸಲಹೆಗಳು ಇಲ್ಲಿವೆ..

ಮೊದಲೇ ಚಳಿಗಾಲವೆಂದರೆ ಕಾಯಿಲೆಗಳು ಜಾಸ್ತಿ. ಸಾಲದೆಂಬಂತೆ ಈಗೀಗ ಕೊರೋನಾ, ಓಮಿಕ್ರೋನ್ ಕೂಡಾ ಜೊತೆಗೂಡಿವೆ. ಈ ಎಲ್ಲ ವೈರಸ್, ಬ್ಯಾಕ್ಟೀರಿಯಾ, ಫಂಗಸ್‌ಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಲು ಇರುವ ಪ್ರಮುಖ ಮಾರ್ಗವೆಂದರೆ ರೋಗ ನಿರೋಧಕ ಶಕ್ತಿ(immunity) ಹೆಚ್ಚಿಸಿಕೊಳ್ಳುವುದು. ಇಮ್ಯೂನಿಟಿ ಎಂದರೆ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ, ಮನಸ್ಸು ಕೂಡಾ ಸ್ಟ್ರಾಂಗ್ ಹಾಗೂ ಆರೋಗ್ಯಕರವಾಗಿರಬೇಕು. ದೇಹ ಮತ್ತು ಮನಸ್ಸು ಸ್ಟ್ರಾಂಗ್ ಆಗಿದ್ದರೆ ಯಾವ ಕಾಯಿಲೆಗೂ ಭಯ ಪಡಬೇಕಿಲ್ಲ. ಆದರೆ, ಈ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? 

ಈ ಬಗ್ಗೆ ಹಲವಾರು ಲೇಖನಗಳನ್ನು ನೀವೀಗಾಗಲೇ ಓದಿರಬಹುದು. ಆದರೆ, ಇಲ್ಲಿ ಜನಪ್ರಿಯ ಫಿಟ್ನೆಸ್ ತಜ್ಞೆ ರುಜುತಾ ದಿವೇಕರ್ ನೀಡಿರುವ ಸಲಹೆಗಳಿವೆ. ಇವರು ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ಆಗಿರುವ ಜೊತೆಗೆ, ಆರೋಗ್ಯ ಸಂಬಂಧಿ ಹಲವು ಪುಸ್ತಕಗಳನ್ನೂ ಬರೆದು ಮೆಚ್ಚುಗೆ ಗಳಿಸಿದ್ದಾರೆ. ರುಜುತಾ ಇಮ್ಯೂನಿಟಿ ಹೆಚ್ಚಿಸಿಕೊಳ್ಳಲು ಕೆಲ ಸರಳವಾದರೂ ಪರಿಣಾಮಕಾರಿಯಾಗಿರುವ ಸಲಹೆಗಳನ್ನು ನೀಡಿದ್ದಾರೆ. ಅವೇನೆಂದು ನೋಡೋಣ. 

ಮನೆಯ ಆಹಾರ(home food)
ಇತ್ತೀಚಿನ ದಿನಗಳಲ್ಲಂತೂ ಜನರು ಮನೆಯ ಆಹಾರಕ್ಕಿಂತ ಹೆಚ್ಚಾಗಿ ಹೊರಗಿನ ಆಹಾರ ಸೇವನೆ ಮಾಡುತ್ತಾರೆ. ಪ್ರತಿ ಸಂಜೆ ಭಜ್ಜಿ, ಬೋಂಡಾ, ಮಲಾಸಾ ಪುರಿ, ಗೋಬಿ ಮಂಚೂರಿ ಎಂದು ನಾಲಿಗೆಯ ಚಪಲ ತೀರಿಸುತ್ತಲೇ ಇರುತ್ತಾರೆ. ಆದರೆ, ಹೊರಗಿನ ಆಹಾರಕ್ಕೆ ಅದೇ ಎಣ್ಣೆಯನ್ನು ಎಷ್ಟನೇ ಬಾರಿ ಬಳಸಿದರೋ ಗೊತ್ತಿಲ್ಲ, ಕಲರ್ ಬರಲು ಏನು ಕೆಮಿಕಲ್ ಹಾಕಿರುತ್ತಾರೋ ಗೊತ್ತಿರುವುದಿಲ್ಲ.. ಇದೆಲ್ಲದರೊಂದಿಗೆ ಜಂಕ್(Junk) ಬೇರೆ. ಆರೋಗ್ಯ ಬೇಕೆನ್ನುವವರಾರೂ ಹೀಗೆ ಮಾಡಲೇ ಕೂಡದು. ಆರೋಗ್ಯ(health) ಚೆನ್ನಾಗಿರಬೇಕೆಂದರೆ ಮೊದಲು ಮನೆಯ ಆಹಾರವನ್ನೇ ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಹೆಲ್ದೀ ಆಹಾರವನ್ನೂ ನಾಲಿಗೆಯ ಚಪಲ ತಣಿಸುವಂತೆ ಮಾಡಬಹುದು. ರೊಟ್ಟಿ, ಇಡ್ಲಿ, ದೋಸೆ, ಕಾಳುಗಳು, ಸೊಪ್ಪುಸದೆ, ತರಕಾರಿ(vegetables), ಹಣ್ಣುಗಳನ್ನು ಬಳಸಿ ಖಾದ್ಯಗಳನ್ನು ತಯಾರಿಸಿಕೊಳ್ಳಿ. ಇವೆಲ್ಲ ನಾಲಿಗೆಗೂ ರುಚಿ, ದೇಹಕ್ಕೂ ಹಿತ.
ಈ ಚಳಿಗಾಲ(winter)ದಲ್ಲಿ ಆದಷ್ಟು ಹುಳಿ ಇರುವ ಬೇರ್, ಹುಣಸೆಹಣ್ಣು, ಲಿಂಬೆ ಹಣ್ಣು, ನೆಲ್ಲಿಕಾಯಿ ಬಳಕೆ ಹೆಚ್ಚಿಸಿ. ಇವು ಉತ್ತಮವಾಗಿ ಇಮ್ಯೂನಿಟಿ ಕಾಯುತ್ತವೆ. 

ಬರೀ negative thoughts ಬರುತ್ತಾ? ತಪ್ಪಿಸಿಕೊಳ್ಳೋದ್ ಹೀಗೆ..

ನಾಟಕೀಯತೆಯಿಂದ ದೂರ
ಮೇಲಿನ ಟಿಪ್ ಏನೋ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ್ದು. ಇದು ಮಾನಸಿಕವಾಗಿ ಇಮ್ಯೂನಿಟಿ(immunity) ಹೆಚ್ಚಿಸಲು ಸಹಾಯಕವಾಗುವ ಸಲಹೆ. ನಾಟಕೀಯತೆ ಹೆಚ್ಚಿರುವ, ಗಾಸಿಪ್ ಮಾಡುವ, ಸುಳ್ಳು ಹೇಳುವ ಹಿತಶತ್ರುಗಳಿಂದ ದೂರ ಉಳಿದರೆ ಮನಸ್ಸು ಬಹುತೇಕ ನೆಮ್ಮದಿ ಗಳಿಸಬಲ್ಲದು. ಮಾನಸಿಕ ಶಕ್ತಿ ಇದ್ದರೆ ನೆಗೆಟಿವಿಟಿಯೂ ಹತ್ತಿರ ಬರುವುದಿಲ್ಲ, ಕಾಯಿಲೆಗಳೂ ಹತ್ತಿರ ಬರುವುದಿಲ್ಲ. 

Omicron Less Severe: ಒಮಿಕ್ರೋನ್‌ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ!

ಫೋನ್‌ ಬಳಕೆ ತಗ್ಗಿಸಿ
ರುಜುತಾ ನೀಡಿರುವ ಕೊನೆಯ ಆದರೆ ಬಹಳ ಪ್ರಮುಖ ಸಲಹೆ ಎಂದರೆ ಫೋನ್(phone) ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸುವುದು. ಇಂದು ಪ್ರತಿಯೊಬ್ಬರೂ ದಿನದ ಬಹುತೇಕ ಸಮಯ ಫೋನ್ ಹಿಡಿದುಕೊಂಡೇ ಕಳೆಯುತ್ತಾರೆ. ಅದು ಜೊತೆಯಲ್ಲಿಲ್ಲ ಎಂದರೆ ಏನೋ ಕಳೆದುಕೊಂಡಂತೆ ಕೊರಗುತ್ತಾರೆ. ಆದರೆ, ಫೋನ್‌ನ ರೇಡಿಯೇಶನ್ ಆರೋಗ್ಯಕ್ಕೆ ಸಮಸ್ಯೆ ತಂದರೆ, ಫೋನ್ ಚಟವು ಮಾನಸಿಕ ನೆಮ್ಮದಿ ಕೆಡಿಸುತ್ತದೆ. ಫೋನ್ ಹಿಡಿದಾಗ ಅದರಲ್ಲಿ ಕಾಣುವ ಇತರರ ಏಳ್ಗೆ, ಚೆಲುವು ಹೊಟ್ಟೆಕಿಟ್ಟಿನಂತಾ ನೆಗೆಟಿವ್ ಭಾವನೆ ತರುತ್ತವೆ, ನೆಗೆಟಿವ್ ಸುದ್ದಿಗಳು, ಅವಕ್ಕೆ ಬಂದ ಕಾಮೆಂಟ್‌ಗಳು, ಟ್ರೋಲ್‌ಗಳು ಮನಸ್ಸನ್ನು ಹದಗೆಡಿಸುತ್ತವೆ, ಇವೆಲ್ಲದರ ಜೊತೆಗೆ ಫೋನ್‌ಗಾಗಿ ಸಮಯ ವ್ಯರ್ಥ ಮಾಡುತ್ತಾ ನಮ್ಮ ದಿನವೇ ಪ್ರಗತಿಯಿಲ್ಲದೆ ಮುಗಿದು ಹೋಗಿರುತ್ತದೆ. ಹಾಗಾಗಿ, ಮೆಂಟಲ್ ಇಮ್ಯೂನಿಟಿಗಾಗಿ ಫೋನ್‌ನಿಂದ ದೂರ ಇರುವುದೊಳಿತು. 

ಹೇಗೂ ಹೊಸ ವರ್ಷ ಶುರುವಾಗಿದೆ. ಈ ವರ್ಷದ ರೆಸೊಲ್ಯೂಶನ್‌ ಪಟ್ಟಿಯಲ್ಲಿ ಈ ಮೂರೂ ಅಂಶಗಳನ್ನು ಸೇರಿಸಿಕೊಳ್ಳೋಣ. ಏನಂತೀರಾ?
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ