Periods Problem: ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ? ಈ ಆಹಾರ ಸೇವಿಸಿ

By Suvarna News  |  First Published Jan 1, 2022, 5:42 PM IST

ಇಂದು ಹೆಣ್ಣುಮಕ್ಕಳು ಬೇಗ ಋತುಮತಿಯರಾಗುತ್ತಾರೆ. ಆದರೆ, ನಂತರದಲ್ಲಿ ಅವಧಿಗೆ ಸರಿಯಾಗಿ ಪೀರಿಯಡ್ಸ್ ಆಗದೆ ಸಮಸ್ಯೆ ಎನಿಸುತ್ತದೆ. ಈ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು.


ಇಂದಿನ ಸೋಮಾರಿ ಜೀವನಶೈಲಿ(lifestyle)ಯನ್ನು ದೂರಿದರೂ ಸರಿ, ಒತ್ತಡ(stress)ದ ಬದುಕೇ ಕಾರಣವೆಂದರೂ ಸರಿ.. ಇಂದಿನ ಹೆಣ್ಣುಮಕ್ಕಳು ಬೇಗ ಋತುಮತಿಯಾದರೂ ಪೀರಿಯಡ್ಸ್(periods) ಮಾತ್ರ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಹೆಚ್ಚಿನ ಬಾರಿ ತಡವಾಗಿ ತಲೆ ನೋವು ತರುತ್ತದೆ. ಕೆಲವೊಮ್ಮೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಕಾರಣಕ್ಕೂ ಪೀರಿಯಡ್ಸ್ ತಡವಾಗಬಹುದು. ಮತ್ತೆ ಕೆಲವೊಮ್ಮೆ ಈ ಪೀರಿಯಡ್ಸ್ ಇರೆಗ್ಯುಲಾರಿಟಿಯಿಂದ ಬೊಜ್ಜಿನಂತ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು. 

ಆದರೆ, ಮುಂಚೆಯಿಂದಲೂ ಭಾರತೀಯ ಅಡುಗೆ ಮನೆಗಳೇ ಆಯುರ್ವೇದ ಔಷಧಾಲಯಗಳಾಗಿ ವರ್ತಿಸುತ್ತಿವೆ. ಹಿಂದೆಲ್ಲ ಮುಟ್ಟಿನ ಸಮಸ್ಯೆಗೆ ಆಹಾರವನ್ನೇ ಔಷಧಿಯಾಗಿ ನೀಡುತ್ತಿದ್ದರು. ಇಂದಿಗೂ ಕೂಡಾ ಈ ಆಹಾರಗಳು ಬೇಗ ಮುಟ್ಟಾಗಲು ಸಹಕಾರಿಯಾಗಿವೆ. ಅಂಥ ಆಹಾರಗಳ ಸೇವನೆ ಹೆಚ್ಚಿಸುವ ಮೂಲಕ ಹೆಣ್ಣುಮಕ್ಕಳು ತಮ್ಮನ್ನು ಕಾಡುವ ಪೀರಿಯಡ್ಸ್ ಪ್ರಾಬ್ಲಂನಿಂದ ಮುಕ್ತರಾಗಬಹುದು. ಯಾವೆಲ್ಲ ಆಹಾರಗಳು ಮುಟ್ಟನ್ನು ಬೇಗ ಆಗುವಂತೆ ಮಾಡುತ್ತವೆ, ಯಾವುದನ್ನು ಸಾಂಪ್ರದಾಯಿಕವಾಗಿ ಔಷಧವಾಗಿ ಬಳಸಲಾಗುತ್ತಿತ್ತು ಎಂಬುದನ್ನು ನೋಡೋಣ. 

Latest Videos

ಪಪ್ಪಾಯ(​Papaya)
ಪಪ್ಪಾಯ ಹಣ್ಣು ಇಲ್ಲವೇ ಜ್ಯೂಸ್ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ವಿಷಯ ಗೊತ್ತೇ ಇದೆ. ಇದರೊಂದಿಗೆ ಪಪ್ಪಾಯ ಸೇವನೆಯು ಪೀರಿಯಡ್ಸ್ ಸೈಕಲ್ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಪಪ್ಪಾಯ ಹಣ್ಣಿನಲ್ಲಿರುವ ಕೆರೋಟಿನ್ ಈಸ್ಟೋಜನ್ ಹಾರ್ಮೋನನ್ನು ಸ್ಟಿಮುಲೇಟ್ ಮಾಡಿ, ಬೇಗ ಗರ್ಭಾಶಯದ ಕಾಂಟ್ರಾಕ್ಷನ್ಸ್ ಆಗುವಂತೆ ನೋಡಿಕೊಳ್ಳುತ್ತದೆ. 

ಪಾರ್ಸ್ಲಿ(​Parsley)
ಔಷಧೀಯ ಗುಣಗಳಿಂದ ಸಮೃದ್ಖವಾಗಿರುವ ಪಾರ್ಸ್ಲಿಯು ಅಡುಗೆಗೆ ರುಚಿ ಕೊಡುವುದಷ್ಟೇ ಅಲ್ಲ, ಮುಟ್ಟಿನ ಚಕ್ರವನ್ನೂ ನಿಯಮಿತಗೊಳಿಸುತ್ತದೆ. ಇದಕ್ಕೆ ಕಾರಣ ಪಾರ್ಸ್ಲಿಯಲ್ಲಿರುವ ಎಪಿಯೋಲ್ ಹಾಗೂ ಮಿರಿಸ್ಟಿಸಿನ್. ಪ್ರತಿ ದಿನ ಪಾರ್ಸ್ಲಿ ಟೀ ಕುಡಿಯುವುದು ಕೂಡಾ ಪೀರಿಯಡ್ಸ್‌ನ್ನು ಸಹಜವಾಗಿ ಆಗುವಂತೆ ನೋಡಿಕೊಳ್ಳುತ್ತದೆ. 

ಶುಂಠಿ ಲವಂಗ ಟೀ(Ginger Clove tea)
ಶುಂಠಿ ಹಾಗೂ ಲವಂಗ ಎರಡೂ ಸೇರಿ ದೇಹದಲ್ಲಿ ಉಷ್ಣ ಹೆಚ್ಚಿಸುತ್ತವೆ. ಉಷ್ಣ ಹೆಚ್ಚಾದಾಗ ಮುಟ್ಟು ಬೇಗಾಗುತ್ತದೆ. ಪಾರ್ಸ್ಲಿ ಹಾಗೂ ಶುಂಠಿಯನ್ನು ಒಟ್ಟಿಗೆ ಹಾಕಿ ಕೂಡಾ ಟೀ ಮಾಡಬಹುದು. 

ಅಜ್ವಾನ್ (Carom seeds)
ಅಜ್ವಾನ್ ಬೆಲ್ಲದೊಂದಿಗೆ ಸೇರಿದಾಗ ದೇಹವನ್ನು ಉಷ್ಣಗೊಳಿಸುತ್ತದೆ. ಇವೆರಡನ್ನೂ ಒಟ್ಟಾಗಿ ತಿನ್ನುವುದು, ಇವೆರಡರ ಕಷಾಯ ಸೇವಿಸುವುದರಿಂದ ಮುಟ್ಟು ನಿಯಮಿತವಾಗಿ ಆಗುವುದು ಅಷ್ಟೇ ಅಲ್ಲ, ಮುಟ್ಟಿನ ಸಮಯದ ಹೊಟ್ಟೆನೋವು(period cramps) ಕೂಡಾ ಶಮನವಾಗುತ್ತದೆ. 

Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ

ಕೊತ್ತಂಬರಿ ಬೀಜ(Coriander seeds)
ಕೊತ್ತಂಬರಿ ಕಷಾಯ ಕೋವಿಡ್ ಸಮಯದಲ್ಲಿ ಬಹಳ ಜನಪ್ರಿಯತೆ ಪಡೆದಿತ್ತು. ಕೊತ್ತಂಬರಿ ಬೀಜ ಹಾಗೂ ಜೀರಿಗೆಯನ್ನು ಒಟ್ಟಾಗಿ ನೀರಿನಲ್ಲಿ ಕುದಿಸಿ, ಸೋಸಿ ಪ್ರತಿ ದಿನ ಬೆಳಗ್ಗೆ ಕುಡಿಯುವುದರಿಂದ ಪೀರಿಯಡ್ಸ್ ಬೇಗ ಆಗಲಿದೆ. 

ಬೀಟ್‌ರೂಟ್(Beetroots)
ಬೀಟ್‌ರೂಟ್ ಐರನ್, ಕ್ಯಾಲ್ಶಿಯಂ, ಫೋಲಿಕ್ ಆ್ಯಸಿಡ್‌ಗಳ ಕಣಜ. ಪೀರಿಯಡ್ಸ್ ಸಮಯದ ಕಿರಿಕಿರಿಗಳನ್ನು ಇದು ಕಡಿಮೆಗೊಳಿಸುತ್ತದೆ. ಅದರೊಂದಿಗೆ ಪೀರಿಯಡ್ಸ್‌ನಲ್ಲಿ ದೇಹ ಕಳೆದುಕೊಳ್ಳುವ ಕಬ್ಬಿಣಾಂಶವನ್ನೂ ತುಂಬಿ ಕೊಡಲಿದೆ. 

Cooking Oil : ಆರೋಗ್ಯ ಹಾಳು ಮಾಡುತ್ತೆ ಅಡುಗೆ ಎಣ್ಣೆ..! ಆಯಿಲ್ ಆಯ್ಕೆಗೆ ಮುನ್ನ ಇದನ್ನೋದಿ..

ಅರಿಶಿನ(Turmeric)
ಅರಿಶಿನದಿಂದ ಮಾಡಲು ಸಾಧ್ಯವಾಗದ್ದು ಬಹುಷಃ ಏನೂ ಇಲ್ಲ. ಹಲ್ಲಿನ ಆರೋಗ್ಯದಿಂದ ಹಿಡಿದು ದೇಹದ ಆರೋಗ್ಯದವರೆಗೆ ಎಲ್ಲಕ್ಕೂ ಅರಿಶಿನ ಮದ್ದು. ಪೀರಿಯಡ್ಸ್ ಸಮಸ್ಯೆಗೆ ಕೂಡಾ ಅರಿಶಿನ ಅತ್ಯುತ್ತಮ ಮದ್ದು. ಮುಟ್ಟು ಬೇಗ ಆಗಬೇಕೆಂದರೆ ಹಾಲಿಗೆ ಅರಿಶಿನ ಹಾಗೂ ಜೇನುತುಪ್ಪ ಹಾಕಿಕೊಂಡು ಸೇವಿಸಿ.

ದಾಳಿಂಬೆ(Pomegranate)
ದಾಳಿಂಬೆ ಹಣ್ಣು ಮುಟ್ಟಿನ ಸಮಸ್ಯೆಗೆ ಅತ್ಯುತ್ತಮ ಮದ್ದು. ಯಾವಾಗ ಪೀರಿಯಡ್ಸ್ ಆಗಬೇಕೆಂದು ಬಯಸುತ್ತೀರೋ ಅದಕ್ಕಿಂತ 15 ದಿನ ಮುಂಚೆಯಿಂದ ಪ್ರತಿ ದಿನ ಮೂರು ಬಾರಿ ದಾಳಿಂಬೆ ಜ್ಯೂಸ್ ಕುಡಿಯಬೇಕು. ಆಗಾಗ ದಾಳಿಂಬೆ ಜ್ಯೂಸನ್ನು ಕಬ್ಬಿನ ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಕೂಡಾ ಉತ್ತಮ ಫಲ ನೀಡುತ್ತದೆ. 

click me!