Women Health: ಕಫ ದೋಷ ಪಿರಿಯಡ್ಸ್ ಮೇಲೂ ಪರಿಣಾಮ ಬೀರುತ್ತಾ?

By Suvarna News  |  First Published Jun 3, 2023, 11:35 AM IST

ವಾತ, ಕಫ ಮತ್ತು ಪಿತ್ತದ ಬಗ್ಗೆ ಆಯುರ್ವೇದದಲ್ಲಿ ಸಾಕಷ್ಟು ಹೇಳಲಾಗಿದೆ. ಇದ್ರಲ್ಲಿ ಒಂದು ಹೆಚ್ಚಾದ್ರೂ ದೇಹದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಟ್ಟಿಗೂ, ಈ ದೋಷಕ್ಕೂ ಸಂಬಂಧವಿದ್ಯಾ? ಇದ್ರಿಂದ ಏನು ಸಮಸ್ಯೆ ಕಾಡ್ಬಹುದು? ಇಲ್ಲಿದೆ ಮಾಹಿತಿ.
 


ಪಿರಿಯಡ್ಸ್ ಮಹಿಳೆಯರಲ್ಲಿ ಪ್ರತಿ ತಿಂಗಳು ಸಂಭವಿಸುವ ಸಾಮಾನ್ಯ ಪ್ರಕ್ರಿಯೆ. ಆರೋಗ್ಯಕರ ಪಿರಿಯಡ್ಸ್ ಮಹಿಳೆಯರ ಉತ್ತಮ ಆರೋಗ್ಯಕ್ಕೆ ಒಳ್ಳೆಯದು.  ಅನಿಯಮಿತ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಮತ್ತು ಇತರ ಹಲವು ಕಾರಣಗಳಿಂದ  ಪಿರಿಯಡ್ಸ್ ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ.  

ಕೆಲ ಮಹಿಳೆ (Woman) ಯರಿಗೆ ಸರಿಯಾದ ಸಮಯಕ್ಕೆ ಪಿರಿಯಡ್ಸ್ (Periods) ಆಗೋದಿಲ್ಲ.  ಅತಿಯಾದ ರಕ್ತಸ್ರಾವ (Bleeding) , ಹಾರ್ಮೋನ್ ಗಳ ಅಸಮತೋಲನ, ವಿಪರೀತ ಹೊಟ್ಟೆ ನೋವು ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ಹುಡುಗಿಯರು ಸೇವಿಸುವ ಆಹಾರ, ಅನಿಯಮಿತ ನಿದ್ರೆ ಮತ್ತು ಅತಿಯಾದ ಒತ್ತಡ  ಋತುಚಕ್ರದ ಮೇಲೆ ಪರಿಣಾಮ ಬೀರುವಂತೆಯೇ ನಮ್ಮ ದೇಹದಲ್ಲಿರುವ ಕಫ, ಪತ್ತ ಹಾಗೂ ವಾತ ಕೂಡ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆ.  ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫಕ್ಕೆ ಮಹತ್ವ ನೀಡಲಾಗಿದೆ. ಇದು ನಮ್ಮ ದೇಹದಲ್ಲಿ ಸರಿಯಾಗಿದ್ದರೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಅದೇ ಇದ್ರಲ್ಲಿ ದೋಷಗಳು ಕಂಡುಬಂದರೆ ಅದು ಮುಟ್ಟಿನ ಮೇಲೆ ಪರಿಣಾಮ ಬೀರುತ್ತವೆ. ನಾವಿಂದು ಪಿರಿಯಡ್ಸ್ ಮೇಲೆ ಕಫ ದೋಷ ಯಾವ ರೀತಿ ಪರಿಣಾಮದ ಬೀರುತ್ತದೆ ಎಂಬುದನ್ನು ಹೇಳ್ತೇವೆ.

Tap to resize

Latest Videos

ಮುಟ್ಟಿನ ಸಮಯದಲ್ಲಿ ಯಾವಯಾವ್ದೋ ಪ್ಯಾಂಟೀಸ್ ಧರಿಸ್ಬೇಡಿ!

ಪಿರಿಯಡ್ಸ್ ಮೇಲೆ ಕಫ ದೋಷ : 
ಹೆಚ್ಚಿನ ಅವಧಿ :
ಯಾವ ಮಹಿಳೆಯಲ್ಲಿ ಕಫ ದೋಷವಿರುತ್ತದೆಯೋ ಆಕೆಯ ಮುಟ್ಟಿನ ರಕ್ತಸ್ರಾವದಲ್ಲಿ ಹೆಚ್ಚಿನ ಬದಲಾವಣೆ ಆಗೋದಿಲ್ಲ. ಅಧಿಕ ಬ್ಲೀಡಿಂಗ್ ಅಥವಾ ಕಡಿಮೆ ಬ್ಲೀಡಿಂಗ್ ಆಗೋದಿಲ್ಲ. ಆದ್ರೆ ಅವಧಿ ದಿನಗಳು ವಾರಗಟ್ಟಲೆ ಇರುತ್ತವೆ.

ರಕ್ತದ ಬಣ್ಣ (Blood Color) : ಕಫ ದೋಷದಿಂದ ಬಳಲುವ ಮಹಿಳೆ ಮುಟ್ಟಿನ ಸಂದರ್ಭದಲ್ಲಿ ರಕ್ತದ ಬಣ್ಣ ಬದಲಾಗೋದನ್ನು ನೋಡಬಹುದು. ರಕ್ತದ ಬಣ್ಣ ಕಡು ಕೆಂಪಾಗಿರೋದಿಲ್ಲ. ಅದ್ರ ಬದಲಿಗೆ ತಿಳಿ ಕೆಂಪು ಬಣ್ಣದಲ್ಲಿ ಇರುತ್ತದೆ. ಅಲ್ಲದೆ ಲೋಳೆಯನ್ನು ಹೊಂದಿರುತ್ತದೆ.  ಮುಟ್ಟಿನ ಸಮಯದಲ್ಲಿ ನಿರಂತರ ರಕ್ತಸ್ರಾವವನ್ನು ನೀವು ಕಾಣ್ಬಹುದು.

ದಣಿವು – ನಿದ್ರೆ (Tiredness and Slepplessness) : ಯಾವ ಮಹಿಳೆಗೆ ಕಫ ದೋಷವಿರುತ್ತದೆಯೋ ಆ ಮಹಿಳೆ ಮುಟ್ಟಿನ ಸಮಯದಲ್ಲಿ ಉಳಿದ ಮಹಿಳೆಯರಿಗಿಂತ ಹೆಚ್ಚು ದಣಿವನ್ನು ಅನುಭವಿಸುತ್ತಾಳೆ. ಹಾಗೆಯೇ ನಿದ್ರೆಯ ಮಂಪರಿನಲ್ಲಿರುತ್ತಾರೆ. 

Women Health: ಪೀರಿಯಡ್ಸ್ ಹತ್ತಿರದಲ್ಲಿ ಸೆಕ್ಸ್ ನಿರಾಸಕ್ತಿಯೇ? ಕಾರಣ ಇದಿರಬಹುದು!

ಮಲ ವಿಸರ್ಜನೆ ವೇಳೆ ಸಮಸ್ಯೆ (Constipation) : ಪಿರಿಯಡ್ಸ್ ವೇಳೆ ಕಫ ದೋಷದ ಮಹಿಳೆಯರು ಮಲಬದ್ಧತೆ ಸಮಸ್ಯೆಯನ್ನು ಅನುಭವಿಸುವುದಿದೆ. ಇನ್ನು ಕೆಲ ಮಹಿಳೆಯರು ಪದೇ ಪದೇ ಮಲ ವಿಸರ್ಜನೆಗೆ ಹೋಗ್ತಾರೆ. ಅದು ಅವರ ದೇಹದ ಮೇಲೆ ಇದು ಅವಲಂಬಿಸಿರುತ್ತದೆ.

ವಾಂತಿ – ವಾಕರಿಕೆ (Vomiting) : ಮುಟ್ಟಿನ ಸಮಯದಲ್ಲಿ ನಿಮಗೆ ವಾಂತಿ ಅಥವಾ ವಾಕರಿಕೆಯ ಅನುಭವವಾಗ್ತಿದೆ ಅಂದ್ರೆ ನೀವು ಕಫ ದೋಷವನ್ನು ಹೊಂದಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಕಫ ದೋಷ ಕಡಿಮೆಮಾಡುವ ಪ್ರಯತ್ನ ನಡೆಸಿ.

ಊತ – ನೋವು : ಕಫ ದೋಷದ ಮಹಿಳೆಯರು ಮುಟ್ಟಿನ ಸಮಯದಲ್ಲಿ ಊತದ ಸಮಸ್ಯೆ ಎದುರಿಸುತ್ತಾರೆ. ಪಾದದ ಕೆಳಗೆ ಊತ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಸ್ತನ ಊದಿಕೊಂಡು, ನೋವು ಕಾಡುತ್ತದೆ.

ಭಾವುಕತೆ (Emotional) : ಮುಟ್ಟು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸಮಸ್ಯೆಯುಂಟು ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನೇಕ ಮಾನಸಿಕ ಸಮಸ್ಯೆ ಎದುರಿಸುತ್ತಾರೆ. ಕಫ ದೋಷವಿರುವ ಮಹಿಳೆಯರು ಮತ್ತಷ್ಟು ಭಾವನಾತ್ಮಕವಾಗಿರುತ್ತಾರೆ. ಸಣ್ಣ ಸಣ್ಣ ವಿಷ್ಯಕ್ಕೆ ಭಾವುಕರಾಗ್ತಾರೆ. ಹಳೇ ವಿಷ್ಯಗಳನ್ನು ನೆನೆದು ಕಣ್ಣೀರಿಡುತ್ತಾರೆ.

ಪ್ರತಿ ತಿಂಗಳ ಮುಟ್ಟಿನ ಸಮಯದಲ್ಲೂ ಮಹಿಳೆಯರು ಕೆಲ ವಿಷ್ಯದ ಬಗ್ಗೆ ಗಮನ ಹರಿಸಬೇಕು. ರಕ್ತಸ್ರಾವ, ಬಣ್ಣ, ದೇಹದ ಇತರ ಭಾಗಗಳಲ್ಲಿ ಆಗುವ ಸಮಸ್ಯೆ, ಮಾನಸಿಕ ಸಮಸ್ಯೆಗಳನ್ನು ಗಮನಿಸಬೇಕು. ಯಾವುದೋ ಸಮಸ್ಯೆ ಅತಿಯಾಗಿದೆ ಎಂದಾಗ ಅಥವಾ ಪ್ರತಿ ತಿಂಗಳು ಕಾಡ್ತಿದೆ ಎಂದಾಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. 
 

click me!