ಉತ್ತರ ಅಮೆರಿಕಾದಲ್ಲಿ ಹುಟ್ಟಿಕೊಂಡ ಈ ಹೇನಿನ ಜಾತಿ, ಈಗ ಎಲ್ಲೆಡೆ ಹಬ್ಬಿದೆ. ತಲೆಯಿಂದ ತಲೆಗೆ ಹಾರಿ ಮೊಟ್ಟೆಯಿಡುವ ಹೇನಿನಿಂದ ತಪ್ಪಿಸಿಕೊಳ್ಳೋದು ಸುಲಭವಲ್ಲ. ಕೆಲವೊಮ್ಮೆ ಅಪಾಯಕಾರಿಯಾಗುವ ಈ ಹೇನು ಹುಟ್ಟಿಕೊಳ್ಳುವ ಕಾರಣ ತಿಳಿದ್ರೆ ಪರಿಹಾರ ಸುಲಭ.
ಸಣ್ಣ ಮಕ್ಕಳು ತಲೆಯನ್ನು ಪರಪರಾ ಅಂತಾ ಕೆರೆದುಕೊಂಡ್ರೆ ಏನ್ ಹೇನ್ ಆಗಿದ್ಯಾ ಅಂತಾ ನಾವು ಪ್ರಶ್ನೆ ಮಾಡ್ತೇವೆ. ಚಿಕ್ಕ ಮಕ್ಕಳ ತಲೆಯಲ್ಲಿ ಈ ಹೇನು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ ಆರಾಮವಾಗಿ ಹೋಗಬಲ್ಲ ಹೇನು, ಒಮ್ಮೆ ತಲೆಗೆ ಹತ್ತಿಕೊಂಡ್ರೆ ಅದ್ರಿಂದ ಹೊರಗೆ ಬರೋದು ಕಷ್ಟ. ನಿಂತಲ್ಲಿ, ಕುಳಿತಲ್ಲಿ ಬೇರೆಯವರ ಕಣ್ಣಿಗೆ ಇದು ಕಾಣಿಸಿಕೊಂಡು ಮುಜುಗರವನ್ನುಂಟು ಮಾಡುತ್ತದೆ. ತಲೆ ಮೇಲೆಲ್ಲ ಹೇನಿನ ಮೊಟ್ಟೆ ಹಾಗೂ ಅಲ್ಲಲ್ಲಿ ಹರಿದಾಡುವ ಹೇನು, ಹೇಸಿಗೆಯುಂಟು ಮಾಡುತ್ತದೆ.
ಹಿಂದಿನ ಕಾಲದಲ್ಲಿ ಮನೆ ಮುಂದೆ ಕುಳಿತು ಹೇನು (Lice) ತೆಗೆಯುತ್ತಿದ್ದ ಮಹಿಳೆಯರನ್ನು ನೀವು ನೋಡಿರ್ತೀರಾ. ಈಗ್ಲೂ ಅನೇಕರ ಮನೆ ಮುಂದೆ ನಾವು ಈ ದೃಶ್ಯವನ್ನು ನೋಡ್ಬಹುದು. ಶಿಶುವಾಗಿದ್ದಾಗ್ಲೂ ಹೇನು ಕಾಣಿಸಿಕೊಳ್ಳುತ್ತದೆ. ಗಂಡು ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ಕೂದಲಿನಲ್ಲಿ ಹೇನಿನ ವಾಸ ಇರೋದಿಲ್ಲ. ಆದ್ರೆ ಹೆಣ್ಮಕ್ಕಳ ತಲೆ ಮೇಲೆ ಹೇನು ಹಾವಳಿ ಇಡುತ್ತದೆ. ಪಿರಿಯಡ್ಸ್ (Periods ) ಆಗುವವರೆಗೆ ಹೆಣ್ಣು ಮಕ್ಕಳಿಗೆ ಹೇನು ಸಾಮಾನ್ಯ ಎನ್ನುತ್ತಾರೆ ದೊಡ್ಡವರು. ಇನ್ನು ಕೆಲ ಮಹಿಳೆಯರ ತಲೆಯಲ್ಲೂ ನಾವು ಹೇನನ್ನು ನೋಡ್ಬಹುದು.
undefined
Hair Loss: ಅತಿಯಾಗಿ ಬೆವರೋದ್ರಿಂದನೂ ಕೂದಲು ಉದುರುತ್ತಾ?
ವೈದ್ಯಕೀಯ (Medical) ವಿಜ್ಞಾನದಲ್ಲಿ ಹೇನನ್ನು ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಮೊದಲನೆಯದು ತಲೆಯಲ್ಲಿ ಕಂಡುಬರುವ ಹೇನಾಗಿದೆ. ಇದು ಕಿವಿ ಮತ್ತು ಕುತ್ತಿಗೆ ಬಳಿ ತಿರುಗುತ್ತಿರುತ್ತದೆ. ಎರಡನೆಯದು ಇಡೀ ದೇಹದ ಮೇಲೆ ಹರಿದಾಡುವ ಹೇನಾಗಿದೆ. ಮೂರನೆಯದು ಕಣ್ಣುರೆಪ್ಪೆಗಳು, ಹುಬ್ಬುಗಳ ಮೇಲೆ ಕಾಣಿಸಿಕೊಳ್ಳುವ ಹೇನಾಗಿದೆ. ನಾವಿಂದು ತಲೆಯ ಮೇಲೆ ಕಾಣಿಸಿಕೊಳ್ಳುವ ಹೇನಿನ ಬಗ್ಗೆ ನಿಮಗೆ ಹೇಳ್ತೇವೆ.
ಪದೇ ಪದೇ ಹೇನು ಕಾಣಿಸಿಕೊಳ್ಳಲು ಕಾರಣವೇನು? : ಏನೇನೋ ಕಸರತ್ತು ಮಾಡಿ, ತಲೆಯಲ್ಲಿರುವ ಹೇನನ್ನು ಸ್ವಚ್ಛಗೊಳಿಸಿಕೊಂಡಿರ್ತೇವೆ. ಆದ್ರೆ ಕೆಲ ದಿನಗಳ ನಂತ್ರ ಮತ್ತೆ ಅದು ದಾಳಿ ಮಾಡುತ್ತದೆ. ಅದಕ್ಕೆ ಕಾರಣ ಸ್ವಚ್ಛತೆ ಕೊರತೆ. ತಲೆ ಕೂದಲು ತುಂಬಾ ಕೊಳಕಾಗಿದ್ದಾಗ ಹೇನು ಕಾಣಿಸಿಕೊಳ್ಳುತ್ತದೆ. ಜಿಗುಟು ಕೂದಲನ್ನು ಹೊಂದಿರುವ ಹಾಗೂ ನೆತ್ತಿ ಭಾಗದಲ್ಲಿ ಹೆಚ್ಚು ಎಣ್ಣೆ ಅಂಶ ಇರುವವರಿಗೆ ಹೇನು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಯಮಿತವಾಗಿ ತಲೆ ಸ್ನಾನ ಮಾಡದೆ, ಬೆವರಿನಿಂದ ಕೂದಲು ಕೊಳಕಾಗಿದ್ದರೆ ಹೇನು ಹುಟ್ಟಿಕೊಳ್ಳುತ್ತದೆ. ಶಾಲೆಗೆ ಹೋಗುವ ಮಕ್ಕಳು ಹೆಚ್ಚು ಬೆವರುವ ಕಾರಣ ಹಾಗೂ ದಟ್ಟವಾದ ಮತ್ತು ಉದ್ದದ ಕೂದಲು ಹೊಂದಿರುವ ಮಕ್ಕಳ ತಲೆ ಸ್ನಾನ ಕಷ್ಟವಾಗಿರುವ ಕಾರಣ ಮಕ್ಕಳಲ್ಲಿ ಹೇನಿರುತ್ತದೆ. ಹೇನಿರುವ ವ್ಯಕ್ತಿ ಜೊತೆ ನೀವು ಮಲಗಬೇಕು ಎಂದೇನಿಲ್ಲ. ಅವರ ಪಕ್ಕದಲ್ಲಿ ಕುಳಿತ್ರೂ ಸಾಕು. ನಿಮ್ಮ ತಲೆಗೆ ಹೇನು ಅಂಟಿಕೊಳ್ಳುತ್ತದೆ.
ಫಳ ಫಳ ಹೊಳೆಯುವ ಕೂದಲಿಗೆ ನಟಿ ಮಾಧುರಿ ದೀಕ್ಷಿತ್ ಕೊಟ್ಟಿದ್ದಾರೆ ಈ ಟಿಪ್ಸ್
ಹೇನಿನಿಂದ ಮುಕ್ತಿಗೆ ಹೀಗೆ ಮಾಡಿ : ಹೇನಿನಿಂದ ನಿಮಗೆ ನೆಮ್ಮದಿ ಬೇಕು ಎನ್ನುವವರು ವಾರದಲ್ಲಿ ಮೂರು ದಿನ ತಲೆ ಸ್ನಾನ ಮಾಡಬೇಕು. ಸಾಧ್ಯವಿಲ್ಲವೆಂದ್ರೆ ಎರಡು ದಿನವಾದ್ರೂ ಸ್ನಾನ ಮಾಡ್ಲೇಬೇಕು. ಮಾರುಕಟ್ಟೆಯಲ್ಲಿ ಹೇನು ತೆಗೆಯಲು ಶಾಂಪೂ ಲಭ್ಯವಿದೆ. ಅದನ್ನು ಉಪಯೋಗಿಸಬಹುದು. ಒಂದ್ವೇಳೆ ಎಷ್ಟೇ ಪ್ರಯತ್ನಿಸಿದ್ರೂ ಹೇನು ಹೊರಗೆ ಹೋಗ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ನೀವು ವೈದ್ಯರನ್ನು ಭೇಟಿಯಾಗಬೇಕು.
ಪ್ರತಿ ನಿತ್ಯ ಒಂದೆರಡು ಬಾರಿ, ಹೇನು ಬರುವ ಬಾಚಣಿಕೆಯಿಂದ ತಲೆ ಬಾಚಿಕೊಳ್ಳಬೇಕು. ನಾಲ್ಕೈದು ದಿನ ನೀವು ತಲೆ ಕೂದಲನ್ನು ನೀಟಾಗಿ ಬಾಚಿ, ಹೇನು ತೆಗೆದು, ಸ್ವಚ್ಛತೆ ಕಾಯ್ದುಕೊಂಡ್ರೆ ಈ ಸಮಸ್ಯೆ ಕಡಿಮೆಯಾಗುತ್ತದೆ. ತಲೆ ಸ್ನಾನ ಮಾಡಿದ ನಂತ್ರ ಒದ್ದೆ ಕೂದಲನ್ನು ಬಾಚಿದ್ರೆ ಹೇನು ಹೊರಗೆ ಬರುತ್ತದೆ.
ತಲೆಯಲ್ಲಿ ಹೇನು ಮಿತಿಮೀರಿದ್ದರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ತಲೆಯಲ್ಲಿ ವಿಪರೀತ ತುರಿಕೆ ಕಾಣಿಸಿಕೊಳ್ಳುವುದ್ರಿಂದ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗೋದಿಲ್ಲ. ತಲೆ ಮೇಲೆ ಹೇನು ಹರೆಯುತ್ತಿದ್ದರೆ ಅದು ಮುಜುಗರವನ್ನುಂಟು ಮಾಡುತ್ತದೆ.